Breaking News

Breaking News

ಅಂತ್ಯಸಂಸ್ಕಾರಕ್ಕೆ ತಯಾರಿ ನಡೆಸುವಾಗ ಕಣ್ಣು ತೆರೆದ 103 ವರ್ಷ ವಯಸ್ಸಿನ ಅಜ್ಜಿ

ಯಾರದ್ದಾದರೂ ಅಂತ್ಯಸಂಸ್ಕಾರ ನಡೆಯುತ್ತಿದ್ದು, ಸಡನ್ ಆಗಿ ಆ ವ್ಯಕ್ತಿ ಕಣ್ಣು ತೆಗೆದು ಎಲ್ಲರನ್ನೂ ನೋಡಿದರೆ, ಹೇಗನ್ನಿಸುತ್ತದೆ..? ಕೆಲವರಿಗೆ ಖುಷಿಯಾಗುತ್ತದೆ. ಇನ್ನು ಕೆಲವರಿಗೆ ಹೆದರಿಕೆಯಾಗುತ್ತದೆ. ಸ್ವಲ್ಪ ಸಮಯದ ಬಳಿಕ, ವ್ಯಕ್ತಿ ಸತ್ತಿಲ್ಲ, ಬದುಕಿದ್ದಾನೆಂದು ಅರ್ಥವಾಗುತ್ತದೆ.ಇದೇ ರೀತಿ ಘಟನೆ ನಾಗ್ಪುರದ ರಾಮ್ಟೆಕ್ ಎಂಬಲ್ಲಿ ನಡೆದಿದೆ. ಗಂಗಾಬಾಯಿ ಸಾವ್ಜಿ ಸಖ್ರಾ ಎಂಬ 103 ವರ್ಷದ ವೃದ್ಧೆ ಅನಾರೋಗ್ಯದ ಕಾರಣ ಹಾಸಿಗೆ ಹಿಡಿದಿದ್ದರು. ಪ್ರತಿದಿನ 2 ಸ್ಪೂನ್ ನೀರು ಸೇವಿಸುತ್ತಿದ್ದರು. ಆದರೆ ಸೋಮವಾರ ಅವರ ದೇಹದ …

Read More »

ಬೈಕ್ ಸವಾರನ ಸಾವು: ಬಸ್ ಚಾಲಕನಿಗೆ ಜೈಲು

ಕೂಡ್ಲಿಗಿ: ಅತಿವೇಗ ಹಾಗೂ ಅಜಾರೂಕತೆಯಿಂದ ಬಸ್ ಚಲಾಯಿಸಿ ಅಪಘಾತ, ಬೈಕ್ ಸವಾರನ ಸಾವಿಗೆ ಕಾರಣವಾಗಿದ್ದ ಚಾಲಕ ಆನಂದ್ ಸಿಂಗ್ ರಜಪೂತ್‍ಗೆ 6 ತಿಂಗಳು ಶಿಕ್ಷೆ ನೀಡಿ ನ್ಯಾಯಾಧೀಶರು ಆದೇಶಿಸಿದ್ದಾರೆ.2022ರ ಜ. 20ರಂದು ಗುರುಪ್ರಶಾಂತ ಎಂಬವರು ತಮ್ಮ ಬೈಕಿನಲ್ಲಿ ಸುದೀಪ್ ಹಾಗೂ ವೆಂಕಟೇಶ್ ಅವರನ್ನು ಕೂಡಿಸಿಕೊಂಡು ಕೂಡ್ಲಿಗಿ ಕಡೆಯಿಂದ ಕೊಟ್ಟೂರು ಕಡೆ ಹೋಗುವಾಗ ಬತ್ತನಹಳ್ಳಿ ಕ್ರಾಸ್ ಬಳಿ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಆನಂದಸಿಂಗ್ ರಜಪೂತ್ ಎದುರಿಗೆ ಬರುತ್ತಿದ್ದ ಮೋಟರ್ ಸೈಕಲ್‍ಗೆ ಡಿಕ್ಕಿ …

Read More »

ಹುಬ್ಬಳ್ಳಿಯಲ್ಲಿ ಅಣ್ಣ-ತಮ್ಮನ ನಡುವೆ ರಕ್ತಪಾತ: ಕ್ಷುಲ್ಲಕ ಕಾರಣಕ್ಕೆ ಅಣ್ಣನ ಮೇಲೆ ಚಾಕು ದಾಳಿ – ಸ್ಥಿತಿ ಗಂಭೀರ

