Breaking News

Breaking News

ಚಿನ್ನದ ಮಾಂಗಲ್ಯ ಸರ ಕಿತ್ತು ಪರಾರಿ

ಹಾವೇರಿ: ಇಲ್ಲಿಯ ಮುನ್ಸಿಪಲ್ ಹೈಸ್ಕೂಲ್ ಮೈದಾನ ಬಳಿಯ ವಿದ್ಯಾ ನಗರದ ರಸ್ತೆಯಲ್ಲಿ ಮಹಿಳೆಯೊಬ್ಬರ ಚಿನ್ನದ ಮಾಂಗಲ್ಯ ಸರ ಕಿತ್ತುಕೊಂಡು ಆರೋಪಿಗಳು ಪರಾರಿಯಾಗಿದ್ದು, ಈ ಸಂಬಂಧ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ‘ಏಪ್ರಿಲ್ 30ರಂದು ರಾತ್ರಿ 10.50 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಬೈಕ್‌ನಲ್ಲಿ ಬಂದು ಕೃತ್ಯ ಎಸಗಿದ್ದ ಇಬ್ಬರು ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು. ‘ಸ್ಥಳೀಯ ನಿವಾಸಿ ಸುಮಾ ಅವರು, ರಾತ್ರಿ ಊಟ …

Read More »

ಅಣ್ಣನನ್ನು ಕೊಲೆ ಮಾಡಿ ಪರಾರಿ: ತಮ್ಮನ ಬಂಧನ

ಉಡುಪಿ: ಕಾರ್ಕಳ ತಾಲ್ಲೂಕಿನ ಕಸಬ ಗ್ರಾಮದಲ್ಲಿ ಜಾಗದ ತಕರಾರಿಗೆ ಸಂಬಂಧಿಸಿ ನಡೆದ ಜಗಳದ ವೇಳೆ ಅಣ್ಣನನ್ನು ಕೊಲೆ ಮಾಡಿ ಪರಾರಿಯಾಗಿದ್ದ ಹೆರಾಲ್ಡ್‌ ಡಿಸೋಜ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ರಿಚರ್ಡ್‌ ಡಿಸೋಜ ಮತ್ತು ಅವರ ತಮ್ಮ ಹೆರಾಲ್ಡ್‌ ಡಿಸೋಜರಿಗೆ ಕಾರ್ಕಳ ತಾಲ್ಲೂಕಿನ ಕಸಬ ಗ್ರಾಮದ ಮಿತ್ತಬೆಟ್ಟು ಹಿರಿಯಂಗಡಿ ಎಂಬಲ್ಲಿ ವಾಸ ಇರುವ ಮನೆಯ ಹಾಗೂ ಜಾಗದ ಬಗ್ಗೆ ತಕರಾರು ಇದ್ದು, ಇದೇ ವಿಚಾರಕ್ಕೆ ಸಂಬಂಧಿಸಿ ಮೇ 2ರಂದು ಗಲಾಟೆ ಆಗಿತ್ತು. ಆ …

Read More »

₹42.30 ಲಕ್ಷದ ಮಾದಕ ದ್ರವ್ಯ ವಶ: ಇಬ್ಬರ ಸೆರೆ

ಬಂಟ್ವಾಳ: ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಮಂಚಿ ಗ್ರಾಮದ ಪಂಜಾಲಕ್ರಾಸ್ ಎಂಬಲ್ಲಿ ಶನಿವಾರ ನಿಷೇಧಿತ ಎಂಡಿಎಂಎ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ ₹42.30 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿಸಿದ್ದಾರೆ. ಎಸ್‌ಐ ಮಂಜುನಾಥ ಟಿ. ಅವರು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಆರೋಪಿಗಳಾದ ಬಂಟ್ವಾಳ ಬೊಳಂತೂರು ನಿವಾಸಿಗಳಾದ ಮೊಹಮ್ಮದ್‌ ನಿಜಾಮುದ್ದೀನ್‌ (30), ಆತನ ಸಹೋದರ ಮೊಹಮ್ಮದ್‌ ಶಾಹಿಂ (19) ಸಿಕ್ಕಿಬಿದ್ದಿದ್ದಾರೆ. ನೈಜೀರಿಯಾದ ಅಪರಿಚಿತ ವ್ಯಕ್ತಿಯಿಂದ ಬೆಂಗಳೂರಿನಲ್ಲಿ ಎಂಡಿಎಂಎ ಖರೀದಿಸಿ, …

