Breaking News

Breaking News

ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ಶಿವಶಂಕರರೆಡ್ಡಿಗೆ ಕೊರೊನಾ ದೃಢ

ಮೇಕೆದಾಟು ಯೋಜನೆ ಪಾದಯಾತ್ರೆಯ ಮೂರನೇ ದಿನ ಯಶಸ್ವಿಯಾಗಿ ಮುಗಿದಿದೆ. ಸಾಕಷ್ಟು ಆರೋಪ ಮತ್ತು ಪ್ರತ್ಯಾರೋಪಗಳಿಂದ ನಡೆಯುತ್ತಿರುವ ಮೇಕೆದಾಟು ಯೋಜನೆ ರಾಜ್ಯಾದ್ಯಂತ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ಶಾಸಕ ಎನ್ ಎಚ್ ಶಿವಶಂಕರರೆಡ್ಡಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ನಿನ್ನೆ ರಾತ್ರಿ ಶಾಸಕ ಶಿವಶಂಕರರೆಡ್ಡಿ ಪಾದಯಾತ್ರೆಯಿಂದ ಗೌರಿಬಿದನೂರಿಗೆ ವಾಪಸ್ಸಾಗಿದ್ದರು.

Read More »

ಹುಟ್ಟು ಹಬ್ಬದ ದಿನವೇ ಬಿಜೆಪಿಗೆ ಟಾಂಗ್​ ಕೊಟ್ಟ ರೆಡ್ಡಿ

ಬಳ್ಳಾರಿ: ನಿನ್ನೆ ಜನಾರ್ದನರೆಡ್ಡಿ ಅವರು 55ನೇ ವಸತಂಕ್ಕೆ ಕಾಲಿಟ್ಟಿದ್ದಾರೆ. ಅಷ್ಟೇ ಅಲ್ಲದೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಹುಟ್ಟುಹಬ್ಬದ ದಿನವೇ ಮರು ರಾಜಕೀಯ ಪ್ರವೇಶದ ಬಗ್ಗೆ ಸುಳಿವು ನೀಡಿದ್ದಾರೆ. ಬಿಜೆಪಿಗೆ ಬಳ್ಳಾರಿ ಮೇಲೆ ಋಣ ಇದೆ ಎನ್ನುವ ಮೂಲಕವೇ ಬಿಜೆಪಿಗೆ ಟಾಂಗ್​ ಕೊಟ್ಟ ರೆಡ್ಡಿ, ಹತ್ತು ವರ್ಷದಲ್ಲಿ ಆಗದ ಕೆಲಸಗಳನ್ನ ಒಂದೇ ವರ್ಷದಲ್ಲಿ ಮಾಡುವ ಉತ್ಸಾಹ ಬಂದಿದೆ ಎನ್ನುವ ಮೂಲಕ ಮತ್ತೆ ರಾಜಕೀಯದಲ್ಲಿ ಸಕ್ರೀಯರಾಗುವ ಸುಳಿವು ನೀಡಿದ್ದಾರೆ.

Read More »

