Breaking News

Breaking News

ಸೇವಾನಿರತ ಯೋಧ ನಿಧನ

ನಿಪ್ಪಾಣಿ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಕುರ್ಲಿ ಗ್ರಾಮದ ನಿವಾಸಿ, ಸಿಐಪಿಎಫ್‍ನ ಯೋಧ ನವನಾಥ ದಿವಟೆ (30) ಉತ್ತರಪ್ರದೇಶದಲ್ಲಿ ಸೇವಾನಿರತನಿದ್ದಾಗ ಸಾವಿಗೀಡಾಗಿದ್ದಾರೆ.ಅವರಿಗೆ ಪತ್ನಿ, ತಾಯಿ, ತಂದೆ, ಪುತ್ರ, ಪುತ್ರಿ, ಸಹೋದರ ಮತ್ತು ಸಹೋದರಿ ಇದ್ದಾರೆ.ಪಾರ್ಥಿವ ಶರೀರವನ್ನು ಕುರ್ಲಿ ಗ್ರಾಮಕ್ಕೆ ಬುಧವಾರ ತರಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ. 10 ವರ್ಷಗಳಿಂದ ಅವರು ಭಾರತೀಯ ಸೈನ್ಯದಲ್ಲಿ ಕೆಲಸ ಮಾಡುತ್ತಿದ್ದರು. ಉತ್ತರಪ್ರದೇಶ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಂದೋಬಸ್ತ್‌ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ಸೋಮವಾರ ಬೆಳಿಗ್ಗೆ ಅಸ್ವಸ್ಥಗೊಂಡ …

Read More »

ಪ್ರಧಾನಿ ಮೋದಿ ದೇಶವನ್ನು ಸರ್ವನಾಶ ಮಾಡಿದ್ದಾರೆ : ಸಿದ್ದರಾಮಯ್ಯ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ‘ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌’ ಎಂದು ಹೇಳುತ್ತಾ ‘ಸಬ್‌ ಕಾ ಸರ್ವನಾಶ್‌’ ಮಾಡುತ್ತಿದ್ದಾರೆ ಎಂಬ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟೀಕೆಯು ಸದನದಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್‌ ಸದಸ್ಯರ ನಡುವೆ ತೀವ್ರ ಜಟಾಪಟಿಗೆ ಕಾರಣವಾಯಿತು. ಮಂಗಳವಾರ ಬಜೆಟ್‌ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ ‘ಬಜೆಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ನಾವು ರಾಜ್ಯವನ್ನು ಸುಭಿಕ್ಷಗೊಳಿಸುತ್ತೇವೆ ಎಂದು ಹೇಳಲಾಗಿದೆ. …

Read More »

ಅಚ್ಚರಿ ಘೋಷಣೆ ಮಾಡಿದ ಯುದ್ದ ಪೀಡಿತ ಉಕ್ರೇನ್

ನ್ಯಾಟೋಗೆ ಸೇರುವ ಉದ್ದೇಶದಿಂದ ಯುದ್ಧ ಮಾಡುತ್ತಿರುವ ಉಕ್ರೇನ್ ಯುದ್ಧದಿಂದ ತತ್ತರಿಸಿದ್ದು, ಅಚ್ಚರಿ ನಿರ್ಧಾರ ಪ್ರಕಟಿಸಿದೆ. ಇನ್ನು ಮುಂದೆ NATO ಸದಸ್ಯತ್ವಕ್ಕೆ ಒತ್ತಾಯಿಸಲ್ಲ ಎಂದು ರಷ್ಯಾಕ್ಕೆ ಒಪ್ಪಿಗೆ ಸೂಚಿಸಿದೆ. ನಾವು ಅರ್ಥಮಾಡಿಕೊಂಡಿದ್ದೇವೆ. ಬಹಳ ಹಿಂದೆಯೇ ಈ ಪ್ರಶ್ನೆಗೆ ಸಂಬಂಧಿಸಿದಂತೆ ನಾನು ತಣ್ಣಗಾಗಿದ್ದೇನೆ. NATO ಸೇರಲು ಉಕ್ರೇನ್ ಸಿದ್ಧವಾಗಿಲ್ಲ ಎಂದು ಉಕ್ರೇನ್ ಅಧ್ಯಕ್ಷ ವೊಲಿಡಿಮಿರ್ ಝೆಲೆನ್ ಸ್ಕಿ ಹೇಳಿದ್ದಾರೆ. ವೊಲೊಡಿಮಿರ್ ಝೆಲೆನ್ಸ್ಕಿ ಅವರು, ಉಕ್ರೇನ್‌ಗೆ ನ್ಯಾಟೋ ಸದಸ್ಯತ್ವಕ್ಕಾಗಿ ಇನ್ನು ಮುಂದೆ ಒತ್ತಾಯಿಸುವುದಿಲ್ಲ. ಇದು …

