Breaking News

Breaking News

ಸಾರ್ವಜನಿಕ ಸ್ಥಳದಲ್ಲಿ ಗಲಾಟೆ: 8 ಮಂದಿ ವಶಕ್ಕೆ

ಕೋಟ: ಬಿಲ್ಲಾಡಿ ಗ್ರಾಮದ ಅರ್ಭಕದಾರಕೇಶ್ವರ ದೇವಸ್ಥಾನದ ಎದುರು ಮಾ.25ರಂದು ಬೆಳಗ್ಗೆ ಪರಸ್ಪರ ಮೈ ಕೈ ಮೇಲಾಯಿಸಿ ಗಲಾಟೆ ಮಾಡುತ್ತಿದ್ದ ಎಂಟು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗಣೇಶ ಶೆಟ್ಟಿ , ಭಾಸ್ಕರ ಹೆಗ್ಡೆ , ಚಂದ್ರ ಶೆಟ್ಟಿ, ಅಶೋಕ ಶೆಟ್ಟಿ, ಶಂಕರ ಶೆಟ್ಟಿ, ಅಭಿಷೇಕ್, ಚಂದ್ರ ಮಾಸ್ಟರ್, ಸಂದೇಶ ಎಂಬವರು ಸಾರ್ವಜನಿಕ ಸ್ಥಳದಲ್ಲಿ ಮೈ, ಕೈ ಮಿಲಾಯಿಸಿ ಗಲಾಟೆ ಮಾಡಿ ಸಾರ್ವಜನಿಕ ನೆಮ್ಮದಿಗೆ ಭಂಗವನ್ನುಂಟು ಮಾಡಿದ್ದಾರೆಂದು ದೂರಲಾಗಿದೆ.

Read More »

ಮಂಗಳೂರು ಸಿಟಿ ಪೊಲೀಸ್ ಹೆಸರಿನಲ್ಲಿ ವೆಬ್‌ಸೈಟ್ ಸೃಷ್ಟಿ: ಪ್ರಕರಣ ದಾಖಲು

ಮಂಗಳೂರು: MULTI SCATTER PRAGMATIC ಮೂಲಕ ಆನ್‌ಲೈನ್ ಗ್ಯಾಂಬ್ಲಿಂಗ್ ಗೇಮ್ ನೆಪದಲ್ಲಿ ಸಾರ್ವಜನಿಕರು ಮತ್ತು ಹಿರಿಯ ನಾಗರಿಕರನ್ನು ಸಂಪರ್ಕಿಸಿ ಸೈಬರ್ ವಂಚನೆ ಎಸಗುವ ಉದ್ದೇಶದಿಂದ ಮಂಗಳೂರು ಸಿಟಿ ಪೊಲೀಸ್ ಎಂಬ ಹೆಸರಿನಲ್ಲಿ ನಕಲಿ ವೆಬ್‌ಸೈಟ್ ತೆರೆದ ಕೃತ್ಯಕ್ಕೆ ಸಂಬಂಧಿಸಿ ಮಂಗಳೂರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾ.25ರ ಸಂಜೆ 5ಕ್ಕೆ ತಾನು ಗೂಗಲ್ ಪರಿಶೀಲಿಸುತ್ತಿರುವಾಗ ಯಾರೋ ಅಪರಿಚಿತರು ಮಂಗಳೂರು ಸಿಟಿ ಪೊಲೀಸ್ ಎಂಬ ವೆಬ್‌ಸೈಟ್ ತೆರೆದಿರುವುದು ಕಂಡು …

Read More »

ಪಟ್ಟಣ ಠಾಣೆಯ ಕ್ಷಿಪ್ರ ಕಾರ್ಯಚಾರಣೆ; ಗಾಂಜಾ ವ್ಯಸನಿ ಬಂಧನ

ಹುಣಸೂರು: ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ರೆಹಮತ್ ಮೊಹಲ್ಲ ಮೈದಾನದ ಬಳಿಯಿರುವ ಖಾಲಿ ಜಾಗದ ಬಳಿ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಒಬ್ಬ ಗಾಂಜಾ ಸೇವಿಸುತ್ತಿದ್ದ ಹುಣಸೂರು ಟೌನ್ ನಿವಾಸಿ ಯುವಕನೊಬ್ಬನನ್ನು ಬಂಧಿಸಿದ ಘಟನೆ ಮಾ.26ರ ಗುರುವಾರ ನಡೆದಿದೆ. ಹುಣಸೂರು ಟೌನ್ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಸಂತೋಷ್ ಕಶ್ಯಪ್ ಆರ್.ಅವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ. ಮಹಾಲಿಂಗಯ್ಯ ಆರ್. ಹಾಗೂ ಹೆಚ್.ಸಿ. 130 ಅರುಣ್. ಹೆಚ್.ಎನ್., ಹೆಚ್.ಸಿ. 133 ಮಂಜುನಾಥ್ …