ಮೇಕೆದಾಟು ಪಾದಯಾತ್ರೆ : ಜೋಲಿ ಹೊಡಿಯುತ್ತಲೇ ಸಾಗಿದ ಡಿಕೆಶಿ

ರಾಮನಗರ: ಮೇಕೆದಾಟು ಯೋಜನೆಪಾದಯಾತ್ರೆಯ ಮೂರನೇ ದಿನ ಯಶಸ್ವಿಯಾಗಿ ಮುಗಿದಿದೆ. ಸಾಕಷ್ಟು ಆರೋಪ ಮತ್ತು ಪ್ರತ್ಯಾರೋಪಗಳಿಂದ ನಡೆಯುತ್ತಿರುವ ಮೇಕೆದಾಟು ಯೋಜನೆ ರಾಜ್ಯಾದ್ಯಂತ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇಂದಿನ ಪಾದಯಾತ್ರೆಯಲ್ಲಿ ಕೂಡ ಡಿ.ಕೆ.ಶಿವಕುಮಾರ್​ ಸಾಕಷ್ಟು ಸುಸ್ತಾಗಿದ್ದಾರೆ. ನಿನ್ನೆ ಮಧ್ಯಾಹ್ನದ ಹೊತ್ತಿಗೆ ಬಿಸಿಲಿನ ಜಳಕ್ಕೆ ಬಳಲಿ ಬೆಂಡಾಗಿದ್ದಿ ಶಿವಕುಮಾರ್​ ಅಲ್ಲಲ್ಲಿ ಕುಳಿತು ವಿಶ್ರಾಂತಿ ಪಡೆಯುತ್ತಾ ಹೆಜ್ಜೆ ಹಾಕಿದ್ದರು. ಇಂದು ಕೂಡ ಅವರು ಅಲ್ಪ ವಿಶ್ರಾಂತಿ ಪಡೆಯುತ್ತಾ ಹೆಜ್ಜೆ ಹಾಕಿದ್ದು ಕಾಲು ಭಾರವೇನಿಸಿ ಜೋಲಿ ಹೊಡಿಯುತ್ತಲೇ …

Read More »

ಶಾಲಾ ಮಕ್ಕಳಿಗೆ ಮತ್ತೇ ಆನ್ ಲೈನ್ ಕ್ಲಾಸ್

ಬೆಂಗಳೂರು: ಕೊರೋನಾ ದಿನ ದಿನೇ ಹೆಚ್ಚಳದಿಂದಾಗಿ ಎಲ್ಲರಲೂ ಆತಂಕ ಮನೆ ಮಾಡಿದ್ದು, ಶಾಲಾ ಕಾಲೇಜು ಬಂದ್ ಮಾಡಲಾಗಿದೆ. ಇದೇ ಕಾರಣದಿಂದಾಗಿ 1 ರಿಂದ 9ನೇ ತರಗತಿ ಮಕ್ಕಳಿಗೆ ಭೌತಿಕ ತರಗತಿಗಳು ಕೆಲವು ಜಿಲ್ಲೆಗಳಲ್ಲಿ ಬಂದ್ ಆಗಿವೆ. ಮಕ್ಕಳಿಗೆ ಪರ್ಯಾಯ ಕಲಿಕೆ ವ್ಯವಸ್ಥೆ ರೂಪಿಸುವ ಉದ್ದೇಶದಿಂದ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಸೋಮವಾರದಿಂದ ಶುಕ್ರವಾರದವರೆಗೆ ಚಂದನ ವಾಹಿನಿಯಲ್ಲಿ ವಿಡಿಯೋ ಪಾಠ ಪ್ರಸಾರ ಮಾಡಲು ನಿರ್ಧರಿಸಿದೆ.

Read More »

ಮಾಹಿತಿ ನೀಡದಿದ್ದರೂ ಸೈಬರ್ ವಂಚನೆ

ಹುಬ್ಬಳ್ಳಿ: ಬ್ಯಾಂಕ್ ಖಾತೆಯ ಯಾವುದೇ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳದಿದ್ದರೂ ವ್ಯಕ್ತಿಯೊಬ್ಬರ ಖಾತೆಯಿಂದ 97,500 ರೂ. ವರ್ಗಾವಣೆ ಮಾಡಿಕೊಂಡು ವಂಚಿಸಿರುವ ಕುರಿತು ಹು-ಧಾ ಸೈಬರ್ ಕೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಣ್ಣಿಗೇರಿ ತಾಲೂಕು ನಲವಡಿ ಗ್ರಾಮದ ನಾಗಪ್ಪ ನರಗುಂದ ವಂಚನೆಗೀಡಾದವರು. ತಾನು ಬ್ಯಾಂಕ್ ಖಾತೆ ಹಾಗೂ ಎಟಿಎಂ ಕಾರ್ಡ್‌ನ ಯಾವುದೇ ವಿವರವನ್ನು ಯಾರಿಗೂ ನೀಡಿರಲಿಲ್ಲ. ಯಾವುದೇ ನೆಟ್ ಬ್ಯಾಂಕಿಂಗ್ ಸೌಲಭ್ಯವನ್ನೂ ಹೊಂದಿಲ್ಲ. ಆದರೂ ತನ್ನ ಕೆನರಾ ಬ್ಯಾಂಕ್ ಖಾತೆಯಿಂದ ಡಿ. …