Read More »

ಕಾರು-ಟೆಂಪೊ ಡಿಕ್ಕಿ: ಚಾಲಕನಿಗೆ ಗಾಯ

ಸೋಮವಾರಪೇಟೆ: ಸಮೀಪದ ಯಡೂರು ಗ್ರಾಮದ ಬಿಟಿಸಿಜಿ ಸರ್ಕಾರಿ ಕಾಲೇಜು ಬಳಿ ಶನಿವಾರ ಸಂಜೆ ಸಂಭವಿಸಿದ ಕಾರು ಮತ್ತು ಟೆಂಪೊ ಟ್ರಾವೆಲ್ಸ್ ನಡುವೆ ಡಿಕ್ಕಿಸಂಭವಿಸಿ, ಎರಡೂ ವಾಹನಗಳು ಜಖಂಗೊಂಡಿವೆ. ಅದೃಷ್ಟವಶಾತ್ ಯಾವುದೇ ಜೀವ ಹಾನಿ ಸಂಭವಿಸಿಲ್ಲ. ಸೆಲಾರಿಯೊ ಕಾರು ಸೋಮವಾರಪೇಟೆಯಿಂದ ಶಾಂತಳ್ಳಿ ಮಾರ್ಗವಾಗಿ ಬೀದಳ್ಳಿ ಗ್ರಾಮಕ್ಕೆ ತೆರಳುತ್ತಿತ್ತು. ಇನ್ನೊಂದೆಡೆ ಹಾಸನ ಜಿಲ್ಲೆಯ ಟೆಂಟೊ ಟ್ರಾವೆಲ್ಸ್‌ನಲ್ಲಿದ್ದ ಪ್ರಯಾಣಿಕರು ಶಾಂತಳ್ಳಿ ಸಮೀಪದ ಮಲ್ಲಳ್ಳಿ ಜಾಲಪಾತ ವೀಕ್ಷಿಸಿ ವಾಪಾಸ್ ಹಾಸನಕ್ಕೆ ತೆರಳುತ್ತಿದ್ದರು. ಆಗ ಅಪಘಾತ ಸಂಭವಿಸಿದೆ. …

Read More »

₹4.50 ಲಕ್ಷ ಮೌಲ್ಯದ ಗಾಂಜಾ ಗಿಡ ಪತ್ತೆ

ಔರಾದ್: ತಾಲ್ಲೂಕಿನ ಕೌಠಾ (ಬಿ) ಗ್ರಾಮದಲ್ಲಿ ರೈತೊಬ್ಬರು ಕಬ್ಬಿನ ಹೊಲದಲ್ಲಿ ಬೆಳೆದ ಗಾಂಜಾ ಗಿಡಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ.ಖಚಿತ ಮಾಹಿತಿ ಮೇರೆಗೆ ಸರ್ವೆ ನಂಬರ್ 48ರಲ್ಲಿ ಬೆಳೆದ ₹4.50 ಲಕ್ಷ ಮೌಲ್ಯದ 11 ಗಾಂಜಾ ಗಿಡ ಜಪ್ತಿ ಮಾಡಿಕೊಳ್ಳಲಾಗಿದೆ. ಬೀರಪ್ಪ ಎಂಬ ಆರೋಪಿಯನ್ನು ಬಂಧಿಸಲಾಗಿದೆ. ಈ ಕುರಿತು ಸಂತಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪಿಎಸ್‌ಐ ದಿನೇಶ ತಿಳಿಸಿದ್ದಾರೆ.

