Breaking News

Breaking News

ಖಾಲಿ ನಿವೇಶನದಲ್ಲಿ ಜಿಲೆಟಿನ್‌ ಕಡ್ಡಿ ಸ್ಫೋಟಿಸಿದ ಗುತ್ತಿಗೆದಾರ!

ಬೆಂಗಳೂರು: ಖಾಲಿ ನಿವೇಶನದಲ್ಲಿ ಜೆಲಿಟಿನ್‌ ಕಡ್ಡಿ ಸ್ಫೋಟಗೊಂಡಿರುವ ಘಟನೆ ಹುಳಿಮಾವು ಠಾಣೆ ವ್ಯಾಪ್ತಿಯ ಅಕ್ಷಯ ನಗರದಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ. ನಾರಾಯಣ ಎಂಬುವರಿಗೆ ಸೇರಿ ಖಾಲಿ ನಿವೇಶನದಲ್ಲಿ ಮಧ್ಯಾಹ್ನ 2 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದರು. ಅಕ್ಷಯ ನಗರದ ರೆಸಿಡೆನ್ಸಿಯಲ್‌ ಪ್ರದೇಶದಲ್ಲಿ ನಾರಾಯಣ ಎಂಬುವರಿಗೆ ಸೇರಿದ 100-100 ನಿವೇಶನ ಇದ್ದು, ಅದರಲ್ಲಿ ಪತ್ತೆಯಾದ ಕಲ್ಲು ಬಂಡೆ ಸ್ಫೋಟಗೊಳಿಸಲು ಗುತ್ತಿಗೆದಾರ …

Read More »

ಸಿಂಧನೂರು: ರೈಲಿನಡಿ ಬಿದ್ದು ಯುವತಿ ಆತ್ಮಹತ್ಯೆ

ಸಿಂಧನೂರು ನಗರದ ಹೊರವಲಯದಲ್ಲಿರುವ ರೈಲ್ವೆ ನಿಲ್ದಾಣದಲ್ಲಿ ಮಂಗಳವಾರ ಸಂಜೆ ಯುವತಿಯೊಬ್ಬರು ರೈಲಿನಡಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾನ್ವಿ ತಾಲ್ಲೂಕಿನ ನೀರಮಾನ್ವಿ ಸಮೀಪದ ಸೀಕಲ್ ತಾಂಡಾದ ಸುಮಂಗಲಾ (21) ಮೃತ ಯುವತಿ. ಸುಮಂಗಲಾ ಸಿಂಧನೂರು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎದುರು ಇರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯದಲ್ಲಿದ್ದು ಬಿ.ಎ ಪ್ರಥಮ ವರ್ಷದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರೆಂದು ತಿಳಿದು ಬಂದಿದೆ. ಈ ಬಗ್ಗೆ ರಾಯಚೂರಿನ ರೈಲ್ವೆ …

Read More »

ಆನ್​ಲೈನ್ ಗೇಮ್ ಗೀಳು; ಪೋಷಕರು ಬೈದಿದ್ದಕ್ಕೆ 9ನೇ ಮಹಡಿಯಿಂದ ಬಿದ್ದು ಮೂವರು ಸಹೋದರಿಯರು ಆತ್ಮಹತ್ಯೆ

ಲಖನೌ: ಆನ್​ಲೈನ್​ ಗೇಮ್​ ಗೀಳಿನ ಸಲುವಾಗಿ ಪೋಷಕರು ಬೈದಿದ್ದಕ್ಕೆ ಮೂವರು ಅಪ್ರಾಪ್ತ 12, 14, 16 ವರ್ಷದ ಮೂವರು ಸಹೋದರಿಯರು ಅಪಾರ್ಟ್​​​ಮೆಂಟ್​ನ 9ನೇ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್​ನಲ್ಲಿ ಇಂದು(ಫೆ.04) ಮಧ್ಯರಾತ್ರಿ ನಡೆದಿದ್ದು ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಬುಧವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಗಾಜಿಯಾಬಾದ್‌ನ ಭಾರತ್ ಸಿಟಿಯಲ್ಲಿ ಈ ಘಟನೆ ನಡೆದಿದೆ. ಮೃತ ಬಾಲಕಿಯರನ್ನು ಪಖಿ(12), ಪ್ರಾಚಿ(14) ಹಾಗೂ ವಿಶಿಕಾ(16) ಎಂದು …

