Breaking News

Breaking News

ವಿಜಯಪುರದ ಕನ್ನೂರಿನಲ್ಲಿ ಲಘು ಭೂಕಂಪ: ಭಯಭೀತರಾಗಿ ಮನೆಯಿಂದ ಹೊರಗೆ ಓಡಿದ ಜನ

ವಿಜಯಪುರ: ತಾಲ್ಲೂಕಿನ ಕನ್ನೂರು ಗ್ರಾಮದಲ್ಲಿ ಮಂಗಳವಾರ ಬೆಳಿಗ್ಗೆ 11.43ಕ್ಕೆ ಲಘು ಭೂಕಂಪನವಾಗಿದೆ. ರಿಕ್ಟರ್‌ ಮಾಪಕದಲ್ಲಿ 2.6 ಭೂಕಂಪನದ ತೀವ್ರತೆ ದಾಖಲಾಗಿದೆ. ಭೂಮಿ ಒಳಗಿನಿಂದ ಸ್ಪೋಟದ ಸದ್ದು ಕೇಳಿಬಂದಿಂದೆ. ಭೂಮಿ ಕಂಪಿಸಿದ್ದರಿಂದ ಜನರು ಭಯಭೀತರಾಗಿ ಮನೆಯಿಂದ ಹೊರಗೆ ಓಡಿಬಂದಿದ್ದಾರೆ. ‘ಭೂಕಂಪನ ತೀವ್ರತೆ ಕಡಿಮೆಯಿದ್ದು, ಈ ರೀತಿಯ ಭೂಕಂಪವು ಸ್ಥಳೀಯರಿಗೆ ಯಾವುದೇ ಹಾನಿಯನ್ನುಂಟು ಮಾಡುವುದಿಲ್ಲ. ಭೂಕಂಪನ ಕೇಂದ್ರಬಿಂದುವು ಭೂಕಂಪನ ವಲಯ ಮೂರರಲ್ಲಿ ಬರುವುದರಿಂದ ಜನರು ಭಯಭೀತರಾಗಬೇಕಾಗಿಲ್ಲ’ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ …

Read More »

ಇಬ್ಬರು ಸರಗಳ್ಳರ ಬಂಧನ :ಚಿನ್ನಾಭರಣ ವಶ

ಗೌರಿಬಿದನೂರು: ನಗರದ ಮಾದನಹಳ್ಳಿಯಲ್ಲಿ ಜ.27ರಂದು ನಡೆದಿದ್ದ ಸರಗಳ್ಳತನ ಪ್ರಕರಣ ಸಂಬಂಧ ಇಬ್ಬರು ಸರಗಳ್ಳರನ್ನು ಬಂಧಿಸಿ ಚಿನ್ನಾಭರಣ, ಬೈಕ್​ ವಶಪಡಿಸಿಕೊಳ್ಳಲಾಗಿದೆ. ಆಂಧ್ರ ಮೂಲದ ಎಸ್​.ಕೆ. ಕೃಪಾರಾವ್​, ಮಲ್ಲೇಲ ಕೊಂಡಾರೆಡ್ಡಿ ಬಂಧಿತರು. 65 ಗ್ರಾಂ ಬಂಗಾರದ ಮಾಂಗಲ್ಯ ಸರಗಳು, 2 ಬೈಕ್​ಗಳನ್ನು ಸೋಮವಾರ ನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜ.27ರಂದು ಮಾದನಹಳ್ಳಿ ಲಕ್ಷ್ಮಮ್ಮ (70) ಎಂಬುವವರು 22 ಗ್ರಾಂ ಮಾಂಗಲ್ಯಸರ, ಲಕ್ಷ್ಮಿ ಬೊಟ್ಟು, ಚೈನ್​ ಕಳ್ಳತನವಾಗಿದೆ ಎಂದು ಪ್ರಕರಣ ದಾಖಲಿಸಿದರು. ದೂರಿನ …

Read More »

