Breaking News

Breaking News

ಷೇರು ಮಾರುಕಟ್ಟೆ ಹೆಸರಲ್ಲಿ ವಂಚನೆ: 2 ಲಕ್ಷ ರೂ ಕಳೆದುಕೊಂಡ ಕಾರ್ಕಳದ ವ್ಯಕ್ತಿ

ಕಾರ್ಕಳ: ಆನ್‌ಲೈನ್‌ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿ ಕಾರ್ಕಳದ ವ್ಯಕ್ತಿಯೊಬ್ಬರಿಗೆ ಎರಡು ಲಕ್ಷ ರೂ. ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಕಾರ್ಕಳದ ಗಣೇಶ್‌ ಎಂಬುವವರನ್ನು ಜ.23 ರಂದು ಸಂಪರ್ಕಿಸಿದ ಅಪರಿಚಿತ ವ್ಯಕ್ತಿಯೊಬ್ಬ, ಸ್ಟಾಕ್ ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡುವಂತೆ ನಂಬಿಸಿದ್ದಾನೆ. ಇದನ್ನು ಸತ್ಯವೆಂದು ನಂಬಿದ ಗಣೇಶ್, ವಿವಿಧ ಹಂತಗಳಲ್ಲಿ ತಮ್ಮ ಬ್ಯಾಂಕ್ ಖಾತೆಯಿಂದ ಒಟ್ಟು 2,00,000 ರೂ. ಹಣವನ್ನು ವರ್ಗಾಯಿಸಿದ್ದರು. ಆ ಬಳಿಕ ಆರೋಪಿಯು …

Read More »

ಡ್ರಗ್ ಜಾಲಕ್ಕೆ ಬೆಚ್ಚಿದ ಬೆಂಗಳೂರು: 35 ಕೋಟಿ ರೂ ಮೌಲ್ಯದ MDMA ವಶ, ಎಂಟು ಜನ ಅರೆಸ್ಟ್

ನಗರದಲ್ಲಿ ಮತ್ತೆ ಭಾರೀ ಡ್ರಗ್ ದಂಧೆ ಬಯಲಾಗಿದ್ದು, ಎಂಡಿಎಂಎ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಈ ಪ್ರಕರಣದಲ್ಲಿ ಮೂವರು ವಿದೇಶಿ ಪ್ರಜೆಗಳು ಸೇರಿದಂತೆ ಒಟ್ಟು ಎಂಟು ಮಂದಿಯನ್ನು ಬಂಧಿಸಲಾಗಿದ್ದು, 35 ಕೋಟಿ ಮೌಲ್ಯದ 17.5 ಕೆಜಿ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ. ಮೇ 11ರಂದು ಸಿಕ್ಕ ಖಚಿತ ಮಾಹಿತಿ ಆಧರಿಸಿ ಹೆಬ್ಬಾಳ ಪೊಲೀಸರು ಆನಂದನಗರ ಭಾಗದಲ್ಲಿ ದಾಳಿ ನಡೆಸಿದರು. ಈ ವೇಳೆ ಮಹಿಳೆ ಸೇರಿ ಮೂವರನ್ನು ಬಂಧಿಸಲಾಯಿತು. ಆರೋಪಿಗಳಿಂದ …

Read More »

ಚಾಮರಾಜನಗರ: ಚಿರತೆ ವಿಷಪ್ರಾಶನ ಪ್ರಕರಣ; ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಚಾಮರಾಜನಗರ: ಬಿಳಿಗಿರಿರಂಗನಾಥ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಕೊತ್ತಲವಾಡಿ ಗ್ರಾಮದಲ್ಲಿ ಕಳೆದ ವರ್ಷ ನಡೆದಿದ್ದ ಚಿರತೆ ವಿಷಪ್ರಾಶನ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಚಾಮರಾಜನಗರ ತಾಲೂಕಿನ ಕೊತ್ತಲವಾಡಿ ಗ್ರಾಮದಲ್ಲಿ ಕಳೆದ ಜುಲೈ 10ರಂದು ಚಿರತೆಯೊಂದು ವಿಷಪ್ರಾಶನದಿಂದ ಸಾವನ್ನಪ್ಪಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ತನಿಖೆ ಮುಂದುವರಿಸಿದ್ದು, ಬುಧವಾರ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನನ್ನು ಕೊತ್ತಲವಾಡಿ ಗ್ರಾಮದ ದೊಡ್ಡಸ್ವಾಮಿ ಬಿನ್ ಬಸಪ್ಪ ಎಂದು ಗುರುತಿಸಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ …

Read More »

ಮಂಡ್ಯದಲ್ಲಿ ಭೀಕರ ಕೊಲೆ : ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆ!