Read More »

ಪೊಲೀಸರಿಗೆ ಮಾಹಿತಿ ನೀಡದೆ ಪೋಕ್ಸೊ ಪ್ರಕರಣ ಬಾಲಕಿಗೆ ಗರ್ಭಪಾತ: ವೈದ್ಯೆ ಅಮಾನತು

ಶಿವಮೊಗ್ಗ: ಪೋಕ್ಸೊ ಪ್ರಕರಣ ಎಂದು ತಿಳಿದಿದ್ದರೂ ಪೊಲೀಸರಿಗೆ ಮಾಹಿತಿ ನೀಡದೆ ಬಾಲಕಿಗೆ ಗರ್ಭಪಾತ ಮಾಡಿಸಿದ ಆರೋಪದ ಮೇಲೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಆನಂದಪುರ ಸಮುದಾಯ ಆರೋಗ್ಯ ಕೇಂದ್ರದ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ.ಡಿ. ಪ್ರತಿಮಾ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಸಾಗರದ ಖಾಸಗಿ ಆಸ್ಪತ್ರೆಯಲ್ಲಿ ಬಾಲಕಿಗೆ ಗರ್ಭಪಾತ ಮಾಡಿಸಿದ ಹಿನ್ನೆಲೆಯಲ್ಲಿ ಡಾ. ಪ್ರತಿಮಾ ಸೇರಿ 9 ಜನರ ವಿರುದ್ಧ ನವೆಂಬರ್ 6ರಂದು ಪ್ರಕರಣ ದಾಖಲಾಗಿತ್ತು. ಸಾಗರ ನಗರ …

Read More »

ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಅಪರಾಧಿಗೆ 30 ವರ್ಷ ಶಿಕ್ಷೆ ಪ್ರಕಟ

ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಅಪರಾಧಿಗೆ 30 ವರ್ಷ ಶಿಕ್ಷೆ ಪ್ರಕಟಬೆಳಗಾವಿ: ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದ್ದ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಶಂಕರ ನಗರ ನಿವಾಸಿ ದರ್ಶನ ಭಗವಂತ ಹುಣಶ್ಯಾಳಿ ( 23),ಅಪರಾಧಿಗೆ 30 ವರ್ಷ ಕಾರಾಗೃಹ ಶಿಕ್ಷೆ ಹಾಗೂ 1 ಲಕ್ಷ ರೂ.ದಂಡ ವಿಧಿಸಿ ಜಿಲ್ಲಾ ಪೋಕ್ಸೋ ನ್ಯಾಯಾಲಯ ಮಂಗಳವಾರ ತೀರ್ಪು ಪ್ರಕಟಿಸಿದೆ. ಬಾಲಕಿಗೆ 2024 ರಲ್ಲಿ ಅಪರಾಧಿಯು ಪ್ರೀತಿಸುವ ನಾಟಕವಾಡಿ ಮದುವೆ ಆಗುತ್ತೆನೆ ಎಂದು ಪುಸಲಾಯಿಸಿ …

Read More »

