Breaking News

Breaking News

ಆನ್‌ಲೈನ್ ಹೂಡಿಕೆ ಹೆಸರಲ್ಲಿ ದೋಖಾ, 1.28 ಕೋಟಿ ಕಳೆದುಕೊಂಡ ವ್ಯಕ್ತಿ

ಚಿಕ್ಕಮಗಳೂರು : ಜಿಲ್ಲೆಯ ಕಡೂರು ತಾಲ್ಲೂಕಿನ ಶಿವಪುರ ಗ್ರಾಮದ ಕಲ್ಲೇಗೌಡ ಎಂಬುವವರು ಸೈಬರ್ ವಂಚಕರ ಜಾಲಕ್ಕೆ ಸಿಲುಕಿ ಬರೋಬ್ಬರಿ 1.28 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಕಳೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಕಂಡ ಒಂದು ಜಾಹೀರಾತಿನ ಲಿಂಕ್ ಒತ್ತಿದ ಇವರು, ವಂಚಕರು ಸೃಷ್ಟಿಸಿದ್ದ ವಾಟ್ಸಾಪ್ ಗುಂಪಿಗೆ ಸೇರಿಕೊಂಡಿದ್ದರು. ಆರಂಭದಲ್ಲಿ ಕೇವಲ 60 ಸಾವಿರ ರೂಪಾಯಿ ಹೂಡಿಕೆ ಮಾಡಿದಾಗ, ಅವರಿಗೆ ಸುಮಾರು 17 ಸಾವಿರ ರೂಪಾಯಿ ಲಾಭ ಬಂದಂತೆ ತೋರಿಸಿ ನಂಬಿಕೆ …

Read More »

ಏರ್‌ಲೈನ್ಸ್ ನೌಕರನ ಮೇಲೆ ಮೂವರಿಂದ ಹಲ್ಲೆ |

ಶಿವಮೊಗ್ಗ: ಕೆಲಸ ಮುಗಿಸಿ ಮನೆಗೆ ವಾಪಸ್ ಹೋಗುತ್ತಿದ್ದ ಇಂಡಿಗೋ ಏರ್‌ಲೈನ್ಸ್ ನೌಕರನನ್ನು ನಗರದ ಹೊರವಲಯ ದೊಡ್ಡಿಬೀಳು ಗ್ರಾಮದ ಬಳಿ ಅಡ್ಡಗಟ್ಟಿದ ದುಷ್ಕರ್ಮಿಗಳು ದೊಣ್ಣೆಯಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ. ಭದ್ರಾವತಿ ನಿವಾಸಿ, ವಿಮಾನಯಾನ ಸಂಸ್ಥೆಯೊಂದರ ಗ್ರೌಂಡ್ ಹ್ಯಾಂಡ್ಲಿಂಗ್ ವಿಭಾಗದ ಉದ್ಯೋಗಿ ದರ್ಶನ್ ನಾಗರಾಜ ಹಲ್ಲೆಗೊಳಗಾದವರು. ಮಾ.27ರಂದು ಸಂಜೆ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಕೆಲಸ ಮುಗಿಸಿ ದರ್ಶನ್ ಸಹೋದ್ಯೋಗಿ ಗುರುಪ್ರಸಾದ್ ಅವರೊಂದಿಗೆ ಬೈಕ್‌ನಲ್ಲಿ ದೊಡ್ಡಿಬೀಳು ಗ್ರಾಮದ ರಸ್ತೆ ಮೂಲಕ ಭದ್ರಾವತಿಗೆ …

Read More »

