BigTv News
February 7, 2026
Breaking News
ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯ ಕರ್ನೈಲಗಂಜ್ ಪ್ರದೇಶದ ಖಾಸಗಿ ಶಾಲೆಯೊಂದರಲ್ಲಿ ಹೋಂವರ್ಕ್ ಪೂರ್ಣಗೊಳಿಸದ ಕಾರಣಕ್ಕೆ ಎರಡನೇ ತರಗತಿ ಮಗುವಿಗೆ ನೂರವೈತು ಬಾರಿ ಬಾಸುಂಡೆ ಬರುವವರೆಗೂ ಶಿಕ್ಷಕ ಥಳಿಸಿದ ಘಟನೆ ನಡೆದಿದೆ. ಎಂಆರ್‌ಜಿ ಶಾಲೆಯ ಇಂಗ್ಲಿಷ್ ಶಿಕ್ಷಕ ಪ್ರಖರ್ ಸಿಂಗ್ ಎಂಬಾತ ಹೋಂವರ್ಕ್ ಪೂರ್ಣಗೊಳಿಸದ ಕಾರಣದಿಂದ ಮಗುವಿನ ಕಾಲುಗಳ ಮೇಲೆ ಪದೇ ಪದೆ ಹೊಡೆದಿದ್ದಾರೆ. ಇದರಿಂದ ಮಗುವಿನ ಕಾಲುಗಳಲ್ಲಿ ಗಾಯದ ಗುರುತುಗಳು, ಊತ ಮತ್ತು ತೀವ್ರ ನೋವು ಉಂಟಾಗಿದೆ. ಮಗು ಶಾಲೆ …
Read More »
BigTv News
February 7, 2026
Breaking News
ಬಿಹಾರ: 14ರ ಬಾಲಕನ ಆನ್ ಲೈನ್ ಗೇಮ್ ಚಟಕ್ಕೆ ಬೇಸತ್ತಂತ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವಂತ ಘಟನೆ ಬಿಹಾರದ ರಾಜಗೀರ್ ನ ಧರ್ಮಶಾಲೆಯಲ್ಲಿ ನಡೆದಿದೆ. 14 ವರ್ಷದ ಬಾಲಕ ಅಮೋಘ ಕೀರ್ತಿ ಆನ್ ಲೈನ್ ಗೇಮ್ ಚಟಕ್ಕೆ ಬಿದ್ದಿದ್ದನು. ಎಷ್ಟೇ ಬುದ್ಧಿವಾದ ಹೇಳಿದರೂ ಆನ್ ಲೈನ್ ಗೇಮ್ ಆಡುವುದನ್ನು ಬಿಟ್ಟಿರಲಿಲ್ಲ. ಹೀಗಾಗಿ ಬೇಸತ್ತಂತ ಮಾವ ನಾಗಪ್ರಸಾದ್, 14 ವರ್ಷದ ಬಾಲಕ ಅಮೋಘ ಕೀರ್ತಿಯನ್ನು ಕೊಂದಿದ್ದರು. ಆಗಸ್ಟ್ 8, 2025ರಂದು …
Read More »
BigTv News
February 7, 2026
Breaking News
ಶಿವಮೊಗ್ಗದಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಾಧ್ಯಾಪಕನಿಗೆ ಥಳಿಸಲಾಗಿದೆ. ಜಿಲ್ಲೆಯ ಸಾಗರ ನಗರದಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಪ್ರಾಧ್ಯಾಪಕನಿಗೆ ಥಳಿಸಿರುವ ಘಟನೆ ವರದಿಯಾಗಿದೆ. ಕೊಳಗಿಬೀಸ್ ಕಾಲೇಜಿನ ವಿದ್ಯಾರ್ಥಿ ನಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ. ಕಾಲೇಜು ಪ್ರಾಧ್ಯಾಪಕ ಎಂ. ಆರ್ ಆದರ್ಶ್ ಎಂಬವನಿಗೆ ಇದೀಗ ಜನ ಥಳಿಸಿದ್ದಾರೆ. ಈ ಹಿಂದೆ ಶಿರಸಿಯಲ್ಲಿ ಕೂಡ ಇದೆ ರೀತಿ ಲೈಂಗಿಕ ಕಿರುಕುಳ ನೀಡಿ ಸಿಕ್ಕಿ ಬಿದ್ದಿದ್ದ. …
Read More »
BigTv News
February 7, 2026
Breaking News
