BigTv News
March 29, 2026
Breaking News
ಕುಣಿಗಲ್: ಬೈಕ್ ಸ್ಕಿಡ್ ಆಗಿ, ಲಾರಿ ಡಿಕ್ಕಿ ಹೊಡೆದ ಪರಿಣಾಮ ಲಾರಿ ಹಿಂಬದಿಯ ಚಕ್ರ ಸವಾರನ ಮೇಲೆ ಹರಿದು, ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟು ಮಹಿಳೆ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 75 ಹೇರೂರು ಬೈಪಾಸ್ ಬಳಿ ಮಾ.29ರ ರವಿವಾರ ಬೆಳಗ್ಗೆ ಸಂಭವಿಸಿದೆ. ಮಂಗಳೂರು ಬ್ರಹ್ಮವರಂ ನಿವಾಸಿ ಮಹಮದ್ ಷರೀಫ್ (60) ಮೃತರು. ಇವರ ಪತ್ನಿ ಅಸೀನಾ ಭಾನು ತೀವ್ರವಾಗಿ ಗಾಯಗೊಂಡು ಕುಣಿಗಲ್ ಪಟ್ಟಣದ ಸರ್ಕಾರಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ …
Read More »
BigTv News
March 29, 2026
Breaking News
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣವೊಂದಕ್ಕೆ ಸಂಬಂಧಿಸಿ ಕಳೆದ 8 ವರ್ಷಗಳಿಂದ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೇರಳ ಪಲಕ್ಕಾಡ್ ನಿವಾಸಿ ಶಕೀಲ್ ಪಿ.(43) ಬಂಧಿತ. ಆತನನ್ನು ಮಾ. 27ರಂದು ಬಂಟ್ವಾಳ ಗ್ರಾಮಾಂತರ ಠಾಣಾ ಸಿಬಂದಿ ಸಂತೋಷ್ ಹಾಗೂ ಶಿವಾನಂದ ಮಡ್ಡಿ ಅವರು ಕೇರಳ ತಿರೂರಿನಲ್ಲಿ ಬಂಧಿಸಿ ಬಂಟ್ವಾಳ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
Read More »
BigTv News
March 29, 2026
Breaking News
ಹೊಸಕೋಟೆ ತಾಲೂಕಿನ ಹಲಸಹಳ್ಳಿ ಸಮೀಪ ಭೀಕರ ರಸ್ತೆ ಅಪಘಾತ ಸಂಭವಿಸಿ ಕಾರು ಮತ್ತು ಕಂಟೇನರ್ ಲಾರಿಗೆ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ. ಈ ದುರ್ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬೆಂಗಳೂರು-ಕೋಲಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಈ ಅಪಘಾತದಲ್ಲಿ ಕಾರು ಮತ್ತು ಕಂಟೇನರ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ತಕ್ಷಣವೇ ಬೆಂಕಿ ಕಾಣಿಸಿಕೊಂಡಿತು. ಡಿಕ್ಕಿಯ ತೀವ್ರತೆಯಿಂದ ಕಾರು ಸಂಪೂರ್ಣವಾಗಿ ಬೆಂಕಿಗಾಹುತಿಯಾದರೆ, ಕಂಟೇನರ್ ಕೂಡ ಸುಟ್ಟು ಹಾನಿಯಾಗಿದೆ. ಘಟನೆಯ ಮಾಹಿತಿ ಸಿಕ್ಕ ತಕ್ಷಣ …
Read More »
BigTv News
March 29, 2026
Breaking News
