Breaking News

Breaking News

ಬೆಂಗಳೂರು: ಕಾಲೇಜು ವಿದ್ಯಾರ್ಥಿಗೆ ಚಾಕು ಇರಿತ

ಬೆಂಗಳೂರು: ಜ್ಯೂಸ್ ಕುಡಿಯಲು ಸ್ನೇಹಿತರೊಂದಿಗೆ ಹೋಗಿದ್ದ 17 ವರ್ಷದ ವಿದ್ಯಾರ್ಥಿಗೆ ಮೂವರು ಅಪರಿಚಿತರು ಚಾಕುವಿನಿಂದ ಇರಿದು ಗಾಯಗೊಳಿಸಿರುವ ಘಟನೆ ಆರ್.ಆರ್. ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಗಾಯಗೊಂಡ ವಿದ್ಯಾರ್ಥಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮೇ 27ರ ರಾತ್ರಿ ಪಟ್ಟಣಗೆರೆಯ ಪಲ್ಲವಿ ಢಾಬಾ ಬಳಿ ಘಟನೆ ನಡೆದಿದ್ದು, ದಾರಿ ಬಿಡುವ ವಿಚಾರಕ್ಕೆ ಆರಂಭವಾದ ಮಾತಿನ ಚಕಮಕಿ ಬಳಿಕ ಆರೋಪಿಗಳು ವಿದ್ಯಾರ್ಥಿಯ ಬೈಕ್ ಕಸಿದು ಪರಾರಿಯಾಗಿದ್ದರು. ಬಳಿಕ ವಿದ್ಯಾರ್ಥಿ ಸ್ನೇಹಿತರ ಜೊತೆ ಆರೋಪಿಗಳನ್ನು …

Read More »

ವಿಷಪೂರಿತ ಮದ್ಯ ಸೇವಿಸಿ ಕನಿಷ್ಠ 12 ಮಂದಿ ಮೃತ್ಯು

ಪುಣೆ: ಶಂಕಿತ ನಕಲಿ ಮದ್ಯ ಸೇವನೆಯಿಂದ ಪುಣೆ ಮತ್ತು ಸುತ್ತಮುತ್ತ ಎರಡು ದಿನಗಳಲ್ಲಿ ಕನಿಷ್ಠ 12 ಮಂದಿ ಸಾವನ್ನಪ್ಪಿರುವ ಘಟನೆ ಆತಂಕ ಸೃಷ್ಟಿಸಿದೆ. ಮೂವರು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪಿಂಪ್ರಿ-ಚಿಂಚ್ವಾಡದ ಫುಗೇವಾಡಿ ಪ್ರದೇಶದಲ್ಲಿ ಏಳು ಮಂದಿ ಹಾಗೂ ಹಡಪ್ಸರ್ ಭಾಗದಲ್ಲಿ ಐವರು ಮೃತಪಟ್ಟಿದ್ದಾರೆ. ಮೃತರಲ್ಲಿ ಒಂದೇ ಕುಟುಂಬದ ಇಬ್ಬರು ಸಹೋದರರೂ ಸೇರಿದ್ದಾರೆ. ಮದ್ಯದಲ್ಲಿ ವಿಷಪದಾರ್ಥ ಮಿಶ್ರಣವಾಗಿರುವ ಶಂಕೆ ವ್ಯಕ್ತವಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ …

Read More »

ಬಾಗಲಕೋಟೆಯಲ್ಲಿ ನಿಗೂಢವಾಗಿ ನಾಪತ್ತೆಯಾಗಿದ್ದ ಯುವಕ ತ್ರಿಕೋನ ಪ್ರೇಮಕ್ಕೆ ಬಲಿ!

ಬಾಗಲಕೋಟೆ: ಬೀಳಗಿ ತಾಲೂಕಿನ ಗಿರಿಸಾಗರ ಗ್ರಾಮದ ಯುವಕ ವಿಕಾಸ್ ದಳವಾಯಿ (18) ನಾಪತ್ತೆ ಪ್ರಕರಣ ಭೀಕರ ಕೊಲೆಯಲ್ಲಿ ಅಂತ್ಯಗೊಂಡಿದೆ. ತಾನು ಪ್ರೀತಿಸುತ್ತಿದ್ದ ಯುವತಿ ಬೇರೆಯವರಿಗೆ ಸಿಗಬಾರದು ಎಂಬ ದ್ವೇಷದಿಂದ ಮತ್ತೊಬ್ಬ ಪ್ರೇಮಿ ಕೃಷ್ಣಾ, ಯುವತಿಯ ಸಹೋದರ ರಾಜುನನ್ನು ಪ್ರಚೋದಿಸಿ ವಿಕಾಸ್‌ನ ಹತ್ಯೆ ಮಾಡಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಮೇ 20ರಂದು ಗ್ರಾಮದ ಜಾತ್ರೆಯ ನಾಟಕ ವೀಕ್ಷಿಸಲು ಹೋದ ವಿಕಾಸ್ ಮನೆಗೆ ಮರಳಿರಲಿಲ್ಲ. ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿದ …

Read More »

4.94 ಲಕ್ಷ ರೂ. ಮೌಲ್ಯದ ಮೊಬೈಲ್ ವಶ

ಕಟಕೋಳ: ಇಲ್ಲಿನ ಪೊಲೀಸರು ಕಾರ್ಯಾಚರಣೆ ನೆಡೆಸಿ ಎಂಟು ಜನ ಕಳ್ಳರನ್ನು ಬಂಧಿಸಿ 4.94 ಲಕ್ಷ ರೂ. ಮೌಲ್ಯದ ಮೊಬೈಲ್ ಹಾಗೂ 5.40 ಲಕ್ಷ ರೂ.ಮೌಲ್ಯದ ಎರಡು ಕಾರು ವಶಪಡಿಸಿಕೊಂಡಿದ್ದಾರೆ. ರಾಮದುರ್ಗ ಡಿವೈಎಸ್ಪಿ ಚಿದಂಬರ ಮಡಿವಾಳ ಹಾಗೂ ಸಿಪಿಐ ವಿನಾಯಕ ಬಡಿಗೇರ ನೇತೃತ್ವದಲ್ಲಿ ತಂಡ ರಚಿಸಿ ಕಾರ್ಯಾಚರಣೆ ನಡೆಸಲಾಗಿತ್ತು. ಸ್ಥಳೀಯ ಪಿಎಸ್‌ಐ ಬಸವರಾಜ ಕೊಣ್ಣೂರೆ, ಎಎಸ್‌ಐ ಎಲ್.ಅನ್ನಪೂರ್ಣಾ, ಸಿಬ್ಬಂದಿ ಎಸ್.ಎಂ.ಡೊನವಾಡ, ಎಸ್.ಎಂ.ಬಸರಿಕಟ್ಟಿ, ಆರ್.ಬಿ.ಗೊಕಾಕ, ಎಸ್.ಎಸ್.ವಜ್ರಮಟ್ಟಿ, ಎಂ.ಎಂ.ದ್ಯಾಮನಗೌಡರ, ಡಿ.ಎಚ್.ಮಂಜುನಾಥ ಹಿರೂರ, ಬಿ.ವಿ.ಹುಲಕುಂದ, ಐ.ಬಿ.ಕಡಕೋಳ, …

Read More »

ಅನೈತಿಕ ಸಂಬಂಧ ದುರಂತ ಅಂತ್ಯ: ಬೆಂಗಳೂರನ್ನು ಬೆಚ್ಚಿ ಬೀಳಿಸಿದ ಘಟನೆ

ಬೆಂಗಳೂರು ಬೈಯಪ್ಪನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಭೀಕರ ಕೊಲೆ ಪ್ರಕರಣ ರಾಜ್ಯಾದ್ಯಂತ ಆತಂಕ ಮೂಡಿಸಿದೆ. ರಾಮನಗರ ಜಿಲ್ಲೆಯ ಬೀಡಿ ಕಾಲೋನಿ ನಿವಾಸಿ 27 ವರ್ಷದ ಮೊಹಮ್ಮದ್ ಖಾಸಿಂ ಅವರು ಗುಜರಿ ಅಂಗಡಿ ನಡೆಸುತ್ತಿದ್ದು, ಅರ್ಬಿಯಾ ಕೌಸರ್ ಜೊತೆ ಮದುವೆಗೆ ಮುನ್ನ ಹಲವು ವರ್ಷಗಳಿಂದ ಪ್ರೇಮ ಸಂಬಂಧ ಹೊಂದಿದ್ದರು. ಬಳಿಕ ಅರ್ಬಿಯಾ ಕೌಸರ್ ಅವರು ಮೊಹಮ್ಮದ್ ಅಕ್ಬರ್ ಅವರನ್ನು ವಿವಾಹವಾದರೂ, ಖಾಸಿಂ ಜೊತೆಗಿನ ಸಂಪರ್ಕ ಸಾಮಾಜಿಕ ಜಾಲತಾಣಗಳ ಮೂಲಕ ಮುಂದುವರಿದಿತ್ತು …

Read More »