ಮೇಘಾಲಯದ ಪೂರ್ವ ಜೈಂಟಿಯಾ ಹಿಲ್ಸ್ ಜಿಲ್ಲೆಯ ಕಲ್ಲಿದ್ದಲು ಗಣಿಯಲ್ಲಿ ಗುರುವಾರ ಸ್ಫೋಟ ಸಂಭವಿಸಿದ್ದು, ಇಂದು ಮತ್ತೆ ಎರಡು ಶವಗಳು ಪತ್ತೆಯಾಗಿವೆ. ಇದರೊಂದಿಗೆ ಮೃತಪಟ್ಟವರ ಸಂಖ್ಯೆ 27ಕ್ಕೆ ಏರಿಕೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ರಕ್ಷಣಾ ತಂಡಗಳು ಶೋಧ ಕಾರ್ಯಾಚರಣೆ ಮುಂದುವರಿದಿದ್ದರಿಂದ ಇಂದು ಮತ್ತೆ ಎರಡು ಶವಗಳು ಪತ್ತೆಯಾಗಿವೆ. ಹಲವಾರು ಜನ ಇನ್ನೂ ಕಾಣೆಯಾಗಿದ್ದಾರೆ ಮತ್ತು ಶೋಧ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆ, ಗಣಿ ಮತ್ತು ಖನಿಜ(ಅಭಿವೃದ್ಧಿ ಮತ್ತು …
Read More »
BigTv News
February 7, 2026
Breaking News
ಚಿಕ್ಕಬಳ್ಳಾಪುರದ ವಸತಿ ಶಾಲೆಯಲ್ಲಿ ಓದುತ್ತಿರುವ 10 ನೇ ತರಗತಿಯ ವಿದ್ಯಾರ್ಥಿನಿ ಗರ್ಭಿಣಿಯಾಗಿದ್ದಾಳೆ ಎಂದು ತಿಳಿದುಬಂದಿದೆ. ಪ್ರಕರಣ ವರದಿಯಾದ ಬೆನ್ನಲ್ಲೇ ಪೊಲೀಸರು ಬಾಲಕಿಯ ಸಂಬಂಧಿ ಎಂದು ಹೇಳಲಾದ ಆರೋಪಿಯ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಿ ಆತನನ್ನು ಬಂಧಿಸಿದ್ದಾರೆ. ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ನಿರ್ದೇಶಕ ಕಾಂತರಾಜು, ಶಾಲೆಯ ಪ್ರಾಂಶುಪಾಲರು ಮತ್ತು ವಾರ್ಡನ್ ಅವರನ್ನು ಅಮಾನತುಗೊಳಿಸಲು ಆದೇಶಿಸಿದ್ದಾರೆ. ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯುವಾಗ ಗರ್ಭಧಾರಣೆಯು ಬೆಳಕಿಗೆ ಬಂದಿದೆ ಎಂದು ಮೂಲಗಳು ತಿಳಿಸಿವೆ. ಸುಮಾರು …
Read More »
BigTv News
February 7, 2026
Breaking News
ಹಾಸನ: ಕೆರೆಯಲ್ಲಿ ಈಜಲು ಹೋಗಿದ್ದ ವಿದ್ಯಾರ್ಥಿ ನೀರುಪಾಲಾಗಿ ಮೃತಪಟ್ಟಿರುವ ಘಟನೆ ಹಸನ ಜಿಲ್ಲೆಯ ಉದ್ದೂರು ಗ್ರಾಮದಲ್ಲಿ ನಡೆದಿದೆ. 18 ವರ್ಷದ ಪ್ರಜ್ವಲ್ ಮೃತ ದುರ್ದೈವಿ. ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ. ಇಂದು ಮಧ್ಯಾಹ್ನ ನಾಲ್ವರು ಸ್ನೇಹಿತರೊಂದಿಗೆ ಉದ್ದೂರು ಕೆರೆಗೆ ಈಜಲು ಹೋಗಿದ್ದ. ಇಬ್ಬರು ಸ್ನೇಹಿತರು ಕೆರೆಯಲ್ಲಿ ಈಜಲು ಇಳಿದಿದ್ದರು. ಉಳಿದವರು ದಡದಲ್ಲಿಯೇ ಇದ್ದರು. ಪ್ರಜ್ವಲ್ ಈಜುತ್ತಾ ಹೋದವನು ವಾಪಸ್ ಬರಲಾಗದೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಘಟನ ಸ್ಥಳಕ್ಕೆ ಆಗಮಿಸಿದ …
Read More »
BigTv News
February 7, 2026
Breaking News
ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಲಾರಿ ಹರಿದು ಬೈಕ್ನಲ್ಲಿ ಇದ್ದ ಇಬ್ಬರೂ ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ಇದೀಗ ವರದಿಯಾಗಿದೆ. ನಂಜನಗೂಡಿನ ಹಣಮನ ಪುರ ಗೇಟುವಳಿ ಒಂದು ಅಪಘಾತ ಸಂಭವಿಸಿದ್ದು, ಚಂದ್ರು (38) ಶೀಲ (35) ಮೃತ ದುರ್ದೈವಿಗಳು ಎಂದು ತಿಳಿದು ಬಂದಿದೆ.ಚುಂಚನಹಳ್ಳಿ ಕಡೆಗೆ ತೆರಳುವಾಗ ಗೊಬ್ಬರ ತುಂಬಿದ ಲಾರಿ ಡಿಕ್ಕಿ ಹೊಡೆದಾಗ ಲಾರಿ ಬೈಕ್ ಮೇಲೆ ಹರಿದು ಸ್ಥಳದಲ್ಲೇ ಇಬ್ಬರು ಸಾವನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಡಿವೈಎಸ್ಪಿ …
