Breaking News

Breaking News

ಟ್ರಾಫಿಕ್ ಸಿಗ್ನಲ್ ನಲ್ಲಿ ಗಲಾಟೆ; ನಡುರಸ್ತೆಯಲ್ಲೇ ಡ್ರ್ಯಾಗರ್ ಹಿಡಿದು ಬೆದರಿಸಿದ ಯುವಕ!

ಬೆಂಗಳೂರು: ಟ್ರಾಫಿಕ್ ಸಿಗ್ನಲ್ ಬಳಿ ಕಾರು ಚಾಲಕನೊಂದಿಗೆ ಗಲಾಟೆ ನಡೆಸಿ, ಕೈಯಲ್ಲಿ ಚಾಕು ಹಿಡಿದು ಬೆದರಿಕೆ ಹಾಕಿದ ಘಟನೆ ವೈಟ್‌ಫೀಲ್ಡ್ ವಿಭಾಗದಲ್ಲಿ ನಡೆದಿದೆ. ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, KA53 JB 3274 ನೋಂದಣಿ ಸಂಖ್ಯೆಯ ಬೈಕ್ ಸವಾರ ದುರ್ವರ್ತನೆ ತೋರಿದ್ದಾನೆ ಎಂದು ಆರೋಪಿಸಲಾಗಿದೆ. ಅರ್ಬಾಜ್ ಖಾನ್ ಎಂಬ ಹೆಸರಲ್ಲಿ ನೋಂದಣಿಯಾಗಿರುವ ಬೈಕ್ ಚಲಾಯಿಸುತ್ತಿದ್ದ ಯುವಕ, ಸಿಗ್ನಲ್ ಬಳಿ ಕಾರು ಚಾಲಕನೊಂದಿಗೆ ವಾಗ್ವಾದಕ್ಕಿಳಿದಿದ್ದಾನೆ. ಗಲಾಟೆ …

Read More »

ಯುವಕನ ಮೇಲೆ ಗೂಂಡಾಗಿರಿ.. ಹಾಡಹಗಲೇ ಯುವಕನನ್ನ ಆಟೋದಲ್ಲಿ‌ ಅಪಹರಣ…

ಎಲ್ಲಿ ದ್ದೀರಿ ಪೋಲೀಸ್ ಅಧಿಕಾರಿಗಳೇ… ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಗೂಂಡಾಗಿರಿ ನಿಲ್ಲುವ ಲಕ್ಷಣವೇ ಕಾಣಿಸುತ್ತಿಲ್ಲ.ದಿನೇ ದಿನೇ ನಗರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿದ್ದು, ಸಾರ್ವಜನಿಕರ ಭದ್ರತೆ ಪ್ರಶ್ನಾರ್ಥಕವಾಗುತ್ತಿದೆ.ಹಾಡಹಗಲೇ ಯುವಕನ ಮೇಲೆ ಗೂಂಡಾಗಿರಿ ನಡೆಸಿ, ಆಟೋದಲ್ಲಿ ಅಪಹರಣ ಮಾಡಿರುವ ಘಟನೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಅಣತಿ ದೂರದಲ್ಲೇ ನಡೆದಿದೆ.ಪ್ರೀತಿ ವಿಚಾರಕ್ಕೆ ಸಂಬಂಧಿಸಿದಂತೆ ಯುವತಿಯ ಪೋಷಕರು ಹಾಗೂ ಸಹೋದರರು ಯುವಕನ ಮೇಲೆ ಏಕಾಏಕಿ ಹಲ್ಲೆ ನಡೆಸಿ, ಬಲವಂತವಾಗಿ ಆಟೋದಲ್ಲಿ ಅಪಹರಣ ಮಾಡಿಕೊಂಡು ಹೋಗಿದ್ದಾರೆ …

Read More »

