Breaking News

Breaking News

ಅನುದಾನದಲ್ಲಿ ತಾರತಮ್ಯ : ರಾಮಲಿಂಗಾ ರೆಡ್ಡಿ

ಬೆಂಗಳೂರು : 28 ವಿಧಾನಸಭಾ ಕ್ಷೇತ್ರವಿದ್ದು, ಈ ಎಲ್ಲ ಕ್ಷೇತ್ರಗಳು ಅಭಿವೃದ್ಧಿ ಆದರೆ ಮಾತ್ರ ಬೆಂಗಳೂರು ಅಭಿವೃದ್ಧಿಯಾದಂತೆ. ಎಲ್ಲಾ ಕ್ಷೇತ್ರಗಳಿಗೆ ಅನುದಾನ ನೀಡಬೇಕು. ಬಿಜೆಪಿ ಅನುದಾನ ನೀಡುವ ವಿಚಾರದಲ್ಲಿ ತಾರತಮ್ಯ ಮಾಡುತ್ತಿದೆ. ಬಿಜೆಪಿ ಶಾಸಕರಿರುವ ಕ್ಷೇತ್ರಗಳಿಗೆ ಮಾತ್ರ ಅನುದಾನ ಬಿಡುಗಡೆ ಮಾಡುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾ ರೆಡ್ಡಿ ಆರೋಪಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಮಲಿಂಗಾ ರೆಡ್ಡಿ ಅವರು, ‘ಬೆಂಗಳೂರಿನಲ್ಲಿ ಕೇವಲ 1 ತಾಸಿನಲ್ಲಿ 90 ಮಿ.ಮೀಟರ್ ಮಳೆಯಾದರೆ ಸುಮಾರು 100 …

Read More »

ನೀರಾವರಿ ಯೋಜನೆ ಅರಿವು ಮೂಡಿಸಲು ‘ಜನತಾ- ಜಲಧಾರೆ’ ಯಾತ್ರೆ

ಬೆಂಗಳೂರು: ‘2022 ಜೆಡಿಎಸ್​​ನ ಸಂಘಟನಾ ವರ್ಷ’ ಎಂದು ಘೋಷಿಸಿರುವ ಜೆಡಿಎಸ್‍, ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ‘ಜನತಾ- ಜಲಧಾರೆ’ ಯಾತ್ರೆಯನ್ನು 180 ಕ್ಷೇತ್ರಗಳಲ್ಲಿ ಹಮ್ಮಿಕೊಳ್ಳಲು ನಿರ್ಧರಿಸಿದೆ. ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಜನತಾ ಜಲಧಾರೆಗೆ ಹೊರಡಲಿರುವ ಗಂಗಾ ರಥವನ್ನು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಾಧ್ಯಮಗಳ ಮುಂದೆ ಅನಾವರಣಗೊಳಿಸಿದರು. ನಂತರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಹೆಚ್​​​ಡಿಕೆ, ಜಲಧಾರೆ ಯಾತ್ರೆ …

Read More »

ಕೋವಿಡ್ ಲಸಿಕೆ ಪಡೆದಿರುವವರಿಗೆ ಗ್ರೀನ್ ಪಾಸ್ ವಿತರಣೆ

ಬೆಂಗಳೂರು : ಗ್ರೀನ್ ಪಾಸ್ ಅಥವಾ ಯೂನಿವರ್ಸಲ್ ಪಾಸ್ ನ್ನು ರಾಜ್ಯ ಸರ್ಕಾರವು ಎರಡೂ ಕೋವಿಡ್ ಲಸಿಕೆ  ಪಡೆದಿರುವವರಿಗೆ ನೀಡುವುದಾಗಿ ಬಗ್ಗೆ ಚಿಂತಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್  ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಎರಡೂ ಡೋಸ್ ಲಸಿಕೆ ಪಡೆದಿರುವವರಿಗೆ ಹಂತ ಹಂತವಾಗಿ ಗ್ರೀನ್ ಪಾಸ್ ನೀಡುವ ಬಗ್ಗೆ ಚಿಂತನೆ ನಡೆಸಲಾಗಿದ್ದು, ಮೊದಲ ಹಂತದಲ್ಲಿ ಸರ್ಕಾರಿ ನೌಕರರಿಗೆ ಪಾಸ್ ನೀಡಲು ಯೋಜಿಸಲಾಗಿದೆ. ಈ ಪಾಸ್ ಪಡೆದವರು ಮಾಲ್, …

