Breaking News

Breaking News

ಪ್ರಿ ವೆಡ್ಡಿಂಗ್ ಫೋಟೋ ಶೂಟ್ ವೇಳೆ ಹಲ್ಲೆ ಕೇಸ್: 7 ಜನ ಅರೆಸ್ಟ್

ಹಾಸನ: ಸಕಲೇಶಪುರ ತಾಲೂಕಿನ ಬೆಟ್ಟದ ಬೈರವೇಶ್ವರ ದೇವಾಲಯ ಆವರಣದಲ್ಲಿ ಪ್ರಿ ವೆಡ್ಡಿಂಗ್ ಫೋಟೋಶೂಟ್ ವೇಳೆ ಛಾಯಾಗ್ರಹಕರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇರೆಗೆ ಮೂಡಿಗೆರೆ ತಾಲೂಕಿನ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.ಅಭಿ, ಪ್ರಶಾಂತ್, ರಕ್ಷ್, ಅರವಿಂದ್, ಉಚಿತ್, ಪ್ರಜ್ವಲ್, ನಿಶಾಂತ್ ಬಂಧಿತ ಆರೋಪಿಗಳಾಗಿದ್ದಾರೆ. ಹಾಸನ ಮತ್ತು ಬೆಂಗಳೂರಿನ ಛಾಯಾಗ್ರಾಹಕರಾದ ನವಿ ಹಾಗೂ ನಂದನ್ ಅವರು ದೇವಾಲಯ ಆವರಣದಲ್ಲಿ ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮಾಡುವ ಆರೋಪಿತ ಭಕ್ತರ ನಡುವೆ ಮಾತಿನ …

Read More »

ಜ್ವರಕ್ಕೆ ಇಂಜೆಕ್ಷನ್; ನಕಲಿ ವೈದ್ಯನ ಎಡವಟ್ಟಿಗೆ 9ನೇ ತರಗತಿ ಬಾಲಕಿ ಸಾವು!

ರಾಯಚೂರು ಜಿಲ್ಲೆಯಲ್ಲಿ ಜ್ವರಕ್ಕೆ ಚಿಕಿತ್ಸೆ ಪಡೆದ 13 ವರ್ಷದ ಬಾಲಕಿ ಸಿಂಧೂ ಇಂಜೆಕ್ಷನ್ ಪಡೆದ ನಂತರ ಮೃತಪಟ್ಟಿದ್ದಾಳೆ. ನಕಲಿ ವೈದ್ಯ ಉತ್ತಮ ಕುಮಾರ್ ಸರ್ಕಾರ್ ನೀಡಿದ ಚಿಕಿತ್ಸೆಯೇ ಸಾವಿಗೆ ಕಾರಣ ಎಂದು ಪೋಷಕರು ಆರೋಪಿಸಿದ್ದು, ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. 13 ವರ್ಷದ ಬಾಲಕಿಗೆ ವೈದ್ಯ ನೀಡಿದ ಇಂಜೆಕ್ಷನ್ ಕಾರಣ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಬಾಲಕಿಯ ಪೋಷಕರು ಉತ್ತಮ ಕುಮಾರ್ ಸರ್ಕಾರ್ ಎಂಬಾತ ನಕಲಿ ವೈದ್ಯ ಎಂದು ಆರೋಪ …

Read More »

ಅಕ್ರಮ ಕೋಳಿ ಅಂಕ: ಧರ್ಮಸ್ಥಳ ಪೊಲೀಸರ ದಾಳಿ

ಬೆಳ್ತಂಗಡಿ: ಕಳೆಂಜ ಗ್ರಾಮದ ಮುರದಮೇಲು ಎಂಬಲ್ಲಿ ಕೋಳಿ ಅಂಕ ನಡೆಯುತ್ತಿದ್ದ ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ದಾಳಿ ನಡೆಸಿ ನಾಲ್ವರನ್ನು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಳೆಂಜದ ಮುರದಮೇಲು ಎಂಬಲ್ಲಿ ಶುಕ್ರವಾರ ಬೆಳಿಗ್ಗೆ ಕೋಳಿ ಅಂಕ ನಡೆಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಸಮರ್ಥ ಆರ್. ಗಾಣಿಗೇರ ನೇತೃತ್ವದ ಎಎಸ್‌ಐ ಪೌಲೋಸ್ ತಂಡದ ಸಿಬಂದಿ ದಾಳಿ ನಡೆಸಿ, ಪ್ರಶಾಂತ್, ಶಶಿಕುಮಾರ್, ಹೊನ್ನಪ್ಪ ಗೌಡ, ಜನಾರ್ದನ …