15 ಕೆಜಿ 483 ಗ್ರಾಂ ಗಾಂಜಾ ವಶ : ಮುಂಬೈ ಮೂಲದ ಇಬ್ಬರು ಗಾಂಜಾ ಪೆಡ್ಲರ್‌ಗಳು ಬಂಧನ…

ಹುಬ್ಬಳ್ಳಿಯಲ್ಲಿ ಮುಂಬೈನಿಂದ ಹಾವೇರಿ ಕಡೆಗೆ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಕಸಬಾಪೇಟ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ನೇತೃತ್ವದ ತಂಡವು ಅರೆಸ್ಟ್ ಮಾಡಿ, ಬರೋಬ್ಬರಿ 15 ಕೆ. ಜಿ. ಗಾಂಜಾ ವಶಪಡಿಸಿಕೊಂಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.ಮುಂಬೈ ಮೂಲದ ಪರೀಜ್ ಜಹೀರ್ ಖಾನ್ ಹಾಗೂ ಸಲ್ಮಾನ್ ರೈಜಾಖಾನ್ ಎಂಬುವರನ್ನು ಬಂಧಿಸಲಾಗಿದೆ. ನಿನ್ನೆ ದಿನದಂದು ಹಾವೇರಿ ಜಿಲ್ಲೆಯ ಹಾನಗಲ್‌ ಕಡೆಗೆ ಗಾಂಜಾ ಸಾಗಾಟ ಮಾಡುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಪೊಲೀಸರು ಇಬ್ಬರು ಗಾಂಜಾ ಪೆಡ್ಲರ್‌ಗಳನ್ನು …

Read More »

KSRTC ಬಸ್​​ಗೆ ಹಿಂದಿನಿಂದ ಬೊಲೆರೋ ಪಿಕ್-ಅಪ್ ಡಿಕ್ಕಿ: ಚಾಲಕ ಬದುಕಿದ್ದೇ ಪವಾಡ

ಚಾಲಕನ ನಿಯಂತ್ರಣ ತಪ್ಪಿ KSRTCಬಸ್​​ಗೆ ಹಿಂದಿನಿಂದ ಬೊಲೆರೋ ಪಿಕ್-ಅಪ್ ಡಿಕ್ಕಿಯಾಗಿರುವ ಘಟನೆ ನೆಲಮಂಗಲ ತಾಲೂಕಿನ ಕೆರೆಕತ್ತಗಿನೂರು ಗೇಟ್ ಬಳಿ ನಡೆದಿದೆ. ಅಪಘಾತದಲ್ಲಿ ಪವಾಡ ಎಂಬಂತೆ ಬೊಲೆರೋ ಪಿಕ್-ಅಪ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಘಟನೆ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ರಸ್ತೆಯ ಕಾಮಗಾರಿ ಹಿನ್ನೆಲೆ ಒಂದೇ ಟ್ರ್ಯಾಕ್​​ನಲ್ಲಿ ವಾಹನಗಳು ಸಂಚಾರ ನಡೆಸುತ್ತಿದ್ದು, ಎರಡು ದಿನದ ಹಿಂದೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

Read More »

ಹಳೇ ಹುಬ್ಬಳ್ಳಿ ಠಾಣೆ ಪಕ್ಕದಲ್ಲೇ ಗೂಂಡಾಗಿರಿ: ಪ್ರೀತಿಸಿದ ತಪ್ಪಿಗೆ ಯುವಕನ ಅಪಹರಣ!

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಗೂಂಡಾಗಿರಿ ನಿಲ್ಲುವ ಲಕ್ಷಣವೇ ಕಾಣಿಸುತ್ತಿಲ್ಲ. ದಿನೇ ದಿನೇ ನಗರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿದ್ದು, ಸಾರ್ವಜನಿಕರ ಭದ್ರತೆ ಪ್ರಶ್ನಾರ್ಥಕವಾಗುತ್ತಿದೆ.ಹಾಡಹಗಲೇ ಯುವಕನ ಮೇಲೆ ಗೂಂಡಾಗಿರಿ ನಡೆಸಿ, ಆಟೋದಲ್ಲಿ ಅಪಹರಣ ಮಾಡಿರುವ ಘಟನೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಅಣತಿ ದೂರದಲ್ಲೇ ನಡೆದಿದೆ. ಪ್ರೀತಿ ವಿಚಾರಕ್ಕೆ ಸಂಬಂಧಿಸಿದಂತೆ ಯುವತಿಯ ಪೋಷಕರು ಹಾಗೂ ಸಹೋದರರು ಯುವಕನ ಮೇಲೆ ಏಕಾಏಕಿ ಹಲ್ಲೆ ನಡೆಸಿ, ಬಲವಂತವಾಗಿ ಆಟೋದಲ್ಲಿ ಅಪಹರಣ ಮಾಡಿಕೊಂಡು ಹೋಗಿದ್ದಾರೆ ಎನ್ನಲಾಗಿದೆ.ಹಳೇ ಹುಬ್ಬಳ್ಳಿ …

Read More »

ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿ ಜೈಲಿನಲ್ಲಿಯೇ ಆತ್ಮಹತ್ಯೆಗೆ ಶರಣು