ಬಸ್‌ ಹತ್ತುವಾಗ ₹4.50 ಮೌಲ್ಯದ ಚಿನ್ನಾಭರಣ ಕಳವು

ಕಲಬುರಗಿ: ನಗರದ ರಾಮಮಂದಿರ ವೃತ್ತದಲ್ಲಿ ಮಹಿಳೆಯೊಬ್ಬರು ಬಸ್‌ ಹತ್ತುವಾಗ ಅವರ ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಚಿನ್ನಾಭರಣಗಳನ್ನು ಕಳ್ಳರು ಕದ್ದು ಪರಾರಿಯಾಗಿದ್ದಾರೆ. ಶಹಾಬಾದ್‌ನ ಭಂಕೂರ ಗ್ರಾಮ ನಿವಾಸಿ ಸಂಗೀತಾ ಗೌರ ಚಿನ್ನಾಭರಣ ಕಳೆದುಕೊಂಡ ಮಹಿಳೆ. ‘ಕಲಬುರಗಿಯಲ್ಲಿ ಸಂಬಂಧಿಕರ ಧಾರ್ಮಿಕ ಕಾರ್ಯಕ್ರಮ ಮುಗಿಸಿಕೊಂಡು ಊರಿಗೆ ಹೋಗಲು ರಾಮಮಂದಿರಲ್ಲಿ ಬಸ್‌ ಏರಿ ಕುಳಿತೆ. ಟಿಕೆಟ್ ತೆಗೆಸಲು ನೋಡಿದಾಗ ನನ್ನ ವ್ಯಾನಿಟಿ ಬ್ಯಾಗ್‌ ಚೈನ್‌ ತೆರೆದಿತ್ತು. ಅದರಲ್ಲಿ ಇಟ್ಟಿದ್ದ ₹4.50 ಲಕ್ಷ ಮೌಲ್ಯದ 30 ಗ್ರಾಂ ಚಿನ್ನಾಭರಣಗಳು …

Read More »

ಸ್ಪ್ರೇ ಸಿಂಪಡಿಸಿ ಮಾಂಗಲ್ಯ ಸರ ಕಳವು: ಮಹಿಳೆ ಸಾವು

ನೆಲಮಂಗಲ: ಮುಂಜಾನೆ ಮನೆಯಂಗಳದ ಕಸ ಗುಡಿಸುತ್ತಿದ್ದ ಮಹಿಳೆ ಮುಖಕ್ಕೆ ಖದೀಮರು ಸ್ಪ್ರೇ ಸಿಂಪಡಿಸಿ ಚಿನ್ನದ ಮಾಂಗಲ್ಯ ಸರ ಕದ್ದು ಪರಾರಿಯಾಗಿದ್ದು ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಹುಸ್ಕೂರು ಗ್ರಾಮದಲ್ಲಿ ನಡೆದಿದೆ. ಜ್ಯೋತಿ (45) ಮೃತರು. ಮನೆಯಂಗಳದ ಕಸ ಗುಡಿಸಿ, ರಂಗೋಲಿ ಹಾಕಲು ಮುಂದಾಗಿದ್ದಾಗ ಬೈಕ್‌ನಲ್ಲಿ ಬಂದ ಕಳ್ಳರು, ಜ್ಯೋತಿಯ ಮುಖಕ್ಕೆ ಸ್ಪ್ರೇ ಸಿಂಪಡಿಸಿ 70 ಗ್ರಾಂನ ಸರ ಕಸಿದು ಪರಾರಿಯಾದರೆ, ಇತ್ತ ಕುಸಿದು ಬಿದ್ದ ಜ್ಯೋತಿ ಮೇಲೇಳಲೇ ಇಲ್ಲ.ಕುಟುಂಬದವರು ಕೂಡಲೇ …

Read More »

ಕೋಲಾರದಲ್ಲಿ ಭೀಕರ ಮರ್ಡರ್ : ಮಾರಕಾಸ್ತ್ರಗಳಿಂದ ಕೊಚ್ಚಿ ಆಂಧ್ರ ಮೂಲದ ರೌಡಿಶೀಟರ್ ಬರ್ಬರ ಹತ್ಯೆ!

