Breaking News

Breaking News

ನಕಲಿ ಕ್ಲಿನಿಕ್‌ಗಳ ಮೇಲೆ ದಾಳಿ

ಸಿಂಧನೂರು: ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಟಿಎಚ್‌ಒ ಡಾ.ಅಯ್ಯನಗೌಡ ನೇತೃತ್ವದ ತಂಡವು ್ಞವಿವಿಧ ಗ್ರಾಮಗಳಲ್ಲಿ ನಕಲಿ ಕ್ಲಿನಿಕ್‌ಗಳ ಮೇಲೆ ಶುಕ್ರವಾರ ದಾಳಿ ನಡೆಸಿ ಪರಿಶೀಲಿಸಿತು. ಟಿಎಚ್‌ಒ ಡಾ.ಅಯ್ಯನಗೌಡ, ನೋಡಲ್ ಅಧಿಕಾರಿ ಡಾ.ಶಾಕೀರ, ಆಯುಷ್ ಅಧಿಕಾರಿ ಡಾ.ಅಹ್ಮದ್ ಷರೀಫ್, ಗ್ರಾಮೀಣ ಮತ್ತು ಬಳಗಾನೂರು ಪೊಲೀಸ್ ಠಾಣೆ ಅಧಿಕಾರಿಗಳು ಹಾಗೂ ಇತರ ಇಲಾಖಾ ಸಿಬ್ಬಂದಿ ಬೆಳಗುರ್ಕಿಯಲ್ಲಿ 1, ಅಲಬನೂರಿನಲ್ಲಿ 3 ಸೇರಿದಂತೆ ಒಟ್ಟು 16 ಕ್ಲಿನಿಕ್‌ಗಳ ಮೇಲೆ ದಾಳಿ ನಡೆಸಿ ಪರಿಶೀಲಿಸಿತು. …

Read More »

ನೆರೆ ರಾಜ್ಯದವರು, ಸ್ಥಳೀಯರ ನಡುವೆ ಹೊಡೆದಾಟ

ಹಾಸನ: ಹೊರ ರಾಜ್ಯದ ಯುವಕರು ಹಾಗೂ ಸ್ಥಳೀಯ ಅಪ್ರಾಪ್ತರ ನಡುವೆ ತಾಲೂಕಿನ ಹನುಮಂತಪುರದಲ್ಲಿ ಹೊಡೆದಾಟ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮಾ.13 ರಂದು ರಾತ್ರಿ 10.30ರ ಸುಮಾರಿಗೆ ಈ ಘಟನೆ ನಡೆದಿದ್ದು, ದೊಡ್ಡ ರಿಪೀಸ್ ಪಟ್ಟಿಗಳಿಂದ ವಯಸ್ಕರು ಹಾಗೂ ಅಪ್ರಾಪ್ತರ ಗುಂಪು ಪರಸ್ಪರ ಬಡಿದಾಡಿಕೊಂಡಿರುವ ದೃಶ್ಯಾವಳಿ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಸಂಬಂಧ ಹೊಡೆದಾಟದಲ್ಲಿ ಭಾಗಿಯಾಗಿದ್ದವರು ಪಶ್ಚಿಮ ಬಂಗಾಳದವರು ಎನ್ನಲಾದ ಸೌರವ್ ಘೋಷ್ ಹಾಗೂ ಕಿರಣ್ ಘೋಷ್ ಎಂಬುವರು …

Read More »