Read More »

ಕರ್ಫ್ಯೂ ವೇಳೆ ಓಡಾಡಿದರೆ ವಾಹನ ಸೀಜ್

ಬೆಂಗಳೂರು: ಕೊರೋನಾ ಏರಿಕೆ ಕಾರಣಕ್ಕೆ ಬೆಂಗಳೂರು ಪೊಲೀಸರು ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದ್ದಾರೆ. ವೀಕೆಂಡ್ ಕರ್ಫ್ಯೂ ವೇಳೆ ಸುಮ್ಮನೆ ಓಡಾಡಿದರೆ ವಾಹನವನ್ನು ಅಲ್ಲಿಯೇ ಸೀಜ್ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಪೊಲೀಸರ ಜತೆ ಮತ್ತು ಸಂಸ್ಥೆಗಳ ಜತೆ ಸಹಕಾರ ನೀಡಬೇಕು ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂತ್ ಮನವಿ ಮಾಡಿಕೊಂಡಿದ್ದಾರೆ. ಕಾನೂನು ಮೀರಿದವರ ಮೇಲೆ ಕಟ್ಟು ನಿಟ್ಟಿನ ಕ್ರಮ ಇದ್ದು ಯಾವ ಪಾಸ್ ಕೊಡುವ ವ್ಯವಸ್ಥೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Read More »

ರಾತ್ರಿ ಕರ್ಫ್ಯೂಗಳನ್ನು ತಳ್ಳಿ ಹಾಕಿ

ಈಗಾಗಲೇ ಬಹುತೇಕ ರಾಜ್ಯಗಳಲ್ಲಿ ಕೋವಿಡ್-19 ವೈರಸ್  ಸಾಂಕ್ರಾಮಿಕ ರೋಗದ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿರುವುದರಿಂದ, ಅಲ್ಲಿನ ರಾಜ್ಯ ಸರ್ಕಾರಗಳು ರಾತ್ರಿ ಕರ್ಫ್ಯೂ ಅನ್ನು ಈಗಾಗಲೇ ಜಾರಿ ಮಾಡಿದೆ. ಆದರೆ ಇದು ನಿಜಕ್ಕೂ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡುವಲ್ಲಿ ಸಹಾಯಕವಾಗುವುದೇ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ.ಇದರ ಬಗ್ಗೆ ಮಾತನಾಡಿದ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ಅವರು ಭಾರತದಲ್ಲಿ ರಾತ್ರಿ ಕರ್ಫ್ಯೂಗಳನ್ನು ಜಾರಿಗೆ ತರುವ ಹಿಂದೆ ಯಾವುದೇ ವಿಜ್ಞಾನವಿಲ್ಲ …

Read More »