Read More »
BigTv News
February 7, 2026
Breaking News
ಚನ್ನಗಿರಿ: ತಾಲ್ಲೂಕಿನ ಹೊನ್ನೇಬಾಗಿ ಗ್ರಾಮದ ಬೀರೂರು-ಸಮ್ಮಸಗಿ ರಾಜ್ಯ ಹೆದ್ದಾರಿಯಲ್ಲಿ ಶುಕ್ರವಾರ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಕಾರೊಂದು ಇಬ್ಭಾಗವಾಗಿದೆ.ನಲ್ಲೂರು ಗ್ರಾಮದ ವಾಸಿ ನಯಾಜ್ ಖಾನ್ (33) ಎಂಬವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಲ್ಲೂರಿನಿಂದ ಹೊನ್ನೇಬಾಗಿ ಗ್ರಾಮದ ಕಡೆಗೆ ತೆರಳುತ್ತಿದ್ದ ಎರ್ಟಿಗಾ ಕಾರಿಗೆ ಚನ್ನಗಿರಿಯತ್ತ ಸಂಚರಿಸುತ್ತಿದ್ದ ಬ್ರೀಜಾ ಕಾರು ಮುಖಾಮುಖಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ಮಾರುತಿ ಎರ್ಟಿಗಾ …
Read More »
BigTv News
February 7, 2026
Breaking News
ಆನೇಕಲ್ ನಲ್ಲಿ ಅಣ್ಣನ ಕೊಂದು ಆಂಥೋನಿ ಎಂಬಾತ ಜೈಲು ಪಾಲಾಗಿದ್ದಾನೆ. ಪ್ರಿಯಕರಣಿಗಾಗಿ ಗಂಡನನ್ನು ಪತ್ನಿ ಜೈಲಿಗೆ ಕಳುಹಿಸಿದ್ದಾಳ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನಲ್ಲಿ ಈ ಒಂದು ಘಟನೆ ನಡೆದಿದ್ದು, ಅಣ್ಣನನ್ನೇ ಕೊಂದು ತಮ್ಮ ಆಂಥೋನಿ ಜೈಲು ಸೇರಿದ್ದಾನೆ. ಆಂತೋನಿ ಪತ್ನಿ ರೋಜಿಗೆ ರಾಜೇಶ್ ಎಂಬಾತನ ಜೊತೆ ಲವ್ ಆಗಿದ್ದು ಪ್ರಿಯಕರನ ಜೊತೆಗೆ ಇರಲು ಗಂಡ ಆಂಥೋನಿ ಅಡ್ಡಿಯಾಗಿದ್ದ. ಕುಡಿತದ ನೆಪ ಒಡ್ಡಿ ಪತಿಯನ್ನು ರಿಹಾಬ್ ಸೆಂಟರ್ಗೆ ಪತ್ನಿ ದಾಖಲು …
Read More »
BigTv News
February 7, 2026
Breaking News
ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ಗೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದು ಇದೀಗ ನಿನ್ನ ಸಹ ಬಿಎಂಟಿಸಿ ಬಸ್ ಯುವತಿಯ ಮೇಲೆ ಹರಿದು ಸ್ಥಳದಲ್ಲಿ ಯುವತಿ ಸಾವನಪ್ಪಿರುವ ಘಟನೆ ವರದಿಯಾಗಿದೆ. ಬೆಂಗಳೂರಿನ ಟಿನ್ ಫ್ಯಾಕ್ಟರಿ ಬಳಿ ಈ ಒಂದು ಘಟನೆ ನಡೆದಿದೆ. ಹೌದು ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ಗೆ ಮತ್ತೊಂದು ಮತ್ತೊಂದು ಬಲಿಯಾಗಿದೆ. ಬೈಕ್ ಮೇಲೆ ಹೋಗುತ್ತಿದ್ದವರಿಗೆ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದಿದೆ. ಈ ವೇಳೆ ಬೈಕ್ ಬ್ಯಾಲೆನ್ಸ್ ತಪ್ಪಿ ಬಸ್ ಚಕ್ರದ ಅಡಿ ಯುವತಿ …
Read More »