BigTv News
April 30, 2026
Breaking News
ಕುಂಬಳೆ: ಸೀತಾಂಗೋಳಿಯಲ್ಲಿ ಹಾಡುಹಗಲೇ ಬಾಪಾಲಿಪೊನ ಕುಂಟಿಕಾನ ನಿವಾಸಿ ಸಫಾಹಿದ್ ಯಾನೆ ಶಫಾಯಿತ್ (35) ಅವರನ್ನು ಕೊಲೆಗೈದ ಪ್ರಕರಣದ ಆರೋಪಿಯನ್ನು ಗಂಟೆಗಳೊಳಗೆ ಪೊಲೀಸರು ಬಂಧಿಸಿದ್ದಾರೆ. ಕುಂಬಳೆ ನಾಯ್ಕಾಪು ಕೋಟೆಕಾರು ನಿವಾಸಿ ಶ್ರೀನಿವಾಸ (39) ಬಂಧಿತ ವ್ಯಕ್ತಿ. ಎ.28 ರಂದು ಮಧ್ಯಾಹ್ನ 2.30 ರ ವೇಳೆ ಸೀತಾಂಗೋಳಿಯ ಮದ್ಯದಂಗಡಿ ಸಮೀಪದ ಕಟ್ಟಡದ ಹಿಂಬದಿಯಲ್ಲಿ ಶಫಾಯತ್ ಅವರ ಮೃತದೇಹ ಪತ್ತೆಯಾಗಿತ್ತು. ಅದನ್ನು ಕಂಡ ವ್ಯಕ್ತಿಗಳು ನೀಡಿದ ಮಾಹಿತಿಯಂತೆ ಕುಂಬಳೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದಾಗ …
Read More »
BigTv News
April 30, 2026
Breaking News
ಲಿಂಗಸುಗೂರು: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ನಡೆಯುತ್ತಿದ್ದ ಮಟ್ಕಾ ಹಾಗೂ ಇಸ್ಪೀಟು ಅಡ್ಡೆ ಮೇಲೆ ಸ್ಥಳೀಯ ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸಿದ್ದಾರೆ. ತಾಲ್ಲೂಕಿನ ಈಚನಾಳ ಕ್ರಾಸ್ ಬಳಿ ಮಟ್ಕಾ ಸಂಖ್ಯೆ ಬರೆಯುತ್ತಿದ್ದ ಈಚನಾಳ ಗ್ರಾಮದ ಪೀರಸಾಬ ಇಮಾಮಸಾಬ ವಶಕ್ಕೆ ಪಡೆದುಕೊಂಡು ಆತನ ಬಳಿಯಿದ್ದ ₹ 750 ಜಪ್ತಿ ಮಾಡಲಾಗಿದೆ. ತಾಲ್ಲೂಕಿನ ಯಲಗಲದಿನ್ನಿ ಹಳ್ಳದ ಬಳಿ ಇಸ್ಟೀಟು ಜೂಜಾಟದ ಅಡ್ಡೆ ಮೇಲೆ ಪಿಐ ಹೊಸಕೇರಪ್ಪ ದಾಳಿ ನಡೆಸಿ ₹ 2,500 ಜಪ್ತಿ …
Read More »
BigTv News
April 30, 2026
Breaking News
ಕಾಸರಗೋಡು: ಸೀತಾಂಗೋಳಿಯ ಮೇಲಿನ ಪೇಟೆಯ ಕಟ್ಟಡವೊಂದರಲ್ಲಿ ಬಾಪಾಲಿಪೊನ ಕುಂಟಿಕಾ ನಿವಾಸಿ ಶಫಾಯತ್ (35) ಎಂಬುವರನ್ನು ಕೊಲೆ ಮಾಡಿದ ಆರೋಪದಲ್ಲಿ ಕುಂಬಳೆ ಬಳಿಯ ನಾಯ್ಕಾಪು ಕೋಟೆಕಾರು ನಿವಾಸಿ ಶ್ರೀನಿವಾಸ (39) ಎಂಬಾತನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಶಫಾಯತ್ ಅವರ ಶವ ಕಟ್ಟಡದ ಹಿಂಬದಿ ಬಿದ್ದುಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ತಲೆಗೆ ಗಂಭೀರ ಏಟು ತಗುಲಿರುವುದು ಕಂಡುಬಂದಿದೆ. ತನಿಖೆ ಆರಂಭಿಸಿದ ಪೊಲೀಸರು ಆರೋಪಿಯನ್ನು ಪತ್ತೆ ಮಾಡಿ ಬಂಧಿಸಿದ್ದಾರೆ. ಶ್ರೀನಿವಾಸ ಮತ್ತು ಶಫಾಯತ್ ನಡುವೆ ಮಾತಿನ …
Read More »
BigTv News
April 30, 2026
Breaking News
ಕಾಲೇಜು ವಿದ್ಯಾರ್ಥಿಗಳು ಪ್ರವಾಸಕ್ಕೆ ಹೊರಟಿದ್ದ ಬಸ್ಸೊಂದು ರಸ್ತೆ ಬದಿ ನಿಂತಿದ್ದ ಟ್ಯಾಂಕರ್ ಮತ್ತು ಲಾರಿಗೆ ಢಿಕ್ಕಿ ಹೊಡೆದ ಪರಿಣಾಮ ಬಸ್‌ನಲ್ಲಿದ್ದ ಮೂವರು ಮೃತಪಟ್ಟ ಘಟನೆ ಕುಂದಾಪುರ ವ್ಯಾಪ್ತಿಯ ತ್ರಾಸಿಯ ಮರವಂತೆ ಬೀಚ್ ಬಳಿ ಬುಧವಾರ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಶಂಕರಘಟ್ಟ ರಂಭಾಪುರಿ ಕಾಲೇಜಿನ ಅಂತಿಮ ವರ್ಷದ ಬಿಕಾಂ ವಿದ್ಯಾರ್ಥಿಗಳು ಎರಡು ದಿನಗಳ ಹಿಂದೆ ಪ್ರವಾಸಕ್ಕೆ ಹೊರಟಿದ್ದು, ಬಸ್ಸಿನಲ್ಲಿ ಒಟ್ಟು 50 ಮಂದಿ ಇದ್ದರು ಎಂದು ಮೂಲಗಳು ತಿಳಿಸಿವೆ. ವಿದ್ಯಾರ್ಥಿಗಳು ಮುರ್ಡೇಶ್ವರಕ್ಕೆ …
Read More »
BigTv News
April 30, 2026
Breaking News
ಪುತ್ತೂರು: ಮೋಸ ಮಾಡುವ ಉದ್ದೇಶದಿಂದ ನಕಲಿ ನೋಂದಣಿ ಸಂಖ್ಯೆ ಅಳವಡಿಸಿಕೊಂಡು ಬಳಕೆ ಮಾಡುತ್ತಿದ್ದ ಕಾರೊಂದನ್ನು ನಗರ ಠಾಣೆಯ ಪೊಲೀಸರು ಪತ್ತೆ ಮಾಡಿ ವಶಕ್ಕೆ ಪಡೆದು ಆರೋಪಿ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ನಗರದ ಹೊರವಲಯದ ಕೂರ್ನಡ್ಕ ನಿವಾಸಿ ಹಬೀಬ್ ಆರೋಪಿ. ಪೊಲೀಸರು ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಕೆಮ್ಮಿಂಜೆ ಗ್ರಾಮದ ಕೂರ್ನಡ್ಕ ಸಮೀಪದ ಸಂಜಯನಗರ ಬಳಿ ತೆರಳುತ್ತಿದ್ದ ಮಾರುತಿ ಸ್ವಿಫ್ಟ್ ಕಾರನ್ನು ನಿಲ್ಲಿಸಿ ತಪಾಸಣೆ ನಡೆಸುತ್ತಿದ್ದಾಗ ಚಾಲಕ ಕಾರು ಬಿಟ್ಟು ಪರಾರಿಯಾಗಿದ್ದ. ಅನುಮಾನಗೊಂಡ …
