Breaking News

ಕಸಾಯಿಖಾನೆಗೆ ಹಸು ಸಾಗಾಟ: ಆರೋಪ

ಮುಳಬಾಗಿಲು: ಕಾನೂನುಬಾಹಿರವಾಗಿ ನಾಲ್ಕು ಹಸುಗಳನ್ನು ಕಸಾಯಿಖಾನೆಗೆ ಸಾಗಿಸಲಾಗುತ್ತಿದೆ ಎಂಬ ಆರೋಪದ ಮೇರೆಗೆ ಮಂಗಳವಾರ ಪೊಲೀಸರು ಟೆಂಪೊವೊಂದನ್ನು ತಡೆದು ನಾಲ್ಕು ಹಸುಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಮುಳಬಾಗಿಲು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದಲ್ಲಿ ಕೋಲಾರದ ರಹಮತ್ ನಗರದ ಸೈಯದ್ ಜಾಕೀರ್ ಹುಸೇನ್ ಬಂಧಿತ ಆರೋಪಿ. ಪುಂಗನೂರು ಸಂತೆಯಲ್ಲಿ ಖರೀದಿಸಿದ್ದ ಹಸುಗಳನ್ನು ಕೋಲಾರಕ್ಕೆ ಸಾಗಿಸುತ್ತಿದ್ದ ವೇಳೆ ಕೆಲ ಯುವಕರು ಪೊಲೀಸರಿಗೆ ಮಾಹಿತಿ ನೀಡಿದ್ದರು ಎನ್ನಲಾಗಿದೆ. ಕಾರ್ಯಾಚರಣೆ ನಡೆಸಿದ ಪೊಲೀಸರು ಟೆಂಪೊ ಹಾಗೂ ಹಸುಗಳನ್ನು ವಶಕ್ಕೆ ಪಡೆದರು. ಆದರೆ ತಾನು ಕಾನೂನುಬದ್ಧವಾಗಿ ಹಸುಗಳನ್ನು ಖರೀದಿಸಿದ್ದಾಗಿ ಆರೋಪಿಯು ಹೇಳಿ, ವಾಹನ ಮತ್ತು ಹಸುಗಳನ್ನು ಬಿಡುಗಡೆ ಮಾಡುವಂತೆ ಠಾಣೆ ಎದುರು ಪ್ರತಿಭಟನೆ ನಡೆಸಿದರು. ಈ ವೇಳೆ ಠಾಣೆ ಎದುರು ಜನರು ಜಮಾಯಿಸಿ ಪರ-ವಿರೋಧ ಚರ್ಚೆಗಳು ನಡೆದಿದ್ದು, ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಬಳಿಕ ಪೊಲೀಸರು ಜನರನ್ನು ಚದುರಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.

Share News

About BigTv News

Check Also

ಸರಗಳ್ಳತನ ಮಾಡುತ್ತಿದ್ದ ಅಪ್ರಾಪ್ತ ಸೇರಿ ಇಬ್ಬರು ಆರೋಪಿಗಳ ಬಂಧನ

ಬೆಂಗಳೂರು: ಅಪ್ರಾಪ್ತ ಬಾಲಕನೊಂದಿಗೆ ಸೇರಿ ಮಹಿಳೆಯರ ಚಿನ್ನದ ಮಾಂಗಲ್ಯ ಸರ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಡೇಪಾಳ್ಯ ಪೊಲೀಸರು ವಶಕ್ಕೆ …

Leave a Reply

Your email address will not be published. Required fields are marked *