BigTv News
June 26, 2026
Breaking News
ಬೆಂಗಳೂರು: ರಾಜ್ಯದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಡ್ರಗ್ಸ್ ಜಾಲ ಸಕ್ರಿಯವಾಗಿದ್ದು, ಶಿಕ್ಷಣ ಸಂಸ್ಥೆಗಳ ಸುತ್ತಮುತ್ತ ಇರುವ ಕ್ಯಾಂಟೀನ್, ಪಾನ್‌ಶಾಪ್ ಹಾಗೂ ಸಣ್ಣ ಅಂಗಡಿಗಳ ಮೂಲಕ ಮಾದಕ ವಸ್ತುಗಳ ಮಾರಾಟ ನಡೆಯುತ್ತಿದೆ. 2025ರಲ್ಲಿ ಬೆಂಗಳೂರಿನಲ್ಲಿ 27 ಹಾಗೂ ಮಂಗಳೂರಿನಲ್ಲಿ 3 ಡ್ರಗ್ಸ್ ಪ್ರಕರಣಗಳು ದಾಖಲಾಗಿದ್ದರೆ, 2026ರ ಫೆಬ್ರವರಿ ಅಂತ್ಯದವರೆಗೆ ಕ್ರಮವಾಗಿ 10 ಮತ್ತು 1 ಪ್ರಕರಣ ದಾಖಲಾಗಿದೆ. ಪೆಡ್ಲರ್‌ಗಳು ವಿದ್ಯಾರ್ಥಿಗಳನ್ನು ವ್ಯಸನದ ಜಾಲಕ್ಕೆ ಸೆಳೆಯುತ್ತಿರುವುದು ಪೊಲೀಸರಿಗೆ ಸವಾಲಾಗಿದೆ. ಡ್ರಗ್ಸ್ ಮುಕ್ತ ಕರ್ನಾಟಕ …
Read More »
BigTv News
June 26, 2026
Breaking News
ದಾವಣಗೆರೆ: ಪ್ರತಿಷ್ಠಿತ ಕುಟುಂಬಕ್ಕೆ ಸೇರಿದ ಯುವತಿಯೊಬ್ಬಳು ಕಂಠಪೂರ್ತಿ ಕುಡಿದು ಅಡ್ಡಾದಿಡ್ಡಿಯಾಗಿ ಥಾರ್ ಜೀಪ್ ಚ್ಜಲಾಯಿಸಿಕೊಂಡು ಬಂದಿದ್ದದ್ದಲ್ಲದೇ ಪ್ರಶ್ನೆ ಮಡಿದ್ದಕ್ಕೆ ಪೊಲೀಸರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿರುವ ಘಟನೆ ದಾವಣಗೆರೆ ನಗರದ ಶಾಮನೂರು ರಸ್ತೆಯಲ್ಲಿ ನಡೆದಿದೆ.ಮದ್ಯ ಸೇವನೆ ಮಾಡಿ ಯುವತಿ ಥಾರ್ ಕಾರನ್ನು ಅಡ್ಡಾದಿಡ್ಡಿ ಚಲಾಯಿಸುತ್ತಿದ್ದಳು. ಈ ವೇಳೆ ಡ್ರಿಂಕ್ & ಡ್ರೈವ್ ತಪಾಸಣೆ ಮಾಡುತ್ತಿದ್ದ ಪೊಲೀಸರು, ಕಾರನ್ನು ತಡೆದಿದ್ದಾರೆ. ಇದರಿಂದ ಸಿಟ್ಟಿಗೆದ್ದ ಯುವತಿ, ಮಹಿಳಾ ಪಿಎಸ್‌ಐಗೆ ಕಾಲಿನಿಂದ ಒದ್ದು, …
Read More »
BigTv News
June 26, 2026
Breaking News
ಬೆಂಗಳೂರು: ತೋಟದಲ್ಲಿ ನೀರು ಕಟ್ಟುವ ವಿಚಾರಕ್ಕೆ ಸಹೋದರರ ನಡುವೆ ಕಿರಿಕ್ ಶುರುವಾಗಿದ್ದು, ಗಲಾಟೆ ವಿಕೋಪಕ್ಕೆ ತಿರುಗಿ ಅಣ್ಣನೇ ತಮ್ಮನ ಮೇಲೆ ಫೈರಿಂಗ್ ಮಾಡಿರುವ ಘಟನೆ ನಡೆದಿದೆ.