Breaking News

ಬಿಜೆಪಿ ಜಗತ್ತಿನ ಅತೀದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ : ಪ್ರಹ್ಲಾದ್ ಜೋಶಿ


ಹುಬ್ಬಳ್ಳಿ :ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಅದ್ದೂರಿ ಗೆಲುವು ಸಾಧಿಸಿದೆ. ಜಗತ್ತಿನ ಅತೀದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದೆ. ದೇಶದ ಜನರು ಪ್ರಧಾನಿ ಮೋದಿ ಮೇಲೆ ಇಟ್ಟ ವಿಶ್ವಾಸ ಕಂಡು ನಾನು ಬೆರಗಾಗಿದ್ದೇನೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

ನಗರದ ವಿಮಾನ ನಿಲ್ದಾಣದಲ್ಲಿ ‌ಮಾತನಾಡಿದ ಅವರು, ನಾನು ಉತ್ತರಖಾಂಡ್ ಬಗ್ಗೆ ಹೇಳೋದು ಇಷ್ಟೇ. ನಾಲ್ಕು ದಿನ ಪ್ರಧಾನಮಂತ್ರಿಗಳು ಉತ್ತರಾಖಂಡ್ ಭೇಟಿ ಗೆಲುವಿಗೆ ಕಾರಣವಾಯಿತು. ಉತ್ತರಾಖಂಡ ಗೆಲುವಿಗೆ ನಾನೊಬ್ಬನೇ ಕಾರಣ ಅಂತ ಹೇಳುವುದಿಲ್ಲ. 80 ಸಾವಿರ ಸಭೆಗಳನ್ನು ಮಾಡಿದ್ದು ಮೈಲುಗಲ್ಲು. ಉತ್ತರಾಖಂಡ ರಾಜ್ಯ ಅಭಿವೃದ್ಧಿ ಕಂಡಿದ್ದು ಈ ಐದು ವರ್ಷದಲ್ಲಿ. ನಾಲ್ಕು ರಾಜ್ಯದ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ಮುಗಿಸಬೇಕಿದೆ. ಎಪ್ರಿಲ್ 8 ರವರೆಗೆ ಅಧಿವೇಶನ ಇದೆ. ಅಧಿವೇಶನ ಮುಗಿದ ಬಳಿಕ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಬಗ್ಗೆ ಚರ್ಚೆಯಾಗಲುದೆ. ಅಲ್ಲಿಯವರೆಗೆ ಯಾವುದೇ ಸಂಪುಟ ವಿಸ್ತರಣೆ, ಪುನಾರಚನೆ ಬಗ್ಗೆ ಯಾವುದೇ ಚರ್ಚೆ ಇಲ್ಲ ಎಂದರು.

ಉಕ್ರೇನ್ ಹಾಗು ರಷ್ಯಾ ಜೊತೆ ಮತುಕತೆ ನಡೆಸಿ 22 ಸಾವಿರ ಜನರು ಸ್ಥಳಾಂತರ ಮಾಡಿದ್ರು. ಇದು ಮೋದಿ ವ್ಯಕ್ತಿತ್ವದ ಗಟ್ಟಿತನ ತೋರಿಸುತ್ತದೆ‌. ಡಿಕೆಶಿ ಗೋವಾಕ್ಕೆ‌ ಚುನಾವಣೆಗೆ ಹೋಗಿದ್ದಕ್ಕೆ ಪ್ರತಿಕ್ರಿಯೇ ನೀಡಿದ ಅವರು, ಅವರು ಯಾಕೆ ಹೋಗಿದ್ರು, ಅನ್ನೊದು ಇನ್ನು ಅರ್ಥವಾಗಿಲ್ಲ. ತೋಳಬಳ ತೋರಿಸಲು, ಗೂಂಡಾಗಿರಿ ಮಾಡಲು ಡಿಕೆಶಿ ಗೋವಾ ಹೋಗಿದ್ರಾ..? ಕೂಸು ಹುಟುವ ಮುನ್ನೆ ಕುಲಾವಿ ಹೊಲಿಸಿದ್ರು ಎಂಬಂತೆ ಕಾಂಗ್ರೆಸ್ ನಡೆ ಇದೆ. ಫಲಿತಾಂಶ ಬರುವ ಮುನ್ನ ಮುನ್ನ ಹೋಗಿ ಗೂಂಡಾಗಿರಿ‌ ಮಾಡಲು ತಯಾರಿ ಮಾಡಿದ್ರಾ..? ಸ್ವಾತಂತ್ರ್ಯ ನಂತರದ ಕಾಂಗ್ರೆಸ್ ವಿಸರ್ಜಿಸಿ‌ ಅಂತ ಗಾಂಧಿ ಹೇಳಿದ್ರು, ಅದನ್ನು ರಾಹುಲ್ ಗಾಂಧಿ ಕಾರ್ಯರೂಪಕ್ಕೆ ತರುತ್ತಿದ್ದಾರೆ‌. ಖುಷಿಯ ವಿಚಾರ ಎಂದರು.

Share News

About admin

Check Also

ರೀಲ್ಸ್ ಲೋಕದ ಚೆಲುವೆ ಶವವಾಗಿ ಪತ್ತೆ : ಅತ್ತ ಗಂಡ ವಶಕ್ಕೆ, ಇತ್ತ ಕಂದನ ಆಕ್ರಂದನ.. ಏನಾಯ್ತು..?

ತುಮಕೂರು: ತಾಲೂಕಿನ ಯಲ್ಲಾಪುರ ಗ್ರಾಮದಲ್ಲಿ 24 ವರ್ಷದ ಸುಷ್ಮಿತಾ ಎಂಬ ಯುವತಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಎರಡೂವರೆ …

Leave a Reply

Your email address will not be published. Required fields are marked *