Read More »

ಗೂಡ್ಸ್ ವಾಹನಕ್ಕೆ ಆಕಸ್ಮಿಕ ಬೆಂಕಿ

ಗದಗ: ನಿಂತಿದ್ದ ಗೂಡ್ಸ್ ವಾಹನವೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ವಾಹನ ಹೊತ್ತಿ ಉರಿದ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಬಸವೇಶ್ವರ ನಗರದಲ್ಲಿ ನಡೆದಿದೆ. ನಿಂತಿದ್ದ ಗೂಡ್ಸ್ ಗಾಡಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದ ಪರಿಣಾಮ ವಾಹನ ಸುಟ್ಟು ಕರಕಲಾಗಿದೆ. ರಬ್ಬಾನಿಸಾಬ್ ಮೀರಚ್ಚನೆ ಎಂಬುವರಿಗೆ ಸೇರಿದ ವಾಹನಕ್ಕೆ ಬೆಂಕಿ ತಗುಲಿದೆ. ಇನ್ನೂ ಸುದ್ದಿ ತಿಳಿಯುತ್ತಿದ್ದಂತೆ ಓಣಿಯ ನಿವಾಸಿಗಳು ಅಗ್ನಿಶಾಮಕ ಇಲಾಖೆಗೆ ಫೋನ್ ಮಾಡಿ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳದ ಸಿಬ್ಬಂದಿಗಳು …

Read More »

ಮತ್ತೆ ಮುಖಾಮುಖಿಯಾದ ಭಾರತ-ಪಾಕಿಸ್ತಾನ್

ಭಾರತ-ಪಾಕಿಸ್ತಾನ್  ತಂಡಗಳು ಮತ್ತೆ ಮುಖಾಮುಖಿಯಾಗಬೇಕಿದ್ದರೆ ಏಷ್ಯಾ ಕಪ್ ತನಕ ಕಾಯಲೇಬೇಕು, ಇಲ್ಲ ಐಸಿಸಿ ಟಿ20 ವಿಶ್ವಕಪ್ ಅನ್ನು ಎದುರು ನೋಡಬೇಕು… ಆದರೆ ಈ ಪ್ರಮುಖ ಟೂರ್ನಿಗಳ ಹೊರತಾಗಿ ಇದೀಗ ಚತುಷ್ಕೋನ ಟಿ20 ಸರಣಿಯನ್ನು ಆಯೋಜಿಸುವ ಬಗ್ಗೆ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಅಧ್ಯಕ್ಷ ರಮೀಜಾ ರಾಜಾ ವಿಶೇಷ ಪ್ರಸ್ತಾಪವನ್ನು ಬಿಸಿಸಿಐ ಮುಂದಿಟ್ಟಿದೆ ಎಂದು ವರದಿಯಾಗಿದೆ. ಅಂದರೆ ನಾಲ್ಕು ತಂಡಗಳ ಟಿ20 ಸರಣಿ ಆಯೋಜಿಸುವ ಬಗ್ಗೆ ಪಾಕ್ ಕ್ರಿಕೆಟ್ ಮಂಡಳಿ ಆಸಕ್ತಿ ಹೊಂದಿದೆ. …

Read More »