ಹುಬ್ಬಳ್ಳಿ: ಕ್ಷುಲ್ಲಕ ಕಾರಣ ಹಾಗೂ ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಅಣ್ಣನ ಮೇಲೆಯೇ ತಮ್ಮನು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಹಳೇಹುಬ್ಬಳ್ಳಿಯ ಶಿವಶಂಕರ ಕಾಲೋನಿಯಲ್ಲಿ ನಡೆದಿದೆ.ಶಿವಶಂಕರ ಕಾಲೋನಿಯ ನಿವಾಸಿ ಮಲ್ಲೇಶ್ ಪೂಜಾರ (42) ಅವರ ಮೇಲೆ, ಅವರ ಸ್ವಂತ ತಮ್ಮ ಪ್ರದೀಪ್ ಎಂಬಾತ ಚಾಕುವಿನಿಂದ ಮನಬಂದಂತೆ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಮಲ್ಲೇಶ್ ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವು–ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.ಗುರುವಾರ ಬೆಳಿಗ್ಗೆ ಮಲ್ಲೇಶ್ ಅವರು ತಮ್ಮ ಮನೆಯ …

Read More »

ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಘಟನೆ : 11 ಎಕರೆ ಆಸ್ತಿಗಾಗಿ ಅಜ್ಜಿಯನ್ನೇ ಭೀಕರವಾಗಿ ಕೊಲೆ ಮಾಡಿದ ಪಾಪಿಗಳು!

ಬಾಗಲಕೋಟೆ : ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಘಟನೆ ಒಂದು ನಡೆದಿದ್ದು 11 ಎಕರೆ ಆಸ್ತಿಗಾಗಿ ಅಜ್ಜಿಯನ್ನೇ ಭೀಕರವಾಗಿ ಆಕೆಯ ಅಣ್ಣನ ಮಕ್ಕಳು ಕೊಲೆ ಮಾಡಿದ್ದಾರೆ. ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಜಗಳದಾಳದಲ್ಲಿ ಈ ಒಂದು ಭೀಕರ ಕೊಲೆ ನಡೆದಿದೆ.ಆಸ್ತಿಗಾಗಿ ದಾನಜ್ಜಿ ಎಂದೇ ಖ್ಯಾತಿಯಾಗಿದ್ದ ಚಂದ್ರವ್ವ ನೀಲಗಿಯನ್ನು ಭೀಕರವಾಗಿ ಕೊಲೆ ಮಾಡಿದ್ದಾರೆ ದಾನಜ್ಜಿ ಎಂದೆ ಹೆಸರಾಗಿದ್ದ ಚಂದ್ರವ್ವ ನೀಲಗಿಯ ಭೀಕರ ಕೊಲೆಯಾಗಿದ್ದು, ಬಾಗಲಕೋಟೆ ಜಿಲ್ಲೆಯಲ್ಲಿ ದಾನಜ್ಜಿಯ ಅಣ್ಣನ ಮಕ್ಕಳು ಈ …

Read More »

ಈಜಲು ತೆರಳಿದ್ದ ವಿದ್ಯಾರ್ಥಿಗಳಿಬ್ಬರು ಕೆರೆಯಲ್ಲಿ ಮುಳುಗಿ ಸಾವು

ಈಜಲು ತೆರಳಿದ್ದ ವಿದ್ಯಾರ್ಥಿಗಳಿಬ್ಬರು ಕೆರೆಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಕನಕಪುರ ತಾಲೂಕಿನ ಕಬ್ಬಾಳು ಕೆರೆಯಲ್ಲಿ ನಡೆದಿದೆ.ತನುಷ್ (18), ಸಂತೋಷ್ (19) ಮೃತ ವಿದ್ಯಾರ್ಥಿಗಳು. ಬುಧವಾರ ಕಬ್ಬಾಳು ದೇವಾಲಯಕ್ಕೆ ಬೆಂಗಳೂರಿನ ಬನಶಂಕರಿ ಕಾಲೇಜಿನ 11 ವಿದ್ಯಾರ್ಥಿಗಳು ಬಂದು ದೇವಿ ದರ್ಶನದ ಬಳಿಕ ಕಬ್ಬಾಳು ಕೆರೆಯಲ್ಲಿ ಈಜಲು ತೆರಳಿದ್ದಾರೆ.ಈ ವೇಳೆ ಓರ್ವ ವಿದ್ಯಾರ್ಥಿ ನೀರಿನಲ್ಲಿ ಮುಳುಗಿದ್ದು, ಆತನನ್ನ ರಕ್ಷಣೆ ಮಾಡಲು ಹೋದ ಮತ್ತೋರ್ವ ವಿದ್ಯಾರ್ಥಿ ಕೂಡಾ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಸಾತನೂರು …

Read More »

ಬೆಂಗಳೂರಿನಲ್ಲಿ ಸಿಲಿಂಡರ್ ಸ್ಫೋಟ: ಅಕ್ರಮ ಬಾಂಗ್ಲಾ ವಲಸಿಗರು ನೆಲೆಸಿದ್ದ ಶೆಡ್ ಗಳು ಬೆಂಕಿಗಾಹುತಿ

ಬೆಂಗಳೂರಿನಲ್ಲಿ ಅಕ್ರಮವಾಗಿ ಬಾಂಗ್ಲಾ ವಲಸಿಗರು ನೆಲೆಸಿರುವ ಶೆಡ್ ಬಳಿ ಬೆಂಕಿ ಅವಘಡ ಸಂಭವಿಸಿದೆ. ಬೆಂಗಳೂರು ಹೊರವಲಯದ ಬೇಗೂರು ಬಳಿ ಈ ಘಟನೆ ನಡೆದಿದೆ.ಸಿಲಿಂಡರ್ ಸ್ಫೋಟಗೊಂಡು ಬೆಂಕಿ ಅವಘಡ ಸಂಭವಿಸಿದೆ ಎನ್ನಲಾಗಿದೆ. ಬೇಗೂರು ಬಳಿಯ ಯಲೇನಹಳ್ಳಿ ಬಳಿಯ ಡಂಪಿಂಗ್ ಯಾರ್ಡ್ ಬಳಿ ಈ ಘಟನೆ ನಡೆದಿದೆ.ಇಲ್ಲಿ ೫ ಎಕರೆ ಜಾಗದಲ್ಲಿ ಬಾಂಗ್ಲ ಅವಲಸಿಗರು ಅಕ್ರಮವಾಗಿ ನೆಲೆಸಿದ್ದರು. ಕೆಲ ದಿನಗಳ ಹಿಂದಷ್ಟೇ ಅವರನ್ನು ಖಾಲಿ ಮಾಡಿಸಿ ಶೆಡ್ ಗಳನ್ನು ತೆರವು ಮಾಡಲಾಗಿತ್ತು. ಆದರೆ …

Read More »

ಮೈಸೂರಿನಲ್ಲಿ ಕಳ್ಳರ ಕೈಚಳಕ : ಹುಂಡಿ ಹಣ ಹಾಗೂ ದೇವರ ಆಭರಣ ದೋಚಿದ ಕಳ್ಳರು

ದೇವಸ್ಥಾನದ ಹುಂಡಿ ಒಡೆದು ಲಕ್ಷಾಂತರ ಹಣ ದೋಚಿರುವ ಘಟನೆ ಮೈಸೂರು ಜಿಲ್ಲೆಯ ಸರಗೂರು ತಾಲೂಕಿನ ತೊರವಳ್ಳಿ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ಮಹಾಬಲೇಶ್ವರ ದೇವಸ್ಥಾನದಲ್ಲಿ ನಿನ್ನೆ ರಾತ್ರಿ ಕಳ್ಳತನ ಆಗಿದೆತಡರಾತ್ರಿ ದೇವಾಲಯದ ಆವರಣಕ್ಕೆ ಆಗಮಿಸಿದ ಖದೀಮರು, ದೇವಾಲಯದ ಹುಂಡಿ ಒಡೆದು ಸುಮಾರು. 50 ಸಾವಿರಕ್ಕೂ ಹೆಚ್ಚಿನ ಮೊತ್ತ ಹಣ ದೋಚಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೆ ಬೆಳ್ಳಿ ವಿಗ್ರಹಗಳು, ಕಂಚಿನ ಆಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ.ಬೆಳಗ್ಗೆ ಪೂಜೆ ಮಾಡಲು ದೇವಸ್ಥಾನಕ್ಕೆ ಬಂದಾಗ ಕಳ್ಳತನ ಆಗಿರುವುದು ಬೆಳಕಿಗೆ …

Read More »