ಬಿರಿಯಾನಿ ಕನಸು ದುರಂತದಲ್ಲಿ ಅಂತ್ಯ: ಲಾರಿ ಡಿಕ್ಕಿಗೆ ಮೂವರು ಬಲಿ! ಊಟಕ್ಕೆ ಹೊರಟ ಯುವಕರಿಗೆ ಮರಣದ ಹೊಡೆತ: ಭೀಕರ ಅಪಘಾತದಲ್ಲಿ ಮೂವರು ಸಾವು ಕುದೂರು(ರಾಮನಗರ): ಮುಂಜಾನೆ ಬಿರಿಯಾನಿ ಸವಿಯಲು ಬುಲೆಟ್ ಬೈಕಿನಲ್ಲಿ ಹೊರಟಿದ್ದ ಮೂವರು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 75ರ ಮರೂರು ಹ್ಯಾಂಡ್ ಪೋಸ್ಟ್ ಬಳಿ ಶನಿವಾರ ಮುಂಜಾನೆ ಸಂಭವಿಸಿದೆ. ಬೆಂಗಳೂರಿನ ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾದ ದಾವಣಗೆರೆಯ ಮನೋಜ್ …
Read More »
BigTv News
March 28, 2026
Breaking News
ಬೆಂಗಳೂರು: ಗ್ರಾಹಕರ ಸೋಗಿನಲ್ಲಿ ಚಿನ್ನದ ಅಂಗಡಿಗೆ ಹೋಗಿ ಸರ ಲಪಟಾಯಿಸಿದ್ದ ಹೊರ ರಾಜ್ಯದ ಮಹಿಳೆ ಜೆ.ಪಿ.ನಗರ ಠಾಣೆ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾಳೆ. ಆಕೆಯಿಂದ 1.34 ಲಕ್ಷ ರೂ. ಮೌಲ್ಯದ ಚಿನ್ನದ ಸರ ಜಪ್ತಿ ಮಾಡಲಾಗಿದೆ. ಜೆ.ಪಿ.ನಗರದ 3ನೇ ಹಂತ 8ನೇ ಮುಖ್ಯ ರಸ್ತೆಯಲ್ಲಿರುವ ಜ್ಯುವೆಲ್ಲರಿ ಮಳಿಗೆಗೆ ಮಾ.12ರಂದು ಮಹಿಳೆಯೊಬ್ಬಳು ಗ್ರಾಹಕರ ಸೋಗಿನಲ್ಲಿ ಹೋಗಿ ಚಿನ್ನದ ಸರ ತೋರಿಸುವಂತೆ ಹೇಳಿದ್ದಳು. ಅಂಗಡಿಯ ಸಿಬ್ಬಂದಿ ಸರಗಳಿದ್ದ ಬಾಕ್ಸ್ ಅನ್ನು ತೆರೆದು ಚಿನ್ನದ ವಿವಿಧ …
Read More »
BigTv News
March 28, 2026
Breaking News
ನಗರದ ವಿವಿಧ ಕಂಪ್ಯೂಟರ್ ಮಾರಾಟ ಮಳಿಗೆಗಳಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಲ್ಯಾಪ್‌ಟಾಪ್ ಹಾಗೂ ಉಪಕರಣಗಳನ್ನು ಖರೀದಿಸಿ, ಹಣ ನೀಡದೆ ವಂಚಿಸಿರುವ ಅಂತರರಾಜ್ಯ ಮಟ್ಟದ ವಂಚನೆ ಜಾಲವೊಂದು ಬೆಳಕಿಗೆ ಬಂದಿದೆ. ಎಂ.ಜಿ. ರೋಡ್‌ನ ‘ಹೀರಾ ಐಟಿ ಸೊಲ್ಯೂಷನ್ಸ್’ ಸೇರಿದಂತೆ ಹಲವು ಸಂಸ್ಥೆಗಳಿಗೆ ಒಟ್ಟು ₹44.38 ಲಕ್ಷ ರೂಪಾಯಿ ವಂಚಿಸಿರುವ ಬಗ್ಗೆ ದೂರು ದಾಖಲಾಗಿದೆ. ಮಂಗಳೂರಿನ ಮಿಷನ್ ಸ್ಟ್ರೀಟ್‌ನಲ್ಲಿ ‘ಗ್ಲೋಬಲ್ ಐಟಿ ವರ್ಲ್ಡ್’ ಎಂಬ ಹೆಸರಿನ ಅಂಗಡಿ ತೆರೆದಿದ್ದ ಅಮಿತ್ ಮತ್ತು ಇಮ್ತಿಯಾಜ್ …
Read More »
BigTv News
March 28, 2026
Breaking News
ಹುಣಸೂರು: 2 ಪ್ರತ್ಯೇಕ ಸ್ಥಳಗಳಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಇಬ್ಬರು ಯುವಕರನ್ನು ನಗರ ಠಾಣೆ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ. ಹುಣಸೂರು-ರತ್ನಪುರಿ ರಸ್ತೆಯ ಸಲೀಂ ಪ್ಯಾಲೆಸ್ ಎದುರಿನ ಟೀ ಅಂಗಡಿ ಬಳಿ ಹಾಗೂ ಶಬ್ಬೀರ್ ನಗರದ ರಜಾಕ್ ಮೊಹಲ್ಲಾದ ಶಾದಿ ಮಹಲ್ ಬಳಿ ಯುವಕರು ಗಾಂಜಾ ಸೇವಿಸುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಡಿವೈಎಸ್‌ಪಿ ರವಿ ಮತ್ತು ಇನ್ಸ್ ಪೆಕ್ಟರ್ ಸಂತೋಷ್ ಕಶ್ಯಪ್ ಮಾರ್ಗದರ್ಶನದಲ್ಲಿ ಎಸ್.ಐ.ತಾಜುದ್ದೀನ್ ಟಿ.ಎಂ. ನೇತೃತ್ವದ …
