Breaking News

Breaking News

ಹುಬ್ಬಳ್ಳಿ ಮೂಲದ ವ್ಯಕ್ತಿ ಅರಸಿಕೇರೆಯಲ್ಲಿ ನೇಣಿಗೆ ಶರಣು

ಬೆಂಗಳೂರು : ಹುಬ್ಬಳ್ಳಿ ಮೂಲದ ಲಾರಿ ಚಾಲನೊಬ್ಬ ಬೆಂಗಳೂರಿನ ಅರಸಿಕೇರಿಯಲ್ಲಿ ಭಾನುವಾರದಂದು ನೇಣಿಗೆ ಶರಣಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬೆಂಗಳೂರಿನ ಅರಸಿಕೇರಿ ಬಳಿ ರಸ್ತೆ ಬದಿಯಲ್ಲಿ ಲಾರಿ ನಿಲ್ಲಸಿ ಪಕ್ಕದಲ್ಲಿರುವ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ, ಮೃತ ವ್ಯಕ್ತಿ ಲಾರಿ‌ಚಾಲಕನಾಗಿದ್ದು KA25 AA 7128 ನಂಬರ ಹೊಂದಿದ್ದು, ಹುಬ್ಬಳ್ಳಿ ಮೂಲದವನೆಂದು ಶಂಕೆ ವ್ಯಕ್ತವಾಗಿದೆ ಎಂದು ಹೇಳಲಾಗ್ತಿದೆ.ಈ ಕುರಿತು ಸ್ಥಳಕ್ಕೆ ಪೋಲೀಸರು ಭೇಟಿ ನೀಡಿ ಪರಿಶೀಲನೆ ನೆಡೆಸಿದ್ದಾರೆ‌.

Read More »

ವಿದ್ಯಾವರ್ಧಕ ಸಂಘದ‌ ಕಾರ್ಯಕಾರಿ ಸಮಿತಿ‌ ಸದಸ್ಯರಾಗಿ ಡಾ.ಶ್ರೀಶೈಲ್ ಹುದ್ದಾರ ಆಯ್ಕೆ-ಜಾನಪದ ಪರಿಷತ್ತಿನ ಜಿಲ್ಲಾದ್ಯಕ್ಷರಿಂದ ಸನ್ಮಾನ

ಹಾವೇರಿ.: ಕರ್ನಾಟಕ ವಿದ್ಯಾವರ್ಧಕ ಸಂಘದ ತ್ರೈಮಾಸಿಕ ಚುನಾವಣೆಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಆಯ್ಕೆಯಾಗಿರುವ ಶ್ರೀ ರಂಬಾಪುರಿ ಕಾಲೇಜು ಪ್ರಾದ್ಯಾಪಕರು ಡಾ.ಶ್ರೀಶೈಲ್ ಹುದ್ದಾರ ಇವರನ್ನು ಕರ್ನಾಟಕ ಜಾನಪದ ಪರಿಷತ್ತಿನ ಹಾವೇರಿ ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀ ರಾಮಚಂದ್ರಪ್ಪ ಅರ್ಕಸಾಲಿಯವರು ಸನ್ಮಾಸಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ಸದಸ್ಯರಾದ ಕೋಟ್ರೇಶ ಮಾಸ್ತರ್ ಬೆಳಗಲಿ,ರಂಬಾಪುರಿ ಕಾಲೇಜು ಪ್ರಾಂಶುಪಾಲರಾದ ಶ್ರೀ ತಾವರಗೊಂದಿ,ಕೊಂಡಯ್ಯ ಮಾಸ್ತರ್,ಜಾನಪದ ಪರಿಷತ್ತಿನ ತಾಲೂಕಿನ ಅಧ್ಯಕ್ಷರಾದ ಬಸವರಾಜ್ ಗುಬ್ಬಿ,ಗುರನಾಥ ಹುಬ್ಬಳ್ಳಿ,ಕಜಾಪ ಪ್ರಧಾನ ಕಾರ್ಯದರ್ಶಿಗಳಾದ ಡಾ.ನಾಗರಾಜ …

Read More »