ಪಂಜಾಬ್​​​​ಗೆ ಭೇಟಿ ವೇಳೆ ಮತ್ತೊಂದು ಭದ್ರತಾ ವೈಫಲ್ಯ

ಪ್ರಧಾನಿ ಮೋದಿ ಪಂಜಾಬ್​​​​ಗೆ ಭೇಟಿ ನೀಡಿದ್ದಾಗ ಭದ್ರತಾ ವೈಫಲ್ಯ ಸಂಭವಿಸಿದ ಎರಡು ದಿನಗಳ ಬಳಿಕ ವಿಡಿಯೋವೊಂದು ಹೊರಬಿದ್ದಿದೆ. ಇದ್ರಲ್ಲಿ ಮತ್ತೊಂದು ರೀತಿಯ ಭದ್ರತಾ ವೈಫಲ್ಯ ನಡೆದಿರೋದು ಬೆಳಕಿಗೆ ಬಂದಿದೆ. ಮೋದಿ ಫ್ಲೈ ಓವರ್​​ನಲ್ಲಿ ಸ್ಟ್ರಕ್ ಆಗಿದ್ದಾಗ ಪಕ್ಕದ ಮತ್ತೊಂದು ಫ್ಲೈಓವರ್​​ ಮೇಲೆ ಬಿಜೆಪಿ ಕಾರ್ಯಕತ್ರು ಬಂದಿದ್ದಾರೆ. ಕೆಲವೇ ಮೀಟರ್​​ನಷ್ಟು ದೂರದಲ್ಲಿ ನಿಂತು, ಬಿಜೆಪಿ ಬಾವುಟಗಳನ್ನು ಹಿಡಿದು ಪ್ರಧಾನಿ ಮೋದಿ, ಬಿಜೆಪಿ ಜಿಂದಾಬಾದ್ ಅಂತ ಘೋಷಣೆಗಳನ್ನು ಕೂಗಿದ್ದಾರೆ. ನಂತರ ಎಸ್​​ಪಿಜಿ ಗಾರ್ಡ್​​​ಗಳು …

Read More »

60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ಲಸಿಕೆ

ಬೆಂಗಳೂರು : ರಾಜ್ಯದಲ್ಲಿ ಜನವರಿ 10 ರಿಂದ 60 ವರ್ಷ ಮೇಲ್ಪಟ್ಟವರಿಗೆ ಮತ್ತು ಬೇರೆ ಬೇರೆ ರೋಗ ಲಕ್ಷಣಗಳಿಂದ ಬಳಲುತ್ತಿರುವವರಿಗೆ ಬೂಸ್ಟರ್ ಡೋಸ್ ಲಸಿಕೆ ಹಾಕಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಜನವರಿ 10 ರಿಂದ 60 ವರ್ಷ ಮೇಲ್ಪಟ್ಟವರು, ವೈದ್ಯರು, ಆರೋಗ್ಯ ಕಾರ್ಯಕರ್ತರು ಸೇರಿದಂತೆ ಎಲ್ಲ ಮುಂಚೂಣಿ ವಾರಿಯರ್ ಗಳಿಗೆ ಮೂರನೇ ಅಥವಾ ಬೂಸ್ಟರ್ ಡೋಸ್ ಲಸಿಕೆ ನೀಡಲಾಗುವುದು ಎಂದು …

Read More »

ಸರ್ಕಾರ ವಿರುದ್ಧ ಡಿಕೆಶಿ ಕಿಡಿ

ಬೆಂಗಳೂರು: ಸರ್ಕಾರ ಬೋಗಸ್ ಕೋವಿಡ್ ಪ್ರಕರಣಗಳ ಅಂಕಿಅಂಶವನ್ನು ತೋರಿಸುತ್ತಿದ್ದು, ಈ ಬಗ್ಗೆ ಹೈಕೋರ್ಟ್ ನ್ಯಾಯಮೂರ್ತಿಗಳ ಮೂಲಕ ತನಿಖೆ ನಡೆಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದರು. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಅವರು ಮಾತನಾಡಿದರು. ನಿನ್ನೆಯವರೆಗೆ ಪಾಸಿಟಿವ್ ದರ ಶೇ 3.9 ಇದೆ. ಶೇ 5 ಇದ್ದರೆ ಲಾಕ್‌ಡೌನ್ ಮಾಡಬೇಕು. ರಾಜ್ಯದಲ್ಲಿ ಪ್ರವಾಸಿ ತಾಣಗಳನ್ನು ಬಂದ್ ಮಾಡಿಲ್ಲ. ನಮ್ಮ ಜಿಲ್ಲೆಯಲ್ಲಿ ಮಾತ್ರ ಬಂದ್ ಮಾಡಿದ್ದಾರೆ. ಸಾವನದುರ್ಗ, ಸಂಗಮ, ಚುಂಚನ ಪಾಲ್ಸ್ ಗೆ …