ಪುಟ್ಟೇನಹಳ್ಳಿ: ಲಾಂಗ್‌ನಿಂದ ಬೆದರಿಸಿ ಹಣ ಸುಲಿಗೆ

ಬೆಂಗಳೂರು: ರಸ್ತೆ ಬದಿ ಖಾಲಿ ನಿವೇಶನದಲ್ಲಿ ಕುಳಿತು ಮೊಬೈಲ್‌ನಲ್ಲಿ ಕ್ರಿಕೆಟ್ ನೋಡುತ್ತಿದ್ದ ಕಾರ್ಮಿಕರೊಬ್ಬರಿಗೆ ಲಾಂಗ್‌ ತೋರಿಸಿ, ಬೆದರಿಸಿ ಮೂರು ಸಾವಿರ ರೂಪಾಯಿ ಸುಲಿಗೆ ಮಾಡಿ ಪರಾರಿಯಾಗಿರುವ ಘಟನೆ ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೊತ್ತನೂರು ದಿಣ್ಣೆ ಮುಖ್ಯರಸ್ತೆಯ ತುಂಗಾನಗರದ ಖಾಲಿ ನಿವೇಶನದಲ್ಲಿ ಶಿವು ಎಂಬುವರು ಶೆಡ್‌ ಹಾಕಿಕೊಂಡು ವಾಸವಿದ್ದಾರೆ. ‌ ಕೆಲಸ ಮುಗಿಸಿ, ರಾತ್ರಿ ಊಟದ ಬಳಿಕ ಶಿವು ಅವರು ತಮ್ಮ ಶೆಡ್ ಮುಂಭಾಗದ ರಸ್ತೆ ಬದಿ ಕುಳಿತು …

Read More »

ಮಂಗಳೂರು – ಹಾಲಿನ ಟ್ಯಾಂಕರ್ ಗೆ ಹಿಂದಿನಿಂದ ಬೈಕ್ ಡಿಕ್ಕಿ ; ಯುವಕ ದಾರುಣ ಮೃತ್ಯು

ಹಾಲಿನ ಟ್ಯಾಂಕರ್ ಗೆ ಸ್ಕೂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸಾವನಪ್ಪಿದ ಘಟನೆ ಅರ್ಕುಳ ಬ್ರಿಡ್ಜ್ ಬಳಿ ರವಿವಾರ ಬೆಳಗ್ಗೆ ನಡೆದಿರುವುದು ವರದಿಯಾಗಿದೆ. ಮೃತಪಟ್ಟಿರುವ ದ್ವಿಚಕ್ರ ವಾಹನ ಸವಾರನನ್ನು ಪರಂಗಿಪೇಟೆಯ ನಿವಾಸಿ ಮುಹಮ್ಮದ್ ಆಶ್ಫಕ್ (22) ಎಂದು ಗುರುತಿಸಲಾಗಿದೆ. ಬೆಳಗ್ಗೆ ಅರ್ಕುಳ ಸೇತುವೆ ಬಳಿ ಇರುವ ಫರ್ನಿಚರ್ ಅಂಗಡಿಯೊಂದರ ಬಳಿ ಬಿ.ಸಿ.ರೋಡ್ ಕಡೆಗೆ ಹೋಗುತ್ತಿದ್ದ ಟ್ಯಾಂಕರ್‌ಗೆ ಹಿಂದಿನಿಂದ ಬರುತ್ತಿದ್ದ ದ್ವಿಚಕ್ರ ವಾಹನ ಢಿಕ್ಕಿ ಹೊಡೆದಿದ್ದು, ಇದರ ಪರಿಣಾಮ ದ್ವಿಚಕ್ರ …

Read More »

ನೆಲಮಂಗಲ ಬಳಿ ಸರಣಿ ಅಪಘಾತ, ಸಾರ್ವಜನಿಕರಿಂದ ಬಸ್ ಚಾಲಕನಿಗೆ ಥಳಿತ

ಬೆಂಗಳೂರು-ಕುಣಿಗಲ್ ರಾಷ್ಟ್ರೀಯ ಹೆದ್ದಾರಿಯ ಕೊರಟಗೆರೆ ಸಮೀಪ ಭಾನುವಾರ ಸಂಜೆ ಭೀಕರ ಸರಣಿ ಅಪಘಾತ ಸಂಭವಿಸಿದೆ. ಹಾಸನದಿಂದ ಬೆಂಗಳೂರಿನತ್ತ ಬರುತ್ತಿದ್ದ ಕೆಎಸ್‌ಆರ್‌ಟಿಸಿಯ ಎಲೆಕ್ಟ್ರಿಕ್ ಬಸ್, ಅತಿಯಾದ ವೇಗದಲ್ಲಿ ಕಾರನ್ನು ಓವರ್‌ಟೇಕ್ ಮಾಡಲು ಪ್ರಯತ್ನಿಸಿದಾಗ ನಿಯಂತ್ರಣ ತಪ್ಪಿ ಎರಡು ಕಾರುಗಳಿಗೆ ಬಲವಾಗಿ ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ಕಾರಿನ ಹಿಂಭಾಗ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದ್ದು, ಅದೃಷ್ಟವಶಾತ್ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಅಪಘಾತದ ಬೆನ್ನಲ್ಲೇ ಆಕ್ರೋಶಗೊಂಡ ಇತರೆ ವಾಹನ ಸವಾರರು ಹಾಗೂ ಸ್ಥಳೀಯರು ಬಸ್ …

Read More »

ಮಚ್ಚು ಹಿಡಿದು ಅಣ್ಣಮ್ಮ ಸಾಂಗ್​ಗೆ ರೌಡಿಶೀಟರ್ ಡ್ಯಾನ್ಸ್ : ಇಬ್ಬರ ಬಂಧನ!