ಬೆಂಗಳೂರಲ್ಲಿ ಬಾಯ್ಬಿಟ್ಟ ರಸ್ತೆಗಳಿಗೆ ಪೂಜೆ

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಮಳೆಯ ನಂತರ ಸಾಕಷ್ಟು ರಸ್ತೆಗಳು ಬಾಯ್ಬಿಟ್ಟಿವೆ. ಇದರಿಂದ ಹಲವಾರು ಅಪಘಾತ ಸಂಭವಿಸಿ ಪ್ರಾಣಾಹುತಿ ಪಡೆದುಕೊಳ್ಳುತ್ತಿವೆ. ರಸ್ತೆ ಗುಂಡಿಗಳನ್ನು ಮುಚ್ಚಿಸದ ಬಿಬಿಎಂಪಿಯ ವಿರುದ್ಧ ನಗರದಲ್ಲಿ ಜನರು ರಸ್ತೆಗುಂಡಿಗಳ ಸುತ್ತ ರಂಗೋಲಿ ಹಾಕಿ, ಹೂವಿನಿಂದ ಅಲಂಕರಿಸಿ, ಆರತಿ ಮಾಡಿ ಪೂಜೆ ಸಲ್ಲಿಸುವುದರ ಮೂಲಕ ವಿನೂತನವಾಗಿ ಪ್ರತಿಭಟಿಸಿ ಗಮನ ಸೆಳೆದರು. ಗುಂಡಿದೇವರಿಗೆ ಹೂವಿನಲಂಕಾರ, ಆರತಿ ನಗರದ ಕಾಕ್ಸ್‌ಟೌನ್ ಚಾರ್ಲ್ಸ್ ಕಾಂಪ್​ಬೆಲ್ ಮುಖ್ಯ ರಸ್ತೆಯಲ್ಲಿ ಜನರು ಈ ವಿನೂತನ ಪ್ರತಿಭಟನೆ …

Read More »
Featured Video Play Icon

ಧಾರವಾಡದ ಡಿಸಿ ಕಚೇರಿ ಎದುರೇ ಡಿಶುಂ ಡಿಶುಂ…

ಧಾರವಾಡ: ಬಡ್ಡಿ ಹಣಕ್ಕಾಗಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರೇ ಎರಡು ಗುಂಪುಗಳ ಮಧ್ಯೆ ಮಾರಾಮಾರಿ ನಡೆದಿದ್ದು, ಪೊಲೀಸರು ಮೂಕ ಪ್ರೇಕ್ಷಕರಾಗಿ ನೋಡುತ್ತ ನಿಂತಿದ್ದರು. ಜಿಲ್ಲಾಧಿಕಾರಿ ಬಳಿ ಬಂದ ಏಳೆಂಟು ಜನ ಹಣದ ವ್ಯವಹಾರಕ್ಕಾಗಿ ವಾಗ್ವಾದ ನಡೆಸಿದರು. ಈ ವೇಳೆ ಪೊಲೀಸ್ ಪೇದೆಯೊಬ್ಬರು ಬಂದು ಇಲ್ಲಿಂದ ಆಕಡೆ ಹೋಗಿ ಇದು ಡಿಸಿ ಕಚೇರಿ ಎಂದು ಹೇಳಿದರೂ ಕೇಳದ ಆ ಗುಂಪು ಅಲ್ಲೇ ವಾಗ್ವಾದ ನಡೆಸಿತು. ನಂತರ ಮಾತಿಗೆ ಮಾತು ಬೆಳೆದು ಎರಡೂ …

Read More »

ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಭಾರಿ ಅವಘಡ

ಹಾವೇರಿ :ಹಾವೇರಿ ಜಿಲ್ಲೆಯಲ್ಲಿ ಹೋರಿ ಬೆದರಿಸುವ ಸ್ಪರ್ಧೆ ಎಂದರೆ ಯುವಕರಿಗೆ ಅಷ್ಟೇ ಅಲ್ಲ ವೃದ್ದರಿಗೂ ಎಲ್ಲಿಲ್ಲದ ಪ್ರೀತಿ. ಪ್ರತಿ ವರ್ಷದಂತೆ ಈ ವರ್ಷವೂ ಹಾವೇರಿ ಜಿಲ್ಲೆಯಲ್ಲಿ ಹೋರಿ ಬೆದರಿಸುವ ಸ್ಪರ್ಧೆ ನಡಿತಾ ಇದೆ. ಅದರಲ್ಲೂ ಹಾವೇರಿ ತಾಲ್ಲೂಕಿನ ಬಸಾಪುರ ಗ್ರಾಮದಲ್ಲಿ ಒಂದು ವಾರದ ಹಿಂದೆ ನಡೆಯಬೇಕಾಗಿದ್ದ ಸ್ಪರ್ಧೆ ಮಳೆಯ ಅವಾಂತರದಿದ ರದ್ದಾಗಿತ್ತು. ನಂತರ ಮಳೆಪ್ರಮಾಣ ಕಡಿಮೆಯಾಗುತ್ತಿದ್ದಂತೆ ಮತ್ತೆ ಭಾರಿ ಹೋರಿ ಬೆದರಿಸು ಸ್ಪರ್ಧೆ ನಿಯೋಜನೆ ಗೊಂಡಿದೆ. ಇದರಲ್ಲಿ ಸಾಕಷ್ಟು ಅವಘಡಗಳು …