ಮಂಡ್ಯದಲ್ಲಿ ಭೀಕರವಾದ ಕೊಲೆ ನಡೆದಿದ್ದು ಕೆ ಹೊನ್ನಲಗೆರೆಯಲ್ಲಿ ಮಾರ್ಕಾಸ್ತ್ರಗಳಿಂದ ಕೊಚ್ಚಿ ಯುವಕನನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹೊನಲಗಿರಿ ಗ್ರಾಮದಲ್ಲಿ ಈ ಒಂದು ಕೊಲೆ ನಡೆದಿದೆ. ಮದ್ದೂರು ತಾಲೂಕಿನ ಚುಂಚಗನಹಳ್ಳಿ ನಿವಾಸಿ ಸುನಿಲ್ (29) ಕೊಲೆಯಾದ ಯುವಕ ಎಂದು ತಿಳಿದುಬಂದಿದೆ. ತನ್ನ ಸ್ನೇಹಿತರೊಂದಿಗೆ ಸುನಿಲ್ ಬೈಕ್ ನಲ್ಲಿ ತಿರುಳುತ್ತಿದ್ದಾಗ ಏಕಾಏಕಿ ಅಟ್ಯಾಕ್ ನಡೆಸಿದ ದುಷ್ಕರ್ಮಿಗಳು, ಬೈಕ್ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಕೊಚ್ಚಿ ಸುನೀಲನನ್ನ ಕೊಲೆ ಮಾಡಿ ದುಷ್ಕರ್ಮಿಗಳು …

Read More »

ಹಳೆ ದ್ವೇಷ: ಏಳು ಮಂದಿಯಿಂದ ಹಲ್ಲೆ

ಕುಂದಾಪುರ: ಹಳೆಯ ದ್ವೇಷದ ಹಿನ್ನೆಲೆ ಏಳು ಮಂದಿ ಸೇರಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆ ಕುಂಭಾಶಿಯ ಕೊರವಡಿ ಎಂಬಲ್ಲಿ ರವಿವಾರ ರಾತ್ರಿ ನಡೆದಿದೆ.ರಂಜಿತ್‌ ಹಲ್ಲೆಗೊಳಗಾದವರು. ಆರೋಪಿಗಳಾದ ವಿಕಾಸ್‌ ಪೂಜಾರಿ, ಶರತ್‌ ಪೂಜಾರಿ, ಮಹೇಂದ್ರ ಪೂಜಾರಿ, ಸುಕೇಶ್‌ ಪೂಜಾರಿ, ಅಭಿಲಾಷ್‌ ಪೂಜಾರಿ, ಮಂಜುನಾಥ ಹಾಗೂ ಸಂದೇಶ್‌ ಎಂ. ಅವರು ಸೋಡಾ ಬಾಟಲಿ ಮತ್ತು ಹೆಲ್ಮೆಟ್‌ನಿಂದ ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ. ರಾಘವೇಂದ್ರ ಅವರು ನೀಡಿದ ದೂರಿನಂತೆ ಕುಂದಾಪುರ ನಗರ ಪೊಲೀಸ್ …

Read More »

ಬೆಂಗಳೂರಲ್ಲಿ ಪೊಲೀಸರೇ ಡೀಲ್ ಕೊಟ್ಟು, ತಂದೆ-ಮಗನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ!

