Breaking News

Breaking News

ಮೈಸೂರಿನಲ್ಲಿ ಮೂವರು ಗಾಂಜಾ ಪೆಡ್ಲರ್‌ಗಳ ಬಂಧನ

ಮೈಸೂರು: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಪೆಡ್ಲರ್‌ಗಳನ್ನು ಆಲನಹಳ್ಳಿ ಪೊಲೀಸರು ಶನಿವಾರ ಬಂಧಿಸಿ ಆರೋಪಿಗಳಿಂದ 10.90 ಕೆ.ಜಿ. ತೂಕದ 5.05 ಲಕ್ಷ ರೂ. ಮೌಲ್ಯದ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ. ಉದಯಗಿರಿ ಬಳಿಯ ಕೆ.ಎನ್.ಪುರದ ಮಂಜುನಾಥ ಅಲಿಯಾಸ್ ತೋಟಿ ಮಂಜ, ಬೆಂಗಳೂರಿನ ಪಾಪರೆಡ್ಡಿಪಾಳ್ಯದ ಮಂಜುನಾಥ ಅಲಿಯಾಸ್ ಕುಂಟ ಮಂಜ, ನಾಗರಬಾವಿ ಬಳಿಯ ಮೂಡಲಪಾಳ್ಯ ನಿವಾಸಿ ಬಿ.ಆರ್.ಕಾರ್ತಿಕ್ ಬಂಧಿತ ಆರೋಪಿಗಳು. ಇವರು ಶನಿವಾರ ಶಾಂತವೇರಿ ಗೋಪಾಲಗೌಡ ನಗರದ ರಸ್ತೆಯಲ್ಲಿ ಕಾರು ನಿಲ್ಲಿಸಿಕೊಂಡು ಗಾಂಜಾ …

Read More »

ತಂದೆಯಿಂದಲೇ ಅಪ್ರಾಪ್ತ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಆರೋಪ : ಇಬ್ಬರ ಬಂಧನ

ಲಿಂಗಸುಗೂರು: ಪಟ್ಟಣದ ಜನತಾ ಕಾಲೋನಿಯಲ್ಲಿ ತಂದೆಯೊಬ್ಬ ತನ್ನ ಅಪ್ರಾಪ್ತ ಮಗಳ ಮೇಲೆಯೇ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಸುಮಾರು ಎರಡು ವರ್ಷಗಳಿಂದ ಬಾಲಕಿಯ ಮೇಲೆ ದೌರ್ಜನ್ಯ ಎಸಗಲಾಗುತ್ತಿದ್ದು, ಈ ವಿಷಯವನ್ನು ಯಾರಿಗೂ ತಿಳಿಸಬಾರದು ಎಂದು ಆರೋಪಿ ಮಗಳಿಗೆ ಬೆದರಿಕೆ ಹಾಕುತ್ತಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ತಂದೆಯ ಬೆದರಿಕೆ ಮತ್ತು ಭಯದಿಂದ ಬಾಲಕಿ ಮೌನವಾಗಿಯೇ ನೋವು ಅನುಭವಿಸುತ್ತಿದ್ದಳು ಎನ್ನಲಾಗಿದೆ. ಅಲ್ಲದೇ ಆರೋಪಿ ತನ್ನ ಸ್ನೇಹಿತನನ್ನೂ ಈ …

Read More »