Read More »

ತಲೆಮರೆಸಿಕೊಂಡಿದ್ದ ವಂಚಕ ಅಂದರ್: ಪೋಲಿಸರ ಕಾರ್ಯಾಚರಣೆಗೆ ಕಮೀಷನರ ಶ್ಲಾಘನೆ

ಹುಬ್ಬಳ್ಳಿ: ಖೊಟ್ಟಿ ದಾಖಲೆ ಸೃಷ್ಟಿಸಿ ಮೂರೂವರೆ ಲಕ್ಷ ರೂ. ಸಾಲ ಪಡೆದು 26 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬನನ್ನು ಕೇಶ್ವಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಗೋಕುಲ ರೋಡ್‌ ಗಾಂಧಿನಗರ ನಿವಾಸಿ ಹನಮಂತ ಸುಂಕಪ್ಪ ಮುಳಗುಂದ ಬಂಧಿತ ಆರೋಪಿ, ಯಾರದ್ದೋ ಜಮೀನಿನ ದಾಖಲೆಗಳನ್ನು ನಕಲು ಮಾಡಿ ಖೊಟ್ಟಿ ದಾಖಲೆ ಸೃಷ್ಟಿಸಿ ಕೆಎಸ್‌ಎಫ್‌ಸಿಯಲ್ಲಿ ಸಾಲ ಪಡೆದು ವಂಚಿಸಿ ಪರಾರಿಯಾಗಿದ್ದ. 26 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಕೇಶ್ವಾಪುರ ಠಾಣೆ ಇನ್‌ಸ್ಪೆಕ್ಟರ್‌ ಜಗದೀಶ ಹಂಚಿನಾಳ ನೇತೃತ್ವದ …

Read More »

ಭೀಕರ ಅಪಘಾತ: ಇಬ್ಬರ ದುರ್ಮರಣ

ಧಾರವಾಡ: ಹುಬ್ಬಳ್ಳಿ, ಧಾರವಾಡ ಮಧ್ಯೆ ಇರುವ ಬೈಪಾಸ್ ರಸ್ತೆಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಧಾರವಾಡದ ಮೈಕ್ರೊ ಫಿನಿಶ್ ಕಂಪೆನಿ ಎದುರುಗಡೆಯೇ ಈ ಘಟನೆ ನಡೆದಿದೆ. ಹುಬ್ಬಳ್ಳಿ ಕಡೆಯಿಂದ ಬೈಕ್‌ ಮೇಲೆ ಬರುತ್ತಿದ್ದ ಇಬ್ಬರಿಗೆ ಎದುರಿಗೆ ಬರುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ. ಇದರಿಂದ ಬೈಕ್‌ನಲ್ಲಿದ್ದ ಇಬ್ಬರೂ ಸವಾರರು ಸ್ಥಳದಲ್ಲೇ ಅಸುನೀಗಿದ್ದಾರೆ. ಮೃತಪಟ್ಟ ಇಬ್ಬರೂ ಯುವಕರು ಧಾರವಾಡದ ಹೊಸಯಲ್ಲಾಪುರದವರೆಂದು ತಿಳಿದು ಬಂದಿದ್ದು, ಇನ್ನೂ ಅವರ ಹೆಸರು …

Read More »

ಖಾಸಗಿ ಬಸ್ಸು ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿ ಓರ್ವ ಮೃತಪಟ್ಟಿರುವ ಘಟನೆ