Read More »

ಸ್ಕೂಟರ್ ವೀಲಿಂಗ್ ವಿಡಿಯೋ ವೈರಲ್ : ಕೇಸು ದಾಖಲು

ಬೈಂದೂರು – ಕುಂದಾಪುರ ರಾಷ್ಟ್ರೀಯ ಹೆದ್ದಾರಿಯ ಹೆಮ್ಮಾಡಿ ಸಮೀಪ ಸ್ಕೂಟರ್ ನ್ನು ಸವಾರ ವೀಲಿಂಗ್ ಮಾಡಿದ ವಿಡಿಯೋ ವೈರಲ್ ಆಗಿದ್ದು, ಅದನ್ನು ಪರಿಶೀಲಿಸಿ, ಕುಂದಾಪುರ ಸಂಚಾರ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ. ಮಾ.20ರಂದು ಸ್ಕೂಟರ್ ಅನ್ನು ಸವಾರ ವೀಲಿಂಗ್ ಮಾಡುತ್ತಾ, ಹೆಲ್ಮೆಟ್ ಧರಿಸದೇ, ಸಂಚಾರ ನಿಯಮ ಉಲ್ಲಂಘಿಸಿ, ಸಾರ್ವಜನಿಕ ರಸ್ತೆಯಲ್ಲಿ ದುಡುಕಿನಿಂದ ಮತ್ತು ಅಪಾಯಕಾರಿ ರೀತಿಯಲ್ಲಿ ವಾಹನ ಚಲಾಯಿಸಿ ಮಾನವ ಜೀವಕ್ಕೆ ಹಾಗೂ ಇತರರ ಸ್ವತ್ತಿಗೆ ಹಾನಿ ಉಂಟು ಮಾಡುವ ರೀತಿಯಲ್ಲಿ …

Read More »

ಹೋಳಿ ಸಂಭ್ರಮದ ವೇಳೆ ಮಾರಕಾಸ್ತ್ರ ಹಿಡಿದು ನೃತ್ಯ : ಐವರ ವಿರುದ್ಧ ಪ್ರಕರಣ ದಾಖಲು

ಕನಕಗಿರಿ : ಯುಗಾದಿ ಹಬ್ಬದ ಮರುದಿನ ಹೋಳಿ (ಬಣ್ಣದಾಟ) ಆಚರಣೆಯ ವೇಳೆ ಸಮೀಪದ ನವಲಿ ತಾಂಡದ ಯುವಕರು ಕಬ್ಬಿಣದ ಮಚ್ಚು ಹಿಡಿದು ನೃತ್ಯ ಮಾಡಿದ ಘಟನೆ ಬೆಳಕಿಗೆ ಬಂದಿದ್ದು, ಈ ನೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಕೈಯಲ್ಲಿ ಮಾರಕಾಸ್ತ್ರ ಹಿಡಿದು ನೃತ್ಯ ಮಾಡುತ್ತಿದ್ದ ಶಿವಕುಮಾರ ಅಡವಿಬಾವಿ, ವೆಂಕಟೇಶ ಹಿರೇಮನಿ, ಬಾಲಾಜಿ ದಾರಾಮೀಂಡ್ ಹಾಗೂ ಖಾಲಿ ಕೈಗಳಿಂದ ನೃತ್ಯ ಮಾಡುತ್ತಿದ್ದ ವೆಂಕಟೇಶ ಮತ್ತು ರಮೇಶ ಪೂಜಾರ ವಿರುದ್ಧ ಶಸ್ತ್ರಾಸ್ತ್ರ …

Read More »