Read More »

ಕಾರು-ಮಿನಿ ಬಸ್‌ ನಡುವೆ ಅಪಘಾತ; ಮಹಿಳೆ ಸ್ಥಳದಲ್ಲೇ ಮೃತ್ಯು

ವಿಜಯಪುರ : ಮಿನಿ ಬಸ್‌ ಮತ್ತು ಮಾರುತಿ ಸುಜುಕಿ ಎರಟಿಗಾ ವಾಹನದ ಮಧ್ಯೆ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಓರ್ವ ಮಹಿಳೆ ಮೃತಪಟ್ಟಿರುವ ಘಟನೆ ಗುರುವಾರ ಮುಂಜಾನೆ ನಡೆದಿದೆ. ಮುದ್ದೇಬಿಹಾಳ ನಿಡಗುಂದಿ ರಸ್ತೆಯಲ್ಲಿ ಬರುವ ಮಾದಿನಾಳ ಕ್ರಾಸ್ ಹತ್ತಿರ ಈ ಅಪಘಾತ ಸಂಭವಿಸಿದೆ. ಬಸ್‌ನಲ್ಲಿದ್ದ ಕಸ್ತೂರಿಬಾಯಿ ಕೃಷ್ಣ ರಾಠೋಡ(50) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಂಜಯ ಜೈನ್ ಸುರಪುರ, ಗುರಪ್ಪ ಚೌವ್ಹಾನ್ ಚಲಮಿತಾಂಡ ಎಂಬವರು ಗಂಭೀರ ಗಾಯಗೊಂಡಿದ್ದು, ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ …

Read More »

ಮಾರಣಾಂತಿಕ ಕಾಯಿಲೆಯಿಂದ 15 ಹಸು ಸಾವು: ಸಾಲಬಾಧೆಯಿಂದ ದುಡುಕಿನ ನಿರ್ಧಾರ ಕೈಗೊಂಡ ರೈತ ಆತ್ಮಹತ್ಯೆ

ತುಮಕೂರು: ಹೈನುಗಾರಿಕೆಯಲ್ಲಿ ನಷ್ಟ ಉಂಟಾಗಿ ವಿಪರೀತ ಸಾಲ ಬಾಧೆಯಿಂದ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊರಟಗೆರೆ ತಾಲೂಕಿನ ಜೋನಿಗರಹಳ್ಳಿಯಲ್ಲಿ ನಡೆದಿದೆ. ರಮೇಶ್(49) ಆತ್ಮಹತ್ಯೆ ಮಾಡಿಕೊಂಡವರು. ಕೃಷಿಯೊಂದಿಗೆ ಹೈನುಗಾರಿಕೆ ಮಾಡಲು ಮೈಕ್ರೋ ಫೈನಾನ್ಸ್ ಸೇರಿದಂತೆ ವಿವಿಧೆಡೆ ಸುಮಾರು 8 ಲಕ್ಷ ರೂಪಾಯಿ ಸಾಲ ಮಾಡಿದ್ದರು. ಮೂರ್ನಾಲ್ಕು ವರ್ಷಗಳಿಂದ ಪತ್ನಿ ಹಾಗೂ ತಮ್ಮ ಹೆಸರಲ್ಲಿ ಅವರು ಸಾಲ ಪಡೆದು 20 ಹಸುಗಳನ್ನು ಸಾಕುತ್ತಿದ್ದರು. ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದ ರಮೇಶ್ ಅವರಿಗೆ ಸೇರಿದ 15 ಹಸುಗಳು …

Read More »