Read More »

ಪದವಿ ಶಿಕ್ಷಣದಲ್ಲಿ ಭಾಷೆ ಯ ಕುರಿತು ಹೈಕೋರ್ಟ್ ಗೆ ಪ್ರಮಾಣ ಪತ್ರ ಸಲ್ಲಿಕೆ

ಬೆಂಗಳೂರು : ಪದವಿ ಶಿಕ್ಷಣದಲ್ಲಿ ಕನ್ನಡ ಭಾಷೆ ಸೇರಿದಂತೆ ಯಾವುದೇ ಭಾಷೆ ಕಲಿಕೆ ಕಡ್ಡಾಯವಲ್ಲ ಎಂದು ಕೇಂದ್ರ ಸರ್ಕಾರ ಕರ್ನಾಟಕ ಹೈಕೋರ್ಟ್ ಗೆ ಪ್ರಮಾಣ ಪತ್ರ ಸಲ್ಲಿಸಿದೆ. ರಾಷ್ಟ್ರೀಯ ಶಿಕ್ಷಣ ನೀತಿ-2020 (NEP) ಹಾಗೂ ಅದರ ನಿಯಮಗಳಲ್ಲಿ ಕನ್ನಡ ಸೇರಿದಂತೆ ಯಾವುದೇ ಭಾಷೆಯನ್ನು ಪದವಿ ಶಿಕ್ಷಣದಲ್ಲಿ ಕಡ್ಡಾಯಗೊಳಿಸುವ ಸಂಬಂಧ ಉಲ್ಲೇಖಗಳಲ್ಲಿ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದ್ದು, ಕರ್ನಾಟಕ ಹೈಕೋರ್ಟ್ ಗೆ ಪ್ರಮಾಣ ಪತ್ರ ಸಲ್ಲಿಸಿದೆ. ಇದರಿಂದ ಪದವಿ ಹಂತದಲ್ಲಿ ಭಾಷೆಯಾಗಿ …

Read More »

ಹುಬ್ಬಳ್ಳಿಯಲ್ಲಿ ಮಹಿಳಾ ದಿನಾಚರಣೆ ಆಚರಣೆ

ಹುಬ್ಬಳ್ಳಿ : ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಸಮಸ್ತ ಮರಾಠಾ ಸಮಾಜ ಸೇವಾ ಸಂಘದ ವತಿಯಿಂದ ಇಂದು ಸಾಯಂಕಾಲ ಶ್ರೀ ಭಾರತಿ ಮಠ ಮರಾಠಾ ಭವನ ದಲ್ಲಿ ಮಹಿಳಾ ದಿನಾಚರಣೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ಹುಬ್ಬಳ್ಳಿಯ ಎಲ್ಲಾ ಭಾಗದ ತಾಯಂದಿರು ಅಕ್ಕತಂಗಿಯರು ಉಪಸ್ಥಿತರಿದ್ದರು.

