Breaking News

ಸರ್ಕಾರದ ನಡೆಯಿಂದ ಬೇಸತ್ತು ರಾಜೀನಾಮೆ ನೀಡಿದ ಶಾಸಕರು

ಚಿತ್ರದುರ್ಗ: ಒಂದು ವರ್ಷದಿಂದ ರಾಜ್ಯದಲ್ಲಿ ಮೈತ್ರಿ ಸರ್ಕಾರದ ಭ್ರಷ್ಟಾಚಾರ ಜಾಸ್ತಿ ಆಗಿತ್ತು. ಸರ್ಕಾರದ ನಡೆಯಿಂದ ಬೇಸತ್ತು ಶಾಸಕರು ರಾಜೀನಾಮೆ ನೀಡಿದ್ದಾರೆ ಎಂದು ಶಾಸಕ ಶ್ರೀರಾಮುಲು‌ ಹೇಳಿದರು.ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರ ಕೇವಲ ಐದಾರು ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿತ್ತು. ಮಧ್ಯ ಕರ್ನಾಟಕ ಹಾಗೂ ಉತ್ತರ ಕರ್ನಾಟಕವನ್ನು ಸಂಪೂರ್ಣ ಕಡೆಗಣನೆ ಮಾಡಿ ಆಡಳಿತದ ಚುಕ್ಕಾಣಿ ಹಿಡಿದಿದ್ದರಿಂದ ರಾಜ್ಯದಲ್ಲಿ ಆಡಳಿತ ಯಂತ್ರ ಕುಸಿದು ಹೋಗಿತ್ತು. ಈ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ ಶಾಸಕರು ರಾಜೀನಾಮೆ ನೀಡಿದ್ದಾರೆ ಎಂದರು.ಸ್ವಯಂ ಪ್ರೇರಣೆಯಿಂದ ಶಾಸಕರು ರಾಜೀನಾಮೆ ನೀಡುವುದನ್ನು ಸ್ಪೀಕರ್ ಪರಿಗಣಿಸಿ ರಾಜೀನಾಮೆಯನ್ನು ಅಂಗೀಕರಿಸಬೇಕು. ಸ್ಪೀಕರ್ ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ.ಶಾಸಕರು ರಾಜೀನಾಮೆ ಕೊಡುವಾಗ ಅವರು ಅಲ್ಲಿರಬೇಕು.ನನ್ನ ಅಪಾಯಿಂಟ್ನೆಂಟ್ ತಗೋಬೇಕು ಅನ್ನೋದು ಸರಿಯಲ್ಲ. ಅವರ‌ ಮನೆಯಲ್ಲಿ ಆದರೂ ರಾಜಿನಾಮೆ ತೆಗೆದುಕೊಳ್ಳಬೇಕು. ಸ್ಪೀಕರ್ ಅಲ್ಲಿಲ್ಲ, ಇಲ್ಲಿಲ್ಲ ಎನ್ನುವ ಕುಂಟು ನೆಪ ಹೇಳಬಾರದು ಎಂದು ಚಾಟಿ ಬೀಸಿದರು.ಸ್ಪೀಕರ್ ಸ್ಥಾನದ ಬಗ್ಗೆ ನಮಗೆ ಗೌರವ ಇದೆ.ಕಾಲಾವಕಾಶ ತೆಗೆದುಕೊಳ್ಳುವುದರಲ್ಲಿ ಅರ್ಥ ಇಲ್ಲ.ಟೈಂ ಮುಗಿದು ಹೋಗಿದೆ. ಸಿಎಂ ರಾಜಿನಾಮೆ ಕೊಡಬೇಕು ಎಂದರು.ರಾಜೀನಾಮೆ ಪತ್ರ ಹರಿದ ಪ್ರಕರಣ ಕುರಿತು ಪ್ರತಿಕ್ರಿಯಿಸಿ, ಡಿಕೆಶಿ ಮೊದಲಿನಿಂದ ಈ ಸಂಪ್ರದಾಯ ಬೆಳೆಸಿಕೊಂಡು ಬಂದಿದ್ದಾರೆ.ಅವರ ಮನೆ ಮೇಲೆ ಐಟಿ ರೇಡ್ ಆದಾಗಲೂ‌ ಕಾಗದ ಪತ್ರ ಹರಿದು ಹಾಕಿದ್ದರು ಎಂದು ನೆನಪಿಸಿದರು.

Share News

About admin

Check Also

ಸಚಿವರಿಗೆ ಖಾತೆ ಹಂಚಿದ ಸಿಎಂ ಡಿಕೆಶಿ..! ಯಾರಿಗೆ ಯಾವ ಖಾತೆ ಸಿಕ್ಕಿತು..?

ಡಿಕೆಶಿ ಸರ್ಕಾರದಲ್ಲಿ ಖಾತೆ ಫಿಕ್ಸ್..! ಕೆಲವರಿಗೆ ಹಳೆ ಖಾತೆ, ಕೆಲವರಿಗೆ ಹೊಸ ಜವಾಬ್ದಾರಿ..! ಬೆಂಗಳೂರು: ಸಚಿವರಿಗೆ ಖಾತೆ ಹಂಚಿದ ಸಿಎಂ …

Leave a Reply

Your email address will not be published. Required fields are marked *