ಕೋಲಾರದಲ್ಲಿ ಭೀಕರವಾದ ಕೊಲೆಯಾಗಿದ್ದು, ಮಾರಕಾಸ್ತ್ರಗಳಿಂದ ಕೊಚ್ಚಿ ಆಂಧ್ರಪ್ರದೇಶ ಮೂಲದ ರೌಡಿಶೀಟರ್ ನನ್ನ ಕೊಚ್ಚಿ ಕೊಲೆ ಮಾಡಲಾಗಿದೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಹೆಬ್ಬಳ್ಳಿ ಬಳಿ ಈ ಒಂದು ಬರ್ಬರ ಕೊಲೆ ನಡೆದಿದೆ. ರೌಡಿಶೀಟರ್ ಆದ ಭಾಸ್ಕರನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ರೌಡಿಶೀಟರ್ ಭಾಸ್ಕರ್ ಡ್ರೈವರ್ ಕೆಲಸ ಮಾಡಿಕೊಂಡಿದ್ದ ಆಂಧ್ರಪ್ರದೇಶದ ವಿವಿಧ ಪೊಲೀಸ್ ಠಾಣೆಗಳಲ್ಲಿ ಭಾಸ್ಕರ್ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು. ಸದ್ಯ ಸ್ಥಳಕ್ಕೆ ನಂಗಲಿ ಠಾಣೆ ಪೋಲಿಸರು …

Read More »

ಚಿಕ್ಕಬಳ್ಳಾಪುರ ಬಳಿ ಭೀಕರ ಅಪಘಾತ: ಬೊಲೇರೊ ಮೇಲೆ ಉರುಳಿದ ಕಂಟೇನರ್ ಲಾರಿ, ವ್ಯಕ್ತಿ ಸಾವು

ಬೆಂಗಳೂರು-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಚಿಕ್ಕಬಳ್ಳಾಪುರದ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿ, ಒಬ್ಬ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಮುಂದೆ ಸಾಗುತ್ತಿದ್ದ ಬೊಲೇರೊ ಜೀಪ್‌ಗೆ ಹಿಂಬದಿಯಿಂದ ಕಂಟೇನರ್ ಲಾರಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಬೊಲೇರೊವನ್ನು ಸುಮಾರು ಅರ್ಧ ಕಿಲೋ ಮೀಟರ್ ದೂರ ತಳ್ಳಿಕೊಂಡು ಹೋಗಿರುವ ಲಾರಿ, ಬಳಿಕ ವಾಹನದ ಮೇಲೆಯೇ ಉರುಳಿ ಬಿದ್ದಿದೆ. ಅಪಘಾತದ ಪರಿಣಾಮ ಬೊಲೇರೊ ಸಂಪೂರ್ಣ ಜಖಂಗೊಂಡಿದ್ದು, ಅದರಲ್ಲಿ ಪ್ರಯಾಣಿಸುತ್ತಿದ್ದ ಬೆಂಗಳೂರಿನ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದ …

Read More »

ಬೇತಮಂಗಲ | ಅಕ್ರಮವಾಗಿ ಗೋವು ಸಾಗಣೆ ಆರೋಪ; ಪೊಲೀಸರಿಗೆ ದೂರು

ಅಕ್ರಮವಾಗಿ ಗೋವುಗಳನ್ನು ಕಸಾಯಿ ಖಾನೆಗಳಿಗೆ ಸಾಗಿಸುತ್ತಿದ್ದಾರೆ ಎಂದು ಆರೋಪಿಸಿ, ರಾಷ್ಟ್ರೀಯ ರಕ್ಷಣೆ ಪಡೆ ಮುಖಂಡ ಪುನೀತ್ ಕೆರೆಹಳ್ಳಿ ಮತ್ತು ಕಾರ್ಯಕರ್ತರು ಲಾರಿ ಹಾಗೂ ಚಾಲಕನನ್ನು ಹಿಡಿದಿದ್ದಾರೆ. ಹೋಬಳಿಯ ಕೊತ್ತೂರು ಗ್ರಾಮದಲ್ಲಿ ಸೋಮವಾರ ರಾತ್ರಿ ವಶಕ್ಕೆ ಪಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ, ಚಾಲಕ ಸೈಯದ್‌ ಎಂಬುವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಮಾಯಕರನ್ನು ಈ ಕೃತ್ಯಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ದೂರಿರುವ ಕಾರ್ಯಕರ್ತರು, ಮತ್ತೆ ಈ ಕೃತ್ಯ ಎಸಗದಂತೆ ಎಚ್ಚರಿಕೆ ನೀಡಿದ್ದಾರೆ. ಗಡಿಯಲ್ಲಿ ಜಾನುವಾರುಗಳ ಸಾಗಣೆಯ ಹೆಚ್ಚಿನ …

Read More »

‘ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಕೃತ್ಯ’ : ಮದ್ಯದ ಅಮಲಿನಲ್ಲಿ ಹೆತ್ತ ಮಗಳನ್ನೇ ಕತ್ತು ಹಿಸುಕಿ ಕೊಂದ ಪಾಪಿ ತಾಯಿ.!