Read More »
BigTv News
April 30, 2026
Breaking News
ಮಡಿಕೇರಿ: ತಾಲ್ಲೂಕಿನ ಇಬ್ನಿವಳವಾಡಿ ಗ್ರಾಮದ ಸಿಂಕೋನ- ಮಕ್ಕಂದೂರು ರಸ್ತೆಯಲ್ಲಿ ಒಡಿಶಾದ ಇಬ್ಬರು ಸೇರಿ ಮೂವರನ್ನು ಬಂಧಿಸಿರುವ ಗ್ರಾಮಾಂತರ ಪೊಲೀಸರು, 15 ಕೆ.ಜಿ 903 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಒಡಿಶಾದ ಸುಲ್ತಾನ್ ಪ್ರಧಾನ್ (55), ಸ್ವರ್ಣಲತಾ ನಾಯಕ (35) ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಜಾಬೀರ್ (21) ಬಂಧಿತರು. ಇನ್‌ಸ್ಪೆಕ್ಟರ್‌ಗಳಾದ ಐ.ಪಿ.ಮೇದಪ್ಪ, ಎಚ್.ವಿ.ಚಂದ್ರಶೇಖರ್, ಎಎಸ್‌ಐ ಚರ್ಮಣ್ಣ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಪ್ರಕರಣ ದಾಖಲಾಗಿದೆ.
Read More »
BigTv News
April 30, 2026
Breaking News
ಕಾಸರಗೋಡು: ಕುಂಬಳೆ ಸೀತಾಂಗೋಳಿಯಲ್ಲಿ ಯುವಕನ ಮೃತದೇಹ ಪತ್ತೆ ಪ್ರಕರಣ ಮಹತ್ವದ ತಿರುವು ಪಡೆದುಕೊಂಡಿದ್ದು, ಆತನನ್ನು ತಲೆಗೆ ಬಡಿದು ಕೊಲೆಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ಕುಂಬಳೆ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕುಂಬಳೆ ಕೋಟೆಕ್ಕಾರಿನ ಶ್ರೀನಿವಾಸ (39) ಬಂಧಿತ ಆರೋಪಿ. ಮುಂಡಿತ್ತಡ್ಕ ಬಾಪಲಿಪೋನ ಪಾಡ್ಲಡ್ಕದ ಸಫಾಯಿದ್ (30) ಕೊಲೆಯಾದವರು. ಸೀತಾಂಗೋಳಿ ಪೇಟೆ ಸಮೀಪದ ನಿರ್ಜನ ಸ್ಥಳದಲ್ಲಿ ಮಂಗಳವಾರ ಮಧ್ಯಾಹ್ನ ಮೃತದೇಹ ಪತ್ತೆಯಾಗಿತ್ತು. ಪೂರ್ವ ದ್ವೇಷವೇ ಕೃತ್ಯಕ್ಕೆ ಕಾರಣ ಎನ್ನಲಾಗಿದ್ದು, ಕೃತ್ಯಕ್ಕೆ ಬಳಸಿದ್ದ ಮರದ …
Read More »
BigTv News
April 30, 2026
Breaking News
