Breaking News

Breaking News

ರೆಕ್ರಿಯೇಷನ್ ಕ್ಲಬ್ ಮೇಲೆ ದಾಳಿ ; 60 ಜನರ ವಿರುದ್ಧ ಪ್ರಕರಣ

ಬಳ್ಳಾರಿಯ ಖಾಸಗಿ ರೆಕ್ರಿಯೇಷನ್ ಕ್ಲಬ್ ಇಸ್ಪೀಟ್ ಜೂಜಾಟ ಆಡುತ್ತಿದ್ದ 60 ಜನರ ವಿರುದ್ಧ ಪ್ರಕರಣ ದಾಖಲಾಗಿ, ಒಂದು ಲಕ್ಷದ 77 ಸಾವಿರ ರೂಪಾಯಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಳ್ಳಾರಿ ನಗರದ ನಟರಾಜ್ ಸಿನಿಮಾ ಮಂದಿರ ಹತ್ತಿರದ ಖಾಸಗಿ ಇಸ್ಪೇಟ್ ಕ್ಲಬ್ ಮೇಲೆ ಬ್ರೂಸ್ಪೇಟೆ ಪೊಲೀಸರು ದಾಳಿ ನಡೆಸಿ, ಘಟನೆ ಸ್ಥಳದಿಂದ ರೂ 1,77,820/- ನಗದು ಹಣ, ಇನ್ನಿತರೆಗಳನ್ನು ವಶಕ್ಕೆ ಪಡೆದಿದ್ದಾರೆ.ಬ್ರೂಸ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆದಿದೆ.

Read More »

ಪಡುಬಿದ್ರಿ: ನಕಲಿ ಬಂಗಾರ ನೀಡಿ ವಂಚಿಸಿದ್ದ ಆರೋಪಿಗಳು ಅರೆಸ್ಟ್

ಪಡುಬಿದ್ರಿ : ಮಹಿಳೆಯೊಬ್ಬರಿಗೆ ನಕಲಿ ಬಂಗಾರದ ಸರ ನೀಡಿ ಮಹಿಳೆಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಒಡವೆ ಹಾಗೂ ನಗದು ದೋಚಿದ್ದ ಪ್ರಕರಣದ ಆರೋಪಿಯನ್ನು ಪಡುಬಿದ್ರಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ತುಮಕೂರು ಜಿಲ್ಲೆಯ ಬೆಳ್ಳಾವಿ ಹೋಬಳಿಯ ಬಲ್ಲಾಪುರ ಬುಡುಗನಹಳ್ಳಿ ವಾಸಿ ಕಾವ್ಯ ಮತ್ತು ದಾವಣಗೆರೆ ಜಿಲ್ಲೆಯ ಸಂತೆಬೆನ್ನೂರು ತಾಲೂಕಿನ ವೆಂಕಟೇಶ್ ಎಂದು ಗುರುತಿಸಲಾಗಿದೆ. ಬಸ್ಸಮ್ಮ ಎಂಬ ಮಹಿಳೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅಡ್ಡಗಟ್ಟಿದ್ದ ಆರೋಪಿಗಳಾದ ಕಾವ್ಯ ಮತ್ತು ವೆಂಕಟೇಶ್, ತಮ್ಮ ಬಳಿ …

Read More »

ಲಾರಿ ಕಳವು : ಇಬ್ಬರ ಬಂಧನ

ಕುಂಬಳೆ: ಬಂದ್ಯೋಡ್‌ ಅಡ್ಕದ ಝಡ್‌ ಎಂ.ಎಸ್‌. ಫಿಶ್‌ ಸರ್ವಿಸ್‌ ಕಚೇರಿಯ ಮುಂಭಾಗದಲ್ಲಿ ನಿಲ್ಲಿಸಿದ್ದ ಲಾರಿಯನ್ನು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಕೊಡ್ಯಮ್ಮೆ ಇಚ್ಲಂಪಾಡಿ ಮುಳಿಯಡ್ಕ ನಿವಾಸಿ ಅಬ್ದುಲ್ಲ ಎ.ಪಿ(32) ಮತ್ತು ಎಡನಾಡು ಮುಕಾರಿಕಂಡದ ಮೊಹಮ್ಮದ್‌ ರಿಸ್ವಾನ್‌(27)ನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ.ಕಳವು ಮಾಡಿದ ಲಾರಿಯನ್ನು ಸೀತಾಂಗೋಳಿ ಪರಿಸರದಲ್ಲಿ ಪತ್ತೆಹಚ್ಚಲಾಗಿದೆ. ಲಾರಿ ಕಳವಾದ ಬಗ್ಗೆ ಲಾರಿ ಮಾಲಕ ಮಂಗಲ್ಪಾಡಿ ಅಡ್ಕ ಶಮೀಮ ಮಂಜಿಲ್‌ನ ಝಕರಿಯ ಎಂ. ಕುಂಬಳೆ ಪೊಲೀಸರಿಗೆ ದೂರು ನೀಡಿದ್ದರು. ಬಂಧಿತರನ್ನು …

Read More »