Read More »

ಹಾಡಹಗಲೇ ಮಹಿಳೆಯ ಸರಗಳವು : ಬೆಚ್ಚಿಬಿದ್ದ ಜನತೆ

ಚಿಕ್ಕಬಳ್ಳಾಪುರ : ಮುಸುಕುಧಾರಿ ಇಬ್ಬರು ಕಳ್ಳರು ಹಾಡಹಗಲೇ ಮಹಿಳೆಯೋರ್ವರ 30 ಗ್ರಾಂ ಸರಗಳವು ಮಾಡಿರುವ ಘಟನೆ ನಗರದ ಚಾಮರಾಜಪೇಟೆಯಲ್ಲಿ ಭಾನುವಾರ ನಡೆದಿದೆ. ನಗರದ ವಾರ್ಡ್ 23ರ ನಿವಾಸಿ ಪ್ರಿಯ ಎಂಬ ಮಹಿಳೆಯೇ ಸರಕಳೆದುಕೊಂಡ ಮಹಿಳೆಯಾಗಿದ್ದು, ಪಲ್ಸರ್ 220 ಬೈಕ್‌ನಲ್ಲಿ ಬಂದ ಇಬ್ಬರು ಕಳ್ಳರು ಸರಗಳವು ಮಾಡಿದ್ದಾರೆ ಎನ್ನಲಾಗಿದೆ. ಮೇಲ್ಮಡಿಯಲ್ಲಿದ್ದ ಪ್ರಿಯಾ ಅವರು ತಳಮಹಡಿಗೆ ಸಂಪ್ ಪರೀಕ್ಷೆ ಮಾಡಲು ಬರುತ್ತಿದ್ದಂತೆ ಹೊಂಚುಹಾಕಿ ಕಾದಿದ್ದ ಕಳ್ಳರು ಸರಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ. ಘಟನೆಯಾದ ಕೂಡಲೇ …

Read More »

ಜಿಂಕೆ ಬೇಟೆ: ಆರೋಪಿ ಬಂಧನ

ಹನೂರು: ಕರ್ನಾಟಕ ತಮಿಳುನಾಡು ಗಡಿ ಭಾಗದಲ್ಲಿ ಜಿಂಕೆ ಬೇಟೆಯಾಡಿ ಮಾಂಸವನ್ನು ದ್ವಿ ಚಕ್ರ ವಾಹನದಲ್ಲಿ ಸಾಗಿಸುತ್ತಿದ್ದ ಆರೋಪದ ಮೇಲೆ ಹನೂರು ತಾಲೂಕಿನ ಜಲ್ಲಿಪಾಳ್ಯ ಗ್ರಾಮದ ಕನಕರಾಜು (46) ಎಂಬಾತನನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದಾರೆ. ತಮಿಳುನಾಡು ಕರ್ನಾಟಕ ಅರಣ್ಯ ಗಡಿ ಪ್ರದೇಶದಲ್ಲಿ ಜಿಂಕೆ ಮಾಂಸವನ್ನು ದ್ವಿಚಕ್ರವಾಹದಲ್ಲಿ ತೆಗೆದುಕೊಂಡು ಹೋಗುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಹೂಗ್ಯಂ ವಲಯ ಅರಣ್ಯ ಅಧಿಕಾರಿಗಳ ತಂಡ ದಾಳಿ ನಡೆಸಿತು. ಮಾಂಸ ಸಾಗಾಣಿಗೆ ಬಳಸಿದ್ದ …

Read More »

ಮದ್ದಯ್ಯನಹುಂಡಿ: ಲಾರಿ-ಕಾರು ಅಪಘಾತ- ಮೂವರು ಸಾವು

ಗುಂಡ್ಲುಪೇಟೆ: ತಾಲ್ಲೂಕಿನಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 766ರಲ್ಲಿ ಭಾನುವಾರ ಲಾರಿ ಮತ್ತು ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ. ಗುಂಡ್ಲುಪೇಟೆಯಿಂದ ಅಕ್ರಮವಾಗಿ ಮಣ್ಣು ಸಾಗಾಟ ಮಾಡುತ್ತಿದ್ದ ಲಾರಿ ಮದ್ದಯ್ಯನಹುಂಡಿ ಸಮೀಪದಲ್ಲಿ ಕಾರಿಗೆ ಡಿಕ್ಕಿ ಹೊಡೆದಿದ್ದು ಕೇರಳದ ಕಣ್ಣೂರು ಮೂಲದ ಕಾರು ಚಾಲಕ ಮುನೀರ್ (30), ಮುನಿರಾ (45) ಹಾಗೂ ಮೂರೂವರೆ ವರ್ಷದ ಬಾಲಕ ಮೋಹಿಜ್ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಸಾನಿಯಾ ಮಿರ್ಜಾ, ಸಾಹಿಲ್, ಬಿಲಾಜ್, ಪರ್ವಿನ್ ಎಂಬುವವರಿಗೆ ತೀವ್ರ …