ತಾಯಿಯ ಅಕ್ರಮ ಸಂಬಂಧದ ಬಗ್ಗೆ ಪ್ರಶ್ನಿಸಿದ್ದಕ್ಕೆ ಡಬಲ್ ಮರ್ಡರ್ ಮಾಡಿದ ಮಗ, ಏನಿದು ಪ್ರಕರಣ

ಬೆಂಗಳೂರು: ಅಪ್ರಾಪ್ತನೊಬ್ಬ ಡಬಲ್ ಮರ್ಡರ್ ಮಾಡಿರುವ ಆಘಾತಕಾರಿ ರಾಜ್ಯ ರಾಜದಾನಿ ಬೆಂಗಳೂರಿನ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ. ಇನ್ನೂ ಅಪ್ರಾಪ್ತನಿಂದ ಕೊಲೆಯಾದವರನ್ನು ಮಯುನಾ(36) ಹಾಗೂ ಆಕೆಯ ಸಹೋದರ(34) ಎಂದು ಗುರುತಿಸಲಾಗಿದೆ. ಹತ್ಯೆಗೊಳಗಾದ ಯಮುನಾ ಗಂಡ ಮಲ್ಲೇಗೌಡ ಎಂಬಾತ ಆರೋಪಿ ಅಪ್ರಾಪ್ತನ ತಾಯಿ ಛಾಯಾಳೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಈ ವಿಚಾರ ಕೇಳಲೆಂದು ಯಮುನಾ ಹಾಗೂ ಸಹೋದರ ಸುದೀಪ್‌ ಛಾಯಾ ಮನೆ ಬಳಿ ಹೋಗಿದ್ದರು. ಅಕ್ರಮ ಸಂಬಂಧ ವಿಚಾರ …

Read More »

ತಲಪಾಡಿ : ಅಕ್ರಮ ಇ-ಸಿಗರೇಟ್ ಸಂಗ್ರಹ; ಆರೋಪಿ ಬಂಧನ

ಉಳ್ಳಾಲ: ತಲಪಾಡಿ ಗ್ರಾಮದ ಮೇಲಿನ ತಲಪಾಡಿ ಪ್ರದೇಶದಲ್ಲಿರುವ ಮನೆಯೊಂದರ ಮುಂಭಾಗದಲ್ಲಿ ಬಿಳಿ ಗೋಣಿ ಚೀಲದಲ್ಲಿ ಇ-ಸಿಗರೇಟ್‌ಗಳನ್ನು ಅಕ್ರಮವಾಗಿ ಸಂಗ್ರಹಿಸಿರುವ ಮಾಹಿತಿ ಮೇರೆಗೆ ಉಳ್ಳಾಲ ಠಾಣೆ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ನವಾಝ್ ಬಂಧಿತ ಆರೋಪಿ. ಉಳ್ಳಾಲ ಠಾಣೆಯ ಪೊಲೀಸ್ ಉಪನಿರೀಕ್ಷಕ ಸಿದ್ದಪ್ಪ ನರನೂರ ಅವರ ನೇತೃತ್ವದಲ್ಲಿ ಬುಧವಾರ ರಾತ್ರಿ ವೇಳೆ ದಾಳಿ ನಡೆಸಲಾಗಿದೆ. ಆರೋಪಿ ನವಾಝ್ ವಶದಲ್ಲಿದ್ದ ವಿವಿಧ ಕಂಪನಿಗಳ ನಿಷೇಧಿತ ಇ-ಸಿಗರೇಟ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸುಮಾರು 37,000 …

Read More »

