Breaking News

Breaking News

ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಕೆ

ಬೆಂಗಳೂರು: ರಾಜ್ಯದಲ್ಲಿ ಒಂದು ಲಕ್ಷಕ್ಕಿಂತ ಕಡಿಮೆ ಕೊರೋನಾ ಸೋಂಕು ಪರೀಕ್ಷೆಗಳು ನಡೆದಿದ್ದು, ಹೊಸ ಪ್ರಕರಣಗಳು ಕೂಡಾ ಆರು ಸಾವಿರಕ್ಕೆ ಕುಸಿದಿವೆ. ಇದು 1 ತಿಂಗಳ ಕನಿಷ್ಠ. ಸೋಂಕಿತರ ಸಾವು ಮಾತ್ರ ಐವತ್ತರ ಆಸುಪಾಸಿನಲ್ಲಿಯೇ ಮುಂದುವರೆದಿದೆ. ಸೋಮವಾರ 6,151 ಮಂದಿ ಸೋಂಕಿತರಾಗಿದ್ದು, 49 ಸೋಂಕಿತರು ಸಾವಿಗೀಡಾಗಿದ್ದಾರೆ. 16,802 ಮಂದಿ ಗುಣಮುಖರಾಗಿದ್ದಾರೆ. ಸದ್ಯ 87 ಸಾವಿರ ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. ಸೋಂಕು ಪರೀಕ್ಷೆಗಳು 99 ಸಾವಿರ ನಡೆದಿದ್ದು, ಪಾಸಿಟಿವಿಟಿ ದರ ಶೇ.6 …

Read More »

ತನ್ವೀರ್‌ಸೇಠ್ ಆಸ್ಪತ್ರೆಗೆ ದಾಖಲು

ಮೈಸೂರು: ನಗರದ ತಮ್ಮ ಮನೆಯಲ್ಲಿ ಅಸ್ವಸ್ಥರಾದ ಶಾಸಕ ತನ್ವೀರ್‌ಸೇಠ್ ಅವರನ್ನು ಇಲ್ಲಿನ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಶೆಣೈ, ‘ಅಸಿಟಿಡಿ ಸಮಸ್ಯೆಗೆ ಚಿಕಿತ್ಸೆ ಪಡೆಯಲು ಅವರು ಆಸ್ಪತ್ರೆಗೆ ಬಂದರು. ಕೆಲವೊಂದು ಪರೀಕ್ಷೆಗಳನ್ನು ಮಾಡಬೇಕಿರುವುದರಿಂದ ಒಂದು ದಿನದ ಮಟ್ಟಿಗೆ ದಾಖಲಿಸಿಕೊಳ್ಳಲಾಗಿದೆ. ಸದ್ಯ, ಅವರು ಸಾಮಾನ್ಯ ವಾರ್ಡ್‌ನಲ್ಲಿದ್ದು, ಆರೋಗ್ಯ ಸ್ಥಿರವಾಗಿದೆ’ ಎಂದು ಹೇಳಿದರು.

Read More »

ರಾಜ್ಯಾದ್ಯಂತ 3 ದಿನ ಶಾಲಾ-ಕಾಲೇಜುಗಳು ರಜೆ : ಸಿಎಂ ಬೊಮ್ಮಾಯಿ

ಬೆಂಗಳೂರು: ಹಿಜಾಬ್​ ವಿವಾದ ಭುಗಿಲೆದ್ದಿದ್ದು, ಹಲವೆಡೆ ಸಂಘರ್ಷ ವಿಕೋಪಕ್ಕೆ ತಿರುಗಿದೆ. ಪರಿಸ್ಥಿತಿ ನಿಯಂತ್ರಿಸಲು ನಾಳೆಯಿಂದ ರಾಜ್ಯಾದ್ಯಂತ ಮೂರು ದಿನ ಎಲ್ಲ ಶಾಲಾ-ಕಾಲೇಜುಗಳಿಗೆ ಸರ್ಕಾರ ರಜೆ ಘೋಷಿಸಿದೆ. ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಟ್ವೀಟ್​ ಮಾಡಿದ್ದು, ನಾಳೆಯಿಂದ(ಫೆ.9) ಮೂರು ದಿನ ರಾಜ್ಯಾದ್ಯಂತ ಎಲ್ಲ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.ವಿದ್ಯಾರ್ಥಿಗಳು, ಶಿಕ್ಷಕರು, ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಹಾಗೂ ರಾಜ್ಯದ ಸಮಸ್ತ ಜನತೆ ರಾಜ್ಯದಲ್ಲಿ ಶಾಂತಿ ಕಾಪಾಡಬೇಕು ಎಂದು ಸಿಎಂ ಮನವಿ ಮಾಡಿದ್ದಾರೆ.