ಮದ್ದೂರು: ಶಾಲಾ ಬಸ್‌ ಹಾಗೂ ಖಾಸಗಿ ಬಸ್ ನಡುವೆ ಅಪಘಾತ; 12 ವಿದ್ಯಾರ್ಥಿಗಳಿಗೆ ಗಾಯ

ಮಂಡ್ಯ: ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿ ಗ್ರಾಮದ ಬಳಿ ಶಾಲಾ ಬಸ್‌ ಹಾಗೂ ಖಾಸಗಿ ಬಸ್‌ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಸುಮಾರು 12 ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಶುಕ್ರವಾರ ನಡೆದಿದೆ. ಬೆಳಿಗ್ಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಸೋಮನಹಳ್ಳಿ ಗ್ರಾಮದ ಬಳಿ ಖಾಸಗಿ ಬಸ್‌ ಹಾಗೂ ಶಾಲಾ ಬಸ್‌ ನಡುವೆ ಈ ಅವಘಡ ಸಂಭವಿಸಿದೆ. ಅದೃಷ್ಟವಶಾತ್‌ ಬಸ್ಸಿನಲ್ಲಿದ್ದ ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡ ವಿದ್ಯಾರ್ಥಿಗಳನ್ನು ತಕ್ಷಣವೇ …

Read More »

ಮೈಸೂರಲ್ಲಿ ಪೊಲೀಸರ ಭರ್ಜರಿ ಕಾರ್ಯಾಚರಣೆ : 25ಕೆಜಿಗೂ ಅಧಿಕ ಸಿಂಥೆಟಿಕ್ ಡ್ರಗ್ಸ್ ಜಪ್ತಿ, ಓರ್ವ ಅರೆಸ್ಟ್!

ಮೈಸೂರು ಜಿಲ್ಲೆಯಲ್ಲಿ 25 ಕೆಜಿಗು ಅಧಿಕ ಸಿಂಥೆಟಿಕ್ ಡ್ರಗ್ಸ್ ಪತ್ತೆಯಾಗಿದೆ. ದಾಸನಪುರ ರತ್ನಪುರಿ ಮಾರ್ಗ ಮಧ್ಯದ ತೋಟದಲ್ಲಿ 25 ಕೆಜಿಗೆ ಅಧಿಕ ಸಿಂಥೆಟಿಕ್ ಡ್ರಗ್ಸ್ ಪತ್ತೆಯಾಗಿದೆ. ಹುಣಸೂರು ತಾಲೂಕಿನ ದಾಸನಪುರ ಮತ್ತು ರತ್ನಪುರಿ ಮಾರ್ಗ ಮಧ್ಯೆ ಇರುವ ತೋಟದಲ್ಲಿ ಡ್ರಗ್ಸ್ ಪತ್ತೆಯಾಗಿದೆ. ಇರ್ಫಾನ್ ಎಂಬುವವರ ತೋಟದ ಮೇಲೆ ಪೊಲೀಸರು ದಾಳಿ ಮಾಡಿದ್ದು, ದಾಳಿಯ ವೇಳೆ 25 ಕೆಜಿ ಸಿಂಥೆಟಿಕ್ ಡ್ರಗ್ಸ್ ಪತ್ತೆಯಾಗಿದ್ದು, ಪೊಲೀಸರು ಅದನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಖಚಿತ ಮಾಹಿತಿಯ …

Read More »

ಮುಸ್ಲಿಮ್ ವಿದ್ಯಾರ್ಥಿಗೆ ‘ಟೆರರಿಸ್ಟ್’ ಎಂದು ಕ್ಲಾಸ್​ನಲ್ಲೇ ಅವಮಾನಿಸಿದ ಪ್ರೊಫೆಸರ್!

ಬೆಂಗಳೂರು: ಪಿಇಎಸ್ ವಿಶ್ವವಿದ್ಯಾಲಯನಲ್ಲಿ ಪ್ರೊಫೆಸರ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಬನಶಂಕರಿ ರಿಂಗ್ ರೋಡ್‌ನಲ್ಲಿರುವ ಕ್ಯಾಂಪಸ್‌ನಲ್ಲಿ ಪಾಠ ಮಾಡುತ್ತಿದ್ದ ವೇಳೆ ಕೋಪಗೊಂಡ ಪ್ರೊಫೆಸರ್ ಡಾ.ಮೂರಳಿಧರ ದೇಶಪಾಂಡೆ ತರಗತಿಯಲ್ಲಿದ್ದ ಮುಸ್ಲಿಂ ವಿದ್ಯಾರ್ಥಿಯನ್ನು ‘ಭಯೋತ್ಪಾದಕ’ ಎಂದು ಕರೆದು ಅವಮಾನಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಘಟನೆ ಎರಡು ದಿನಗಳ ಹಿಂದೆ ನಡೆದಿದೆ. ಪಾಠದ ಮಧ್ಯದಲ್ಲಿ ಮಕ್ಕಳ ಗಲಾಟೆಯಿಂದಲೋ ಏನೋ ದೇಶಪಾಂಡೆ ಗರಂ ಆಗಿದ್ದು, ನೀವೆಲ್ಲಾ ಭಯೋತ್ಪಾದಕರು ಎಂದೆಲ್ಲಾ ನಿಂದಿಸಿದ್ದಾರೆ. ಇದೇ ವೇಳೆ ತರಗತಿಯಲ್ಲಿ ಕುಳಿತಿದ್ದ …

