Breaking News

ಜನರಿಗೆ ಟೋಪಿ ಹಾಕಿದ ಮತ್ತೊಂದು ದೋಖಾ ಕಂಪನಿ

ರಾಜ್ಯ ರಾಜಧಾನಿಯಲ್ಲಿ ದಿನಕೊಂದು ಹೊಸ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಈಗ ಕೋಲಾರದ ಸರಧಿಯಾಗಿದ್ದು, ದಿ ಭಾರತ್ ಸೌಹಾರ್ದ
ಕ್ರೆಡಿಟ್ ಕೋ-ಆಪರೇಟಿವ್ ಲಿ.
ಸಂಸ್ಥೆ ವಂಚನೆ ಪ್ರಕರಣದಲ್ಲಿ ಸಿಲುಕಿಕೊಂಡಿದೆ.
ಹತ್ತು ಕೋಟಿ
ರುಪಾಯಿಗೂ ಹೆಚ್ಚು ವಂಚಿಸಿರುವ ದೋಖಾ ಕಂಪನಿ ದಿನಕ್ಕೆ ಒಂದು ಲಕ್ಷ
ರುಪಾಯಿಗೂ ಜಾಸ್ತಿ ಪಿಗ್ಮಿ ವಸೂಲಿ ಮಾಡುತ್ತಿತ್ತು. ಆದ್ರೇ
ಎರಡು ತಿಂಗಳಿಂದ ಸಂಸ್ಥೆಗೆ ಬೀಗ ಜಡಿದು ಪರಾರಿಯಾಗಿರುವ ಸಂಸ್ಥೆಯವರು ಗ್ರಾಹಕರಿಗೆ ಹೆದರಿ
ತಲೆ ಮರೆಸಿಕೊಂಡಿದ್ದಾರೆ. ಇದರಿಂದ ಹಣ ಕಳೆದುಕೊಂಡವರು ಕಂಪನಿಯ ಮುಂದೆ ಬಂದು ತಾವು ಹೂಡಿಕೆ ಮಾಡಿದ್ದ
ಹಣಕ್ಕಾಗಿ ಪ್ರತಿಭಟನೆ ಮಾಡಿದ್ದಾರೆ.

Share News

About admin

Check Also

ಭೀಕರ ಅಪಘಾತ : ಒಂದೇ ಕುಟುಂಬದ ನಾಲ್ವರು ಸಾವು

ಗದಗ:-ಬೆಳ್ಳಂಬೆಳಗ್ಗೆ ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದ ಹೊರವಲಯದಲ್ಲಿ ಸಾರಿಗೆ ಬಸ್- ಕಾರು ನಡುವೆ ಅಪಘಾತ ಸಂಭವಿಸಿ ಒಂದೇ ಕುಟುಂಬದ ನಾಲ್ವರು …

Leave a Reply

Your email address will not be published. Required fields are marked *