Breaking News

Breaking News

ಸಿಎಂ ಕಾರ್ಯಕ್ರಮಕ್ಕಿಲ್ಲಾ ಕೊರೋನಾ ರೂಲ್ಸ್-ಮಾಸ್ಕ್,ಇಲ್ಲಾ ಸಾಮಾಜಿಕ ಅಂತರ ಮಾಯ !

ಬೆಂಗಳೂರು: ರಾಜ್ಯ ಸರ್ಕಾರ ಕೋವಿಡ್ ನಿಂದ ಮೃತಪಟ್ಟವರ ಕುಟುಂಬಗಳಿಗೆ ಇಂದು ಪರಿಹಾರ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಈ ವೇಳೆ ಕಾರ್ಯಕ್ರಮಕ್ಕೆ ಜನ ಬಸ್‍ಗಳ ಮೂಲಕ ಗುಂಪು, ಗುಂಪಾಗಿ ಆಗಮಿಸಿದ್ದು, ಕೊರೊನಾ ನಿಯಮವನ್ನು ಉಲ್ಲಂಘನೆ ಮಾಡಲಾಗಿದೆ. ಬಸವಗುಡಿ ಮೈದಾನದಲ್ಲಿ ಇಂದು ಬೆಳಗ್ಗೆ 11:30ಕ್ಕೆ ಸರ್ಕಾರ ಕೋವಿಡ್ ನಿಂದ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ವಿತರಣೆ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮಕ್ಕೆ ನೂರಾರು ಮಂದಿ ಬಸ್ ಏರಿ ಬಂದಿದ್ದರು. ಅಲ್ಲದೇ ಈ ವೇಳೆ ಎಲ್ಲರೂ ಮಾಸ್ಕ್ …

Read More »

ಏಳು ಬಾರಿಯ ರಾಜ್ಯಸಭಾ ಸಂಸದ ಮಹೇಂದ್ರ ಪ್ರಸಾದ್ ಇನ್ನಿಲ್ಲ

ನವದೆಹಲಿ:ಜನತಾ ದಳ (ಯುನೈಟೆಡ್) ನ ರಾಜ್ಯಸಭಾ ಸಂಸದ ಮತ್ತು ಕೈಗಾರಿಕೋದ್ಯಮಿ ಮಹೇಂದ್ರ ಪ್ರಸಾದ್ ಅವರು ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ 81 ವರ್ಷದ ಪ್ರಸಾದ್ ಭಾನುವಾರ ರಾತ್ರಿ ಇಹಲೋಕ ತ್ಯಜಿಸಿದ್ದಾರೆ. ಸಂಸತ್ತಿನ ಶ್ರೀಮಂತ ಸದಸ್ಯರಲ್ಲಿ ಒಬ್ಬರು ಎಂದು ಅಂದಾಜಿಸಲಾಗಿದೆ. ಬಿಹಾರದಿಂದ ಏಳು ಬಾರಿ ರಾಜ್ಯಸಭಾ ಸಂಸದರಾಗಿದ್ದರು ಮತ್ತು ಒಮ್ಮೆ ಲೋಕಸಭೆಗೆ ಚುನಾಯಿತರಾಗಿದ್ದರು.ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. …

Read More »

ರಾಜ್ಯ ಬಿಜೆಪಿ ಸರ್ಕಾರ ‘ನೈಟ್ ಕರ್ಪ್ಯೂ’ ಬಗ್ಗೆ, ಸ್ವಪಕ್ಷೀಯ ನಾಯಕರಿಂದಲೇ ಅಸಮಾಧಾನ.!

ಚಿಕ್ಕಮಗಳೂರು: ರಾಜ್ಯ ಸರ್ಕಾರ ನಾಳೆಯಿಂದ ಜಾರಿಗೊಳಿಸುತ್ತಿರುವಂತ ನೈಟ್ ಕರ್ಪ್ಯೂ ಆದೇಶದ ಬಗ್ಗೆ ಹೋಟೆಲ್ ಮಾಲೀಕರು, ಚಿತ್ರಮಂದಿರದ ಮಾಲೀಕರು ಸೇರಿದಂತೆ ಅನೇಕರು ವಿರೋಧ ವ್ಯಕ್ತ ಪಡಿಸಿದ್ದಾರೆ. ಇತ್ತ ಬಿಜೆಪಿ ಸರ್ಕಾರದ ಈ ಆದೇಶ ವಿರುದ್ಧವೇ ಸ್ವಪಕ್ಷೀಯ ನಾಯಕ ಕೂಡ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಈ ಕುರಿತಂತೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು, ಓಮಿಕ್ರಾನ್ ವೈರಸ್ ಬಗ್ಗೆ ಭಯಪಡಬೇಡಿ ಎಂಬುದಾಗಿ ವಿಜ್ಞಾನಿಗಳೇ ತಿಳಿಸಿದ್ದಾರೆ. ಅಲ್ಲದೇ ಮೂಗು …

