Breaking News

Breaking News

ಕಲಬುರಗಿ | ಗೋವು ಅಕ್ರಮ ಸಾಗಣೆ: ವ್ಯಕ್ತಿ ಬಂಧನ

ನಗರದ ಆಳಂದ ಚೆಕ್‌ ಪೋಸ್ಟ್‌ ಸಮೀಪದ ಆಳಂದ ಕಾಲೊನಿಯಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ವಾಹನವನ್ನು ವಶಕ್ಕೆ ಪಡೆದಿರುವ ಚೌಕ ಠಾಣೆ ಪೊಲೀಸರು, ಏಳು ಜಾನುವಾರುಗಳನ್ನು ರಕ್ಷಿಸಿದ್ದಾರೆ. ಅಲ್ಲದೇ, ವಾಹನದ ಚಾಲಕ ಮಹ್ಮದ್ ಅಲ್ಲಾವುದ್ದೀನ್‌ ಖುರೇಶಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ‘ಬಕ್ರೀದ್ ಅಂಗವಾಗಿ ಜಾನುವಾರುಗಳನ್ನು ಆಳಂದ ಸಂತೆಯಿಂದ ಕಲಬುರಗಿಗೆ ತರಲಾಗಿತ್ತು. ಇವು ಮಹ್ಮದ್‌ ಸಿರಾಜ್‌ ಮಿಜಗುರಿ ಎಂಬುವರಿಗೆ ಸೇರಿವೆ. ವಾಹನವು ಶಫೀಕ್‌ ಎಂಬುವರಿಗೆ ಸೇರಿದೆ’ ಎಂದು ವಾಹನದ ಚಾಲಕ ಮಹ್ಮದ್ ಅಲ್ಲಾವುದ್ದೀನ್ …

Read More »

ಮಂಗಳೂರಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ವಿದ್ಯಾರ್ಥಿನಿ ಅರೆಸ್ಟ್ : 35ಲಕ್ಷ ರೂ‌. ಮೌಲ್ಯದ ಗಾಂಜಾ ವಶಕ್ಕೆ!

ಮಂಗಳೂರಲ್ಲಿ ಹೈಡ್ರೋವೀಡ್ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಬಿಸಿಎ ವಿದ್ಯಾರ್ಥಿನಿಯನ್ನು ಬಂಧಿಸಿ, 35ಲಕ್ಷ ರೂ‌. ಮೌಲ್ಯದ 1.42 ಕೆ.ಜಿ. ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ನಿವಾಸಿ, ಸದ್ಯ ಕುಂದಾಪುರ ಕಾಲೇಜೊಂದರಲ್ಲಿ ಅಂತಿಮ ವರ್ಷದ ಬಿಸಿಎ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಸುಹಾನ (21) ಬಂಧಿತ ಆರೋಪಿ ಎಂದು ತಿಳಿದುಬಂದಿದೆ. ಈ ಕುರಿತು ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಮಾಹಿತಿ ನೀಡಿದ್ದು, ಮೇ 12ರಂದು ಮಾರಾಟ ಮಾಡಲೆಂದು ಸುಹಾನ …

Read More »