ಯಾದಗಿರಿ : ಜಿಲ್ಲೆಯ ರಾಜೀವ್ ಗಾಂಧಿ ಬಡಾವಣೆಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ತಾನೇ ಹೆತ್ತ 10 ವರ್ಷದ ಮಗಳನ್ನು ಕ್ಷುಲ್ಲಕ ಕಾರಣಕ್ಕೆ ತಾಯಿಯೇ ಕತ್ತು ಹಿಸುಕಿ ಹತ್ಯೆಗೈದಿರುವ ಘೋರ ಕೃತ್ಯ ಬೆಳಕಿಗೆ ಬಂದಿದೆ. ಯಾದಗಿರಿಯ ರಾಜೀವ್ ಗಾಂಧಿ ಬಡಾವಣೆಯಲ್ಲಿ ಈ ಘಟನೆ ನಡೆದಿದೆ.ಆರಂಭದಲ್ಲಿ ತಾಯಿ ತನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸುತ್ತಮುತ್ತಲಿನವರಿಗೆ ಮತ್ತು ಪೊಲೀಸರಿಗೆ ನಂಬಿಸಲು ಯತ್ನಿಸಿದ್ದಳು. “ನಾನು ಮಗಳಿಗೆ 15 ರೂಪಾಯಿ ಹಣ ಕೊಟ್ಟಿಲ್ಲ ಎಂಬ ಕಾರಣಕ್ಕೆ …

Read More »

ಲಾರಿ-ಬೈಕ್ ನಡುವೆ ಭೀಕರ ಅಪಘಾತ: ತಾಯಿ-ಮಗಳು ಸ್ಥಳದಲ್ಲೇ ಸಾವು

ಬಾಗಲಕೋಟೆ: ಜಿಲ್ಲೆಯಲ್ಲಿ ಲಾರಿ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ತಾಯಿ-ಮಗಳು ಸ್ಥಳದಲ್ಲೇ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಸೊರಗಾವಿಯಲ್ಲಿ ಲಾರಿಯೊಂದು ಬೈಕ್ ಗೆ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ತಾಯಿ ಮಂಜುಳಾ ದಳವಾಯಿ(28), ಪುತ್ರಿ ವೇದಾ(1) ಸಾವನ್ನಪ್ಪಿದ್ದಾರೆ.

Read More »

ಭೀಕರ ಸರಣಿ ಅಪಘಾತ; ಇಬ್ಬರು ಸಾವು, ಐವರಿಗೆ ಗಾಯ

ತುಮಕೂರು: ಮೂರು ಕಾರುಗಳ ನಡುವೆ ಭೀಕರ ಸರಣಿ ಅಪಘಾತ ಸಂಭವಿಸಿ ಇಬ್ಬರು ಮೃತಪಟ್ಟ ಘಟನೆ ತಾಲೂಕಿನ ಬಾಣವಾರ ಬಳಿ ಫೆ.8ರ ರವಿವಾರ ನಡೆದಿದೆ. ಮುರುಳಿ, ಸುರೇಶ್ ಮೃತಪಟ್ಟವರು ಎಂದು ಗುರುತಿಸಲಾಗಿದೆ. ಉಳಿದ ಐವರಿಗೆ ಸಣ್ಣಪುಟ್ಟ ಗಾಯವಾಗಿದೆ. ತುಮಕೂರು ಕಡೆಯಿಂದ ಕುಣಿಗಲ್ ಕಡೆಗೆ ತೆರಳುತ್ತಿದ್ದ ಕ್ವಾಲಿಸ್ ಮತ್ತು ಮುಂದೆ ಬರುತಿದ್ದ ಎಸ್ಟೀಮ್ ಹಾಗೂ ಬೋಲೆನೋ ಕಾರಿನ ನಡುವೆ ತುಮಕೂರು-ಕುಣಿಗಲ್ ರಸ್ತೆಯಲ್ಲಿ ಸರಣಿ ಅಪಘಾತ‌ ನಡೆದಿದೆ. ಗಾಯಾಳುಗಳನ್ನು ತುಮಕೂರು ಜಿಲ್ಲಾಸ್ಪತ್ರೆ ರವಾನೆ ಮಾಡಲಾಗಿದೆ. …

Read More »