ಬೆಂಗಳೂರಿನಲ್ಲಿ ಹಲ್ಲೆ ಮಾಡಲು ಪೊಲೀಸರೇ ಡೀಲ್ ಕೊಟ್ಟ ಆರೋಪ ಕೇಳಿ ಬಂದಿದೆ. ಪೊಲೀಸರಿಂದಲೇ ಡೀಲ್ ತೆಗೆದುಕೊಂಡು ತಂದೆ ಮಗನ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ತಂದೆ ಮಂಜುನಾಥ ಮತ್ತು ಮಗ ವಿಶ್ವನಾಥ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ. ಕಾನ್ಸ್ಟೇಬಲ್ಗಳಾದ ಪ್ರಸನ್ನ ಮತ್ತು ನೇತಾಜಿ, ಹಲ್ಲೆ ಮಾಡಲು ಡೀಲ್ ಕೊಟ್ಟಿರುವ ಆರೋಪ ಕೇಳಿ ಬಂದಿದೆ. ಗೋವಿಂದರಾಜನಗರ ಪೊಲೀಸ್ ಠಾಣೆ ಸಿಬ್ಬಂದಿಗಳಾದ ಪ್ರಸನ್ನ ಮತ್ತು ನೇತಾಜಿ, ಕೊಲೆ ಪ್ರಕರಣದಲ್ಲಿ ಸ್ಪಾಟ್ ನಲ್ಲಿ …

Read More »

ಬೆಂಗಳೂರು: ಪಾರ್ಕಿಂಗ್‌ ಸ್ಥಳದಲ್ಲಿದ್ದ ಕಾರಿನಲ್ಲಿ ಮೃತದೇಹ ಪತ್ತೆ

ಬೆಂಗಳೂರು: ನೆಲಗದರನಹಳ್ಳಿ ಮುಖ್ಯರಸ್ತೆ ಬದಿಯ ಪಾರ್ಕಿಂಗ್‌ ಸ್ಥಳದಲ್ಲಿದ್ದ ಕಾರಿನಲ್ಲಿ ಮೃತದೇಹ ಪತ್ತೆಯಾಗಿದ್ದು, ಪೀಣ್ಯ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಹಾಸನ ಜಿಲ್ಲೆಯ ಸುನಿತ್ (36) ಮೃತಪಟ್ಟವರು. ನಗರದ ಎಚ್‍ಎಂಟಿ ಲೇಔಟ್‍ನಲ್ಲಿ ಅಣ್ಣನ ಜತೆ ಸುನಿತ್‌ ವಾಸವಾಗಿದ್ದರು. ಉಬರ್ ಕಂಪನಿಯಲ್ಲಿ ಕಾರು ಚಾಲಕರಾಗಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದರು. ಸುನಿತ್‌ ಸೋಮವಾರ ಬೆಳಿಗ್ಗೆ ಮುಖ್ಯರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿ ಬಾಗಿಲು ಮತ್ತು ಕಿಟಕಿ ಬಂದ್ ಮಾಡಿ ಎ.ಸಿ ಹಾಕಿಕೊಂಡು ವಾಹನದೊಳಗೆ ಮಲಗಿದ್ದರು. …

Read More »

ಕಸಾಯಿಖಾನೆಗೆ ಹಸು ಸಾಗಾಟ: ಆರೋಪ

ಮುಳಬಾಗಿಲು: ಕಾನೂನುಬಾಹಿರವಾಗಿ ನಾಲ್ಕು ಹಸುಗಳನ್ನು ಕಸಾಯಿಖಾನೆಗೆ ಸಾಗಿಸಲಾಗುತ್ತಿದೆ ಎಂಬ ಆರೋಪದ ಮೇರೆಗೆ ಮಂಗಳವಾರ ಪೊಲೀಸರು ಟೆಂಪೊವೊಂದನ್ನು ತಡೆದು ನಾಲ್ಕು ಹಸುಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಮುಳಬಾಗಿಲು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದಲ್ಲಿ ಕೋಲಾರದ ರಹಮತ್ ನಗರದ ಸೈಯದ್ ಜಾಕೀರ್ ಹುಸೇನ್ ಬಂಧಿತ ಆರೋಪಿ. ಪುಂಗನೂರು ಸಂತೆಯಲ್ಲಿ ಖರೀದಿಸಿದ್ದ ಹಸುಗಳನ್ನು ಕೋಲಾರಕ್ಕೆ ಸಾಗಿಸುತ್ತಿದ್ದ ವೇಳೆ ಕೆಲ ಯುವಕರು ಪೊಲೀಸರಿಗೆ ಮಾಹಿತಿ ನೀಡಿದ್ದರು ಎನ್ನಲಾಗಿದೆ. ಕಾರ್ಯಾಚರಣೆ ನಡೆಸಿದ ಪೊಲೀಸರು ಟೆಂಪೊ …