Read More »

ನವೀನ್ ಶವ ಪತ್ತೆಯಾಗಿದೆ, ಶವಾಗಾರದಲ್ಲಿ ಸಂರಕ್ಷಿಸಿಇಡಲಾಗಿದೆ : ಬೊಮ್ಮಾಯಿ

ಬೆಂಗಳೂರು: ಯೂಕ್ರೇನ್ ನ ಯುದ್ಧ ಭೂಮಿಯಲ್ಲಿ ಹುತಾತ್ಮರಾದ ಕನ್ನಡಿಗ ವೈದ್ಯ ವಿದ್ಯಾರ್ಥಿ ನವೀನ್ ಶವ ಪತ್ತೆಯಾಗಿದ್ದು, ಅಲ್ಲಿನ ಶವಾಗಾರದಲ್ಲಿ ಸಂರಕ್ಷಸಿಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಮಾಹಿತಿ ನೀಡಿದರು. ಆರ್ ಟಿ.ನಗರದ ತಮ್ಮ ನಿವಾಸದ ಬಳಿ ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು ವಿದೇಶಾಂಗ ಸಚಿವ ಎಸ್.ಜೈಶಂಕರ್ ಈ ವಿಷಯ ತಿಳಿಸಿದ್ದಾರೆ. ಸದ್ಯಕ್ಕೆ ಷೆಲ್ ದಾಳಿ ಮುಂದುವರಿದಿದೆ. ಹೀಗಾಗಿ ಅಲ್ಲಿನ ಶವಾಗಾರದ ಅಧಿಕಾರಿಗಳ ಜತೆಗೆ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳು …

Read More »

ಮೇಕೆದಾಟು ಯೋಜನೆ ಪಾದಯಾತ್ರೆ ಕುರಿತು ಬೇಸರ ವ್ಯಕ್ತ ಪಡಿಸಿದ ಮಾಜಿ ಪ್ರಧಾನಿ

ಮದ್ದೂರು: ‘ಮೇಕೆದಾಟು ಯೋಜನೆ ಜಾರಿಗಾಗಿ ಇತ್ತೀಚೆಗೆ ಕೆಲ ಸ್ನೇಹಿತರು ಪಾದಯಾತ್ರೆ ಮಾಡಿದ್ದಾರೆ. ರಾಜ್ಯಕ್ಕೆ, ಬೆಂಗ ಳೂರಿಗೆ ನೀರು ತರುತ್ತೇವೆ ಎಂದು ಹೇಳಿದ್ದಾರೆ. ಅವರಾರೂ ನನ್ನ ಹೆಸರು ಹೇಳದಿರುವುದಕ್ಕೆ ನನಗೆ ಬೇಸರ ವಾಗಿದೆ.ಆದರೆ ಅವರಿಗೆ ನಾನು ನಡೆಸಿದ ನೀರಾವರಿ ಹೋರಾಟದ ಅರಿವಿಲ್ಲ’ ಎಂದು ರಾಜ್ಯಸಭಾ ಸದಸ್ಯ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ವಿಷಾದಿಸಿದರು. ಪಟ್ಟಣದ ತಾಲ್ಲೂಕು ಕ್ರೀಡಾಂಗಣ ದಲ್ಲಿ ಎಂ.ಎಚ್.ಚನ್ನೇಗೌಡ ವಿದ್ಯಾಸಂಸ್ಥೆಯ ವತಿಯಿಂದ ಸಂಸ್ಥೆಯ ಗೌರವಾಧ್ಯಕ್ಷ ಕೆ.ಟಿ.ಚಂದು ಅವರಿಗೆ ಅಭಿನಂದನಾ ಕಾರ್ಯಕ್ರಮ, ‘ಅಪರೂಪ’ …

Read More »