ನಾಡಬಂದೂಕಿನಿಂದ ತಮ್ಮನ ಮೇಲೆ ಚಂದ್ರಶೇಖರ್ ಎಂಬಾತ ಗುಂಡಿನ ದಾಳಿ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ತಮ್ಮ ಚೇತನ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಗಳೂರು ಗ್ರಾಮಾಂತಾರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಶಟ್ಟರಹಳ್ಳಿಯಲ್ಲಿ ಈ ಘಟನೆ ನಡೆದಿದೆ. ನಿನ್ನೆ ಗಲಾಟೆ ಮಾಡುತ್ತಿದ್ದ ಚಂದ್ರಶೇಖರ್ ನನ್ನು ಮನೆಯಲ್ಲಿ ಕೂಡಿಹಾಕಲಾಗಿತ್ತು. ಈ …
Read More »
BigTv News
June 26, 2026
Breaking News
ಬೆಂಗಳೂರು: ಕೆ.ಆರ್. ಪುರಂ ಸಮೀಪದ ಗಾಯತ್ರಿ ಲೇಔಟ್‌ನಲ್ಲಿ ಚಲಿಸುತ್ತಿದ್ದ ಶಾಲಾ ಓಮ್ನಿ ವಾಹನದ ಹಿಂಬದಿಯ ಡೋರ್ ಹಠಾತ್ ತೆರೆದುಕೊಂಡ ಪರಿಣಾಮ, ವಾಹನದಲ್ಲಿದ್ದ ಐವರು ಪುಟಾಣಿ ಮಕ್ಕಳು ರಸ್ತೆಗೆ ಬಿದ್ದ ಘಟನೆ ನಡೆದಿದೆ. ಅದೃಷ್ಟವಶಾತ್ ಹಿಂಬದಿಯಿಂದ ಯಾವುದೇ ವೇಗದ ವಾಹನಗಳು ಬರದ ಕಾರಣ ದೊಡ್ಡ ಅನಾಹುತ ತಪ್ಪಿದ್ದು, ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಷ್ಟೇ ಆಗಿವೆ. ಸ್ಥಳೀಯರು ತಕ್ಷಣ ಮಕ್ಕಳಿಗೆ ನೆರವು ನೀಡಿದ್ದಾರೆ. ಘಟನೆಯ ಬಳಿಕ ಪೋಷಕರು ಹಾಗೂ ಸ್ಥಳೀಯರು ಚಾಲಕನ ನಿರ್ಲಕ್ಷ್ಯದ ವಿರುದ್ಧ …
Read More »
BigTv News
June 26, 2026
Breaking News
ಶಿರಸಿ: ನಗರದ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಮಹಿಳೆಯ ಬ್ಯಾಗಿನಿಂದ ₹1.59 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವು ಮಾಡಿದ್ದ ಪ್ರಕರಣದಲ್ಲಿ ಬೆಂಗಳೂರು ಮೂಲದ ಜ್ಯೋತಿ (ಸಂಜನಾ) ವೆಂಕಟೇಶ ಪಸುಪುಲೇಟ್ (32) ಎಂಬ ಮಹಿಳೆಯನ್ನು ಶಿರಸಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಯಲ್ಲಾಪುರದಿಂದ ಬಂದಿದ್ದ ಸವಿತಾ ನಾಯ್ಕ ಅವರ ವ್ಯಾನಿಟಿ ಬ್ಯಾಗಿನ ಜಿಪ್ ತೆರೆಯುವ ಮೂಲಕ ಆರೋಪಿತೆ ಸುಮಾರು 30 ಗ್ರಾಂ ಚಿನ್ನಾಭರಣ, ಮೊಬೈಲ್ ಹಾಗೂ ₹8,000 ನಗದು ಕಳವು …