Read More »

ಆತ್ಮ ರಕ್ಷಣೆಗೆ ಸಿದ್ದರಾಗುತ್ತಿದ್ದಾರೆ ಧಾರವಾಡ ಪೋರಿಯರು

ಧಾರವಾಡ: ಮಹಿಳೆಯರ ಮೇಲೆ ದೌರ್ಜನ್ಯ, ಹುಡುಗಿಯರನ್ನು ಚುಡಾಯಿಸುವುದು, ವಿದ್ಯಾರ್ಥಿನಿಯರನ್ನು ರೇಗಿಸುವಂತಹ ಚಟುವಟಿಕೆಗಳು ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಇವುಗಳನ್ನು ತಡೆಗಟ್ಟುವ ದೃಷ್ಠಿಯಿಂದ ಸರ್ಕಾರ ಓಬವ್ವ ಆತ್ಮ ರಕ್ಷಣಾ ಕಲೆ ಎಂಬ ಹೊಸ ಯೋಜನೆಯನ್ನು ಜಾರಿಗೆ ತಂದು ವಿದ್ಯಾರ್ಥಿನಿಯರಿಗೆ ವಿವಿಧ ಆತ್ಮ ರಕ್ಷಣಾ ಕಲೆಗಳನ್ನು ಕಲಿಸಲು ಮುಂದಾಗಿದೆ. ಈ ಯೋಜನೆಗೆ ಧಾರವಾಡದಲ್ಲಿ ಅಧೀಕೃತವಾಗಿ ಚಾಲನೆ ನೀಡಲಾಗಿದೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಗಾಂಧಿ ಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸರ್ಕಾರದ ಈ ಓಬವ್ವ ಆತ್ಮ ರಕ್ಷಣಾ ಕಲೆಗೆ …

Read More »

ಹಿಜಾಬ್ ವಿವಾದ : 3 ದಿನ ಶಾಲಾ ಕಾಲೇಜು ರಜೆ ಘೋಣಷೆ

ನವದೆಹಲಿ : ಹಿಜಾಬ್ ವಿವಾದ ಕುರಿತು 3 ದಿನ ಶಾಲಾ ಕಾಲೇಜು ರಜೆ ಘೋಷಣೆ ಮಾಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಸಿ ಎನ್ ಅಶ್ವಥನಾರಾಯಣ ತಿಳಿಸಿದ್ದಾರೆ. ಹಿಜಾಬ್ ವಿವಾದ ಇದೀಗ ರಾಷ್ಟ್ರಮಟ್ಟದ ಲ್ಲಿಯೂ ಸದ್ದು ಮಾಡುತ್ತೀದೆ.ಒಂದೆಡೆ ಹಿಜಾಬ್ ಕುರಿತು ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ. ಮತ್ತೊಂಡು ಕಡೆ ಶಾಲಾ ಕಾಲೇಜುಗಳಲ್ಲಿ ಪರ ವಿರೋಧ ಪ್ರತಿಭಟನೆ ನಡೆಯುತ್ತಿದ್ದು ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ಮಾಡುತ್ತೀದ್ದಾರೆ.