ಧಾರವಾಡ: ಕೊಲೆ ಆರೋಪದಲ್ಲಿ ಜೈಲು ಸೇರಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿ ಕಾರಾಗೃಹದಲ್ಲಿಯೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಧಾರವಾಡ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ.ಈಶ್ವರಪ್ಪ ಪೂಜಾರ್ ಆತ್ಮಹತ್ಯೆಗೆ ಶರಣಾದ ಕೈದಿ. 14 ವರ್ಷಗಳ ಜೈಲು ಶಿಕ್ಷೆ ಪೈಕಿ 7 ವರ್ಷ ಪೂರೈಸಿದ್ದ ಈಶ್ವರಪ್ಪ, ಇದೀಗ ಏಕಾಏಕಿ ಜೈಲಿನಲ್ಲಿಯೇ ನೇಣು ಬಿಗಿದಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಈಶ್ವರಪ್ಪ ಗದಗ ಜಿಲ್ಲೆಯ ಲಕ್ಷ್ಮೀಶ್ವರ ಮೂಲದವನು. ಪತ್ನಿ ಹತ್ಯೆಗೈದು ಜೈಲು ಸೇರಿದ್ದ. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯ ಈಶ್ವರಪ್ಪೆಗೆ …

Read More »

ಬಳ್ಳಾರಿ ಗಲಭೆ: ನಾಳೆ ನಡೆಯಲಿರುವ ಬಿಜೆಪಿ ಬೃಹತ್​ ಪ್ರತಿಭಟನೆ ರ‍್ಯಾಲಿ ಬಗ್ಗೆ ಎಸ್​​ಪಿ ಹೇಳಿದ್ದಿಷ್ಟು

ಬ್ಯಾನರ್​​​ ವಿಚಾರಕ್ಕೆ ಗಲಭೆ ಮತ್ತು ಫೈರಿಂಗ್ ಪ್ರಕರಣ ಘಟನೆ ಖಂಡಿಸಿ ಜ 17ರಂದು ಬಳ್ಳಾರಿಯಲ್ಲಿ ಬಿಜೆಪಿಯಿಂದ ಬೃಹತ್ ಪ್ರತಿಭಟನಾ ಸಮಾವೇಶ ನಡೆಯಲಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ.ಈ ಬಗ್ಗೆ ಎಸ್​​ಪಿ ಸುಮನ್ ಡಿ.ಪನ್ನೇಕರ್​ ಪ್ರತಿಕ್ರಿಯಿಸಿದ್ದು, ಸಮಾವೇಶದಲ್ಲಿ 15-20 ಸಾವಿರ ಜನ ಭಾಗಿಯಾಗುವ ಸಾಧ್ಯತೆ ಇದೆ. ಭದ್ರತೆಗಾಗಿ ಬೇರೆ ಜಿಲ್ಲೆಗಳಿಂದ ಅಧಿಕಾರಿಗಳು, ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಇಬ್ಬರು ಎಸ್​ಪಿ, 7 ಹೆಚ್ಚವರಿ ಎಸ್​​​ಪಿ, 15 …

Read More »

ಬಾಂಗ್ಲಾದೇಶದಲ್ಲಿ ನಿಲ್ಲದ ದೌರ್ಜನ್ಯ: ಹಿಂದು ಶಿಕ್ಷಕನ ಮನೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು!

ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲಿನ ದೌರ್ಜನ್ಯ ಮುಂದುವರೆದಿದೆ. ಹಿಂದು ಶಿಕ್ಷಕರೊಬ್ಬರ ಮನೆಯನ್ನು ಗುರಿಯಾಗಿಸಿಕೊಂಡು ಬೆಂಕಿ ಹಚ್ಚಲಾಗಿದೆ.ದಾಳಿಕೋರರು ರಾತ್ರಿ ವೇಳೆ ಮನೆಗೆ ಬೆಂಕಿ ಹಚ್ಚಿದ ಘಟನೆ ಸಂಭವಿಸಿದೆ. ಅದೃಷ್ಟವಶಾತ್‌, ಘಟನೆಯ ಸಮಯದಲ್ಲಿ ಕುಟುಂಬ ಸದಸ್ಯರು ಸುರಕ್ಷಿತವಾಗಿ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.ಶಿಕ್ಷಕ ಬೀರೇಂದ್ರ ಕುಮಾರ್‌ ಎಂದು ಗುರುತಿಸಿಕೊಳ್ಳಲಾಗಿದೆ. ಈ ವಾರದ ಆರಂಭದಲ್ಲಿ, ಫೆನಿ ಜಿಲ್ಲೆಯ ದಗನ್‌ಭುಯಾನ್ ಉಪಜಿಲ್ಲಾದಲ್ಲಿ ಮತ್ತೊಬ್ಬ ಹಿಂದು ವ್ಯಕ್ತಿಯನ್ನು ದುಷ್ಕರ್ಮಿಗಳು ಕಡಿದು, ಇರಿದು ಕೊಂದಿದ್ದರು. ಬಾಂಗ್ಲಾದೇಶದ ಜಗತ್‌ಪುರ ಗ್ರಾಮದ ಬೆಳೆ ಹೊಲದಿಂದ 27 …

