ಧಾರವಾಡ ಧಾರವಾಡ ಶಹರ ವಾರ್ಡ್ ನಂಬರ ರಲ್ಲಿ ಬರುವ ಗಣೇಶ್ ನಗರದ ಪಕ್ಕದಲ್ಲಿರುವ ರೈಲ್ವೆ ಇಲಾಖೆ ಸಂಬಂಧಿಸಿದ ಖಾಲಿ ಜಾಗದಲ್ಲಿ ಸುಮಾರು 40, ವರ್ಷಗಳಿಂದ ಬಡ ಕುಟುಂಬದವರು ಮನೆಯನ್ನು ನಿರ್ಮಿಸಿಕೊಂಡು ಜೀವನ ಸಾಗಿಸುತ್ತಿದ್ದರು ಆದರೆ ಈಗ ಏಕಾಏಕಿಯಾಗಿ ಯಾವುದೇ ರೀತಿಯ ಸಮಯಾವಕಾಶ ನೀಡಿದೆ ಸದರಿ ಮನೆಗಳನ್ನು ತೆರುವುಗೊಳಿಸಲು ನಿರ್ಧರಿಸಿದ್ದು ವಿಷಾದನೀಯ ಇದರಿಂದ ಜನರಿಗೆ ದಿಕ್ಕು ತೋಚದಂತಾಗಿ ಮುಂದಿನ ಭವಿಷ್ಯದ ಬಗ್ಗೆ ಚಿಂತೆ ಉಂಟಾಗಿದ್ದು ನಮ್ಮ ವೇದಿಕೆಯ ರಾಜ್ಯ ಉಪಾಧ್ಯಕ್ಷರಾದ ಮುತ್ತು ಬೆಳ್ಳಕ್ಕಿ ನೇತೃತ್ವದಲ್ಲಿ ದಿ ಅ 4 ರಂದು ಮನೆಯನು ತೆರುಗೊಳಿಸಲು ಸಮಯ ಅವಕಾಶ, ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕೆಂದು ಕೊಡಬೇಕೆಂದು ಮನವಿಯನ್ನು ಸಲ್ಲಿಸಲಾಗಿತ್ತು, ಹಾಗೂ ಕಾರ್ಮಿಕ ಸಚಿವರು ಹಾಗೂ ಧಾರವಾಡ ಉಸ್ತುವಾರಿ ಸಚಿವರಾದ , ಸಂತೋಷ್ ಲಾಡ್ ಯವರಿಗೆ ಕೂಡ ನಿನ್ನೆ ರಾತ್ರಿ ಮನವಿ ಸಲ್ಲಿಸಲಾಗಿತ್ತು, ಜಿಲ್ಲಾ ಉಸ್ತಾವರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಅಧ್ಯಕ್ಷತೆಯಲ್ಲಿ ಇಂದು ನಮ್ಮ ಸಮ್ಮುಖದಲ್ಲಿ ಸರ್ಕಿಟ್ ಹೌಸ್ ಸಭೆಯನ್ನು ಕರೆದು ಈ ಬಡ ಜನರಿಗೆ ಪರ್ಯಾಯ ವ್ಯವಸ್ಥೆ ಮುಂದಾಗಿದ್ದಾರೆ,
ಈ ಸಂದರ್ಭದಲ್ಲಿ ಸಹಾಯಕ ಧಾರವಾಡದ ಉಪವಿಭಾಗಾಧಿಕಾರಿಗಳು, ತಹಶೀಲ್ದಾರರು,
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸಹಾಯಕ ಆಯುಕ್ತರು, ತಾನಾಜಿ ಪುಂಡೆ,
ಮತ್ತು ವೇದಿಕೆಯ ಜಿಲ್ಲಾ ಮುಖಂಡರಾದ ಜಗದೀಶ ಜಾದವ, ಗದಗೇಶ ಸುಣಗಾರ, ಅರ್ಷದ ಪಠಾಣ, ಅನ್ವರ್ ನದಾಫ, ಜಾದವ, ರಿಯಾಜ ಮುಲ್ಲಾ, ಶಂಕರ ಬಿದರಿ, ಅರುಣ ಜಾಧವ, ಮುಸ್ತಾಫ ಲಾಡಮ್ಮನವರ, ಶಿವಪ್ಪ ನಾಯಕ, ಶಿವು ಜಾಕೋಜಿ, ಸಂಜಯ ಇಂಗಳೆ, ಯೋಗೇಶ ಪೊಳ, ಪ್ರಮೋದ್ ಶೆಟ್ಟಿ, ರಾಜು ತಾಳಿಕೋಟೆ, ಮುಂತಾದವರು ಉಪಸ್ಥಿದ್ದರು.
ಈ ಬಡ ಜನರಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ಅತಿ ಶೀಘ್ರವಾಗಿ ಮುಂದಾದ ಉಸ್ತುವಾರಿ ಸಚಿವರಿಗೆ, ಜಿಲ್ಲಾಆಡಳಿತ ಅಧಿಕಾರಿಗಳಿಗೆ ವೇದಿಕೆಯಿಂದ ಹೃತ್ಪೂರ್ವಕವಾಗಿ ಅಭಿನಂದನೆಗಳನ್ನು ತಿಳಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