ಸಿದ್ದರಾಮಯ್ಯ ಗೆ ಟಾಂಗ್ ಕೊಟ್ಟ ಯತ್ನಾಳ್

ಬೆಂಗಳೂರು: ನಾನು ಈ ರಾಜ್ಯದ ಮುಖ್ಯಮಂತ್ರಿಯಾದ್ರೇ, ನಿಮ್ಮ ಸರ್ಕಾರವೇ ಬರೋದಿಲ್ಲ. 20 ವರ್ಷ ನಾನೇ ಸಿಎಂ ಆಗಿರುತ್ತೇನೆ ಎಂಬುದಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟಾಂಗ್ ನೀಡಿದ್ದಾರೆ. ಇಂದು ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಬಿಸಿ ಬಿಸಿ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದಂತ ಸದಸ್ಯ ಯತ್ನಾಳ್, ನಿಮ್ಮನ್ನು ನೋಡ್ತಾ ಇದ್ದೇನೆ. ಕಳೆದ ಒಂದು ಗಂಟೆಯಿಂದ ವಿಪಕ್ಷದವರೇ ಮಾತನಾಡುತ್ತಿದ್ದೀರಿ. ಅರ್ಧ ಗಂಟೆಯಲ್ಲಿ ನಿಮ್ಮ ಭಾಷಣ ಮೊಟಕುಗೊಳಿಸುವಂತೆ ಸ್ಪೀಕರ್ ಹೇಳಿದಂತೆ …

Read More »

ರೈಲಿಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ

ಧಾರವಾಡ : ಅಪರಿಚಿತ ವ್ಯಕ್ತಿನೊಬ್ಬನು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ. ರೈಲ್ವೆ ನಿಲ್ದಾಣದ ಪ್ಲಾಟ್ ಫಾರಂ ಎರಡಲ್ಲಿ ಈ ಘಟನೆ ನಡೆದಿದೆ. ವ್ಯಕ್ತಿಗೆ ಸುಮಾರು 30 ವರ್ಷ ವಯಸ್ಸಾಗಿರಬಹುದೆಂದು ಅಂದಾಜಿಸಲಾಗಿದೆ. ವ್ಯಕ್ತಿ ರೈಲಿಗೆ ತಲೆಯಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ವ್ಯಕ್ತಿಯ ತಲೆ ಭಾಗ ತುಂಡಾಗಿ ಬಿದ್ದಿದೆ.‌ವ್ಯಕ್ತಿ ಇಂದು ಮಧ್ಯಾಹ್ನ ಇಲ್ಲಿಗೆ ಬಂದು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗುತ್ತದೆ. ಸ್ಥಳಿಯರು ನೋಡಿ ಪೊಲೀಸರಿಗೆ ಮಾಹಿತಿ …

Read More »

ಹುಬ್ಬಳ್ಳಿಯಲ್ಲಿ ಮಹಿಳಾ ದಿನಾಚರಣೆ : ರೈಲು ಚಾಲನೆ ಮಾಡಿದ ಮಹಿಳಾ ಸಿಬ್ಬಂದಿ

ಹುಬ್ಬಳ್ಳಿ : ಮಹಿಳೆಯರ ಕಾರ್ಯಕ್ಷಮತೆ ಹಾಗೂ ಕಾರ್ಯದಕ್ಷತೆಯನ್ನು ಪರಿಚಯಿಸುವ ಸದುದ್ದೇಶದಿಂದ ನೈಋತ್ಯ ರೈಲ್ವೆ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದೆ. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ನೈಋತ್ಯ ರೈಲ್ವೆ ವಲಯ ಹುಬ್ಬಳ್ಳಿ ವಿಭಾಗದಿಂದ ವಿಶಿಷ್ಟ ರೀತಿಯಲ್ಲಿ ಆಚರಣೆ ಮಾಡಲಾಯಿತು. ಮಹಿಳೆಯರ ಸಾಮರ್ಥ್ಯವನ್ನು ಪ್ರದರ್ಶಿಸುವ ನಿದರ್ಶನಕ್ಕೆ ಈ ಮಹಿಳಾ ದಿನಾಚರಣೆ ಸಾಕ್ಷಿಯಾಗಿತು. ಅಂತರಾಷ್ಟ್ರೀಯ ದಿನಾಚರಣೆ ಅಂಗವಾಗಿ ಹುಬ್ಬಳ್ಳಿಯ ರೈಲ್ವೆ ನಿಲ್ದಾಣದಿಂದ ಮಹಿಳಾ ಲೋಕೋಪೈಲೆಟ್, ಮಹಿಳಾ ಟಿಕೆಟ್ ಪರಿಶೀಲಕರು, ಮಹಿಳಾ ಆರ್.ಪಿ.ಎಫ್, ಮಹಿಳಾ ಸ್ಟೇಷನ್ ಮಾಸ್ಟರ್ ಹೀಗೆ …

Read More »