Read More »

ಬೆಂಗಳೂರಲ್ಲಿ ‘BMTC’ ಬಸ್ ನಲ್ಲಿ ಟಿಕೆಟ್ ಪಡೆಯದೆ, ಉದ್ಧಟತನ : ಶಕ್ತಿ ಯೋಜನೆ ಟಿಕೆಟ್ ಕೊಟ್ರು ಹರಿದು ಹಾಕಿ ಮಹಿಳೆ ದರ್ಪ!

ಬೆಂಗಳೂರಲ್ಲಿ ‘BMTC’ ಬಸ್ ನಲ್ಲಿ ಟಿಕೆಟ್ ಪಡೆಯದೆ, ಉದ್ಧಟತನ : ಶಕ್ತಿ ಯೋಜನೆ ಟಿಕೆಟ್ ಕೊಟ್ರು ಹರಿದು ಹಾಕಿ ಮಹಿಳೆ ದರ್ಪ!ಹಣಕೊಟ್ಟು ಟಿಕೆಟ್ ತೆಗೆದುಕೊಳ್ಳುವಂತೆ ಕಂಡಕ್ಟರ್ ಹೇಳಿದ್ದಾರೆಆದರೂ ಸಹ ಟಿಕೆಟ್ ಪಡೆಯದೆ ಮಹಿಳೆ ಉದ್ಧಟತನ ತೋರಿದ್ದಾರೆ. ಚೆಕಿಂಗ್ ನವರು ಬರುತ್ತಾರೆ ಅಂತ ಹೇಳಿದರೆ, ಯಾರಾದರೂ ಬರಲಿ ನಾನು ಮಾತನಾಡುತ್ತೇನೆ ಅಂತ ಉದ್ಧಟತನ ತೋರಿದ್ದಾರೆ. ಇನ್ನೋರ್ವ ಮಹಿಳೆ ಮೇಡಂ ಟಿಕೆಟ್ ತೊಗೊಳ್ಳಿ ನಿಮ್ ಜೊತೆ ನಮಗೂ ಲೇಟ್ ಆಗುತ್ತೆ ಎಂದಿದ್ದಾರೆ. ಏನ್ …

Read More »

ಗೌರಿಬಿದನೂರು: ಚಿನ್ನದ ಸರ ಕಸಿದು ಪರಾರಿ

ಗೌರಿಬಿದನೂರು: ನಗರದ ಶ್ರೀನಗರ ಬಡಾವಣೆಯಲ್ಲಿ ಸಂಕ್ರಾಂತಿ ಹಬ್ಬದ ದಿನವೇ ಕಳ್ಳರು ಕೈಚಳಕ ತೋರಿಸಿದ್ದಾರೆ.ಚಂದ್ರಲೀಲಾ ಎಂಬುವವರು ಬೆಳಗ್ಗೆ ಹಾಲು ತರಲು ಹೋಗುತ್ತಿದ್ದಾಗ ಹೆಲ್ಮೆಟ್ ಧರಿಸಿ ಬೈಕ್‌ನಲ್ಲಿ ಬಂದ ಇಬ್ಬರು ಕಳ್ಳರು, ಆಕೆಯ ಕತ್ತಿನಲ್ಲಿದ್ದ 50 ಗ್ರಾಂ ಚಿನ್ನದ ಸರವನ್ನು ಕಸಿದುಕೊಳ್ಳಲು ಯತ್ನಿಸಿದ್ದಾರೆ. ಮಹಿಳೆ ಪ್ರತಿರೋಧ ತೋರಿ ಕಿರುಚಾಡಿದ್ದರಿಂದ ಕಳ್ಳರ ಕೈಗೆ 20ಗ್ರಾಂ ನಷ್ಟು ಚಿನ್ನದ ಸರ ಮಾತ್ರ ಸಿಕ್ಕಿದ್ದು ಅದನ್ನೇ ಕಸಿದುಕೊಂಡು ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾ ಹೆಚ್ಚುವರಿ ಪೋಲಿಸ್ ಅಧೀಕ್ಷಕ …

Read More »