ಕನಕಗಿರಿ : ಯುಗಾದಿ ಹಬ್ಬದ ಮರುದಿನ ಹೋಳಿ (ಬಣ್ಣದಾಟ) ಆಚರಣೆಯ ವೇಳೆ ಸಮೀಪದ ನವಲಿ ತಾಂಡದ ಯುವಕರು ಕಬ್ಬಿಣದ ಮಚ್ಚು ಹಿಡಿದು ನೃತ್ಯ ಮಾಡಿದ ಘಟನೆ ಬೆಳಕಿಗೆ ಬಂದಿದ್ದು, ಈ ನೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೈಯಲ್ಲಿ ಮಾರಕಾಸ್ತ್ರ ಹಿಡಿದು ನೃತ್ಯ ಮಾಡುತ್ತಿದ್ದ ಶಿವಕುಮಾರ ಅಡವಿಬಾವಿ, ವೆಂಕಟೇಶ ಹಿರೇಮನಿ, ಬಾಲಾಜಿ ದಾರಾಮೀಂಡ್ ಹಾಗೂ ಖಾಲಿ ಕೈಗಳಿಂದ ನೃತ್ಯ ಮಾಡುತ್ತಿದ್ದ ವೆಂಕಟೇಶ ಮತ್ತು ರಮೇಶ ಪೂಜಾರ ವಿರುದ್ಧ ಶಸ್ತ್ರಾಸ್ತ್ರ ಕಾಯಿದೆ ಉಲ್ಲಂಘನೆ ಆರೋಪದಡಿ ಕಾನ್‌ಸ್ಟೇಬಲ್ ಷರೀಫ್ ಅವರು ದೂರು ನೀಡಿದ್ದು, ಕನಕಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

