BigTv News
April 20, 2026
Breaking News
ಬೆಳಗಾವಿ: ತಾಲ್ಲೂಕಿನ ಸುಳಗಾದ ದೇಶಪಾಂಡೆ ಗಲ್ಲಿಯ ಮನೆಯಲ್ಲಿ ಶನಿವಾರ ತಲೆದಿಂಬಿನಲ್ಲಿ ಬಚ್ಚಿಟ್ಟು ಮಾದಕವಸ್ತು ಮಾರುತ್ತಿದ್ದ ಇಬ್ಬರನ್ನು ಸಿಸಿಬಿ ವಿಭಾಗದ ಪೊಲೀಸರು ಬಂಧಿಸಿದ್ದಾರೆ.ಅದೇ ಗ್ರಾಮದ ನಾಗೇಶ ಮಧುಕರ ಭಗತ, ರಾಹುಲ ಜ್ಯೋತಿಬಾ ಜಾಧವ ಬಂಧಿತರು. ಅವರಿಂದ ₹2.60 ಲಕ್ಷ ಮೌಲ್ಯದ 12.92 ಗ್ರಾಂ (119 ಚೀಟಿ) ಹೆರಾಯಿನ್, 2 ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಅವರಿಗೆ ಮಾದಕವಸ್ತು ತಂದುಕೊಡುತ್ತಿದ್ದ ಮುಂಬೈನ ನಿವಾಸಿ ಸಂತೋಷ ವಿರುದ್ಧವೂ ಕಾಕತಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Read More »
BigTv News
April 20, 2026
Breaking News
ಪ್ರಧಾನಿ ಮೋದಿ ದಿಢೀರ್ ಭೇಟಿಯಿಂದ ಸಣ್ಣ ಜಲ್ಮುರಿ ಅಂಗಡಿಗೆ ಈಗ ಜನವೋ ಜನ, ಪಶ್ಚಿಮ ಬಂಗಾಳದಲ್ಲಿ ಸರಣಿ ರ‍್ಯಾಲಿಗಳ ಬಳಿಕ ಅಂಗಡಿಗೆ ತೆರಳಿ ಜಲ್ಮುರಿ ಖರೀದಿಸಿ ಸವಿದಿದ್ದಾರೆ, ಸ್ಥಳೀಯರಿಗೂ ನೀಡಿದ್ದಾರೆ.ಪಶ್ಚಿಮ ಬಂಗಾಳದಲ್ಲಿ ಸರಣಿ ರ‍್ಯಾಲಿಗಳ ಬಳಿಕ ಪ್ರಧಾನಿ ಮೋದಿ, ಸ್ಥಳೀಯರ ಜೊತೆ ಸೇರಿ ‘ಜಲ್ಮುರಿ’ ಸವಿದು ಖುಷಿಪಟ್ಟ ವಿಡಿಯೋ ಭಾರಿ ವೈರಲ್ ಆಗಿದೆ. ಪುರುಲಿಯಾ, ಜಾರ್ಗ್ರಾಮ್, ಮೇದಿನಿಪುರ್ ಮತ್ತು ಬಿಷ್ಣುಪುರ್‌ನಲ್ಲಿ ಒಂದರ ಹಿಂದೆ ಒಂದರಂತೆ ನಾಲ್ಕು ರ‍್ಯಾಲಿಗಳನ್ನು ಮುಗಿಸಿದ ಪ್ರಧಾನಿ …
Read More »
BigTv News
April 19, 2026
Breaking News
ನೇಪಾಳ ಮೂಲದ ಆಪರೇಟರ್‌ಗಳೊಂದಿಗೆ ಮತ್ತು ಚೀನಾದ ಹ್ಯಾಂಡ್ಲರ್‌ಗಳೊಂದಿಗೆ ಸಂಪರ್ಕ ಹೊಂದಿದ್ದ ಶಂಕಿತ ಅಂತಾರಾಜ್ಯ ಸೈಬರ್ ವಂಚನೆ ಸಿಂಡಿಕೇಟ್ ಅನ್ನು ಉತ್ತರ ಪ್ರದೇಶ ಪೊಲೀಸರು ಪತ್ತೆಹಚ್ಚಿದ್ದು, ಬರೇಲಿಯಲ್ಲಿ ಐವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ರವಿವಾರ ತಿಳಿಸಿದ್ದಾರೆ. ನಕಲಿ ಖಾತೆಗಳು ಮತ್ತು ಡಿಜಿಟಲ್ ಪರಿಕರಗಳನ್ನು ಬಳಸಿಕೊಂಡು ವಿವಿಧ ರಾಜ್ಯಗಳಲ್ಲಿ ಜನರನ್ನು ವಂಚಿಸುವಲ್ಲಿ ಭಾಗಿಯಾಗಿದ್ದ ಆರೋಪ ದಲ್ಲಿ ಶಕೀಬ್ ಅಲಿ, ರಾಜ್‌ಕುಮಾರ್, ಆಶಿಶ್ ಸಿಂಗ್, ಬಬ್ಲೂ ಅಲಿಯಾಸ್ ಮಾಧೋರಾಮ್ ಮತ್ತು ಸಚೇಂದ್ರ ಕುಮಾರ್ ಅವರನ್ನು …