Read More »
BigTv News
March 28, 2026
Breaking News
ಕುಂದಾಪುರ: ಕಾರು ಹಾಗೂ ಕ್ಯಾಂಟರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಇಬ್ಬರು ಮೃತಪಟ್ಟು ನಾಲ್ವರು ಗಾಯಗೊಂಡ ಘಟನೆ ನಾವುಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಸಂಜೆ ನಡೆದಿದೆ.ಮಮತಾ (36), ಅವರ ಪುತ್ರಿ ದೃತಿಕಾ (14) ಮೃತರು. ಮಮತಾ ಅವರ ಪತಿ ನೆಲಮಂಗಲ ನಿವಾಸಿ ರಾಘು, ಪುತ್ರಿ ಜಾಹ್ನವಿ, ಕಾರಿನಲ್ಲಿದ್ದ ಚಾರ್ವಿ, ಕಿರಣ್ ಅವರಿಗೆ ಗಾಯಗಳಾಗಿದೆ. ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇವರೆಲ್ಲರೂ ಕಾರಿನಲ್ಲಿ ಬೆಂಗಳೂರಿನಿಂದ ಉಡುಪಿಗೆ ಆಗಮಿಸಿ …
Read More »
BigTv News
March 28, 2026
Breaking News
ಬೆಂಗಳೂರು: ಹಾಡಹಗಲೇ ಆಟೋದಲ್ಲಿ ಬಂದ ದುಷ್ಕರ್ಮಿಗಳ ಗುಂಪು ಯುವಕನೊಬ್ಬನನ್ನು ಕಿಡ್ನ್ಯಾಪ್ ಮಾಡಲು ಯತ್ನಿಸಿರುವ ಘಟನೆ ನಡೆದಿದೆ. ಬೆಂಗಳೂರಿನ ಬ್ಯಾಡರಹಳ್ಳಿಯ ನಾಗರಹೊಳೆ ಸರ್ಕಲ್ ನಲ್ಲಿ ಈ ಘಟನೆ ನಡೆದಿದೆ. ನಟರಾಜ್ ಅಲಿಯಾಸ್ ನಟ ಎಂಬಾತನನ್ನು ಕಿಡ್ನ್ಯಾಪ್ ಮಾಡಲು ಯತ್ನಿಸಿದ್ದ ಗ್ಯಾಂಗ್ ಆತನ ಮೇಲೆ ಹಲ್ಲೆಯನ್ನೂ ನಡೆಸಿದೆ. ನಟರಾಜ್ ಜೊತೆ ಟೀ ಕುಡಿಯುತ್ತ ನಿಂತಿದ್ದ ಶರತ್ ಎಂಬಾತನನ್ನು ನಟರಾಜ್ ಎಂದು ಭಾವಿಸಿ ಆತನನ್ನು ಕಿಡ್ನ್ಯಾಪ್ ಮಾಡಲು ಯತ್ನಿಸಿದ್ದಾರೆ. ಬಳಿಕ ನಟರಾಜ್ ತಾನಲ್ಲ ಎಂದು …
Read More »
BigTv News
March 28, 2026
Breaking News
ಉಡುಪಿ: ಜಿಲ್ಲೆಯ ಇಬ್ಬರು ಆರೋಪಿಗಳಿಗೆ ಗಡೀಪಾರು ಆದೇಶ ಹೊರಡಿಸಲಾಗಿದೆ. ಶಿರ್ವ ಪೊಲೀಸ್ ಠಾಣೆ ವ್ಯಾಪ್ತಿಯ ಮಹಮ್ಮದ್ ನೌಫಿಲ್ ಹಾಗೂ ಮಲ್ಪೆ ಪೊಲೀಸ್ ಠಾಣೆ ವ್ಯಾಪ್ತಿಯ ಸುಹಾನ್ ಪೂಜಾರಿ ವಿರುದ್ಧ ವಿಶೇಷ ಕಾರ್ಯಾಂಗ ದಂಡಾಧಿಕಾರಿ ಹಾಗೂ ಪೊಲೀಸ್ ಅಧೀಕ್ಷಕರು ಮಾ.26ರಂದು ಗಡೀಪಾರು ಆದೇಶ ಹೊರಡಿಸಿದ್ದಾರೆ. ಈ ಪೈಕಿ ಮಹಮ್ಮದ್ ನೌಫಿಲ್ ಮೇಲೆ 5 ಪ್ರಕರಣಗಳು ದಾಖಲಾಗಿದ್ದು, ಶಿರ್ವ ಠಾಣೆಯಲ್ಲಿ ರೌಡಿ ಶೀಟ್ ತೆರೆಯಲಾಗಿದೆ. ಸುಹಾನ್ ಪೂಜಾರಿ ವಿರುದ್ಧ 4 ಪ್ರಕರಣಗಳು ದಾಖಲಾಗಿವೆ. …
Read More »