ಚಿತ್ರದುರ್ಗ: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಶಿಕ್ಷಕನ ಬಂಧನ

ಸಿರಿಗೆರೆ (ಚಿತ್ರದುರ್ಗ): ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಖಾಸಗಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿದ್ದು, ಭರಮಸಾಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಶಿಕ್ಷಕ ನಮ್ಮನ್ನು ಕೊಠಡಿಗೆ ಕರೆಸಿಕೊಂಡು ಮೈ ಮುಟ್ಟುವುದು, ಮುತ್ತು ಕೊಡುವುದು ಮಾಡುತ್ತಾರೆ’ ಎಂದು ವಿದ್ಯಾರ್ಥಿನಿಯರು ಮುಖ್ಯ ಶಿಕ್ಷಕರಿಗೆ ದೂರು ನೀಡಿದ್ದರು. ಇದನ್ನು ಅವರು ಆಡಳಿತ ಮಂಡಳಿ ಗಮನಕ್ಕೆ ತಂದಿದ್ದರು. ಶಿಕ್ಷಕನನ್ನು ಅಮಾನತು ಮಾಡಿದ್ದ ಆಡಳಿತ ಮಂಡಳಿ ಪೊಲೀಸ್‌ ಠಾಣೆಗೆ ದೂರು ನೀಡಿತ್ತು. ಇದರ ಆಧಾರದಲ್ಲಿ …

Read More »

ವಾಟ್ಸಾಪ್ ಸ್ಟೇಟಸ್ ವಿಚಾರಕ್ಕೆ ತಾಯಿ, ಮಗನ ಮೇಲೆ ಅನ್ಯಕೋಮಿನವರಿಂದ ಹಲ್ಲೆ

ಯಾದಗಿರಿ: ಯಾದಗಿರಿ ಜಿಲ್ಲೆ ಗುರುಮಠಕಲ್ ತಾಲೂಕಿನ ಪುಟ್ಬಾಕ್ ಗ್ರಾಮದಲ್ಲಿ ವಾಟ್ಸಾಪ್ ಸ್ಟೇಟಸ್ ವಿಚಾರಕ್ಕೆ ತಾಯಿ, ಮಗನ ಮೇಲೆ ಹಲ್ಲೆ ನಡೆಸಲಾಗಿದೆ. ಮಸೀದಿ ಮೇಲೆ ಕೇಸರಿ ಧ್ವಜ ಕಟ್ಟಿದ ರೀತಿಯಲ್ಲಿ ಸ್ಟೇಟಸ್ ಹಾಕಿದ ಆರೋಪ ಕೇಳಿ ಬಂದಿದ್ದು, ಇದೇ ಕಾರಣಕ್ಕೆ ಮನೆಗೆ ಹೋಗಿ ಸ್ಟೇಟಸ್ ಹಾಕಿದ ಯುವಕನ ಮೇಲೆ ಹಲ್ಲೆ ಮಾಡಲಾಗಿದೆ. ಮಗನನ್ನು ಹೊಡೆದಿದ್ದನ್ನು ಪ್ರಶ್ನಿಸಿದ್ದಕ್ಕೆ ತಾಯಿ ಮೇಲೆಯೂ ಹಲ್ಲೆ ನಡೆಸಲಾಗಿದೆ. ಶಿವ ಮಾಲಾಧಾರಿಗಳ ಕಾರ್ಯಕ್ರಮಕ್ಕೆ ಕೇಸರಿ ಧ್ವಜ ಹಾಕಲಾಗಿದ್ದು, ಇದೇ …

Read More »

ಮಹಿಳೆಯ ಚಿನ್ನದ ಸರ ಅಪಹರಣ: ಪ್ರಕರಣ ದಾಖಲು

ಗಂಗೊಳ್ಳಿ: ವಾಕಿಂಗ್ ಹೋಗುತ್ತಿದ್ದ ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಅಪರಿಚಿತರು ಅಪಹರಿಸಿ ಪರಾರಿಯಾಗಿರುವ ಘಟನೆ ತ್ರಾಸಿ ಗ್ರಾಮದ ಸಣ್ಣಕುಂಬ್ರಿ ಬಳಿ ಫೆ.3ರಂದು ಬೆಳಗ್ಗೆ ನಡೆದಿದೆ.ತ್ರಾಸಿ ಕುಂಬಿ ನಿವಾಸಿ ಸೀತಾ(83) ಎಂಬವರು ರಸ್ತೆಯಲ್ಲಿ ವಾಕಿಂಗ್ ಹೋಗುತ್ತಿದ್ದು, ಆಗ ಅಪರಿಚಿತ ವ್ಯಕ್ತಿ ಸೀತಾ ಅವರ ಹಿಂದಿನಿಂದ ಬಂದು ಜೀವ ಬೇದರಿಕೆ ಹಾಕಿ ಬಲಾತ್ಕಾರವಾಗಿ ಅವರ ಕುತ್ತಿಗೆಗೆ ಕೈ ಹಾಕಿ 22.470 ಗ್ರಾಂ ತೂಕದ ಸುಮಾರು 2 ಲಕ್ಷ ರೂ.ಮೌಲ್ಯದ ಚಿನ್ನದ ಸರವನ್ನು ಎಳೆದುಕೊಂಡು …