ಕುಶಾಲನಗರ ಬಡಾವಣೆಯಲ್ಲಿ ಬೆಂಕಿ ಅವಘಡ : ಬೈಕ್ ಸುಟ್ಟು ಭಸ್ಮ

ಸಕಲೇಶಪುರ : ಪಟ್ಟಣದ ಕುಶಾಲನಗರ ಬಡಾವಣೆಯಲ್ಲಿ ಸಂಭವಿಸಿದ ಆಕಸ್ಮಿಕ ಬೆಂಕಿ ಅವಘಡದಲ್ಲಿ ಬೈಕ್ ಒಂದು ಸಂಪೂರ್ಣ ಸುಟ್ಟು ಕರಕಲಾದ ಘಟನೆ ಜರುಗಿದೆ. ಸ್ಥಳೀಯ ನಿವಾಸಿ ಚೋಟು ಎಂಬುವರಿಗೆ ಸೇರಿದ ಯಮಹಾ ಆರ್‌-15 (R15) ಬೈಕ್ ಬೆಂಕಿಗೆ ಆಹುತಿಯಾಗಿದೆ. ಚೋಟು ಅವರು ರಾತ್ರಿ ಮನೆಗೆ ತೆರಳುತ್ತಿದ್ದ ವೇಳೆ ಬೈಕಿನ ಇಂಜಿನ್ ಭಾಗದಲ್ಲಿ ಅಲ್ಪ ಪ್ರಮಾಣದ ಹೊಗೆ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಬೆಂಕಿ ಇಡೀ ವಾಹನವನ್ನು ಆವರಿಸಿಕೊಂಡಿದ್ದು, ಸ್ಥಳೀಯರು ತಕ್ಷಣ ಬೆಂಕಿ ನಂದಿಸಲು ಪ್ರಯತ್ನಿಸಿದರೂ, …

Read More »

ಬೆಂಗಳೂರಲ್ಲಿ ಮತ್ತೊಂದು ಮರ್ಡರ್ : ಮಾತನಾಡಲು ಎಂದು ಕರೆಸಿ ರಾಜಸ್ಥಾನ್ ವ್ಯಕ್ತಿಯ ಬರ್ಬರ ಹತ್ಯೆ!

ಬೆಂಗಳೂರಿನಲ್ಲಿ ಮತ್ತೊಂದು ಕೊಲೆ ನಡೆದಿದ್ದು ರಾಜಸ್ಥಾನ್ ಮೂಲದ ವ್ಯಕ್ತಿಯನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ವರ್ತೂರು ಪೊಲೀಸ್ ಠಣ ವ್ಯಾಪ್ತಿಯಲ್ಲಿ ಈ ಒಂದು ಕೊಲೆ ನಡೆದಿದ್ದು, ತಡರಾತ್ರಿ ದಲ್ರಾಮ್ ಎನ್ನುವ ವ್ಯಕ್ತಿಯನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ರಾಜಸ್ಥಾನದಲ್ಲಿ ದಲ್ರಾಮ್ ಕೌಟುಂಬಿಕ ಕಲಹ ಹೊಂದಿದ್ದ. ಬೆಂಗಳೂರಿನಲ್ಲಿ ಮಾತನಾಡಲು ಬಂದು ಕೊಲೆಯಾಗಿದ್ದಾನೆ. ಗ್ಯಾಸ್ ಅಂಗಡಿ ಬಳಿಗೆ ದಲ್ರಾಮ್ ನನ್ನ ಕರೆಸಿಕೊಂಡು ದುಷ್ಪರ್ಮಿಗಳು ಕೊಲೆ ಮಾಡಿದ್ದಾರೆ ಕಾರಿನಲ್ಲಿ ಬಂದಿದ್ದ ಅಪರಿಚಿತ ವ್ಯಕ್ತಿಗಳು ದಲ್ರಾಮ್ ನನ್ನು ಭೀಕರವಾಗಿ …

Read More »

ವಿಜಯಪುರದಲ್ಲಿ ಘೋರ ಘಟನೆ : ಮದುವೆಗೆ ಹೆಣ್ಣು ಸಿಗದಿದ್ದಕ್ಕೆ, ಮರಕ್ಕೆ ನೇಣು ಬಿಗಿದುಕೊಂಡು ಯುವಕ ಸೂಸೈಡ್!

