ನೆಲಮಂಗಲ: ಮುಂಜಾನೆ ಮನೆಯಂಗಳದ ಕಸ ಗುಡಿಸುತ್ತಿದ್ದ ಮಹಿಳೆ ಮುಖಕ್ಕೆ ಖದೀಮರು ಸ್ಪ್ರೇ ಸಿಂಪಡಿಸಿ ಚಿನ್ನದ ಮಾಂಗಲ್ಯ ಸರ ಕದ್ದು ಪರಾರಿಯಾಗಿದ್ದು ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಹುಸ್ಕೂರು ಗ್ರಾಮದಲ್ಲಿ ನಡೆದಿದೆ. ಜ್ಯೋತಿ (45) ಮೃತರು. ಮನೆಯಂಗಳದ ಕಸ ಗುಡಿಸಿ, ರಂಗೋಲಿ ಹಾಕಲು ಮುಂದಾಗಿದ್ದಾಗ ಬೈಕ್‌ನಲ್ಲಿ ಬಂದ ಕಳ್ಳರು, ಜ್ಯೋತಿಯ ಮುಖಕ್ಕೆ ಸ್ಪ್ರೇ ಸಿಂಪಡಿಸಿ 70 ಗ್ರಾಂನ ಸರ ಕಸಿದು ಪರಾರಿಯಾದರೆ, ಇತ್ತ ಕುಸಿದು ಬಿದ್ದ ಜ್ಯೋತಿ ಮೇಲೇಳಲೇ ಇಲ್ಲ.ಕುಟುಂಬದವರು ಕೂಡಲೇ ನೆಲಮಂಗಲ ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ ಮಾರ್ಗಮಧ್ಯೆಯೇ ಮೃತಪಟ್ಟಿರುವ ಬಗ್ಗೆ ವೈದ್ಯರು ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