ಕಳ್ಳತನ ಪ್ರಕರಣದ ಆರೋಪಿಗೆ ಶಿಕ್ಷೆ

ಸುಬ್ರಹ್ಮಣ್ಯ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ 2025 ಆ.17ರಂದು ನಡೆದ ಹಾಲಿನ ಡೈರಿ ಹಾಗೂ ದಿನಸಿ ಅಂಗಡಿ ಕಳವು ಪ್ರಕರಣದ ಆರೋಪಿ ಕೇರಳ ಮೂಲದ ಸತೀಶ್‌ (45) ಎಂಬಾತನಿಗೆ ಸುಳ್ಯ ನ್ಯಾಯಾಲಯವು ಕಲಂ 331(4) ಬಿಎನ್‌ಎಸ್‌ ರಲ್ಲಿ 6 ತಿಂಗಳ ಸಾಧಾರಣ ಸಜೆ ಹಾಗೂ 500 ರೂ.ದಂಡ, ಕಲಂ 305 ಬಿಎನ್‌ಎಸ್‌ ರಲ್ಲಿ 7 ತಿಂಗಳ ಸಾಧಾರಣ ಸಜೆ ಹಾಗೂ 500 ರೂ. ದಂಡ. ದಂಡ ಪಾವತಿಸದಿದ್ದರೆ 10 ದಿನಗಳ ಸಜೆಯನ್ನು …

Read More »

ಜೂಜಾಡಲು ಪತ್ನಿ ಹಣ ನೀಡಲಿಲ್ಲವೆಂದು ಪತಿ ಆತ್ಮಹತ್ಯೆ

ಚಿಕ್ಕಬಳ್ಳಾಪುರ: ಜೂಜಾಡಲು ಪತ್ನಿ ಹಣ ಕೊಡದ ಹಿನ್ನೆಲೆಯಲ್ಲಿ ಬೇಸರಗೊಂಡ ಪತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇಲ್ಲಿನ ಎಚ್​ಎಸ್​ ಗಾರ್ಡ್​ನ್​ನಲ್ಲಿರುವ ಕಿಶೋರ್​ (38) ಮೃತ. ಜೂಜಾಡಲು ಹಣ ಕೇಳಿದಾಗ ಪತ್ನಿ ನಿರಾಕರಿಸಿದ್ದಾಳೆ. ಈ ವೇಳೆ ಕಿಶೋರ್​ ಹಣ ಕೊಡದಿದ್ದರೆ ಆತ್ಮಹತ್ಯೆ ಶರಣಾಗುವುದಾಗಿ ಬೆದರಿಸಿದ್ದಾನೆ. ಆದರೆ, ಅದಕ್ಕೂ ಜಗ್ಗದ ಹಿನ್ನೆಲೆಯಲ್ಲಿ ಬೇಸರಗೊಂಡು ವಿಷ ಸೇವಿಸಿದ್ದಾನೆ. ಇಲ್ಲಿನ ಜಿಲ್ಲಾಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More »

ಮುಳಬಾಗಿಲಲ್ಲಿ ದಾರುಣ ದುರಂತ: ಮನೆ ಕುಸಿದು 15ರ ಬಾಲಕಿ ಸಾವು, ನಾಲ್ವರಿಗೆ ಗಂಭೀರ ಗಾಯ

ಕೋಲಾರ: ಜಿಲ್ಲೆಯಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಮುಳಬಾಗಿಲು ನಗರದಲ್ಲಿ ಹಳೆಯ ಮನೆ ಏಕಾಏಕಿ ಕುಸಿದು ಬಿದ್ದ ಪರಿಣಾಮ 15 ವರ್ಷದ ಬಾಲಕಿ ದುರ್ಘಟನೆಯಲ್ಲಿ ಮೃತಪಟ್ಟಿದ್ದಾಳೆ. ಮೃತಳನ್ನು ವಹಿನೂರ್ ಎಂದು ಗುರುತಿಸಲಾಗಿದ್ದು, ಘಟನೆಯ ತೀವ್ರತೆ ಸ್ಥಳೀಯರನ್ನು ಬೆಚ್ಚಿಬೀಳುವಂತೆ ಮಾಡಿದೆ. ಅವಘಡದಲ್ಲಿ ಸುಹೇಲ್, ಕೌಸರ್, ಅಯಾಜ್ ಹಾಗೂ ಅಬ್ಜರ್ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣ ಕೋಲಾರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮನೆಯ ದುರಸ್ಥಿತಿ ಈ ದುರಂತಕ್ಕೆ ಕಾರಣ ಎನ್ನಲಾಗುತ್ತಿದ್ದು, ಸ್ಥಳೀಯರಲ್ಲಿ …

Read More »

ಗಾಂಜಾ ಸಂಗ್ರಹಿಸಿಟ್ಟಿದ್ದ ಆರೋಪಿಯ ಬಂಧನ

ರಾಯಚೂರು: ನಗರದ ತಿಮ್ಮಾಪುರಪೇಟೆ ಬಡಾವಣೆಯ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸಂಗ್ರಹಿಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ತಿಮ್ಮಾಪುರಪೇಟೆ ಬಡಾವಣೆಯ ಕೃಷ್ಣಾ ಆದೆಪ್ಪ ಎಂದು ಗುರುತಿಸಲಾಗಿದೆ. ಈ ಕುರಿತು ನೇತಾಜಿನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Read More »

ಬಾಗಲಕೋಟೆಯಲ್ಲಿ ಸಿಲಿಂಡರ್ ಸ್ಕೋಟಗೊಂಡು ಮನೆ ಛಿದ್ರ, ಛಿದ್ರ : ತಾಯಿ ಮಗನಿಗೆ ಗಂಭೀರ ಗಾಯ!