Read More »

ಹೊಸ ವರ್ಷಕ್ಕೆ ಜನ ಓಡಾಡುವಂತಿಲ್ಲ; ಕರ್ಫ್ಯೂ ಉಲ್ಲಂಘಿಸಿದರೆ NDMA ಅಡಿ ಕೇಸ್ ದಾಖಲು; ಕಮಲ್ ಪಂತ್ ಎಚ್ಚರಿಕೆ

ಬೆಂಗಳೂರು: ಒಮಿಕ್ರಾನ್ ತಡೆಗಟ್ಟುವ ನಿಟ್ಟಿನಲ್ಲಿ ನಾಳೆಯಿಂದ ರಾಜ್ಯಾದ್ಯಂತ ನೈಟ್ ಕರ್ಫ್ಯೂ ಜಾರಿಯಾಗಲಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ. ಡಿಸೆಂಬರ್ 28ರ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ 10 ದಿನಗಳ ಕಾಲ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದ್ದು, ಕರ್ಫ್ಯೂ ಸಂದರ್ಭದಲ್ಲಿ ಯಾರೂ ಹೊರಗಡೆ ಅನಗತ್ಯವಾಗಿ ಓಡಾಟ ನಡೆಸುವಂತಿಲ್ಲ. ಎಲ್ಲೆಡೆ ನಾಕಾಬಂದಿ ಹಾಕಿ ನಿರ್ಬಂಧ ವಿಧಿಸಲಾಗುತ್ತಿದೆ ಎಂದರು. ಬಸ್, ಕ್ಯಾಬ್ ಸೇವೆ ಇರಲಿದೆ. …

Read More »

ಕ್ರಿಸ್‍ಮಸ್ ದಿನ ಬಡ ಮಕ್ಕಳೊಂದಿಗೆ ಕಾಲಕಳೆದ ಶ್ವೇತಾ ಶ್ರೀವಾತ್ಸವ್

ಬೆಂಗಳೂರು: ಚಂದನವನದ ಸಿಂಪಲ್ ಬ್ಯೂಟಿ ಶ್ವೇತಾ ಶ್ರೀವಾತ್ಸವ್ ಕ್ರಿಸ್‍ಮಸ್ ದಿನ ಬಹಳ ಅರ್ಥ ಪೂರ್ಣವಾಗಿ ಕಳೆದಿದ್ದು, ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಶ್ವೇತಾ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದು, ಅವರು ಮಾಡುವ ವರ್ಕೌಟ್ ಮತ್ತು ದಿನನಿತ್ಯದ ವಿಶೇಷ ಭಾಗವನ್ನು ಫೋಟೋ ಅಥವಾ ವೀಡಿಯೋ ಮೂಲಕ ಅಭಿಮಾನಿಗಳಿಗೆ ಹಂಚಿಕೊಳ್ಳುತ್ತಿರುತ್ತಾರೆ. ಅದರಂತೆ ಇಂದು ಅವರು ವಿಶೇಷ ವೀಡಿಯೋವನ್ನು ಇನ್‍ಸ್ಟಾದಲ್ಲಿ ಹಂಚಿಕೊಂಡಿದ್ದು, ಕ್ರಿಸ್ಮಸ್ ಸಮಯವನ್ನು ನಾನು ಚೆನ್ನಾಗಿ ಕಳೆದಿದ್ದೇನೆ. ಈ …

Read More »