*ಆನ್ ಲೈನ್ ವಂಚನೆ: 19.50 ಲಕ್ಷ ರೂ ಕಳೆದುಕೊಂಡ ಬೆಳಗಾವಿ ವ್ಯಕ್ತಿ*

ಬೆಳಗಾವಿ : ಆನ್ ಲೈನ್ ಮೂಲಕ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ, ದುಪ್ಪಟ್ಟು ಲಾಭ ಸಿಗಲಿದೆ ಎಂದು ನಂಬಿಸಿ ವ್ಯಕ್ತಿಯೊಬ್ಬರಿಗೆ ಬರೊಬ್ಬರೊ 19.50 ಲಕ್ಷ ರೂ. ವಂಚನೆ ಮಾಡಿರುವ ಬಗ್ಗೆ ನಗರ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಬೆಳಗಾವಿ ತಾಲೂಕಿನ‌ ಮುತಗಾ ಗ್ರಾಮದ ಭೂಷಣ ಪಾಟೀಲ ವಂಚನೆಗೊಳಗಾದವರು‌.‌ ಭೂಷಣ ಅವರು ಮೊಬೈಲ್ ಸಂಖ್ಯೆಯನ್ನು ಡಿ85 ಅಷ್ಟಾ ಟ್ರೇಡ್ ಮಾರ್ಕೆಟ್ ಥಿಂಕಿಂಗ್ ಅಲಾಯನ್ಸ್ ” ಎಂಬ ವಾಟ್ಸ್‌ಆಪ್ ಗ್ರೂಪ್‌ಗೆ ಸೇರಿಸಿದ್ದರು. ಆ …

Read More »

ಬಿಹಾರದಲ್ಲಿ ಹೊತ್ತಿ ಉರಿದ ಪ್ಯಾಸೆಂಜರ್ ರೈಲು

ಬಿಹಾರದ ಸಸಾರಾಮ್ ರೈಲು ನಿಲ್ದಾಣದಲ್ಲಿ ಪಾಟ್ನಾಗೆ ತೆರಳುತ್ತಿದ್ದ ಪ್ಯಾಸೆಂಜರ್ ರೈಲು ಹೊತ್ತಿ ಉರಿದಿರುವ ಘಟನೆ ಇಂದು ನಡೆದಿದೆ. ಬೆಂಕಿಯನ್ನು ನಿಯಂತ್ರಿಸಲು ಸಿಬ್ಬಂದಿ ಹರಸಾಹಸ ಪಡುತ್ತಿರುವಾಗ ರೈಲು ಬೋಗಿಯಿಂದ ದಟ್ಟವಾದ ಹೊಗೆ ಹೊರಬರುತ್ತಿರುವ ದೃಶ್ಯಗಳು ಕಂಡುಬಂದಿವೆ. ಶಾರ್ಟ್​ ಸರ್ಕ್ಯೂಟ್​​ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ. ಸಸಾರಾಮ್-ಪಾಟ್ನಾ ಫಾಸ್ಟ್ ಪ್ಯಾಸೆಂಜರ್ ರೈಲು ಬೆಳಿಗ್ಗೆ 6 ಗಂಟೆಗೆ ಹೊರಡಬೇಕಿತ್ತು ಇದಕ್ಕೂ ಸ್ವಲ್ಪ ಮೊದಲು ಬೆಂಕಿ ಕಾಣಿಸಿಕೊಂಡಿತ್ತು. ಅದೃಷ್ಟವಶಾತ್ ಯಾವುದೇ ಸಾವುನೋವುಗಳು ಸಂಭವಿಸಿಲ್ಲ.

Read More »

ನಕಲಿ ಲಾಟರಿ ಮಾರಾಟ: ಮೂವರ ಬಂಧನ

ಕುಂಬಳೆ: ನಕಲಿ ಲಾಟರಿ ಮಾರಾಟ ನಡೆಸಿದ ಆರೋಪದ ಮೇಲೆ ಕುಂಬಳೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಬಂದ್ಯೋಡಿನ ಮಂಜುನಾಥ, ಕಿಶನ್ ಕುಮಾರ್ ಮತ್ತು ಕುಂಬಳೆ ಶಾಂತಿಪಳ್ಳದ ಚರಣ್ ಕುಮಾ‌ರ್ ಬಂಧಿತ ಆರೋಪಿಗಳು. ಕುಂಬಳೆ, ಬಂದ್ಯೋಡು ಭಾಗಗಳಲ್ಲಿ ನಕಲಿ ಲಾಟರಿ ಮಾರಾಟ ನಡೆಸುತ್ತಿದ್ದ ಆರೋಪವನ್ಬು ಇವರು ಎದುರಿಸುತ್ತಿದ್ದಾರೆ. ಬಂಧಿತರಿಂದ ನಕಲಿ ಲಾಟರಿ ಚೀಟಿ, ನಂಬರ್ ಬರೆದ ಚೀಟಿ, ವ್ಯವಹಾರಕ್ಕೆ ಬಳಸಿದ ಎರಡು ಮೊಬೈಲ್ ಫೋನ್, 6,280 ರೂ ನಗದು ವಶಪಡಿಸಲಾಗಿದೆ.