Read More »

ಕೆಲಸಕ್ಕಿದ್ದ ಮನೆಯಲ್ಲೇ ನಗದು, ಚಿನ್ನಕದ್ದು ಸಿಕ್ಕಿಬಿದ್ದ ಮಹಿಳೆಯ ಬಂಧನ

ಬೆಂಗಳೂರು: ಕೆಲಸ ಮಾಡುತ್ತಿದ್ದ ಮನೆಯಲ್ಲಿಯೇ ಕಳ್ಳತನ ಮಾಡುತ್ತಿದ್ದ ಮನೆ ಕೆಲಸದಾಕೆ ಜೆ.ಪಿ.ನಗರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾಳೆ. ಬಂಧಿತ ಆರೋಪಿತೆಯಿಂದ 2.25 ಲಕ್ಷ ರೂ.ನಗದು, 22.5 ಗ್ರಾಂ ಚಿನ್ನಾಭರಣ ಸೇರಿ ಒಟ್ಟು 5.13 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಈಕೆ ಜೆ.ಪಿ.ನಗರ 2ನೇ ಹಂತದ 17ನೇ ಮುಖ್ಯ ರಸ್ತೆ ನಿವಾಸಿಯೊಬ್ಬರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದಳು. ಕೊಠಡಿಯ ಬೀರುವಿನಲ್ಲಿದ್ದ 3.20 ಲಕ್ಷ ರೂ.ನಗದು ಹಾಗೂ 39 ಗ್ರಾಂ ಚಿನ್ನಾಭರಣಗಳನ್ನು …

Read More »

ಮಹಿಳೆಯ ಮಾಂಗಲ್ಯ ಕಿತ್ತು ಓಡಿಹೋದ ಖದೀಮರು

ನೆಲಮಂಗಲ:ಬಂಗಾರದ ರೇಟ್‌ ಹೆಚ್ಚಾಗಿದೆ. ಇದೀಗ ಕಳ್ಳರು ಹಣವನ್ನು ಬಿಟ್ಟು ಬಂಗಾರಕ್ಕೆ ಸ್ಕೆಚ್‌ ಹಾಕಿದ್ದಾರೆ, ಒಂದು ಕಿವಿ ಓಲೆಯನ್ನೂ ಬಿಡದೇ ಕದಿಯುತ್ತಿದ್ದಾರೆ. ಬೆಂಗಳೂರಿನ ನೆಲಮಂಗಲದಲ್ಲಿ ಹಾಡಹಗಲೇ ಮಹಿಳೆಯ ಮಾಂಗಲ್ಯ ಕಿತ್ತು ಪರಾರಿಯಾಗಿದ್ದಾರೆ. ಗುಡೇಮಾರನಹಳ್ಳಿ ಹ್ಯಾಂಡ್‌ ಪೋಸ್ಟ್‌ ಬಳಿ ಬೇಕರಿ ಮುಂದೆ ನಿಂತಿದ್ದ ಮಹಿಳೆಯ ಸರವನ್ನು ಕಸಿದು ಪರಾರಿಯಾಗಿದ್ದಾರೆ. ಜನರಿರುವಾಗ, ಹಾಡಹಗಲೇ ಬೇಕರಿ ಮುಂದೆ ನಿಂತಿದ್ದ ಅಂಬಿಕಾ ಸರವನ್ನು ಕದ್ದು ಓಡಿದ್ದಾರೆ. ಅದೇ ಬೇಕರಿಯಲ್ಲಿ ಜ್ಯೂಸ್‌ ಕುಡಿಯುವವರಂತೆ ನಿಂತು ನಟಿಸಿ ಸರ ಕದ್ದಿದ್ದಾರೆ. …

Read More »