ಭಾರಿ ಪ್ರಮಾಣದ ಪಡಿತರ ಅಕ್ಕಿ ವಶಕ್ಕೆ

ಕಾರವಾರ: ಭತ್ತದ ಚೀಲಗಳ ನಡುವೆ ತುಂಬಿಕೊಂಡು ಸಾಗಿಸುತ್ತಿದ್ದ ಭಾರಿ ಪ್ರಮಾಣದ ಪಡಿತ ಅಕ್ಕಿಯನ್ನು ಆಹಾರ ಇಲಾಖೆಯ ಅಧಿಕಾರಿಗಳು ಅಂಕೋಲಾದಲ್ಲಿ ವಶಕ್ಕೆ ಪಡೆದಿದ್ದು, ಅವರ ವಿರುದ್ಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಶಾಂತಿಕಾಂಬಾ ಹೆಸರಿನ ಲಾರಿಯಲ್ಲಿ ಅಂಕೋಲಾ ಬೆಳಸೆ ತಳಗದ್ದೆ ಕ್ರಾಸ್ ಬಳಿ ಸಾಗಿಸುತ್ತಿದ್ದ ಲಾರಿಯನ್ನು ಅಂಕೋಲಾ ಪ್ರಭಾರ ಆಹಾರ ನಿರೀಕ್ಷಕ ಮಂಜುನಾಥ ರೆಡ್ಡಿ ಸಿ.ಹುಚ್ಚಣ್ಣನವರ್ ತಡೆದು ವಿಚಾರಣೆ ನಡೆಸಿದಾಗ ಅಕ್ರಮ ಬಯಲಾಗಿದೆ. ಮೇಲೆ ಭತ್ತದ ಚೀಲಗಳನ್ನು ತುಂಬಿ ಒಳಗಡೆ …

Read More »

ಬೆಳಾಲು ಸೊಸೈಟಿ ವಂಚನೆ ಕೇಸ್‌: ಪರಾರಿಯಾಗಿದ್ದ ಎರಡನೇ ಆರೋಪಿ ಬಂಧನ

ಬೆಳ್ತಂಗಡಿ: ಬೆಳಾಲು ಕೃಷಿಪತ್ತಿನ ಸಹಕಾರಿ ಸಂಘದಲ್ಲಿ ನಡೆದ ಸುಮಾರು 2 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಎರಡನೇ ಆರೋಪಿಯನ್ನು ಧರ್ಮಸ್ಥಳ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಬೆಳಾಲು ನಿವಾಸಿ ಪ್ರಶಾಂತ್ ಬಿ. ಎಂದು ಗುರುತಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸದಾಶಿವ ಯಾನೆ ಸುಜಿತ್ ಅವರನ್ನು ಪೊಲೀಸರು ಬಂಧಿಸಿದ್ದರು. ಇನ್ನೊಬ್ಬ ಆರೋಪಿಯಾಗಿದ್ದ ಪ್ರಶಾಂತ್ ಕಳೆದ ಕೆಲವು ದಿನಗಳಿಂದ ಪರಾರಿಯಾಗಿದ್ದನು. ಪೊಲೀಸರ ಮಾಹಿತಿ ಪ್ರಕಾರ, ಸಹಕಾರಿ ಸಂಘದ ಸಿಬ್ಬಂದಿಗಳಾದ ಸದಾಶಿವ …

Read More »

ಕುಂದಾಪುರ: ಕುಂಭಾಶಿಯಲ್ಲಿ ರಾ.ಹೆ. ಡಿವೈಡರ್ ಏರಿ ಹೊಂಡಕ್ಕೆ ಬಿದ್ದ ಲಾರಿ; ಚಾಲಕ ಗಂಭೀರ

ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಏರಿ, ವಿರುದ್ಧ ದಿಕ್ಕಿನ ರಸ್ತೆಗೆ ನುಗ್ಗಿ ಪಕ್ಕದ ಹೊಂಡಕ್ಕೆ ಬಿದ್ದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕುಂಭಾಶಿ ಎಂಬಲ್ಲಿ ಬುಧವಾರ ತಡರಾತ್ರಿ ಸಂಭವಿಸಿದೆ. ಉಡುಪಿಯಿಂದ ಕುಂದಾಪುರ ಕಡೆಗೆ ಶಿಲೆಕಲ್ಲು ಜಲ್ಲಿ ಸಾಗಿಸುತ್ತಿದ್ದ ಲಾರಿ, ಕುಂಭಾಶಿ ತಲುಪಿದಾಗ ಹಠಾತ್ತಾಗಿ ಚಾಲಕನ ನಿಯಂತ್ರಣ ಕಳೆದುಕೊಂಡಿದೆ. ವೇಗವಾಗಿ ಬಂದ ಲಾರಿ ಡಿವೈಡರ್ ಏರಿ ರಸ್ತೆಯ ವಿರುದ್ಧ ದಿಕ್ಕಿಗೆ ಚಲಿಸಿ ಕೊನೆಗೆ ರಸ್ತೆ ಪಕ್ಕದ ಹೊಂಡಗೆ ಬಿದ್ದಿದೆ. ಅಪಘಾತದ …

Read More »