Read More »

ಕನ್ನಡಿಕಟ್ಟೆಯಲ್ಲಿ ಭೀಕರ ರಸ್ತೆ ಅಪಘಾತ; ಪ್ರಗತಿಪರ ಕೃಷಿಕ ಅನಿಲ್ ಬಳಂಜ ಪತ್ನಿ ಮೃತ್ಯು

ಬೆಳ್ತಂಗಡಿ: ಭೀಕರ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಕನ್ನಡಿಕಟ್ಟೆ ಬಳಿ ಮೇ.17 ರಂದು ರಾತ್ರಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಬಳಂಜ ಗ್ರಾಮದ ಬಳಂಜ ಫಾರ್ಮ್ ನ ಮಾಲಕ ಪ್ರಗತಿಪರ ಕೃಷಿಕ ಅನಿಲ್ ಭಟ್ (45) ಅವರ ಪತ್ನಿ ಶೈಲಜಾ (35) ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದು, ಅನಿಲ್ ಭಟ್ ಅವರು ಗಾಯಗೊಂಡಿದ್ದಾರೆ. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ …

Read More »

ಬೆಂಗಳೂರು | ವಿದ್ಯಾರ್ಥಿಗೆ ಚಾಕು ಇರಿತ: ಮೂವರ ಬಂಧನ

ರಾಮಮೂರ್ತಿನಗರದ ಬಳಿ ದುಷ್ಕರ್ಮಿಗಳು ಭಾನುವಾರ ನಸುಕಿನಲ್ಲಿ ಬಿಬಿಎಂ ವಿದ್ಯಾರ್ಥಿಗೆ ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿದ್ದು, ಘಟನೆ ನಡೆದ ಕೆಲವೇ ತಾಸುಗಳಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಚಾಕು ಇರಿತದಿಂದ ಗಾಯಗೊಂಡಿರುವ ವಿದ್ಯಾರ್ಥಿ ಧೀರಜ್ (21) ಎಂಬಾತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಗಳಾದ ಭುವನ್, ಮಿಥುನ್ ಮತ್ತು ಬಾಲಕನನ್ನು ಬಂಧಿಸಲಾಗಿದೆ ಎಂದು ರಾಮಮೂರ್ತಿನಗರ ಠಾಣೆ ಪೊಲೀಸರು ತಿಳಿಸಿದ್ದಾರೆ. ರಾಮಮೂರ್ತಿನಗರ ಸಮೀಪದ ಬಂಜಾರ ಲೇಔಟ್‍ನ ಧೀರಜ್, ಬೆಳಗಿನ ಜಾವ ಬೈಕ್‍ನಲ್ಲಿ ಹೊಸಕೋಟೆ ಕಡೆಗೆ ಹೋಗುತ್ತಿದ್ದಾಗ …

Read More »