ಬೆಂಗಳೂರು: ನಗರದ ಬ್ಯಾಟರಾಯನಪುರದಲ್ಲಿ ರೌಡಿಶೀಟರ್‌ರೊಬ್ಬರ ಮಚ್ಚು ಹಿಡಿದು ಡ್ಯಾನ್ಸ್ ಮಾಡಿದ ವೀಡಿಯೋ ವೈರಲ್ ಆದ ಬಳಿಕ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರು ರಂಜಿತ್ ಅಲಿಯಾಸ್ ರಂಜು ಮತ್ತು ನಂದೀಶ್. ವೀಡಿಯೋದಲ್ಲಿ ದೇವಿಯ ಹಾಡಿಗೆ ಎಣ್ಣೆ ಪಾರ್ಟಿಯಲ್ಲಿ ಮಚ್ಚು ಹಿಡಿದು ಸ್ಟೆಪ್ಸ್ ಹಾಕುತ್ತಿರುವ ದೃಶ್ಯಗಳು ಕಾಣುತ್ತಿದೆ. ವೀಡಿಯೋ ವೈರಲ್ ಆದ ಕೂಡಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ರಂಜಿತ್ ಅವರ ವಿರುದ್ಧ ರಾಜರಾಜೇಶ್ವರಿ ಠಾಣೆಯಲ್ಲಿ ಈಗಾಗಲೇ ಹಲವು ಪ್ರಕರಣಗಳಿವೆ, ಕೊಲೆ …

Read More »

ಕಾಲೇಜು ಉಪನ್ಯಾಸಕನ ಮೃತದೇಹ ಬೆಂಕಿ ಹೊತ್ತಿ ಉರಿಯುತ್ತಿದ್ದ ಸ್ಥಿತಿಯಲ್ಲಿ ಪತ್ತೆ

ಶಿವಮೊಗ್ಗ: ಕಾಲೇಜು ಉಪನ್ಯಾಸಕರೊಬ್ಬರ ಮೃತದೇಹ ಅಡಿಕೆ ತೋಟದಲ್ಲಿ ಬೆಂಕಿ ಹೊತ್ತಿ ಉರಿಯುತ್ತಿದ್ದ ರೀತಿಯಲ್ಲಿ ಪತ್ತೆಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಬಳಿಯ ಹನುಮಂತಾಪುರದಲ್ಲಿ ನಡೆದಿದೆ. 58 ವರ್ಷದ ಸುರೇಶ್ ಮೃತ ಉಪನ್ಯಾಸಕ. ಶಿವಮೊಗ್ಗದ ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಅವರದ್ದೇ ತೋಟದಲ್ಲಿ ಶವ ಬೆಂಕಿ ಹೊತ್ತಿ ಉರಿಯುತ್ತಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬೆಂಕಿಯಲ್ಲಿ ದೇಹ ಉರಿಯುತ್ತಿರುವುದನ್ನು ಕಂಡು ಅಕ್ಕಪಕ್ಕದ ತೋಟದವರು ಪೊಲೀಸರಿಗೆ ಮಾಹಿತಿ …

Read More »

ಬೈಕ್-ಲಾರಿ ಮಧ್ಯೆ ಭೀಕರ ಅಪಘಾತ.. ಮೂವರು ವಿದ್ಯಾರ್ಥಿಗಳು ದುರ್ಮರಣ!