ಬಾಗಲಕೋಟೆಯಲ್ಲಿ ಸಿಲಿಂಡರ್ ಸ್ಫೋಟಗೊಂಡು ಇಬ್ಬರಿಗೆ ಗಂಭೀರವಾಗ ಗಾಯಗಳಾಗಿರುವ ಘಟನೆ ಜಿಲ್ಲೆಯ ತೆರದಾಳ ಡಚ್ ಕಾಲೋನಿಯಲ್ಲಿ ನಡೆದಿದೆ.ಚೇತನ ಬೆಳಕೊಡಿ ಎಂಬುವರ ಮನೆಯಲ್ಲಿ ಸಿಲಿಂಡರ್ ಸ್ಫೋಟಗೊಂಡು ಇಬ್ಬರಿಗೆ ಗಾಯಗಳಾಗಿವೆ.ಚೇತನ್ ಹಾಗು ತಾಯಿ ಶೋಭಾಗೆ ಗಂಭೀರವಾದ ಗಾಯಗಳಾಗಿದ್ದು ತಕ್ಷಣ ಅವರನ್ನು ಸ್ಥಳ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಲಿಂಡರ್ ಸ್ಫೋಟದ ಅತಿ ವರದಿಗೆ ಮನೆಯಲ್ಲಿನ ವಸ್ತುಗಳು ಸಂಪೂರ್ಣವಾಗಿ ಹಾನಿಯಾಗಿದೆ. ಘಟನೆ ಕುರಿತಂತೆ ತೇರದಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಜೀವ ಬೆದರಿಕೆ ಆರೋಪ: ಪುನೀತ್ ಕೆರೆಹಳ್ಳಿ ವಿರುದ್ಧ ಎಫ್‌ಐಆರ್

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ನಿಂದಿಸಿ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ರಾಷ್ಟ್ರ ರಕ್ಷಣಾ ಪಡೆ ಮುಖ್ಯಸ್ಥ ಪುನೀತ್ ಕೆರೆಹಳ್ಳಿ ವಿರುದ್ಧ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಕನ್ನಡಪರ ಹೋರಾಟಗಾರ ಬೈರಪ್ಪ ಹರೀಶ್ ಕುಮಾರ್ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಕೆಲವು ದಿನಗಳ ಹಿಂದೆ ಪುನೀತ್ ಕೆರೆಹಳ್ಳಿ ನಗರದಲ್ಲಿ ವಾಸವಾಗಿರುವ ಅಕ್ರಮ ಬಾಂಗ್ಲಾ ನಿವಾಸಿಗಳ ಮನೆಗಳ ಮೇಲೆ ದಾಳಿ ಮಾಡಿ ದಾಖಲೆಗಳ ಪರಿಶೀಲನೆ ನಡೆಸಿದ್ದರು. …

Read More »

ಆಸ್ತಿ ವೈಷಮ್ಯಕ್ಕೆ ರಕ್ತಪಾತ: 16 ವರ್ಷದ ಅಪ್ರಾಪ್ತನಿಂದ ಕೊಲೆ!

ಚಿತ್ರದುರ್ಗ ತಾಲೂಕಿನ ಕಡ್ಲೆಗುದ್ದು ಗ್ರಾಮದಲ್ಲಿ ಆಸ್ತಿ ವೈಷಮ್ಯ ಹಿನ್ನೆಲೆ ವ್ಯಕ್ತಿಯೊಬ್ಬರನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಮೃತರನ್ನು ವೀರಭದ್ರಪ್ಪ (55) ಎಂದು ಗುರುತಿಸಲಾಗಿದೆ. ಕುಟುಂಬಗಳ ನಡುವಿನ ಆಸ್ತಿ ವಿವಾದವೇ ಈ ಕೊಲೆಗೆ ಕಾರಣವಾಗಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.ಈ ಕೃತ್ಯವನ್ನು 16 ವರ್ಷದ ಅಪ್ರಾಪ್ತ ಬಾಲಕನೊಬ್ಬ ನಡೆಸಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ದೊಡ್ಡಾಲಘಟ್ಟದಿಂದ ಜಮೀನಿಗೆ ತೆರಳುವ ರಸ್ತೆಯಲ್ಲಿ ವೀರಭದ್ರಪ್ಪ ಮೇಲೆ ಮಚ್ಚಿನಿಂದ ದಾಳಿ ನಡೆಸಿ ಕೊಲೆ …

Read More »