Read More »
BigTv News
June 26, 2026
Breaking News
ಬೆಂಗಳೂರು: ಸಂಜಯನಗರದಲ್ಲಿ ಕ್ರಿಪ್ಟೋಕರೆನ್ಸಿ ಎಕ್ಸ್‌ಚೇಂಜ್ ಹೆಸರಿನಲ್ಲಿ ₹17.6 ಲಕ್ಷ ದರೋಡೆ ನಡೆಸಿದ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಇಬ್ಬರು ಕಾಶ್ಮೀರ ಮೂಲದವರೂ ಸೇರಿದಂತೆ 12 ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ₹13.90 ಲಕ್ಷ ನಗದು, 6 ಬೈಕ್, 1 ಕಾರು ಹಾಗೂ 13 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಖಾಸಗಿ ಕಂಪನಿ ಉದ್ಯೋಗಿ ವಿಶ್ವಾಸ್ ಅವರು ಕಾಫಿ ಶಾಪ್ ಆರಂಭಿಸಲು ಕಿಚನ್ ಸಾಮಗ್ರಿ ಖರೀದಿಸುವ ಉದ್ದೇಶ ಹೊಂದಿದ್ದರು. ವಿದೇಶದಿಂದ ಕಡಿಮೆ ಬೆಲೆಗೆ ಸಾಮಗ್ರಿ ತರಿಸಿಕೊಡುವುದಾಗಿ ನಂಬಿಸಿ, …
Read More »
BigTv News
June 26, 2026
Breaking News
ಕಲಬುರಗಿ: ಜಿಲ್ಲೆಯ ಆಳಂದ ತಾಲೂಕಿನ ಚಿಂಚನಸೂರ್ ಗ್ರಾಮದಲ್ಲಿ ಒಂದೂವರೆ ವರ್ಷದ ಮಗುವಿನೊಂದಿಗೆ ನಾಲ್ಕು ತಿಂಗಳ ಗರ್ಭಿಣಿ ಮಹಿಳೆ ತೆರೆದ ಬಾವಿಯಲ್ಲಿ ಮೃತಪಟ್ಟಿರುವ ದುರಂತ ಸಂಭವಿಸಿದೆ. ಮೃತರನ್ನು ಅಂಬಿಕಾ (25) ಹಾಗೂ ಅವರ ಪುತ್ರ ಆರಾಧ್ಯ ಎಂದು ಗುರುತಿಸಲಾಗಿದೆ. ಮಂಗಳವಾರ ಮನೆಯಿಂದ ಹೊರಟಿದ್ದ ಅಂಬಿಕಾ ಮನೆಗೆ ವಾಪಸ್ ಬಾರದೇ ಇದ್ದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಹುಡುಕಾಟ ನಡೆಸಿದ್ದರು. ಎರಡು ದಿನಗಳ ಬಳಿಕ ಬಾವಿಯ ಬಳಿ ಅವರ ಚಪ್ಪಲಿ ಪತ್ತೆಯಾಗಿದ್ದು, ಶೋಧ …
Read More »
BigTv News
June 26, 2026
Breaking News
ಬೆಂಗಳೂರು: ಹಲಸೂರಿನ ಜ್ಯುವೆಲ್ಲರಿ ಅಂಗಡಿಯಲ್ಲಿ ಕಳೆದ ತಿಂಗಳು ನಡೆದಿದ್ದ 10 ಕೆಜಿ ಬೆಳ್ಳಿ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿ, ತಮಿಳುನಾಡು ಮೂಲದ ತೇಜು ಎಂಬ ಆರೋಪಿಯನ್ನು ಬಂಧಿಸಿದ್ದಾರೆ. ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿ ತಡರಾತ್ರಿ ಅಂಗಡಿಯ ಹಿಂಬದಿಯ ಗೋಡೆಯನ್ನು ಕೊರೆದು ಒಳನುಗ್ಗಿ ಸುಮಾರು 10 ಕೆಜಿ ಬೆಳ್ಳಿ ಆಭರಣಗಳನ್ನು ಕಳವು ಮಾಡಿ ಪರಾರಿಯಾಗಿದ್ದ. ಪ್ರಕರಣ ದಾಖಲಿಸಿಕೊಂಡ ಹಲಸೂರು ಪೊಲೀಸರು ತಾಂತ್ರಿಕ ಸುಳಿವುಗಳ ಆಧಾರದ ಮೇಲೆ …