ಬೆಂಗಳೂರು : ಬೈಕ್ ಮತ್ತು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರು ಟೂ ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಮನೋಜ್( 21), ಅಭಿ (21), ನವೀನ್( 22)ಮೃತ ವಿದ್ಯಾರ್ಥಿಗಳು. ಈ ಮೂವರು ಬೆಂಗಳೂರಿನ ಆಚಾರ್ಯ ಮತ್ತು ಸಪ್ತಗಿರಿ ಕಾಲೇಜಿನಲ್ಲಿ ವ್ಯಾಸಂಗ ಮಾಡ್ತಿದ್ದರು ಎಂದು ತಿಳಿದುಬಂದಿದೆ. ಮೂವರು ನಿನ್ನೆ ರಾತ್ರಿ ಮಳವಳ್ಳಿ ಬಿರಿಯಾನಿಗಾಗಿ ಬೈಕ್ ರೈಡ್ ಬಂದಿದ್ದ ವೇಳೆ ಈ ದುರಂತ …

Read More »

ಗ್ರಾಹಕರ ಸೋಗಿನಲ್ಲಿ ಬಂದು ನೋಡು ನೋಡುತ್ತಲೇ ಚಿನ್ನದ ಸರ ಎಗರಿಸಿದ ಖದೀಮ

ಹಾಸನ: ಜ್ಯೂವೆಲ್ಲರಿ ಶಾಪ್‌ನಲ್ಲಿ ಖತರ್ನಾಕ್‌ ಕಳ್ಳನೊಬ್ಬ ಕೈಚಳಕ ತೋರಿದ್ದು, ಗ್ರಾಹಕರ ಸೋಗಿನಲ್ಲಿ ಬಂದು ಕದ್ದಿರುವ ಘಟನೆ ಹಾಸನ ಜಿ. ಬೇಲೂರು ಪಟ್ಟಣದ ಕನ್ನಿಕಾ ಜ್ಯೂವೆಲ್ಲರಿ ಶಾಪ್‌ನಲ್ಲಿ ನಡೆದಿದೆ. ಗ್ರಾಹಕರ ಸೋಗಿನಲ್ಲಿ ಬಂದ ಖದೀಮ ಸುಮಾರು 12ಗ್ರಾಂ ಚಿನ್ನದ ಸರ‌ ಕದ್ದು ಪರಾರಿಯಾಗಿದ್ದಾನೆ. ಜ್ಯೂವೆಲ್ಲರಿ ಶಾಪ್‌ನಲ್ಲಿ ಚಿನ್ನದ ಸರ ಎಗರಿಸಿದ ಕಳ್ಳನ ಕೈಚಳಕ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸರ ಕದ್ದ ಖದೀಮ ಆಟೋ ಹತ್ತಿ ಹೋಗುತ್ತಿರುವ ದೃಶ್ಯ ಸೆರೆಯಾಗಿದೆ. ಬೇಲೂರು ಪೊಲೀಸ್ …

Read More »

ತಲೆಮರೆಸಿಕೊಂಡಿದ್ದ ಆರೋಪಿ ವಶಕ್ಕೆ

ಸುಳ್ಯ: ಹಲವು ಅಪರಾಧಗಳಲ್ಲಿ ಆರೋಪಿಯಾಗಿ 8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಅಜ್ಜಾವರ ಗ್ರಾಮದ ನಿವಾಸಿ ಎನ್.ಎಂ. ಅಜೀಜ್ ನನ್ನು ಪೊಲೀಸರು ಬಂಧಿಸಿದ್ದಾರೆ.ಕಡಬ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ 8 ವರ್ಷಗಳಿಂದ ತಲೆಮರೆಸಿಕೊಂಡಿದ್ದ. ಕನ್ವಿಕ್ಷನ್ ವಾರಂಟ್ ಆರೋಪಿ ಅಜೀಜ್‌ಗೆ ಕರ್ನಾಟಕ ಉಚ್ಚ ನ್ಯಾಯಾಲಯ 10 ವರ್ಷ ಶಿಕ್ಷೆ ವಿಧಿಸಿರುತ್ತದೆ. ಅಜೀಜ್ ನನ್ನು 2018ರಲ್ಲಿ ಕೇರಳ ಪೊಲೀಸರು ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸುವಾಗ ಪೊಲೀಸರಿಗೆ ಹಲ್ಲೆ ಮಾಡಿ ತಪ್ಪಿಸಿಕೊಂಡಿದ್ದು, ಅನಂತರ ಆಂಧ್ರಪ್ರದೇಶದಲ್ಲಿ ಜೇವರ್ಗಿ ನಿವಾಸಿ ಬಸವರಾಜು ಎಂಬುದಾಗಿ …

Read More »