Read More »
BigTv News
April 19, 2026
Breaking News
ಕೆಜಿಎಫ್: ಮಾದಕ ವಸ್ತುಗಳ ಮಾರಾಟದ ಮೇಲೆ ಹದ್ದಿನ ಕಣ್ಣಿಟ್ಟಿರುವ ಕೆಜಿಎಫ್ ಪೊಲೀಸರು, ಪ್ರತ್ಯೇಕ ಕಡೆ ದಾಳಿ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿ 410 ಗ್ರಾಂ ಗಾಂಜಾ ಹಾಗೂ 2 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದಾರೆ. ನಗರದ ಅಜಯ್ಕುಮಾರ್ (26), ಮೊಹಮ್ಮದ್ ಯೂಸೂಫ್ (22) ಯಕ್ಷಗೋರ್ ಶರ್ಮ ಬಂಧಿತರು. ಸಂಜಯ್ ಗಾಂಧಿ ನಗರದಿಂದ ಇ.ಟಿ ಬ್ಲಾಕ್ ಕಡೆಗೆ ಹೋಗುವ ರಸ್ತೆಯ ಪಕ್ಕದ ಖಾಲಿ ಜಾಗದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ …
Read More »
BigTv News
April 19, 2026
Breaking News
ಬೆಳ್ತಂಗಡಿ: ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಕಾಡಿಗೆ ಕರೆದೊಯ್ದು ಅತ್ಯಾಚಾರಗೈದ ಆರೋಪದಲ್ಲಿ ಇಬ್ಬರು ಯುವಕರನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ. ಬೆಳ್ತಂಗಡಿ ತಾಲೂಕಿನ ಕಡುರುದ್ಯಾವರ ಗ್ರಾಮದ ಸುಮಂತ್(28) ಮತ್ತು ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದ ನವನೀತ್(26) ಬಂಧಿತ ಆರೋಪಿಗಳು. ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ 15 ವರ್ಷದ ಬಾಲಕಿಯನ್ನು ಆರೋಪಿಗಳು ಪುಸಲಾಯಿಸಿ ಎ.16ರಂದು ಎರ್ಮಾಯಿ ಫಾಲ್ಸ್ ಬಳಿಯ ಕಾಡಿಗೆ ಕರೆದೊಯ್ದು ಅತ್ಯಾಚಾರ ಮಾಡಿರುವ ಬಗ್ಗೆ ಸಂತ್ರಸ್ತೆ ಮನೆಯವರಿಗೆ ತಿಳಿಸಿದ್ದಾಳೆ. ಈ ಬಗ್ಗೆ ಬಾಲಕಿಯ …
Read More »
BigTv News
April 19, 2026
Breaking News