ಹುಬ್ಬಳ್ಳಿ: ಖಾಸಗಿ ಬಸ್ಸು ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿ ಓರ್ವ ಮೃತಪಟ್ಟಿರುವ ಘಟನೆ ಇಲ್ಲಿನ ಹೊರವಲಯದ ರಾಷ್ಟ್ರೀಯ ಹೆದ್ದಾರಿ-4 ತಾರಿಹಾಳ ಬಳಿ ನಡೆದಿದೆ. ಧಾರವಾಡದಿಂದ ಹುಬ್ಬಳ್ಳಿ ಕಡೆಗೆ ಹೊರಟ್ಟಿದ್ದ ಕಾರು, ಹಾಗೂ ಹುಬ್ಬಳ್ಳಿ ಕಡೆಯಿಂದ ಧಾರವಾಡ ಕಡೆಗೆ ಹೊರಟ್ಟಿದ್ದ ಖಾಸಗಿ ಬಸ್ಸ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಕಾರಿನ ಚಾಲಕ ಸ್ಥಳದಲ್ಲೇ ಸಾವನ್ನಪಿದ್ದರೇ, ಮೂವರಿಗೆ ಗಂಭೀರಗಾಯಗಳಾಗಿವೆ. ಗಾಯಾಳುಗಳನ್ನು ಕಿಮ್ಸ್ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮೃತ ಮತ್ತು ಗಾಯಗೊಂಡರ …

Read More »

ನೇಹರು ಓಲೆಕಾರ ಮೊಮ್ಮಕ್ಕಳು ನೆಣಿಗೆ ಶರಣು- ಬುದ್ದಿವಾದ ಹೇಳಿದ್ದಕ್ಕೆ ಈ ರೀತಿ ಮಾಡೋದಾ?..

ಹಾವೇರಿ: ಹಾವೇರಿ ಬಿಜೆಪಿ ಶಾಸಕ ನೆಹರು ಓಲೇಕಾರ್ ಅವರ ಇಬ್ಬರು ಮೊಮ್ಮಕ್ಕಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬ್ಯಾಡಗಿ ಪಟ್ಟಣದಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ. ಬ್ಯಾಡಗಿಯ ವಿನಾಯಕ ನಗರ ನಿವಾಸಿಗಳಾದ ಚಂದ್ರು ಛಲವಾದಿ ಅವರ ಮಕ್ಕಳಾದ ನಾಗರಾಜ (16) ಹಾಗೂ ಭಾಗ್ಯಲಕ್ಷ್ಮೀ (18) ಆತ್ಯಹತ್ಯೆಗೆ ಶರಣಾದ ದುರ್ದೈವಿಗಳು. ಪೋಷಕರು ಬುದ್ಧಿವಾದ ಹೇಳಿದ್ದಕ್ಕೆ ಕೋಪಗೊಂಡು ನಾಗರಾಜ ನೇಣಿಗೆ ಶರಣಾಗಿದ್ದಾನೆ. ಇದರ ಬೆನ್ನಲ್ಲೇ ತಮ್ಮನ ಸಾವಿನ ಸುದ್ದಿ ತಿಳಿದು ಅಕ್ಕ ಭಾಗ್ಯಲಕ್ಷ್ಮೀ ಸಹ ಅದೇ …

Read More »

ರೂಪಾಂತರಿ ಕೊರೊನಾ ವೈರಸ್ ಭೀತಿ : ಐಸಿಸಿ ಮಹಿಳಾ ವಿಶ್ವಕಪ್​ ಕ್ವಾಲಿಫೈಯರ್ ಟೂರ್ನಿ ರದ್ದು

ನ್ಯೂಜಿಲ್ಯಾಂಡ್​ನಲ್ಲಿ 2022ಕ್ಕೆ ನಡೆಯಲಿರುವ ಏಕದಿನ ವಿಶ್ವಕಪ್​ಗೆ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ವೆಸ್ಟ್​ ಇಂಡೀಸ್ ತಂಡಗಳು ಅರ್ಹತೆ ಪಡೆದಿವೆ. ಈಗಾಗಲೇ ಭಾರತ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್​, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್​ ತಂಡಗಳು ನೇರ ಅರ್ಹತೆ ಪಡೆದುಕೊಂಡಿವೆ.. ದುಬೈ : ಕೋವಿಡ್-19 ಕಾರಣದಿಂದ ಐಸಿಸಿ 2022ರ ಏಕದಿನ ವಿಶ್ವಕಪ್​ ಅರ್ಹತಾ ಟೂರ್ನಿಯನ್ನು ರದ್ದುಗೊಳಿಸಿದೆ. ಹಾಗಾಗಿ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ವೆಸ್ಟ್ ತಂಡಗಳು ಪ್ರಸ್ತುತ ಶ್ರೇಯಾಂಕದ ಆಧಾರದ ಮೇಲೆ ವಿಶ್ವಕಪ್​ಗೆ ಅರ್ಹತೆಗಿಟ್ಟಿಸಿಕೊಂಡಿವೆ. ದಕ್ಷಿಣ ಆಫ್ರಿಕಾದಲ್ಲಿ ರೂಪಾಂತರಿ ಕೊರೊನಾ …

Read More »