ಹಬ್ಬದ ದಿನವೇ ಬೆಂಗಳೂರಿನಲ್ಲಿ ಭೀಕರ ಅಪಘಾತ: ಬೈಕ್ ಸವಾರ ಸ್ಥಳದಲ್ಲೇ ದುರ್ಮರಣ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಭೀಕರ ಅಪಘಾತ ಸಂಭವಿಸಿದೆ. ಖಾಸಗಿ ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿ ಈ ದುರಂತ ಸಂಭವಿಸ್ದೆ. ಬೈಕ್ ಸವಾರ ಫಾಸರ್ (75) ಮೃತ ದುರ್ದೈವಿ. ಬಸ್ ಡಿಕ್ಕಿಯಾಗಿ ಕೆಳಗೆ ಬಿದ್ದ ಬೈಕ್ ಸವಾರನ ಮೇಲೆಯೇ ಬಸ್ ನ ಚಕ್ರ ಹರಿದು ಹೋಗಿದೆಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೆಂಗಳುರಿನಿಂದ ಕೃಷ್ಣಗಿರಿಗೆ ತೆರಳುತ್ತಿದ್ದ ಖಾಸಗಿ ಬಸ್ ಡಿಕ್ಕಿಯಾಗಿ ಈ …

Read More »

ಕೋಲಾರದಲ್ಲಿ ಲವ್ ಕ್ರೈಂ: ಪ್ರೀತಿ ನಿರಾಕರಣೆ ಕಾರಣ ಚಾಕುವಿನಿಂದ ಇರಿದು ಮಹಿಳೆ ಹತ್ಯೆ

ಕೋಲಾರದಲ್ಲಿ ಪ್ರೀತಿ ನಿರಾಕರಣೆ ಹಿನ್ನೆಲೆಯಲ್ಲಿ ಮಹಿಳೆಯೊಬ್ಬಳನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ವರದಿಯಾಗಿದೆ. ಕೋಲಾರದ ಹೊರವಲಯದ ಬಂಗಾರಪೇಟೆ ರಸ್ತೆಯಲ್ಲಿ ಈ ಭೀಕರ ಕೊಲೆ ನಡೆದಿದೆ. ಮೃತ ಮಹಿಳೆಯನ್ನು ಸುಜಾತ (27) ಎಂದು ಗುರುತಿಸಲಾಗಿದ್ದು, ಬಂಗಾರಪೇಟೆ ತಾಲೂಕಿನ ದಾಸರ ಹೊಸಹಳ್ಳಿ ಗ್ರಾಮದ ನಿವಾಸಿಯಾಗಿದ್ದಾರೆ. ಸುಜಾತ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಕೆಲಸಕ್ಕೆ ತೆರಳುತ್ತಿದ್ದಳು ಎಂದು ತಿಳಿದುಬಂದಿದೆ.ಆರೋಪಿ ಚಿರಂಜೀವಿ, ಹೊಸಪೇಟೆಯ ಇಂಡಸ್ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದನು. ಸಾಲ ವಸೂಲಿಗೆ ತೆರಳಿದ ವೇಳೆ …

Read More »

ಬೆಳ್ತಂಗಡಿ : ಧನು ಪೂಜೆಗೆಂದು ಹೋದ ಬಾಲಕ ನಾಪತ್ತೆ

ಧನು ಪೂಜೆಗೆ ಹೋದ 9ನೇ ತರಗತಿ ವಿದ್ಯಾರ್ಥಿಯೊಬ್ಬ ನಾಪತ್ತೆಯಾದ ಘಟನೆ ಜ.14ರಂದು ಬುಧವಾರ ಬೆಳಿಗ್ಗೆ ಬೆಳ್ತಂಗಡಿ ತಾಲ್ಲೂಕಿನ ಕುವೆಟ್ಟು ಗ್ರಾಮದ ಸಂಬೋಳ್ಯ ಸಮೀಪದ ಬರಮೇಲು ಪ್ರದೇಶದಲ್ಲಿ ನಡೆದಿದೆ.ನಾಪತ್ತೆಯಾದ ಬಾಲಕನು ಕುವೆಟ್ಟು ಗ್ರಾಮದ ಬರಮೇಲು ನಿವಾಸಿ ಸುಮಂತ್ (16) ಎಂದು ಗುರುತಿಸಲಾಗಿದೆ.ಗೇರುಕಟ್ಟೆ ಸರ್ಕಾರಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿಯಾಗಿರುವ ಸುಮಂತ್, ಇಂದು ಮುಂಜಾನೆ ಸುಮಾರು 5 ಗಂಟೆ ವೇಳೆಗೆ ಸಮೀಪದ ಕಳಿಯ ಗ್ರಾಮದ ನಾಳದ ದೇವಸ್ಥಾನಕ್ಕೆ ಧನು ಪೂಜೆಗೆ ತೆರಳಿದ್ದ. ಈ …

Read More »