ಬೆಳಗಾವಿ: ತಾಲ್ಲೂಕಿನ ಸುಳಗಾದ ದೇಶಪಾಂಡೆ ಗಲ್ಲಿಯ ಮನೆಯಲ್ಲಿ ಶನಿವಾರ ತಲೆದಿಂಬಿನಲ್ಲಿ ಬಚ್ಚಿಟ್ಟು ಮಾದಕವಸ್ತು ಮಾರುತ್ತಿದ್ದ ಇಬ್ಬರನ್ನು ಸಿಸಿಬಿ ವಿಭಾಗದ ಪೊಲೀಸರು ಬಂಧಿಸಿದ್ದಾರೆ.ಅದೇ ಗ್ರಾಮದ ನಾಗೇಶ ಮಧುಕರ ಭಗತ, ರಾಹುಲ ಜ್ಯೋತಿಬಾ ಜಾಧವ ಬಂಧಿತರು. ಅವರಿಂದ ₹2.60 ಲಕ್ಷ ಮೌಲ್ಯದ 12.92 ಗ್ರಾಂ (119 ಚೀಟಿ) ಹೆರಾಯಿನ್, 2 ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಅವರಿಗೆ ಮಾದಕವಸ್ತು ತಂದುಕೊಡುತ್ತಿದ್ದ ಮುಂಬೈನ ನಿವಾಸಿ ಸಂತೋಷ ವಿರುದ್ಧವೂ ಕಾಕತಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