ಕಲಬುರಗಿ: ಕಬ್ಬಿಣದ ರಾಡ್‌ನಿಂದ ಹೊಡೆದು ಸೆಕ್ಯುರಿಟಿ ಗಾರ್ಡ್ ಹತ್ಯೆ

ಕಲಬುರಗಿ: ನಗರದ ರಾಮ ಮಂದಿರದ ಬಳಿ ಕಬ್ಬಿಣದ ರಾಡ್‌ನಿಂದ ತಲೆಗೆ ಹೊಡೆದು ಭದ್ರತಾ ಸಿಬ್ಬಂದಿಯೊಬ್ಬರನ್ನು ಶನಿವಾರ ತಡರಾತ್ರಿ 1 ಗಂಟೆ ಸುಮಾರಿಗೆ ಬರ್ಬರವಾಗಿ ಹತ್ಯೆ ಮಾಡಲಾಗಿದೆ.ಆಳಂದ ತಾಲ್ಲೂಕಿನ ಹಡಲಗಿ ಗ್ರಾಮದ ನಿವಾಸಿ ರವಿಚಂದ್ರ ಖೇಡ್ (45) ಕೊಲೆಯಾದ ದುರ್ದೈವಿ. ಹಾಲಿ ನಗರದ ರಾಣೇಶಪೀರ್ ದರ್ಗಾ ಪ್ರದೇಶದಲ್ಲಿ ನೆಲೆಸಿದ್ದರು.ರವಿಚಂದ್ರ ಕಳೆದ ನಾಲ್ಕು ವರ್ಷಗಳ ಹಿಂದಷ್ಟೇ ಬಿಎಸ್‌ಎಫ್‌ನಿಂದ್‌ ನಿವೃತ್ತರಾಗಿದ್ದರು. ಸದ್ಯ ಕಲಬುರಗಿಯ ಇಂಡಿಯನ್ ಆಯಿಲ್ ಡಿಪೊದಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು. …

Read More »

ತಮ್ಮನಿಂದಲೇ ಅಣ್ಣನ ಕೊಲೆ

ಲಿಂಗಸುಗೂರು : ಪಟ್ಟಣದ ಬಸವಸಾಗರ ಕ್ರಾಸ್ ಹತ್ತಿರದ ಸಿದ್ದರಾಮೇಶ್ವರ ಶಾಲೆ ಬಳಿ ತಮ್ಮ ತನ್ನ ಅಣ್ಣನನ್ನು ಮಲಗಿರುವಾಗ ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಶನಿವಾರ ಸಂಜೆ ನಡೆದಿದೆ. ಬಸವರಾಜ ವಾಸದೇವ (32) ಕೊಲೆಯಾದ ವ್ಯಕ್ತಿ. ಬಸವರಾಜ ಕುಡಿದು ಬಂದು ತನ್ನ ತಾಯಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದನು ಎನ್ನಲಾಗಿದೆ. ಈ ವಿಚಾರವಾಗಿ ಬೇಸರಗೊಂಡ ಆತನ ತಮ್ಮ ಶ್ರೀಧರ (27) ಕೊಲೆ ಮಾಡಿರುವುದಾಗಿ ಆತನ ತಂದೆ ಸ್ಥಳೀಯ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಘಟನಾ …

Read More »

6 ಕಳ್ಳರ ಬಂಧನ, 14 ದ್ವಿಚಕ್ರ ವಾಹನ ಜಪ್ತಿ

ಸಂಕೇಶ್ವರ: ಜಿಲ್ಲೆಯ ವಿವಿಧೆಡೆ ಬೈಕ್​ ಕಳವು ಮಾಡುತ್ತಿದ್ದ ಕಳ್ಳರ ತಂಡವನ್ನು ಪತ್ತೆ ಹಚ್ಚುವಲ್ಲಿ ಸಂಕೇಶ್ವರ ಪೊಲೀಸರು ಯಶಸ್ವಿಯಾಗಿದ್ದು, ಆರೋಪಿತರಿಂದ ಒಟ್ಟು 14 ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.ಸಂಕೇಶ್ವರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಈಚೆಗೆ ನಡೆದ ಎರಡು ಪ್ರತ್ಯೇಕ ಬೈಕ್​ ಕಳ್ಳತನ ಪ್ರಕರಣದ ಕುರಿತು ದಾಖಲಾದ ಪ್ರಕರಣ ತನಿಖೆ ಕೈಗೊಂಡ ಪೊಲೀಸರು ಆರೋಪಿಗಳಾದ ಸುಮಿತ ಕಮ್ಮಾರ (21), ಶಿವರಾಜ ಪಾಟೀಲ (21), ಓಂಕಾರ ಕಡಲಗಿಕರ (20), ಕಿರಣ ಕಮ್ಮಾರ (18), ಅಮಿತ ಕೋಳಿ …

Read More »