Breaking News

ಚಾಕು ತೋರಿಸಿ ಜೀವ ಬೆದರಿಕೆ

ಹಾವೇರಿ: ಇಲ್ಲಿಯ ಹುತಾತ್ಮ ಮೈಲಾರ ಮಹದೇವಪ್ಪ ವೃತ್ತ ಬಳಿಯ ಸರ್ಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಬಾಲಕನೊಬ್ಬ ಚಾಕು ತೋರಿಸಿ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ. ಗುರುವಾರ ಘಟನೆ ನಡೆದಿದ್ದು, ಸದ್ಯಕ್ಕೆ ಯಾವುದೇ ದೂರು ದಾಖಲಾಗಿಲ್ಲ. ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಎಸ್.ಪಿ.ಯಶೋಧಾ ವಂಟಗೋಡಿ ತಿಳಿಸಿದ್ದಾರೆ. ‘ಶಾಲೆ ಆವರಣದಲ್ಲಿ ಬಾಲಕರು ಸೇರಿದ್ದರು. ಸ್ಥಳಕ್ಕೆ ಬಂದಿದ್ದ 15 ವರ್ಷದ ಬಾಲಕ, ತನ್ನ ಬಳಿಯ ಚಾಕು ಹೊರಗೆ ತೆಗೆದಿದ್ದ. ‘ಇಲ್ಲಿ ಆಟ ಆಡಬೇಡಿ. ಇಲ್ಲಿ ಆಟ ಆಡಿದರೆ ನಿಮ್ಮನ್ನು ಮುಗಿಸುತ್ತೇನೆ’ ಎಂದು ಚಾಕು ತೋರಿಸಿ ಬೆದರಿಸಿದ್ದ. ಬಾಲಕನೊಬ್ಬನಿಗೆ ಇರಿಯಲು ಸಹ ಯತ್ನಿಸಿದ್ದ’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು. ಘಟನೆ ಬಗ್ಗೆ ಸಂತ್ರಸ್ತರು, ಹಾವೇರಿಶಹರ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿರುವ ಮಾಹಿತಿಯಿದೆ. ಆದರೆ, ಪೊಲೀಸರು ಇದುವರೆಗೂ ಎಫ್‌ಐಆರ್ ದಾಖಲಿಸಿಕೊಂಡಿಲ್ಲವೆಂದು ದೂರುದಾರರು ಆರೋಪಿಸುತ್ತಿದ್ದಾರೆ.

Share News

About BigTv News

Check Also

ವಿಜಯಪುರದಲ್ಲಿ ಮತ್ತೆ ಹರಿದ ನೆತ್ತರು, ಪತ್ನಿಯ ಎದುರಲ್ಲೇ ಅಮಾನುಷವಾಗಿ ಪತಿಯ ಜೀವ ತೆಗೆದ ರಾಕ್ಷಸರು

ವಿಜಯಪುರ: ನಗರದ ಮುಂಡೆವಾಡಿ ಆಸ್ಪತ್ರೆ ಎದುರು ಯಾಸೀನ್ ಠಕ್ಕೆ ಎಂಬಾತನ ಮೇಲೆ ದುಷ್ಕರ್ಮಿಗಳು ಎರಡು ಸುತ್ತು ಗುಂಡು ಹಾರಿಸಿ ಹತ್ಯೆ …

Leave a Reply

Your email address will not be published. Required fields are marked *