Read More »

‘ಖಾಸಗಿ ವಿಡಿಯೋ’ ಬೆದರಿಕೆಯೊಡ್ಡಿದ್ದವಗೆ ಕೇಸ್

ಹುಬ್ಬಳ್ಳಿ: ಅಪ್ರಾಪ್ತೆಗೆ ಪ್ರೀತಿಸುವಂತೆ ಒತ್ತಾಯಿಸಿದ್ದಲ್ಲದೆ ಖಾಸಗಿ ವಿಡಿಯೋ ಮೂಲಕ ಬೆದರಿಕೆಯೊಡಿದ್ದ ಗೋವಾ ಮೂಲದ ಯುವಕನ ವಿರುದ್ಧ ಇಲ್ಲಿಯ ಎಪಿಎಂಸಿ ನವನಗರ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದೆ.ತಮ್ಮ ಪಾಲಕರೊಂದಿಗೆ 2022ರಲ್ಲಿ ಗೋವಾಕ್ಕೆ ತೆರಳಿ ಬಾಲಕಿ ವಾಸವಾಗಿದ್ದಳು. ಈ ವೇಳೆ ತನ್ನ ಮನೆ ಪಕ್ಕದಲ್ಲಿ ವಾಸಿಸುತ್ತಿದ್ದ ಯುವಕನಿಗೆ ಪರಿಚಯವಾಗಿದ್ದಳು. ಈ ವೇಳೆ ಬಾಲಕಿಗೆ ತನ್ನನ್ನು ಪ್ರೀತಿಸುವಂತೆ ಯುವಕ ಒತ್ತಾಯಿಸಿದ್ದ. ಬಾಲಕಿ ನಿರಾಕರಿಸಿ, ಮರಳಿ ಹುಬ್ಬಳ್ಳಿಗೆ ಬಂದಿದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ಬಾಲಕಿಯ ಖಾಸಗಿ …

Read More »

ಆಸ್ತಿ ವಿವಾದ: ವೃದ್ಧ ಸಹೋದರರ ಜಗಳ ಓರ್ವನ ಕೊಲೆಯಲ್ಲಿ ಅಂತ್ಯ

ದಾವಣಗೆರೆ: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ವೃದ್ಧ ಸಹೋದರರಿಬ್ಬರ ಮಧ್ಯೆ ನಡೆದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ದಾವಣಗೆರೆ ತಾಲೂಕಿನ ಮಾಯಕೊಂಡ ಎಂಬಲ್ಲಿ ನಡೆದಿದೆ. ಕೊಲೆಯಾದವರನ್ನು ನೀಲಪ್ಪ (65) ಎಂದು ಗುರುತಿಸಲಾಗಿದೆ. ಅವರ ಅಣ್ಣ ಚಂದ್ರಪ್ಪ (68) ಕೊಲೆ ಆರೋಪಿಯಾಗಿದ್ದಾನೆ.ಆಸ್ತಿ ವಿಚಾರವಾಗಿ ಇವರಿಬ್ಬರ ನಡುವೆ ಅಡಿಕೆ ತೋಟದಲ್ಲಿ ಸೋಮವಾರ ಮಾತಿನ ಚಕಮಕಿ ನಡೆದಿದೆ. ಬಳಿಕ ಈ ಗಲಾಟೆ ತೀವ್ರ ಸ್ವರೂಪ ಪಡೆದಿದ್ದು, ಆರೋಪಿ ಚಂದ್ರಪ್ಪ ಮಚ್ಚಿನಿಂದ ನೀಲಪ್ಪರ ಮೇಲೆ ಹಲ್ಲೆ …

Read More »