Breaking News

Breaking News

ಮೆಡಿಕಲ್ ಕಾಲೇಜಿನ 63 ವಿದ್ಯಾರ್ಥಿಗಳಿಗೆ ಕೊರೊನಾ ದೃಢ

ಚಾಮರಾಜನಗರ : ಜಿಲ್ಲೆಯ ಮೆಡಿಕಲ್ ಕಾಲೇಜಿನ 63 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಯಡಿಪುರ ಬಳಿಯಿರುವ ಚಾಮರಾಜನಗರ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ಒಟ್ಟು 63 ವಿದ್ಯಾರ್ಥಿಗಳಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ನಲ್ಲಿಯೇ ಕ್ವಾರಂಟೈನ್ ಮಾಡಲಾಗಿದ್ದು, ಮೆಡಿಕಲ್ ಕಾಲೇಜಿಗೆ ಒಂದು ವಾರ ರಜೆ ಘೋಷಣೆ ಮಾಡಲಾಗಿದೆ.

Read More »

ಬೆಂಗಳೂರು ಜನರಿಗೆ ಮತ್ತೊಂದು ಶಾಕಿಂಗ್ ಸುದ್ದಿ

ಬೆಂಗಳೂರು : ಈಗ ಬೆಲೆ ಏರಿಕೆಯಿಂದ ತತ್ತರಿಸಿರೋ ಸಿಲಿಕಾನ್ ಸಿಟಿ  ಜನರಿಗೆ ಮತ್ತೊಂದು ಶಾಕ್ ನೀಡೋದಕ್ಕೆ ಮುಂದಾಗಿದೆ. ಅದೇ ಬೆಂಗಳೂರು ಜಲ ಮಂಡಳಿಯಿಂದ ನೀರಿನ ದರ ಹೆಚ್ಚಳವಾಗದೆ. ಈ ಸಂಬಂದ ಬೆಂಗಳೂರು ಜಲ ಮಂಡಳಿಯು ರಾಜ್ಯ ಸರ್ಕಾರಕ್ಕೆ ನೀರಿನ ದರ ಹೆಚ್ಚಳ ಸಂಬಂಧ ಪ್ರಸ್ತಾವನೆ ಸಲ್ಲಿಸಿದೆ. 8 ವರ್ಷಗಳ ಬಳಿಕ ಬೆಂಗಳೂರಿನಲ್ಲಿ ನೀರಿನ ದರ ಹೆಚ್ಚಳ ಮಾಡುವಂತೆ ಪ್ರಸ್ತಾವನೆಯಲ್ಲಿ ಕೋರಿದೆ. ಈಗಾಗಲೇ 2 ವರ್ಷಗಳ ಹಿಂದೆಯೇ ಸರ್ಕಾರಕ್ಕೆ ದರ ಹೆಚ್ಚಳ …

Read More »

ಗ್ರಾಹಕರಿಗೆ ಸಿಹಿ ಸುದ್ದಿ

ಎರಡು ತಿಂಗಳ ಹಿಂದೆ ಕೆ.ಜಿ.ಗೆ 150 ರೂ.ಗೆ ಸಿಗುತ್ತಿದ್ದ ಟಮೋಟ ಈಗ ಹತ್ತನೇ ಒಂದು ಭಾಗದಷ್ಟು ಬೆಲೆಯೂ ಇಲ್ಲದಂತೆ ಆಗಿದ್ದು, ಇದರಿಂದ ರೈತರು ಸಂತಸಗೊಂಡಿಲ್ಲ.ಕಳೆದೆರಡು ತಿಂಗಳ ಹಿಂದೆ ಆಂಧ್ರಪ್ರದೇಶದಲ್ಲಿ ಗಗನಮುಖಿಯಾಗಿದ್ದ ಟಮೋಟ ಬೆಲೆ ಭಾರಿ ಕುಸಿತ ಕಂಡಿದೆ. ಎರಡು ತಿಂಗಳ ಹಿಂದೆ ಕೆ.ಜಿ.ಗೆ 150 ರೂ.ಗೆ ಸಿಗುತ್ತಿದ್ದ ಟೊಮೇಟೊ ಈಗ ಹತ್ತನೇ ಒಂದು ಭಾಗದಷ್ಟು ಬೆಲೆಯೂ ಇಲ್ಲದಂತೆ ಆಗಿದ್ದು, ಇದರಿಂದ ರೈತರು ಸಂತಸಗೊಂಡಿಲ್ಲ.