ಮಾತೃ ಭಾಷೆ ಕಟುಕರ ಕೈಯಲ್ಲಿ ಸಿಕ್ಕಿಕೊಂಡಿದೆ-ಕುಮಾರಸ್ವಾಮಿ

ಬೆಂಗಳೂರು: ಕನ್ನಡ ಕಟುಕರ ಕೈಯ್ಯಲ್ಲಿ ಸಿಕ್ಕಿಕೊಂಡಿದೆ. ಕೇಂದ್ರ ಸರ್ಕಾರ ಉದ್ಯೋಗ ಅವಕಾಶಗಳಲ್ಲಿ ಕನ್ನಡಿಗರನ್ನು ಹತ್ತಿಕ್ಕಲಾಗುತ್ತಿದೆ. ಮತ್ತು ಅವಕಾಶಗಳನ್ನು ನಿರಾಕರಿಸುವ ಕುತಂತ್ರ ನಿರಂತರವಾಗಿ ನಡೆಯುತ್ತಲೇ ಇದೆ ಎಂದು ಹೇಳುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ಭಾನುವಾರ ನಡೆಸಿದ ಯುಜಿಸಿ-ಎನ್‍ಇಟಿ ಕನ್ನಡ ಐಚ್ಛಿಕ ಭಾಷೆಯ ಪ್ರಶ್ನೆ ಪತ್ರಿಕೆಯಲ್ಲಿ 100ರಲ್ಲಿ 90 ರಷ್ಟು ಪ್ರಶ್ನೆಗಳು ಹಿಂದಿ ಭಾಷೆಯಲ್ಲಿದ್ದರಿಂದ ಸಾವಿರಾರು ವಿದ್ಯಾರ್ಥಿಗಳು ಗೊಂದಲಕ್ಕೀಡಿ ಪರೀಕ್ಷೆಯನ್ನು …

Read More »

ಯೋಗಿ ಮತ್ತೆ ಅಧಿಕಾರಕ್ಕೆ ಬಂದರೆ ಅಸಾದುದ್ದೀನ್ ಓವೈಸಿ ಜನಿವಾರ ಧರಿಸುತ್ತಾರೆ – ಯುಪಿ ಸಚಿವ

ಲಕ್ನೋ: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಎರಡನೇ ಬಾರಿ ಅಧಿಕಾರಕ್ಕೆ ಬಂದರೆ, ಆಲ್‌ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಹಿಂದೂಗಳ ಜನಿವಾರವನ್ನು ಧರಿಸುತ್ತಾರೆ ಎಂದು ಯುಪಿಯ ಪಂಚಾಯತ್‌ರಾಜ್ ಸಚಿವ ಭೂಪೇಂದ್ರ ಸಿಂಗ್ ಚೌಧರಿ ಹೇಳಿದ್ದಾರೆ. ಚೌಧರಿ ಅವರು ಶಾಮ್ಲಿಯಲ್ಲಿ ನಡೆದ ಯುವಜನರ ಸಮಾವೇಶದಲ್ಲಿ ಯೋಗಿ ಆದಿತ್ಯನಾಥನ್ ಮತ್ತೆ ಅಧಿಕಾರಕ್ಕೆ ಬಂದರೆ ಅಸಾದುದ್ದೀನ್ ಓವೈಸಿ ಜನಿವಾರ ಧರಿಸುತ್ತಾರೆ ಮತ್ತು ಭಗವಾನ್ ರಾಮನ ಹೆಸರನ್ನು ಜಪಿಸುತ್ತಾರೆ ಎಂದಿದ್ದಾರೆ.ಬಿಜೆಪಿಯ ಸಿದ್ಧಾಂತವನ್ನು ಬಲಪಡಿಸುವ ಮಧ್ಯೆ, …

Read More »

ಹು-ಧಾ ಅವಳಿನಗರದ ರಸ್ತೆ ತಗ್ಗು ಗುಂಡಿಗಳನ್ನು ಮುಚ್ಚಲು ಒತ್ತಾಯಿಸಿ ಕಾಂಗ್ರೆಸ್ ಪಕ್ಷದಿಂದ ಗಣಹೋಮ

ಹುಬ್ಬಳ್ಳಿ: ಹು-ಧಾ ಮಹಾನಗರ ನಗರದಲ್ಲಿ ಹದಗೆಟ್ಟಿರುವ ರಸ್ತೆಗಳ ದುರಸ್ತಿ ಹಾಗೂ ನಗರದೆಲ್ಲೆಡೆ ತೆರೆದುಕೊಂಡಿರುವ ಗುಂಡಿಗಳನ್ನು ಕೂಡಲೇ ಮುಚ್ಚಬೇಕೆಂದು ಒತ್ತಾಯಿಸಿ ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ವಿನೂತನ ಪ್ರತಿಭಟನೆ ನಡೆಸಿದರು. ನಗರದ ಕೊಪ್ಪಿಕರ ರಸ್ತೆಯ ಮಧ್ಯದಲ್ಲಿ ಹೋಮ ಕುಂಡ ನಿರ್ಮಿಸಿ, ಸಂಕಲ್ಪ ಗಣಹೋಮ ಮಾಡುವ ಮೂಲಕ ವಿನೂತನ ಪ್ರತಿಭಟನೆ ಮಾಡಿದರು. ಈ ವೇಳೆ ಇಬ್ಬರು ಅರ್ಚಕರಿಂದ ಮಂತ್ರಘೋಷ ಪಟಣದ ಮೂಲಕ ಶಾಸ್ತ್ರೋಕ್ತವಾಗಿ ಗಣಹೋಮ‌ ನೆರವೇರಿಸಿದರು. ಈ ವೇಳೆ ಮಾತನಾಡಿದ ಹು-ಧಾ ಮಹಾನಗರ …

