Breaking News

ಗ್ರಾಹಕರ ಸೋಗಿನಲ್ಲಿ ಬಂದು ನೋಡು ನೋಡುತ್ತಲೇ ಚಿನ್ನದ ಸರ ಎಗರಿಸಿದ ಖದೀಮ

ಹಾಸನ: ಜ್ಯೂವೆಲ್ಲರಿ ಶಾಪ್‌ನಲ್ಲಿ ಖತರ್ನಾಕ್‌ ಕಳ್ಳನೊಬ್ಬ ಕೈಚಳಕ ತೋರಿದ್ದು, ಗ್ರಾಹಕರ ಸೋಗಿನಲ್ಲಿ ಬಂದು ಕದ್ದಿರುವ ಘಟನೆ ಹಾಸನ ಜಿ. ಬೇಲೂರು ಪಟ್ಟಣದ ಕನ್ನಿಕಾ ಜ್ಯೂವೆಲ್ಲರಿ ಶಾಪ್‌ನಲ್ಲಿ ನಡೆದಿದೆ. ಗ್ರಾಹಕರ ಸೋಗಿನಲ್ಲಿ ಬಂದ ಖದೀಮ ಸುಮಾರು 12ಗ್ರಾಂ ಚಿನ್ನದ ಸರ‌ ಕದ್ದು ಪರಾರಿಯಾಗಿದ್ದಾನೆ. ಜ್ಯೂವೆಲ್ಲರಿ ಶಾಪ್‌ನಲ್ಲಿ ಚಿನ್ನದ ಸರ ಎಗರಿಸಿದ ಕಳ್ಳನ ಕೈಚಳಕ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸರ ಕದ್ದ ಖದೀಮ ಆಟೋ ಹತ್ತಿ ಹೋಗುತ್ತಿರುವ ದೃಶ್ಯ ಸೆರೆಯಾಗಿದೆ. ಬೇಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಖದೀಮನನ್ನು ಹುಡುಕಲು ಮುಂದಾಗಿದ್ದಾರೆ.

Share News

About BigTv News

Check Also

ಚಿತ್ತಾಪುರ | ಕೈಗಡ ಹಣ ವಾಪಸ್‌ ಕೇಳಿದಕ್ಕೆ ಹಲ್ಲೆ: ಇಬ್ಬರ ವಿರುದ್ಧ ಎಫ್‌ಐಆರ್

ಚಿತ್ತಾಪುರ: ಕೈಗಡವಾಗಿ ನೀಡಿದ್ದ ₹2 ಲಕ್ಷ ಹಣವನ್ನು ವಾಪಸ್ ಕೇಳಿದ್ದಕ್ಕೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿ, ಅವಾಚ್ಯವಾಗಿ ಬೈದು ಜೀವ …

Leave a Reply

Your email address will not be published. Required fields are marked *