Read More »

ಬಾಲಕಿಯನ್ನು ಅತ್ಯಾಚಾರ ಮಾಡಿದ್ದ ಪೋಕ್ಸೋ ಆರೋಪಿ ಬಂಧನ

ಬೆಳ್ತಂಗಡಿ:ಅಪ್ರಾಪ್ತ ಬಾಲಕಿಯನ್ನು ಬೆದರಿಸಿ ಅತ್ಯಾಚಾರ ಮಾಡಿ ಗರ್ಭಿಣಿಯಾಗಿಸಿರುವ ಪ್ರಕರಣ ಸಂಬಂಧ ಬೆಳ್ತಂಗಡಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ 14 ವರ್ಷದ ಅಪ್ರಾಪ್ತ ಬಾಲಕಿಯನ್ನು ಲಾಯಿಲದ ರಿಜ್ವಾನ್(38) ಎಂಬಾತ 2025 ರ ನವೆಂಬರ್‌ನಲ್ಲಿ ಅತ್ಯಾಚಾರ ಮಾಡಿ ವಿಚಾರ ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದ. ಇದರಿಂದ ಬಾಲಕಿ ಭಯಗೊಂಡು ಯಾರಿಗೂ ವಿಷಯ ತಿಳಿಸಿರಲಿಲ್ಲ. ಇತ್ತೀಚೆಗೆ ಬಾಲಕಿಗೆ ಹೊಟ್ಟೆ ನೋವು ಕಾಣಿಸಿಕೊಂಡಾಗ ಮನೆಯವರು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪರೀಕ್ಷಿಸಿದಾಗ ಬಾಲಕಿ …

Read More »

ಮಾದಕ ದ್ರವ್ಯ ಸಾಗಾಟ-ಮಾರಾಟ; ಓರ್ವನ ಬಂಧನ

ಉಡುಪಿ: ಮಾದಕ ದ್ರವ್ಯ ಸಾಗಾಟ, ಮಾರಾಟ ಹಾಗೂ ಸೇವನೆಗೆ ಸಂಬಂಧಿಸಿದಂತೆ ವ್ಯಕ್ತಿಯೋರ್ವನನ್ನು ಉಡುಪಿ ನಗರ ಪೊಲೀಸರು ಮಂಗಳವಾರ (ಮೇ 19) ಬಂಧಿಸಿದ್ದಾರೆ. ಉಡುಪಿಯ ದೊಡ್ಡಣಗುಡ್ಡೆ ನಿವಾಸಿ ಅಬ್ದುಲ್​ ಹಮೀದ್​ ರೌಫ್​ (26) ಬಂಧಿತ ಆರೋಪಿ. ಬಂಧಿತನ ವಿರುದ್ಧ ಮಣಿಪಾಲ, ಉಡುಪಿ ನಗರ ಹಾಗೂ ಬೆಂಗಳೂರಿನ ಸೋಲದೇವನಹಳ್ಳಿ ಪೊಲೀಸ್​ ಠಾಣೆಯಲ್ಲಿ ಮಾದಕ ದ್ರವ್ಯ ಸಾಗಾಟ ಹಾಗೂ ಮಾರಾಟಕ್ಕೆ ಸಂಬಂಧಿಸಿ ತಲಾ 1 ಪ್ರಕರಣ, ಮಾದಕ ದ್ರವ್ಯ ಸೇವನೆಗೆ ಸಂಬಂಧಿಸಿ ಮಣಿಪಾಲ ಠಾಣೆಯಲ್ಲಿ …

Read More »