Read More »

ಟಿಪ್ಪರ್, ಬೈಕ್ ನಡುವೆ ಅಪಘಾತ : ವಾಹನ ಸವಾರ ಅಪಾಯದಿಂದ ಪಾರು

ನವಲಗುಂದ: ಪಟ್ಟಣದ ನೀಲಮ್ಮನ ಕೆರೆ ಎದುರು ಟಿಪ್ಪರ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಅಣ್ಣಿಗೇರಿಯತ್ತ ಹೊರಟ ಟಿಪ್ಪರ್‌ವೊಂದು ಪಟ್ಟಣದ ನೀಲಮ್ಮನ ಕೆರೆ ಎದುರು ಇರುವ ಕ್ರಾಸ್ ಬಳಿ ತಿರುಗುವ ಸಂದರ್ಭದಲ್ಲಿ ಏಕಾಏಕಿ ಬೈಕ್ ಮೇಲೆ ಹರಿದಿದೆ. ತಕ್ಷಣವೇ ಸವಾರ ಬೈಕ್‌ನಿಂದ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾನೆ. ಸ್ಥಳಕ್ಕೆ ನವಲಗುಂದ ಪೊಲೀಸ್ ಠಾಣೆಯ ಸಿಪಿಐ ಚಂದ್ರಶೇಖರ್ ಮಠಪತಿ ಭೇಟಿ ನೀಡಿ, ಲಾರಿ ಹಾಗೂ ಚಾಲಕನನ್ನು ವಶಕ್ಕೆ …

Read More »

ಪ್ರಥಮ ಪಿಯು‌ಸಿ ಪರೀಕ್ಷೆ ಮಾ. 28ರಿಂದ ಏ. 13ರವರೆಗೆ

ಬೆಂಗಳೂರು : ಪ್ರಥಮ ಪಿಯು‌ಸಿ ವಾರ್ಷಿಕ ಮತ್ತು ಪೂರಕ ಪರೀಕ್ಷೆಗಳನ್ನು ಜಿಲ್ಲಾಮಟ್ಟದಲ್ಲಿ ನಡೆಸುವಂತೆ ಎಲ್ಲ ಜಿಲ್ಲೆಗಳ ಉಪ ನಿರ್ದೇಶಕರಿಗೆ ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ಸೂಚನೆ ನೀಡಿದ್ದಾರೆ. ವಾರ್ಷಿಕ ಪರೀಕ್ಷೆಗಳನ್ನು ಮಾರ್ಚ್‌ 28ರಿಂದ ಏಪ್ರಿಲ್‌ 13ರವರೆಗೆ ಮಧ್ಯಾಹ್ನ 2.30ರಿಂದ 5.45ರ ಅವಧಿಯಲ್ಲಿ ನಡೆಸಬೇಕು. ಈ ವೇಳಾಪಟ್ಟಿಗೆ ಅನುಗುಣವಾಗಿ ಪರೀಕ್ಷೆಗಳನ್ನು ನಡೆಸಬೇಕು ಎಂದು ಅವರು ಸೂಚಿಸಿದ್ದಾರೆ. ಮೌಲ್ಯಮಾಪನವನ್ನು ಏಪ್ರಿಲ್‌ 20ರೊಳಗೆ ಪೂರ್ಣಗೊಳಿಸಿ, ಆಯಾ ಕಾಲೇಜುಗಳಲ್ಲಿ 30ರಂದು ಫಲಿತಾಂಶ ಪ್ರಕಟಿಸಬೇಕು. ಅನುತ್ತೀರ್ಣರಾದವರಿಗೆ ಪೂರಕ …

Read More »

ಎಸ್‌ಪಿ ಅಧಿಕಾರಕ್ಕೆ ಬಂದರೆ ಅಪರಾಧಿಗಳ ಕನಸು ನನಸು

ಲಖನೌ: ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತು ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ಮೈತ್ರಿಕೂಟದ ವಿರುದ್ಧದ ವಾಗ್ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯ‍ನಾಥ ಅವರು ಇನ್ನಷ್ಟು ಹರಿತಗೊಳಿಸಿದ್ದಾರೆ. ಎಸ್‌ಪಿ ಅಧಿಕಾರಕ್ಕೆ ಬಂದರೆ ಅಪರಾಧಿಗಳ ಕನಸು ನನಸಾದಂತಾಗುತ್ತದೆ ಎಂದು ಮೋದಿ ಆಪಾದಿಸಿದರೆ, ಎಸ್‌ಪಿಯಲ್ಲಿರುವವರು ‘ಕಳ್ಳರು’ ಎಂದು ಯೋಗಿ ಹೇಳಿದ್ದಾರೆ. ‘ಬಿಜೆಪಿ ಅಧಿಕಾರಕ್ಕೆ ಬಂದರೆ ನೀವು ಸುರಕ್ಷಿತವಾಗಿರುತ್ತೀರಿ. ಎಸ್‌ಪಿ ಅಧಿಕಾರಕ್ಕೆ ಬಂದರೆ ಗೂಂಡಾಗಳ ಕನಸು ನನಸಾಗುತ್ತದೆ’ ಎಂದು ವರ್ಚುವಲ್‌ …