ಬೀದರ್‌ | ₹19.23 ಲಕ್ಷ ಮೌಲ್ಯದ ಗಾಂಜಾ ಜಪ್ತಿ; ಮಹಿಳೆ ಬಂಧನ

ಬೀದರ್‌: ನಗರದ ಸಂಗಮೇಶ್ವರ ಕಾಲೊನಿಯ ಮನೆಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ ₹19.23 ಲಕ್ಷ ಮೌಲ್ಯದ 38.476 ಕೆಜಿ ಗಾಂಜಾ ಜಪ್ತಿ ಮಾಡಿರುವ ಇಲ್ಲಿನ ಗಾಂಧಿ ಗಂಜ್‌ ಠಾಣೆ ಪೊಲೀಸರು, ಒಬ್ಬ ಮಹಿಳೆಯನ್ನು ಶುಕ್ರವಾರ ಬಂಧಿಸಿದ್ದಾರೆ.ಯಾಸ್ಮೀನ್‌ ನಾಝ್‌ ಬಂಧಿತ ಮಹಿಳೆ. ಪ್ಲಾಸ್ಟಿಕ್‌ ಕ್ಯಾರಿಬ್ಯಾಗ್‌ನಲ್ಲಿ ಸುತ್ತಿ 12 ಪ್ಯಾಕೆಟ್‌ಗಳನ್ನು ಮಾಡಿ ಇಡಲಾಗಿತ್ತು. ಔರಾದ್‌ ತಾಲ್ಲೂಕಿನ ಜಂಬಗಿ ತಾಂಡಾದ ವ್ಯಕ್ತಿ ಬಳಿ ಕಡಿಮೆ ಬೆಲೆಗೆ ಖರೀದಿಸಿ, ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ …

Read More »

ಮತ್ತೆ 30 ನಿವೇಶನಗಳಿಗೆ ನಕಲಿ ಇ-ಖಾತಾ ಮಾಡಿಕೊಟ್ಟ ಎಆರ್‌ಒ ಮಂಜುಳಾ

ಬೆಂಗಳೂರು- ಅಕ್ರಮವಾಗಿ 50 ನಿವೇಶನಗಳಿಗೆ ಎ ಖಾತಾ ಮಾಡಿಕೊಟ್ಟ ಆರೋಪ ಎದುರಿಸುತ್ತಿರುವ ಎಆರ್‌ಒ ಮಂಜುಳಾ ಅವರು ಮತ್ತೆ 30ಕ್ಕೂ ಹೆಚ್ಚು ನಿವೇಶನಗಳಿಗೆ ಖಾತಾ ಮಂಜೂರು ಮಾಡಿರುವುದಾಗಿ ಬಿಜೆಪಿ ಮುಖಂಡ ಎನ್‌.ಆರ್‌. ರಮೇಶ್‌ ಆರೋಪಿಸಿದ್ದಾರೆ. ಈ ಕುರಿತು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್‌ರಾವ್‌ ಹಾಗೂ ಪಶ್ಚಿಮ ವಲಯ ಪಾಲಿಕೆ ಆಯುಕ್ತರಿಗೆ ದೂರು ಸಲ್ಲಿಸಿ, ಮಂಜುಳಾ ಅವರನ್ನು ತಕ್ಷಣ ಅಮಾನತುಗೊಳಿಸುವಂತೆ ಒತ್ತಾಯಿಸಿದ್ದಾರೆ. ಬೆಂಗಳೂರು ಉತ್ತರ ತಾಲ್ಲೂಕಿನ ಹೇರೋಹಳ್ಳಿ ಗ್ರಾಮದ ಸರ್ವೆ ನಂ.56/1ರ 4.20 …

Read More »

ಭೀಮಾತೀರದಲ್ಲಿ ಮತ್ತೆ ಹರಿದ ನೆತ್ತರು: ಆಸ್ತಿ ವಿವಾದಕ್ಕೆ ಮಾರಕಾಸ್ತ್ರಗಳಿಂದ ಕೊಚ್ಚಿ, ಗುಂಡಿಕ್ಕಿ 6 ಜನರ ಬರ್ಬರ ಕೊಲೆ!