Read More »

ಅಫ್ಗಾನಿಸ್ತಾನ: ಚುನಾವಣಾ ಆಯೋಗ ವಿಸರ್ಜಿಸಿದ ತಾಲಿಬಾನ್ ಸರ್ಕಾರ

ಕಾಬೂಲ್‌: ಅಫ್ಗಾನಿಸ್ತಾನದಲ್ಲಿ ಅಧಿಕಾರದಲ್ಲಿರುವ ತಾಲಿಬಾನ್ ಸರ್ಕಾರವು, ಅಲ್ಲಿನ ಚುನಾವಣಾ ಆಯೋಗಗಳು ಹಾಗೂ ಶಾಂತಿ ಮತ್ತು ಸಂಸದೀಯ ವ್ಯವಹಾರಗಳ ಸಚಿವಾಲಯವನ್ನು ವಿಸರ್ಜಿಸಿದೆ. ದೇಶದ ಸ್ವತಂತ್ರ ಚುನಾವಣಾ ಆಯೋಗ, ಚುನಾವಣಾ ದೂರು ಆಯೋಗ ಹಾಗೂ ಶಾಂತಿ ಮತ್ತು ಸಂಸದೀಯ ವ್ಯವಹಾರಗಳ ಸಚಿವಾಲಯವನ್ನು ವಿಸರ್ಜಿಸಲಾಗಿದೆ ಎಂದು ಸರ್ಕಾರದ ಉಪ ವಕ್ತಾರ ಬಿಲಾಲ್ ಕರೀಮಿ ತಿಳಿಸಿದ್ದಾರೆ. ‘ಅಫ್ಗಾನಿಸ್ತಾನದ ಸದ್ಯದ ಸನ್ನಿವೇಶಕ್ಕೆ ಅವು ಅನಗತ್ಯ ಸಂಸ್ಥೆಗಳಾಗಿವೆ’ ಎಂದು ಹೇಳಿರುವ ಕರೀಮಿ, ಭವಿಷ್ಯದಲ್ಲಿ ಅವುಗಳ ಅಗತ್ಯವಿದೆ ಎನಿಸಿದರೆ, ತಾಲಿಬಾನ್ ಸರ್ಕಾರ …

Read More »

ಉಡುಪಿ ಭಾಷಣ ವಿವಾದ – ಹೇಳಿಕೆಯನ್ನು ಹಿಂಪಡೆದ ತೇಜಸ್ವಿ ಸೂರ್ಯ

ಬೆಂಗಳೂರು: ಉಡುಪಿ ಮಾಡಿದ ಭಾಷಣ ವಿವಾದವಾಗುತ್ತಿದ್ದಂತೆ ಸಂಸದ ತೇಜಸ್ವಿ ಸೂರ್ಯ ತನ್ನ ಹೇಳಿಕೆಯನ್ನು ಹಿಂದಕ್ಕೆ ಪಡೆದಿದ್ದಾರೆ. ಈ ಬಗ್ಗೆ ತಮ್ಮ ಟ್ವೀಟ್ ಮಾಡಿದ ಅವರು, ಉಡುಪಿ ಶ್ರೀಕೃಷ್ಣ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತದಲ್ಲಿ ಹಿಂದೂ ಪುನರುತ್ಥಾನ ಆಗಬೇಕು ಎನ್ನುವ ವಿಷಯದ ಕುರಿತು ಮಾತನಾಡಿದ್ದೆ. ಆದರೆ ನನ್ನ ಭಾಷಣದ ಕೆಲವು ಹೇಳಿಕೆಗಳು ವಿವಾದವನ್ನು ಸೃಷ್ಟಿಸಿವೆ. ಹಾಗಾಗಿ ಹೇಳಿಕೆಗಳನ್ನು ಹಿಂಪಡೆಯುತ್ತೇನೆ ಎಂದಿದ್ದಾರೆ. ಉಡುಪಿ ಕೃಷ್ಣ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದ ಅವರು, ಹಿಂದೂ …

Read More »