ವಿಜಯಪುರದಲ್ಲಿ ಘೋರವಾದ ಘಟನೆ ಒಂದು ನಡೆದಿದ್ದು ಮದುವೆಗೆ ಹೆಣ್ಣು ಸಿಗಲಿಲ್ಲ ಎಂದು ಮನನ್ನೊಂದ ಯುವಕನೊಬ್ಬ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಚಿಮ್ಮಲಗಿಯಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಶಂಕರ ತಳವಾರ (25) ಎಂದು ತಿಳಿದು ಬಂದಿದೆ. ಎರಡು ವರ್ಷದ ಹಿಂದೆ ಮದುವೆ ನಿಶ್ಚಯವಾಗಿ ಹಾಗೂ ಮದುವೆ ಮುರಿದು ಬಿದ್ದಿತ್ತು. ಬಳಿಕ ಎಷ್ಟೇ ಹುಡುಕಿದರೂ ಕೂಡ ಹೆಣ್ಣು ಸಿಗದಕ್ಕೆ ಶಂಕರ್ ನೊಂದು ಇಂದು …

Read More »

ಅಕ್ರಮವಾಗಿ ಆವಿಮಣ್ಣು ಗಣಿಗಾರಿಕೆ; ಪ್ರಕರಣ ದಾಖಲು

ಕೋಟ: ಬೇಳೂರು ಗ್ರಾಮದ ಗುಳ್ಳಾಡಿ ಪ್ರದೇಶದಲ್ಲಿ ಜೇಡಿಮಣ್ಣಿನ ಅಕ್ರಮ ಗಣಿಗಾರಿಕೆ ಹಾಗೂ ಸಾಗಾಟ ನಡೆಸಿದ ವಿರುದ್ಧ ಎ.2 ರಂದು ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಸರಕಾರಕ್ಕೆ ರಾಜಧನ ಪಾವತಿಸದೆ ಅಕ್ರಮ ಲಾಭ ಪಡೆಯುವ ಉದ್ದೇಶದಿಂದ ಜೇಡಿಮಣ್ಣು ಕಳ್ಳತನ ಮಾಡಿ ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದು, ರಾಜೀವ್ ಅವರ ಜಾಗದಲ್ಲಿ ಪರವಾನಿಗೆ ಇಲ್ಲದೆ ಜೇಡಿಮಣ್ಣನ್ನು ತೆಗೆಯಲಾಗುತ್ತಿತ್ತು. ಅದನ್ನು ಎರಡು ಟಿಪ್ಪರ್ ವಾಹನಗಳ ಮೂಲಕ ಸಾಗಿಸಲಾಗುತ್ತಿರುವುದು ಗಮನಕ್ಕೆ …

Read More »

ಚಾಕು ತೋರಿಸಿ ಜೀವ ಬೆದರಿಕೆ

ಹಾವೇರಿ: ಇಲ್ಲಿಯ ಹುತಾತ್ಮ ಮೈಲಾರ ಮಹದೇವಪ್ಪ ವೃತ್ತ ಬಳಿಯ ಸರ್ಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಬಾಲಕನೊಬ್ಬ ಚಾಕು ತೋರಿಸಿ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ. ಗುರುವಾರ ಘಟನೆ ನಡೆದಿದ್ದು, ಸದ್ಯಕ್ಕೆ ಯಾವುದೇ ದೂರು ದಾಖಲಾಗಿಲ್ಲ. ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಎಸ್.ಪಿ.ಯಶೋಧಾ ವಂಟಗೋಡಿ ತಿಳಿಸಿದ್ದಾರೆ. ‘ಶಾಲೆ ಆವರಣದಲ್ಲಿ ಬಾಲಕರು ಸೇರಿದ್ದರು. ಸ್ಥಳಕ್ಕೆ ಬಂದಿದ್ದ 15 ವರ್ಷದ ಬಾಲಕ, ತನ್ನ ಬಳಿಯ ಚಾಕು ಹೊರಗೆ ತೆಗೆದಿದ್ದ. ‘ಇಲ್ಲಿ ಆಟ …

Read More »