Read More »

ರೈತರಿಗೆ ಸಿಹಿ ಸುದ್ದಿ

ಬೆಂಗಳೂರು : ಕೇಂದ್ರದ ಆತ್ಮ ನಿರ್ಭರ ಭಾರತ ಅಭಿಯಾನ ಯೋಜನೆಗೆ ಶೇ.15 ರಷ್ಟು ಸಹಾಯಧನ ಹೆಚ್ಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಸರ್ಕಾರ ಕೇಂದ್ರದ ಆತ್ಮ ನಿರ್ಭರ ಭಾರತ ಅಭಿಯಾನ ಯೋಜನೆಗೆ ಶೇ.15 ರಷ್ಟು ಸಹಾಯಧನ ಹೆಚ್ಚಿಸಿದೆ. ಈ ಮೂಲಕ ಪಿಎಂಎಫ್‌ಎಂಇ ಯೋಜನೆಯ ಸಹಾಯಧನ ಶೇ.50 ರಷ್ಟಾಗಿದೆ. ಇನ್ನು ಈ ಯೋಜನೆ ರೈತರ ಆದಾಯ ದ್ವಿಗುಣಗೊಳಿಸಲಿದೆ’ ಎಂದರು.

Read More »

ಕರ್ಫ್ಯೂ ಕುರಿತು ಇಂದು ಮಹತ್ವ ನಿರ್ಧಾರ

ಬೆಂಗಳೂರು:  ಕೊರೋನಾ ನಿಯಂತ್ರಣಕ್ಕೆ ಕೈಗೊಳ್ಳಬೇಕಿರುವ ಕ್ರಮಗಳ ಕುರಿತಾಗಿ ಸಭೆಯಲ್ಲಿ ಚರ್ಚೆ ನಡೆಯಲಿದ್ದು, ನೈಟ್ ಕರ್ಫ್ಯೂ ಮತ್ತು ವೀಕೆಂಡ್ ಕರ್ಫ್ಯೂ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ. ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಇಂದು ಮಧ್ಯಾಹ್ನ 1 ಗಂಟೆಗೆ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಹತ್ವದ ಸಭೆ ನಡೆಯಲಿದೆ. ಸಚಿವರು, ಅಧಿಕಾರಿಗಳು, ತಜ್ಞರೊಂದಿಗೆ ಮುಖ್ಯಮಂತ್ರಿಗಳು ಸಮಾಲೋಚನೆ ನಡೆಸಲಿದ್ದಾರೆ.

Read More »

ಟ್ರಕ್ ಅಪಘಾತ : 17 ಜನ ಸಾವು

ಘಾನಾ : ಪಶ್ಚಿಮ ಘಾನಾದಲ್ಲಿ ಗಣಿಗಾರಿಕೆ ಸ್ಫೋಟಕಗಳನ್ನು ಸಾಗಿಸುತ್ತಿದ್ದ ಟ್ರಕ್ ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆದ ಘಟನೆ ಪಶ್ಚಿಮ ಆಫ್ರಿಕಾ ದೇಶದ ರಾಜಧಾನಿ ಅಕ್ರಾದಿಂದ ಪಶ್ಚಿಮಕ್ಕೆ 300 ಕಿ.ಮೀ ದೂರದಲ್ಲಿರುವ ಗಣಿ ನಗರ ಬೊಗೊಸೊ ಬಳಿಯ ಅಪಿಯಾಟೆಯಲ್ಲಿ ಮಧ್ಯಾಹ್ನದ ಸುಮಾರಿಗೆ ಈ ಅಪಘಾತ ಸಂಭವಿಸಿದ್ದು, ನಂತರ 17 ಜನರು ಮೃತಪಟ್ಟಿದ್ದಾರೆ. ಖನಿಜ ಸಮೃದ್ಧ ಪ್ರದೇಶದ ಎರಡು ಚಿನ್ನದ ಗಣಿಗಳ ನಡುವೆ ಪ್ರಯಾಣಿಸುತ್ತಿದ್ದ ಟ್ರಕ್ ಮೋಟಾರ್ ಸೈಕಲ್ ಗೆ ಡಿಕ್ಕಿ …

Read More »

ಬಂಗಲೆ ಮಾರಾಟಕಿಟ್ಟ ರಮೇಶ್ ಜಾರಕಿಹೊಳಿ

ಬೆಂಗಳೂರ : ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ರಮೇಶ್ ಜಾರಕಿಹೊಳಿ ಅವರ ಬೆಂಗಳೂರಿನ ಸದಾಶಿವನಗರದಲ್ಲಿರುವ ಬಂಗಲೆ `ಲಕ್ಷ್ಮೀ’ ಮಾರಾಟಕ್ಕಿಡಲಾಗಿದೆ. ಸದಾಶಿವನಗರದಲ್ಲಿ ಉದ್ಯಮಿ ರವಿ ಅವರಿಂದ ಖರೀದಿಸಿದ್ದ ಬಂಗಲೆಯನ್ನು ರಮೇಶ್ ಜಾರಕಿಹೊಳಿ ಮಾರಲು ನಿರ್ಧರಿಸಿದ್ದು, ಇದರ ಬೆಲೆ 40 ಕೋಟಿ ರೂ. ನಿಗದಿಪಡಿಸಲಾಗಿದೆ.

Read More »

ಬೀದಿಬದಿ ವ್ಯಾಪಾರಸ್ಥರ ಸಂಘದಿಂದ ನೂತನ ಆಯುಕ್ತರ ಭೇಟಿ

ಹುಬ್ಬಳ್ಳಿ : ಅವಳಿ ನಗರದ ಬೀದಿಬದಿ ವ್ಯಾಪಾರಸ್ಥರ ಸಂಘದ ಪದಾಧಿಕಾರಿಗಳು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ನೂತನ ಆಯುಕ್ತರಾದ ಗೋಪಾಲಕೃಷ್ಣ ಬಿ. ಅವರನ್ನು ಭೇಟಿ ಮಾಡಿ ಶುಭಕೋರಲಾಯಿತು. ಬೆಂಗೇರಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಾಣವಾದ ಮಾರುಕಟ್ಟೆ ಪ್ರಾರಂಭಿಸಲು, ಬೀದಿಬದಿ ವ್ಯಾಪಾರಿಗಳ ಸರ್ವೆ ನೋಂದಣಿ ಮಾಡುವುದು ಸೇರಿದಂತೆ ಬೇಡಿಕೆಗಳ ಮನವಿಯನ್ನು ನೀಡಲಾಯಿತು. ಸಂಘದ ಗೌರವಾಧ್ಯಕ್ಷ ಅಮೃತ ಇಜಾರಿ, ಅಧ್ಯಕ್ಷರಾದ ಹುಲಿಗೆಮ್ಮ ಚಲವಾದಿ, ಪ್ರಧಾನ ಕಾರ್ಯದರ್ಶಿ ಮಹೇಶ ಪತ್ತಾರ ಟೌನ್ ವೆಂಡರ್ ಕಮಿಟಿ …

Read More »

ಪಾಲಕರಿಂದ ಪ್ರಾಂಶುಪಾಲರಿಗೆ ಮನವಿ ಸಲ್ಲಿಕೆ

ಚಾಮರಾಜನಗರ : ಜಿಲ್ಲೆಯ ವಿವಿಧ ಶಾಲೆಗಳ ಮಕ್ಕಳಲ್ಲಿ ಕೋವಿಡ್‌ ಸೋಂಕು ಕಂಡು ಬರುತ್ತಿದೆ. ಅಲ್ಲದೇ ಜೆಎಸ್‌ಎಸ್‌ ಪಬ್ಲಿಕ್‌ ಶಾಲೆಯ ಕೆಲ ಮಕ್ಕಳಿಗೆ ಕೋವಿಡ್‌ ಸೋಂಕು ದೃಢಪಟ್ಟ ಕಾರಣ ಶಾಲೆಗೆ ರಜೆ ಘೋಷಿಸಿ, ಆನ್‌ಲೈನ್‌ ತರಗತಿ ನಡೆಸಬೇಕೆಂದು ಒತ್ತಾಯಿಸಿ ಪೋಷಕರು ಶಾಲೆಯ ಪ್ರಾಂಶುಪಾಲರಿಗೆ ಮನವಿ ಸಲ್ಲಿಸಿದರು. ಎಷ್ಟೇ ತಿಳಿ ಹೇಳಿದರೂ ಮಕ್ಕಳಿಗೆ ಭೌತಿಕ ಅಂತರ ಕಾಪಾಡಬೇಕೆಂಬ ಪರಿವೆ ಇರುವುದಿಲ್ಲ. ಆಟಕ್ಕೆ ಬಿಟ್ಟಾಗ ಜೊತೆಯಾಗುತ್ತಾರೆ. ಇದರಿಂದ ಒಂದು ಮಗುವಿನಿಂದ ಇನ್ನೊಂದು ಮಗುವಿಗೆ ಸೋಂಕು …

Read More »

ತಮಿಳುನಾಡಿನಿಂದ ಬರುವವರಿಗೂ ನೆಗೆಟಿವ್ ರಿಪೋರ್ಟ್ ಕಡ್ಡಾಯ : ಸೋಮಶೇಖರ್

ಚಾಮರಾಜನಗರ : ಜಿಲ್ಲೆಯಲ್ಲಿ ಹೊಂದಿಕೊಂಡಿರುವ ಎಲ್ಲಾ ಅಂತಾರಾಜ್ಯ ಗಡಿಗಳಲ್ಲಿ ಮತ್ತಷ್ಟು ಬಿಗಿ ಮಾಡಲಿದ್ದು, ಎಲ್ಲಾ ಕಡೆ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯ ಮಾಡಬೇಕೆಂದು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದರು. ಕೋವಿಡ್ ನಿರ್ವಹಣೆ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿ, ಕೇರಳದಿಂದ ಬರುವವರಿಗೆ ಮಾತ್ರ ಈಗ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯವಿದೆ. ಆದರೆ, ಇಂದಿನಿಂದ ತಮಿಳುನಾಡಿನಿಂದ ಬರುವವರಿಗೂ ನೆಗೆಟಿವ್ ರಿಪೋರ್ಟ್ ತರುವುದನ್ನು ಕಡ್ಡಾಯ ಮಾಡಿದ್ದು, …

Read More »