ಚನ್ನರಾಯಪಟ್ಟಣ (ಹಾಸನ): ಚಾಲಕನ ನಿಯಂತ್ರಣ ತಪ್ಪಿ ಸ್ವಿಫ್ಟ್ ಕಾರು ಹೇಮಾವತಿ ನಾಲೆಗೆ ಬಿದ್ದು ತಾಯಿ ಮತ್ತು ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಮಲ್ಲನಘಟ್ಟ ಬಳಿ ಬುಧವಾರ ಮಧ್ಯಾಹ್ನ ನಡೆದಿದೆ. ಪ್ರಿಯಾಂಕಾ (30), ಮಗು ವೈಭವ್ ಮೃತರು. ಕಾರಲ್ಲಿದ್ದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಗೊಡ್ಲಮುದ್ದನಹಳ್ಳಿಯ ಮಂಜುನಾಥ್, ಧರ್ಮಸ್ಥಳದಲ್ಲಿ ತಮ್ಮ ಸಹೋದರನ ಮದುವೆ ಮುಗಿಸಿಕೊಂಡು ಸ್ವಗ್ರಾಮಕ್ಕೆ ವಾಪಸಾಗುತ್ತಿದ್ದಾಗ …
Read More »
BigTv News
April 30, 2026
Breaking News
ಸಂತೇಬಾಚಹಳ್ಳಿ: ದೊಡ್ಡಸೋಮನಹಳ್ಳಿಯಲ್ಲಿ ಮದ್ಯ ಅಕ್ರಮ ಮಾರಾಟ ಆರೋಪ ಪ್ರಯುಕ್ತ ಅಬಕಾರಿ ಪೊಲೀಸರು ತಪಾಸಣೆ ನಡೆಸಿದರು. ಗ್ರಾಮದಲ್ಲಿ ಪೆಟ್ಟಿ ಅಂಗಡಿಗಳಲ್ಲಿ ಮದ್ಯ ಮಾರಾಟವಾಗುತ್ತಿದೆ ಎಂದು ರೈತ ಸಂಘದ ಮುಖಂಡ ನಾಗೇಶ್ ಅಬಕಾರಿ ಅಧಿಕಾರಿಗಳಿಗೆ ದೂರವಾಣಿಯಲ್ಲಿ ದೂರು ನೀಡಿದ್ದರು. ಅಬಕಾರಿ ಅಧಿಕಾರಿಗಳು ಸ್ಥಳಕ್ಕೆ ಬಂದು ಎಲ್ಲ ಅಂಗಡಿಗಳನ್ನು ತಪಾಸಣೆ ನಡೆಸಿದರು. ಮಧ್ಯ ಸಿಗದೆ ವಾಪಸ್ ತೆರಳಿದರು. ಅಬಕಾರಿ ಇನ್‌ಸ್ಪೆಕ್ಟರ್ ದೀಪಕ್ ಕುಮಾರ್ ಮಾತನಾಡಿ, ಮದ್ಯ ಅನಧಿಕೃತವಾಗಿ ಮಾರಾಟ ಮಾಡುವುದು ಅಪರಾಧವಾಗಿದೆ. ಮಾರಾಟ ಮಾಡಿದರೆ …
Read More »
BigTv News
April 29, 2026
Breaking News
ಬೆಂಗಳೂರು: ಮಾಗಡಿ ಉಪವಿಭಾಗದ ಕುದೂರು ಪೊಲೀಸ್ ವ್ಯಾಪ್ತಿಯ ಬಸವಣ್ಣ ದೇವಸ್ಥಾನದ ಬಳಿಯ ಬನವಾಡಿ ಕೆರೆಯಲ್ಲಿ ಮೂರು ತಿಂಗಳ ಮಗುವಿನ ಶವವೊಂದು ತೇಲುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸೋಮವಾರ ಸಂಜೆ ಸುಮಾರು 4 ಗಂಟೆಯ ವೇಳೆಗೆ ಬಸವಣ್ಣ ದೇವಸ್ಥಾನದ ಸಮೀಪದ ಕೆರೆಯಲ್ಲಿ ಮಗುವಿನ ಶವ ತೇಲುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಸದಸ್ಯ ವಿ. ಸುಬ್ಬಣ್ಣ ಅವರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, …
Read More »