ಎಂಡಿಎಂಎ ಮಾರಾಟ; ಬೋಳಿಯಾರ್‌ ನಿವಾಸಿ ಬಂಧನ

ಉಳ್ಳಾಲ: ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಆರೋಪಿ ಬೋಳಿಯಾರ್‌ ನಿವಾಸಿ ಮಹಮ್ಮದ್‌ ಆರೀಫ್‌ ಎಂಬಾತನನ್ನು ದೇರಳಕಟ್ಟೆ ಬಳಿ ಕೊಣಾಜೆ ಪೊಲೀಸರು ಬಂಧಿಸಿದ್ದಾರೆ. ದೇರಳಕಟ್ಟೆಯ ಖಾಸಗಿ ಆಸ್ಪತ್ರೆ ಎದುರುಗಡೆ ಮೈದಾನದಲ್ಲಿ ನಿಷೇಧಿತ ಎಂಡಿಎಂಎ ಮಾರಾಟ ಮಾಡುವ ಖಚಿತ ಮಾಹಿತಿ ಪಡೆದುಕೊಂಡ ಕೊಣಾಜೆ ಎಸ್ ಐ ನಾಗರಾಜ್‌ ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಮಾದಕ ವಸ್ತು ಆರೋಪಿ ಸೆರೆ

ಕುಂಬಳೆ: ಮಾದಕ ವಸ್ತು ದಾಸ್ತಾನು ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಕುಂಬಳೆ ಕೊಯಿಪ್ಪಾಡಿ ಕಡಪ್ಪುರ ನಿವಾಸಿ ಸಾದಿಕ್ ಕೆ. (34) ಎಂಬವನನ್ನು ಮುಂಜಾಗ್ರತಾ ಕ್ರಮವಾಗಿ ಕುಂಬಳೆ ಪೊಲೀಸರು ಬಂಧಿಸಿದ್ದಾರೆ.ಡಿ. 6 ರಂದು ಉಪ್ಪಳ ಸೋಂಕಾಲ್ ಸಮೀಪ ನಡೆಸಿದ ಕಾರ್ಯಾಚರಣೆ ಯಲ್ಲಿ 43.77 ಗ್ರಾಂ ಎಂಡಿಎಂ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದರು. ಈ ಪ್ರಕರಣದಲ್ಲಿ ಸಾದಿಕ್ ಕೆ. ಸಹಿತ ಮೂವರನ್ನು ಬಂಧಿಸಿದ್ದರು. ನಂತರ ಸಾದಿಕ್ ಜಾಮೀನು ಮೇಲೆ ಬಿಡುಗಡೆಯಾಗಿದ್ದನು. ಬಳಿಕ‌ವೂ ಆತ‌ ಕೆಲ ಪ್ರಕರಣಗಳಲ್ಲಿ ಆರೋಪಿಯಾಗಿರುವ …

Read More »

ಮಹಿಳಾ ಅಧಿಕಾರಿ ಮೇಲೆ ಅತ್ಯಾಚಾರ: ಉದ್ಯಮಿ ಅರೆಸ್ಟ್

ಬೆಂಗಳೂರು: ಮಹಿಳಾ ಅಧಿಕಾರಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಉದ್ಯಮಿಯನ್ನು ಪುಲಕೇಶಿನಗರ ಠಾಣೆ ಪೋಲೀಸರು ಬಂಧಿಸಿದ್ದಾರೆ. ಕಸ್ಟಮ್ಸ್ ಮಹಿಳಾ ಅಧೀಕ್ಷಕಿ ಮೇಲೆ ಅತ್ಯಾಚಾರ ಆರೋಪ ಪ್ರಕರಣದಲ್ಲಿ ಉದ್ಯಮಿ ಕೃಷ್ಣಾನಿ ಅವರನ್ನು ಬಂಧಿಸಲಾಗಿದೆ. 45 ವರ್ಷದ ಮಹಿಳಾ ಅಧಿಕಾರಿ ನೀಡಿದ ದೂರಿನ ಅನ್ವಯ ಆರೋಪಿ ಎಂ. ಕೃಷ್ಣಾನಿ ಅವರನ್ನು ಬಂಧಿಸಿ ಕೋರ್ಟ್ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಮೂರು ದಿನ ಪೊಲೀಸ್ ಕಸ್ಟಡಿಗೆ ನೀಡಿತ್ತು.ಆರೋಪಿಯ ವಿಚಾರಣೆ ಮುಂದುವರೆದಿದೆ. ಉದ್ಯಮಿ ಕೃಷ್ಣಾನಿ ನನ್ನ …

Read More »