Read More »

ಸಿ.ಎಂ. ಇಬ್ರಾಹಿಂ ಅವರ ಮನವೊಲಿಸಲು ಸಿದ್ಧರಾದ ಸಿದ್ದರಾಮಯ್ಯ

ಬೆಂಗಳೂರು: ಸಿ.ಎಂ. ಇಬ್ರಾಹಿಂ ಅವರ ಮನವೊಲಿಸಲು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮುಂದಾಗಿದ್ದಾರೆ. ತಮ್ಮ ಆಪ್ತ ಎಚ್.ಸಿ. ಮಹದೇವಪ್ಪ ಮೂಲಕ ಇಬ್ರಾಹಿಂ ಜೊತೆ ಸಂಧಾನ ನಡೆಸಲು ಸಿದ್ದರಾಮಯ್ಯ ಪ್ರಯತ್ನ ನಡೆಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಇಬ್ರಾಹಿಂ ಜೊತೆ ಮಾತನಾಡಿರುವುದಾಗಿ ಮಹದೇವಪ್ಪ ಹೇಳಿದ್ದಾನೆ. ಎಲ್ಲರೊಂದಿಗೆ ಚರ್ಚಿಸುತ್ತೇನೆ ಎಂದು ಮಹದೇವಪ್ಪನಿಗೆ ಇಬ್ರಾಹಿಂ ಹೇಳಿದ್ದಾನೆ. ನಾನು ಕರೆ ಮಾಡಿಯಷ್ಟೇ ಅಲ್ಲ, ಮನೆಗೂ ಹೋಗಿ ಮಾತನಾಡುತ್ತೇನೆ’ ಎಂದರು‌.

Read More »

ವಾಹನದಲ್ಲಿದ್ದ ರಾಹುಲ್ ಗಾಂಧಿ ಕಡೆ ಧ್ವಜ ಎಸೆದ ಯುವಕ : ಮುಖಕ್ಕೆ ಗಾಯ

ಲುಧಿಯಾನ: ವ್ಯಕ್ತಿಯೊಬ್ಬ ರಾಹುಲ್ ರತ್ತ ಧ್ವಜ ಎಸೆದಿದ್ದು, ಅವರ ಮುಖಕ್ಕೆ ಗಾಯವಾಗಿದೆ ಎಂದು ಹೇಳಲಾಗಿದೆ.ರಾಹುಲ್ ಗಾಂಧಿ ಕಾರಿನ ಮುಂದಿನ ಆಸನದಲ್ಲಿ ಕುಳಿತಿದ್ದರು. ಮತ್ತು ಬೆಂಬಲಿಗರನ್ನು ಸ್ವಾಗತಿಸಲು ಅವರು ಕಾರಿನ ಕಿಟಕಿಯನ್ನು ಕೆಳಗೆ ಇಳಿಸಿದ್ದರು. ಕಾರಿನ ಕಿಟಕಿಯ ಮೇಲೆ ಬಹಳ ದೂರದಿಂದ ಧ್ವಜವನ್ನು ಎಸೆಯುತ್ತಿರುವುದನ್ನು ದೃಶ್ಯಗಳು ತೋರಿಸಿವೆ. ರಾಹುಲ್ ಗಾಂಧಿ ಕುಳಿತಿದ್ದ ಕಾರನ್ನು ಪಂಜಾಬ್ ಕಾಂಗ್ರೆಸ್ ಉಸ್ತುವಾರಿ ಸುನಿಲ್ ಜಾಖರ್ ಓಡಿಸುತ್ತಿದ್ದರೆ, ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಮತ್ತು ಪಕ್ಷದ ರಾಜ್ಯ …

Read More »