Read More »
BigTv News
June 26, 2026
Breaking News
ಹಾವೇರಿ: ಅಕ್ರಮವಾಗಿ ಗೋ ಮಾಂಸ ಸಾಗಾಟ ಮಾಡುತ್ತಿದ್ದ ಮೂವರು ಆರೋಪಿತರನ್ನು ಇಲ್ಲಿಯ ಗ್ರಾಮೀಣ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. ರಾಣೆಬೆನ್ನೂರ ಸಿದ್ದೇಶ್ವರ ನಗರದ ಮಹ್ಮದ್ಸಲಿಂ ಅಬ್ದುಲಖಾದರ ಅದೋನಿ, ಮಹ್ಮದ್ ಜಾವೀದ ಅಬ್ದುಲಖಾದರ ಅದೋನಿ, ಜಬಿವುಲ್ಲಾ ಶಬ್ಬೀರಅಹ್ಮದ್ ಮುಲ್ಲಾ (42) ಬಂಧಿತ ಆರೋಪಿತರು.ಇವರು ರಾಣೆಬೆನ್ನೂರ ನಗರದಲ್ಲಿ ತಮ್ಮ ಅಂಗಡಿಗಳಲ್ಲಿ ಜಾನುವಾರುಗಳನ್ನು ಹತ್ಯೆ ಮಾಡಿ ಅದರ ಮಾಂಸವನ್ನು ಸಾಗಾಟ ಮಾಡುತ್ತಿದ್ದರು. ಈ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಗ್ರಾಮೀಣ ಠಾಣೆ ಪೊಲೀಸರು …
Read More »
BigTv News
June 25, 2026
Breaking News
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಜವನಗಹಳ್ಳಿಯಲ್ಲಿ ಯುವತಿಯೊಬ್ಬಳನ್ನು ಬರ್ಬರವಾಗಿ ಕೊಲೆ ಮಾಡಿ, ಸಾಕ್ಷ್ಯ ನಾಶಪಡಿಸಲು ಶವಕ್ಕೆ ಬೆಂಕಿ ಹಚ್ಚಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಮಳವಳ್ಳಿ-ಕೊಳ್ಳೇಗಾಲ ರಾಜ್ಯ ಹೆದ್ದಾರಿ ಪಕ್ಕದ ನಿರ್ಜನ ಪ್ರದೇಶದಲ್ಲಿ ಅರೆಬೆಂದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಹೆದ್ದಾರಿ ಮೂಲಕ ಸಾಗುತ್ತಿದ್ದ ಲಾರಿ ಚಾಲಕನೊಬ್ಬ ಗುಡ್ಡದ ಬಳಿ ಹೊಗೆ ಮತ್ತು ದುರ್ವಾಸನೆ ಗಮನಿಸಿ ಪರಿಶೀಲಿಸಿದಾಗ ಶವ ಕಂಡುಬಂದಿದ್ದು, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಮೃತಳು ಸುಮಾರು 18 ವರ್ಷದ …
Read More »