Read More »

ಕುಕನೂರಿನ ದ್ಯಾಂಪುರ ಗ್ರಾಮದ ಸರಕಾರಿ ಶಾಲೆ ಸಮೀಪ ನವಜಾತ ಶಿಶು ಪತ್ತೆ

ಕುಕನೂರು: ತಾಲೂಕಿನ ದ್ಯಾಂಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಸಮೀಪ ಭಾನುವಾರ ಬೆಳಿಗ್ಗೆ ನವಜಾತ ಗಂಡು ಶಿಶುವೊಂದು ಪತ್ತೆಯಾದ ಘಟನೆ ನಡೆದಿದೆ. ಹುಟ್ಟಿದ ಕೆಲವೇ ಗಂಟೆಗಳಾಗಿದ್ದ ಶಿಶುವನ್ನು ಅಪರಿಚಿತರು ಶಾಲೆಯ ಸಮೀಪ ಬಿಟ್ಟು ಹೋಗಿರುವುದು ತಿಳಿದು ಬಂದಿದೆ. ಸ್ಥಳೀಯರು ಶಿಶುವನ್ನು ಗಮನಿಸಿ ತಕ್ಷಣ ಅಂಗನವಾಡಿ ಕಾರ್ಯಕರ್ತೆಗೆ ಮಾಹಿತಿ ನೀಡಿದ್ದಾರೆ. ಬಳಿಕ ಅಂಗನವಾಡಿ ಕಾರ್ಯಕರ್ತೆ ಸ್ಥಳಕ್ಕೆ ಭೇಟಿ ನೀಡಿ ಶಿಶುವಿನ ಸ್ಥಿತಿ ಪರಿಶೀಲಿಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮಾಹಿತಿ …

Read More »

ತೋಂಟದಾರ್ಯ ಮಠದ ಜಾತ್ರೆಯಲ್ಲಿ ಅವಘಡ: ಕಳಚಿ ಬಿದ್ದ ಜೋಕಾಲಿ, 20ಕ್ಕೂ ಹೆಚ್ಚು ಜನರಿಗೆ ಗಾಯ

ಗದಗ: ತೋಂಟದಾರ್ಯ ಮಠದ ಜಾತ್ರೆಯಲ್ಲಿ ಭೀಕರ ಅವಘಡವೊಂದು ಸಂಭವಿಸಿದೆ. ಡ್ಯಾನ್ಸಿಂಗ್ ಫ್ಲೈ ಜೋಕಾಲಿಯ 20ಕ್ಕೂ ಹೆಚ್ಚು ತೊಟ್ಟಿಲುಗಳು ಏಕಾಏಕಿ ಕಳಚಿ ಬಿದ್ದಿದ್ದು, ಬ್ರೇಕ್​ಡ್ಯಾನ್ಸ್ ಆಡುತ್ತಿದ್ದ 20ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಮಕ್ಕಳು, ಮಹಿಳೆಯರು ಮತ್ತು ಪುರುಷರಿಗೆ ಗಂಭೀರ ಗಾಯಗಳಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಸದ್ಯ ಗಾಯಾಳುಗಳನ್ನ ಗದಗದ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆಪೆ ಗುಣಮಟ್ಟದ ಬ್ರೇಕ್​ಡ್ಯಾನ್ಸ್ ಅಳವಡಿಕೆ ಆರೋಪ ಕೇಳಿಬಂದಿದೆ. ಸ್ಥಳಕ್ಕೆ ಗದಗ ಶಹರ ಪೊಲೀಸರು ಭೇಟಿ ನೀಡಿ ಪರಿಶೀಲನೆ …

Read More »