Read More »

ನ್ಯೂ ಲುಕ್ ನಲ್ಲಿ ಅಭಿಮಾನಿಗಳ ಗಮನ ಸೆಳೆದಿರುವ ಹ್ಯಾಟ್ರಿಕ್‌ ಹೀರೋ

“ಟಗರು’ ಚಿತ್ರದ ಸಕ್ಸಸ್‌ ಬಳಿಕ ಮತ್ತೂಮ್ಮೆ ನಟ ಶಿವರಾಜಕುಮಾರ್‌ ಹಾಗೂ ಡಾಲಿ ಧನಂಜಯ್‌ ಈ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದು, ಇಬ್ಬರೂ ಕೂಡ ಎರಡು ವಿಭಿನ್ನ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಇತ್ತೀಚೆಗೆ ನಟ ಶಿವರಾಜಕುಮಾರ್‌ ಹುಟ್ಟುಹಬ್ಬದ ವೇಳೆ ಬೈರಾಗಿ ಬಿಡುಗಡೆಯಾಗಲಿದೆ. ತನ್ನ ಟೈಟಲ್‌ ಮತ್ತು ಫ‌ಸ್ಟ್‌ಲುಕ್‌ ಮೂಲಕ ಅಭಿಮಾನಿಗಳ ಗಮನ ಸೆಳೆದಿರುವ ಹ್ಯಾಟ್ರಿಕ್‌ ಹೀರೋ ಶಿವರಾಜಕುಮಾರ್‌ ಅಭಿನಯದ 123ನೇ ಚಿತ್ರ “ಬೈರಾಗಿ’ಯ ಚಿತ್ರೀಕರಣ ಅಂತಿಮ ಹಂತಕ್ಕೆ ತಲುಪಿದೆ. ಈ ವಾರಾಂತ್ಯದಲ್ಲಿ “ಭೈರಾಗಿ’ಯ …

Read More »

ಭಾರತ ಸೋಲಿಗೆ ಕಾರಣ ನೀಡಿದ ನಾಯಕ

ಮೂರನೇ ಟೆಸ್ಟ್ ಪಂದ್ಯ ಜೋಹಾನ್ಸ್​ಬರ್ಗ್​​ನಲ್ಲಿ  ನಡೆದ ಎರಡನೇ ಟೆಸ್ಟ್​ ಪಂದ್ಯದಲ್ಲಿ ಟೀಮ್ ಇಂಡಿಯಾ  ಸೋಲು ಕಂಡಿದ್ದು ದಕ್ಷಿಣ ಆಫ್ರಿಕಾ 7 ವಿಕೆಟ್​ಗಳಿಂದ ಜಯಿಸಿ ಐತಿಹಾಸಿಕ ಸಾಧನೆ ಮಾಡಿತು. ನಾಲ್ಕನೇ ದಿನ ಅರ್ಧ ದಿನ ಮಳೆ ಆಟ ನಡೆದರೂ ಆತಿಥೇಯರ ಗೆಲುವನ್ನು ತಡೆಯಲು ಆಗಲಿಲ್ಲ. ಆಫ್ರಿಕಾ ಕ್ಯಾಪ್ಟನ್ ಡೀನ್ ಎಲ್ಗರ್  ಭರ್ಜರಿ ಆಟವಾಡಿ ಸೌತ್ ಆಫ್ರಿಕಾಗೆ ನಿರೀಕ್ಷೆಮೀರಿದ ಸುಲಭ ಗೆಲುವು ತಂದುಕೊಟ್ಟರು. ದಕ್ಷಿಣ ಆಫ್ರಿಕಾ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದು ಇತಿಹಾಸ …

Read More »