ಬಾಗಲಕೋಟೆ: ಜಮಖಂಡಿಯ ಶಾಂತಿನಗರದ ಸಮೀಪದ ಕಾಡಿನಲ್ಲಿ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡಿದ್ದು ಕಾಡ್ಗಿಚ್ಚು ವ್ಯಾಪಿಸಿದೆ. ಈ ಭೀಕರ ಘಟನೆಯಲ್ಲಿ ಹತ್ತು ಎಕರೆಗಿಂತಲೂ ಹೆಚ್ಚಿನ ಭೂಭಾಗ ಸುಟ್ಟು ಭಸ್ಮವಾಗಿದೆ. ಇನ್ನು ಗಾಳಿ ಹೆಚ್ಚಿದ್ದ ಕಾರಣ ಬೆಂಕಿ ಕ್ಷಣಾರ್ಧದಲ್ಲಿ ವ್ಯಾಪಿಸಿದ ಕಾರಣ ಅರಣ್ಯಕ್ಕೆ ವೇಗವಾಗಿ ಹಬ್ಬಿದ್ದು, ಬಹುಪಾಲು ಪ್ರದೇಶ ಸಂಪೂರ್ಣಬೆಂಕಿಗೆ ಆಹುತಿಯಾಗಿದೆ. ಈ ಪ್ರಕೃತಿಯ ವಿಕೋಪದಿಂದಾಗಿ ಇಲ್ಲಿನ ಅಮೂಲ್ಯವಾದ ಗಿಡಮೂಲಿಕೆಗಳು ಹಾಗೂ ವೈವಿಧ್ಯಮಯ ಸಸ್ಯರಾಶಿ ಅಗ್ನಿಪಾಲಾಗಿದ್ದು, ಸ್ಥಳೀಯ ವನ್ಯಜೀವಿಗಳಿಗೂ ಸಾಕಷ್ಟು ಹಾನಿಯಾಗಿದೆ. ಈ ಘಟನೆಯ …
Read More »
BigTv News
April 19, 2026
Breaking News
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ ಮತ್ತೊಂದು ಪೈಶಚಿಕ ಕೃತ್ಯ ನಡೆದಿದೆ. ಅಪ್ರಾಪ್ತ ಬಾಲಕಿಗೆ ಪುಸಲಾಯಿಸಿ ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದ್ದು, ಇದೀಗ ಇದಕ್ಕೆ ಸಂಬಂಧಪಟ್ಟಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಪೊಲೀಸರು ಇಬ್ಬರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಸುಮಂತ್ (28) ಹಾಗೂ ನವನೀತ್ (26) ಬಂಧಿತ ಆರೋಪಿಗಳು ಎನ್ನಲಾಗಿದೆ. 15 ವರ್ಷದ ಬಾಲಕಿಯನ್ನು ಫಾಲ್ಸ್ ನೋಡಲು ಇಬ್ಬರು …
Read More »
BigTv News
April 19, 2026
Breaking News
ಬೆಂಗಳೂರು: ದೇವಸ್ಥಾನಕ್ಕೆ ಬರುವುದು ಮನಸ್ಸಿನ ಶಾಂತಿಗಾಗಿ ಮತ್ತು ದೇವರಿಗೆ ನಮಸ್ಕರಿಸಲು. ಆದರೆ ಇಲ್ಲೊಬ್ಬ ಕಿಲಾಡಿ ಕಳ್ಳ ದೇವರಿಗೆ ಕೈಮುಗಿಯುತ್ತಲೇ ಪಕ್ಕದಲ್ಲಿದ್ದವರ ಮೊಬೈಲ್ ಕಳ್ಳತನ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮಾರತಹಳ್ಳಿಯ ಹನುಮಂತರಾಯ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ. ಕಳೆದ ತಿಂಗಳು 26ರ ಗುರುವಾರದಂದು ದೇವಸ್ಥಾನಕ್ಕೆ ಬಂದಿದ್ದ ಈ ವ್ಯಕ್ತಿ, ಹನುಮಂತನಿಗೆ ಪ್ರದಕ್ಷಿಣೆ ಹಾಕಿದ್ದಾನೆ. ದೇವರ ಮುಂದೆ ನಿಂತು ಅತ್ಯಂತ ಭಕ್ತಿಯಿಂದ “ಒಳ್ಳೆಯದನ್ನು ಮಾಡಪ್ಪ” ಎಂದು ಬೇಡಿಕೊಳ್ಳುವಂತೆ ನಟಿಸುತ್ತಲೇ, ಪಕ್ಕದಲ್ಲಿದ್ದವರ ಬೆಲೆಬಾಳುವ …
Read More »
BigTv News
April 19, 2026
Breaking News
ಕೋಲಾರ: ಪೊಲೀಸರು ರೌಡಿಶೀಟರ್ ಗಳಿಗೆ ಬೆಳಂ ಬೆಳಿಗ್ಗೆ ಬೆವರಿಳಿಸಿದ್ದಾರೆ. ಕೋಲಾರ ಜಿಲ್ಲೆಯ ಕೆಜಿಎಫ್ ಮತ್ತು ಬಂಗಾರಪೇಟೆ ಪಟ್ಟಣದ ವ್ಯಾಪ್ತಿಯಲ್ಲಿನ ರೌಡಿಶೀಟರ್‌ಗಳ ಮನೆಗಳ ಮೇಲೆ ಪೊಲೀಸರು ದಿಢೀರ್ ದಾಳಿ ನಡೆಸಿದ್ದಾರೆ. ಕೆಜಿಎಫ್ ಎಸ್‌ಪಿ ಶಿವಾಂಶು ರಜಪೂತ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಕೆಜಿಎಫ್ ನಗರದ ಆಂಡರ್ಸನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಸೂಸೆಪಾಳ್ಯ, ಸೊರೆಕಾಯಿ ಪೇಟೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ಒಟ್ಟು 10 ರೌಡಿಗಳ ಮನೆಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ. …
Read More »
BigTv News
April 19, 2026
Breaking News
ಗುರುಮಠಕಲ್: ಕೊಂಕಲ್ ಗ್ರಾಮದ ಹೊರವಲಯದಲ್ಲಿ ಶನಿವಾರ ಅಗ್ನಿ ಅವಘಡದಿಂದ ಸುಮಾರು 900 ಟ್ರ್ಯಾಕ್ಟರ್ ಮೇವಿನ ಬಣವೆ ಸುಟ್ಟು ಕರಕಲಾಗಿದೆ. ನಂದೇಪಲ್ಲಿ ಗ್ರಾಮದ ಮೇವಿನ ವ್ಯಾಪಾರಿ ಗಜಲಪ್ಪ ನರಸಿಂಗಪ್ಪ ಅವರಿಗೆ ಸೇರಿದ ಬಣವೆ ಬೆಂಕಿಗೆ ಆಹುತಿಯಾಗಿದೆ. ಸುತ್ತಲಿನ ಗ್ರಾಮಗಳಿಂದ ಜೋಳದ ಮೇವು ಖರೀದಿಸಿ ತೆಲಂಗಾಣದಲ್ಲಿ ಮಾರಾಟ ಮಾಡಲು ಕೊಂಕಲ್ ಗ್ರಾಮದ ಹೊರವಲಯದಲ್ಲಿ ಬಣವೆ ಹಾಕಿ ಇರಿಸಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಸಂಜೆ ವೇಳೆ ಬಣವೆಯಲ್ಲಿ ಹೊಗೆಯಾಡುತ್ತಿತ್ತು. ಹತ್ತಿರ ಹೋಗುತ್ತಿದ್ದಂತೆ ಬೆಂಕಿಯು ತೀವ್ರಗೊಂಡಿತು. …
Read More »