ಭಾರತದಲ್ಲಿ ಒಂದೇ ದಿನದಲ್ಲಿ 1,94,720 ಕೋವಿಡ್ ಪತ್ತೆ

ನವದೆಹಲಿ : ದೇಶದಲ್ಲಿ  ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ ದೇಶದಲ್ಲಿ 1,94,720 ಮಂದಿಗೆ ಹೊಸದಾಗಿ ಸೋಂಕು ದೃಢಪಟ್ಟಿದೆ. ಕೇಂದ್ರ ಆರೋಗ್ಯ ಸಚಿವಾಲಯ ಈ ಕುರಿತು ಮಾಹಿತಿ ನೀಡಿದ್ದು, ದೇಶದಲ್ಲಿ ಕಳೆದ 24 ಗಂಟೆಯಲ್ಲಿ 1,94,720 ಕೊರೊನಾ ಕೇಸ್ ಪತ್ತೆಯಾಗಿದ್ದು, 442 ಮಂದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.

Read More »

ಕರ್ನಾಟಕ ರಾಜ್ಯಾದ್ಯಂತ ಏಕಕಾಲಕ್ಕೆ ಶಾಲೆಗಳನ್ನು ಬಂದ್​ ಮಾಡುವುದಿಲ್ಲ

ಬೆಂಗಳೂರು: ಕರ್ನಾಟಕ ರಾಜ್ಯಾದ್ಯಂತ ಏಕಕಾಲಕ್ಕೆ ಶಾಲೆಗಳನ್ನು ಬಂದ್​ ಮಾಡುವುದಿಲ್ಲ.ಕೊರೊನಾ ಪ್ರಕರಣಗಳು​ ಹೆಚ್ಚಿರುವ ಜಿಲ್ಲೆಗಳಲ್ಲಿ ಶಾಲೆಗಳನ್ನು ಬಂದ್ ಮಾಡುವ ಬಗ್ಗೆ ಜಿಲ್ಲಾಧಿಕಾರಿ ನಿರ್ಧರಿಸುತ್ತಾರೆ. ಶಾಲಾ- ಕಾಲೇಜು ಬಂದ್​ ಬಗ್ಗೆ ಆಯಾ ಡಿಸಿ ನಿರ್ಧರಿಸ್ತಾರೆ ಎಂದು  ಶಿಕ್ಷಣ ಇಲಾಖೆ ಸಚಿವ ಬಿ.ಸಿ. ನಾಗೇಶ್​ ಪ್ರತಿಕ್ರಿಯೆ ನೀಡಿದ್ದಾರೆ. ಆಯಾ ಅಧಿಕಾರಿಗಳೇ ನಿರ್ಧರಿಸುವಂತೆ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಕೊರೊನಾ ಹೆಚ್ಚಿರುವ ಜಿಲ್ಲೆಗಳಲ್ಲಿ ಡಿಸಿಗಳು ಈ ಬಗ್ಗೆ ನಿರ್ಧರಿಸ್ತಾರೆ ಎಂದು ತಿಳಿಸಿದ್ದಾರೆ.

Read More »

ಲತಾ ಮಂಗೇಶ್ವರ್ ಗೆ ಐಸಿಯು ವಿಭಾಗದಲ್ಲಿ ಚಿಕಿತ್ಸೆ

ಬಾಲಿವುಡ್ ನ ಶ್ರೇಷ್ಠ ಗಾಯಕಿ, ಗಾನಕೋಗಿಲೆ ಲತಾ ಮಂಗೇಶ್ವರ್ ಅವರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಮುಂಬೈನ ಬ್ರೀಚಿ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 92 ವರ್ಷದ ಲತಾ ಮಂಗೇಶ್ಕರ್ ಅವರಿಗೆ ಅವರ ವಯಸ್ಸಿನ ಕಾರಣ ವೈದ್ಯರು ಸಧ್ಯಕ್ಕೆ ಐಸಿಯು ವಿಭಾಗದಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ.

Read More »