ಆಕಸ್ಮಿಕ ಬೆಂಕಿ, ಕಾರು ಭಸ್ಮ

ಶಿವಮೊಗ್ಗದಿಂದ ಹೊನ್ನಾವರಕ್ಕೆ ಹೊರಟಿದ್ದ ಕಾರು ತಾಲ್ಲೂಕಿನ ಸನ್ನಿವಾಸ ಮತ್ತು ತುಪ್ಪೂರು ನಡುವೆ ಬೆಂಕಿಗೆ ಆಹುತಿಯಾಗಿದೆ. ಶಿವಮೊಗ್ಗ ಸೋಮಿನಕೊಪ್ಪದ ನಿವಾಸಿ ಗುಡ್ಡೇಶ್ ಕಾರಿನಲ್ಲಿ ಹೊನ್ನಾವರಕ್ಕೆ ತೆರಳುವಾಗ ಈ ಘಟನೆ ನಡೆದಿದೆ. ಕಾರಿನ ಎಸಿ ಆನ್ ಮಾಡಿಕೊಂಡಿದ್ದು ಅದರಲ್ಲಿ ಏಕಾಏಕಿ ಹೊಗೆ ಕಾಣಿಸಿಕೊಂಡಿದೆ. ನಂತರ ಅಲ್ಲಿಯೇ ಬೆಂಕಿ ಕಾಣಿಸಿಕೊಂಡು ಇಡೀ ಕಾರಿಗೆ ವ್ಯಾಪಿಸಿ ಸಂಪೂರ್ಣ ಸುಟ್ಟು ಹೋಗಿದೆ. ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಕಮಲನಗರ: ಎರಡು ನಕಲಿ ಕ್ಲಿನಿಕ್‌ ಸೀಜ್

ಬೀದರ್‌: ಆರೋಗ್ಯ ಇಲಾಖೆಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಕಮಲನಗರದಲ್ಲಿ ಎರಡು ನಕಲಿ ಕ್ಲಿನಿಕ್‌ಗಳನ್ನು ಪತ್ತೆ ಹಚ್ಚಿ ಸೀಜ್‌ ಮಾಡಿದ್ದಾರೆ.ಗೌತಮ ಸಮದರ ಎಂಬುವರು ಗಣೇಶ ಮೆಡಿಕಲ್‌ನಲ್ಲಿ ಕ್ಲಿನಿಕ್ ನಡೆಸುತ್ತಿದ್ದರು. ಸಾಯಿಲಕ್ಷ್ಮಿ ಆಯುರ್ವೇದ ಆಸ್ಪತ್ರೆಯಲ್ಲಿ ಸುಜಲ್ ಕುಮಾರ ಸೇನ್ ಅವರು ಯಾವುದೇ ಅರ್ಹ ವೈದ್ಯಕೀಯ ಪದವಿ ಪಡೆಯದೆ ವೈದ್ಯ ವೃತ್ತಿ ನಡೆಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ, ಸೀಜ್‌ ಮಾಡಿದ್ದಾರೆ. ಕಮಲನಗರ ತಹಶೀಲ್ದಾರ್ ಅಮಿತ್ ಕುಲಕರ್ಣಿ, ಜಿಲ್ಲಾ ಕೆಪಿಎಂಇ ನೋಡಲ್ ಅಧಿಕಾರಿ …

Read More »

ಬೆಂಗಳೂರಿನಲ್ಲಿ ಹಿಟ್ ಅಂಡ್ ರನ್ʼಗೆ ವ್ಯಕ್ತಿ ಬಲಿ! ಪತ್ನಿ-ಪುತ್ರಿಗೆ ಗಂಭೀರ ಗಾಯ

ಬೆಂಗಳೂರು: ಮದುವೆ ಸಮಾರಂಭ ಮುಗಿಸಿ ಮನೆಗೆ ಮರಳುತ್ತಿದ್ದ ಕುಟುಂಬದ ಮೇಲೆ ವೇಗವಾಗಿ ಬಂದ ಆಡಿ ಕಾರು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ಚಿಕ್ಕಜಾಲ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಹೇಶ್ (40) ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಮಹೇಶ್ ಅವರ ಪತ್ನಿ ಮತ್ತು ಪುತ್ರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮದುವೆ ಕಾರ್ಯಕ್ರಮ ಮುಗಿಸಿ …

Read More »