ವಿಜಯಪುರ: ಜಿಲ್ಲೆಯ ಭೀಮಾತೀರ ಪ್ರದೇಶ ಮತ್ತೊಮ್ಮೆ ರಕ್ತಪಾತಕ್ಕೆ ಸಾಕ್ಷಿಯಾಗಿದೆ. ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ಜಮೀನು ವಿವಾದ ಹಿನ್ನೆಲೆ ಎರಡು ಕುಟುಂಬಗಳ ನಡುವೆ ನಡೆದ ಭೀಕರ ಘರ್ಷಣೆಯಲ್ಲಿ ಆರು ಜನರನ್ನು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ, ಗುಂಡಿಕ್ಕಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಮೃತರನ್ನು ರೇವಣಸಿದ್ದಪ್ಪ ನಿರಾಳೆ, ದುಂಡಪ್ಪ ನಿರಾಳೆ, ಶಿವಪುತ್ರ ನಿರಾಳೆ, ಚಂದ್ರಶೇಖರ್ ನಿರಾಳೆ ಹಾಗೂ ಶಬ್ಬಿರ್ ನದಾಫ್ ಎಂದು ಗುರುತಿಸಲಾಗಿದೆ. ಮತ್ತೊಬ್ಬ ಮೃತರ ವಿವರ ಇನ್ನಷ್ಟೇ ಲಭ್ಯವಾಗಬೇಕಿದೆ. ನಿರಾಳೆ ಮತ್ತು …

Read More »

ದೊಡ್ಡಬಳ್ಳಾಪುರ | ಗೋವು ಅಕ್ರಮ ಸಾಗಾಟ: ಬಂಧನ

ದೊಡ್ಡಬಳ್ಳಾಪುರ: ಗ್ರಾಮಾಂತರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಸೂಕ್ತ ದಾಖಲೆ ಇಲ್ಲದೆ ಗೋವುಗಳನ್ನು ಸಾಗಿಸುತ್ತಿದ್ದ ಆರೋಪದ ಮೇರೆಗೆ ವ್ಯಕ್ತಿಯೊಬ್ಬರನ್ನು ಬಂಧಿಸಿದ್ದು, ಗೋವುಗಳನ್ನು ವಶಕ್ಕೆ ಪಡೆದಿದ್ದಾರೆ. ಗೌರಿಬಿದನೂರಿನಿಂದ ದಾಬಸ್‌ಪೇಟೆ ಕಡೆಗೆ ಸರಕು ಸಾಗಣೆ ವಾಹನದಲ್ಲಿ ನಾಲ್ಕು ಸೀಮೆ ಹಸುಗಳನ್ನು ಸಾಗಿಸಲಾಗುತ್ತಿತು. ಕಂಟನಕುಂಟೆ ರಸ್ತೆಯಲ್ಲಿ ವಾಹನವನ್ನು ತಡೆದು ಪರಿಶೀಲನೆ ನಡೆಸಿದಾಗ ಸೂಕ್ತ ದಾಖಲೆ ಇಲ್ಲದೆ ಗೋವುಗಳನ್ನು ಕಸಾಯಿ ಖಾನೆಗೆ ಸಾಗಿಸುತ್ತಿದ್ದದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗೋವುಗಳನ್ನು ಗೋ ಶಾಲೆಗೆ ಬಿಡಲಾಗಿದೆ. ಗ್ರಾಮಾಂತರ ಪೊಲೀಸ್ …

Read More »

ಧರ್ಮಸ್ಥಳದಲ್ಲಿ ವೃದ್ಧೆಗೆ ಮತ್ತು ಬರುವ ಜ್ಯೂಸ್ ನೀಡಿ 10 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು

ಶ್ರೀ ಕ್ಷೇತ್ರ ಧರ್ಮಸ್ಥಳ ಗೆ ಯಾತ್ರೆಗೆ ಬಂದಿದ್ದ ಬೆಂಗಳೂರಿನ ಜೆಪಿ ನಗರ ನಿವಾಸಿ ಪ್ರೇಮಾ(70) ಅವರಿಗೆ ಅಪರಿಚಿತ ವ್ಯಕ್ತಿಯೊಬ್ಬ ಲಡ್ಡು ಮತ್ತು ಜ್ಯೂಸ್ ನೀಡಿ ಅಸ್ವಸ್ಥರನ್ನಾಗಿಸಿ ಸುಮಾರು 10 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾದ ಘಟನೆ ನಡೆದಿದೆ. ದೇವರ ದರ್ಶನದ ಬಳಿಕ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಕುಳಿತಿದ್ದ ವೇಳೆ ಆರೋಪಿಯು ಮಾತುಕತೆ ನಡೆಸಿ ಪ್ರಸಾದದ ನೆಪದಲ್ಲಿ ಲಡ್ಡು ಹಾಗೂ ಜ್ಯೂಸ್ ನೀಡಿದ್ದಾನೆ. ಬಳಿಕ ಅಸ್ವಸ್ಥಗೊಂಡ …

Read More »