ಅಲ್ಲೂರ್ (ಬಿ): ಹಳೆಯ ವೈಷಮ್ಯಕ್ಕೆ ಯುವಕನ ಕೊಲೆ

ಚಿತ್ತಾಪುರ: ಹಳೆಯ ವೈಷಮ್ಯಕ್ಕೆ ಯುವಕನೊಬ್ಬನನ್ನು ಕಲ್ಲಿನಿಂದ ಹೊಡೆದು ಕೊಲೆ ಮಾಡಿರುವ ಘಟನೆ ತಾಲ್ಲೂಕಿನ ಅಲ್ಲೂರ್ (ಬಿ) ಗ್ರಾಮದಲ್ಲಿ ನಡೆದಿದೆ. ಸಿದ್ದಪ್ಪ ಮಲ್ಲಪ್ಪ ಹುಳಗೊಳರ್ (25) ಕೊಲೆಯಾದ ಯುವಕ. ಘಟನೆಯ ಸುದ್ದಿ ತಿಳಿಯುತ್ತಿದಂತೆ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಮಂಗಳವಾರ ರಾತ್ರಿ ಗ್ರಾಮದ ಕೆರೆಯ ಹತ್ತಿರ ಸಿದ್ದಪ್ಪ ಅವರ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕೊಲೆಯಾದ ಯುವಕನ ಶವವನ್ನು ಮರಣೋತ್ತರ …

Read More »

ಯುವತಿಗೆ ಸಿಮೆಂಟ್‌ ಕಲ್ಲಿನಿಂದ ಹೊಡೆದು ಹಲ್ಲೆ

ಮಣಿಪಾಲ: ಯುವತಿ ವಾಸಿಸುತ್ತಿರುವ ಬಾಡಿಗೆ ಮನೆಗೆ ನುಗ್ಗಿದ ಅಪರಿಚಿತ ವ್ಯಕ್ತಿ ಆಕೆಯ ತಲೆಗೆ ಸಿಮೆಂಟ್‌ ಕಲ್ಲಿನಿಂದ ಹೊಡೆದು ಚಿನ್ನದ ಸರದೊಂದಿಗೆ ಪರಾರಿಯಾಗಿರುವ ಘಟನೆ ಅಲೆವೂರು ರಸ್ತೆಯ ಶಾಂತಿನಗರದ ಬಳಿ ಸಂಭವಿಸಿದೆ. ಕುಮಟಾ ಕೂಜಲಿ ಗ್ರಾಮದ ಮೇಘಾ ಮಂಜುನಾಥ ಗೌಡ (25) ಅವರು ಸ್ನೇಹಿತೆಯರಾದ ನಾಗರತ್ನಾ, ಗಗನಾ ಮತ್ತು ಯೋಗಿತಾರೊಂದಿಗೆ ಶಾಂತಿನಗರದಲ್ಲಿ ಬಾಡಿಗೆ ರೂಮ್‌ ನಲ್ಲಿ ವಾಸವಾಗಿದ್ದರು. ಸ್ನೇಹಿತೆಯರು ಮೇ 12ರ ಸಂಜೆ ಮಣಿಪಾಲದ ಕೈಗಾರಿಕೆ ಪ್ರದೇಶದ ಸಂಸ್ಥೆಗೆ ರಾತ್ರಿ ಪಾಳಿ …

Read More »

ಗಾಂಜಾ ಸೇವನೆ: ಯುವಕನ ವಿರುದ್ಧ ಪ್ರಕರಣ

ಬೀರೂರು (ಕಡೂರು): ಗಾಂಜಾ ಸೇವಿಸಿ ಪಟ್ಟಣದ ರೈಲ್ವೆ ನಿಲ್ದಾಣದ ಬಳಿಯ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಆರೋಪದ ಮೇರೆಗೆ ವ್ಯಕ್ತಿಯನ್ನು ಬೀರೂರು ಪೊಲೀಸರು ಬಂಧಿಸಿದ್ದಾರೆ. ಬೀರೂರು ಪಟ್ಟಣದ ಸರ್ಕಾರಿ ಆಸ್ಪತ್ರೆ ಹಿಂಭಾಗದ ನಿವಾಸಿ, ಚಾಲಕ ಆಕೀಬ್ ಅಹಮದ್ (23) ಆರೋಪಿ. ಬೀರೂರು ಪೊಲೀಸರು ಸೋಮವಾರ ಪಟ್ಟಣದಲ್ಲಿ ಗಸ್ತು ನಡೆಸುವ ಸಂದರ್ಭ ಅನುಮಾನಾಸ್ಪದವಾಗಿ ಕಂಡುಬಂದಿದ್ದರಿಂದ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಬಳಿಕ, ಆತನನ್ನು ಬೀರೂರಿನ ಸಾರ್ವ ಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ …

Read More »

ಕಾರ್ಮಿಕರ ಶೆಡ್‌ನಲ್ಲಿ ಸಿಲಿಂಡರ್ ಸ್ಫೋಟ

ರಾಯಚೂರು: ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿ ಮಠದ ಶ್ರೀ ಸುಯತೀಂದ್ರ ತೀರ್ಥರ ಕಾಲನಿಯ ಕಾರ್ಮಿಕರ ಶೆಡ್‌ನಲ್ಲಿ ಮಂಗಳವಾರ ವಿದ್ಯುತ್ ಶಾರ್ಟ್‌ಸರ್ಕ್ಯೂಟ್‌ನಿಂದ ಸಿಲಿಂಡರ್ ಸ್ಫೋಟಗೊಂಡು ಬೆಂಕಿ ಹೊತ್ತಿದೆ. ಶ್ರೀಮಠದಲ್ಲಿ ಕಟ್ಟಡ ಮತ್ತು ಟೈಲ್ಸ್ ಕೆಲಸ ಮಾಡಿಕೊಂಡಿದ್ದ ಕಾರ್ಮಿಕರ ಶೆಡ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ಮಾಹಿತಿ ತಿಳಿದ ಅಗ್ನಿಶಾಮಕ ದಳ, ಮಂತ್ರಾಲಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಘಟನಾ ಸ್ಥಳಕ್ಕೆ ಶ್ರೀಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಭೇಟಿ ನೀಡಿ …

Read More »

ಮದುವೆ ಔತಣಕೂಟದ ಮನೆಯ ಸೌಂಡ್ ಸಿಸ್ಟಂ ಪೊಲೀಸರ ವಶಕ್ಕೆ

ಮಂಗಳೂರು: ತಡರಾತ್ರಿಯಲ್ಲಿಯೂ ಸೌಂಡ್ ಸಿಸ್ಟಂ ಹಾಕಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದ ಹಿನ್ನೆಲೆಯಲ್ಲಿ ಮದುವೆ ಔತಣಕೂಟದ ಮನೆಯೊಂದರಿಂದ ಪೊಲೀಸರು ಸೌಂಡ್ ಸಿಸ್ಟಂ ಅನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೇ 11ರಂದು ರಾ‍ತ್ರಿ 11.30ರ ವೇಳೆಗೆ ಕದ್ರಿ ಶ್ರೀ ಮಂಜುನಾಥ ದೇವಸ್ಥಾನ ರಸ್ತೆಯ ಮನೆಯೊಂದರಲ್ಲಿ ಹಾಕಿರುವ ಸೌಂಡ್ ಸಿಸ್ಟಂನಿಂದ ಕಿರಿಕಿರಿಯಾಗುತ್ತಿರುವ ಬಗ್ಗೆ ಪೊಲೀಸರಿಗೆ ಸಾರ್ವಜನಿಕರೋರ್ವರು ದೂರು ನೀಡಿದ್ದರು. ಪೊಲೀಸರು ಸ್ಥಳಕ್ಕೆ ಬಂದು ನೋಡಿದಾಗ ಮದುವೆ ಕಾರ್ಯಕ್ರಮದ ಔತಣ ಕೂಟದ ಅಂಗವಾಗಿ …

Read More »