ಮಹಿಳೆಯ ಜೊತೆ ನಿರ್ವಾಹಕನೊಬ್ಬ ಅನುಚಿತ ವರ್ತನೆ ಮಾಡಿರುವ ವಿಡಿಯೋ ವೈರಲ್ ಆಗಿದೆ.
ಧಾರವಾಡ ಜಿಲ್ಲೆಯ ನಲವಡಿಯಿಂದ ಹುಬ್ಬಳ್ಳಿ ಕಡೆಗೆ ತೆರಳುತ್ತಿದ್ದ ಸಾರಿಗೆ ಬಸ್ ನಲ್ಲಿ ಈ ಘಟನೆ ನಡೆದಿದೆ.
ಮಾನಸಿಕ ಅಸ್ವಸ್ಥಳಾದ ಮಹಿಳೆ ಟಿಕೆಟ್ ಪಡೆಯದೆ ಪ್ರಯಾಣ ಮಾಡುತ್ತಿದ್ದರಿಂದ ನಿರ್ವಾಹಕ ಮಹಿಳೆ ಜೊತೆ ಅನುಚಿತವಾಗಿ ವರ್ತನೆ ಮಾಡಿದ್ದಾನೆ. ಟಿಕೆಟ್ ತಗೆದುಕೊಳ್ಳುವಂತೆ ಮಹಿಳೆಯ ಮೈ ಕೈ ಮುಟ್ಟಿ ಪೀಡಿಸಿದ್ದಾನೆ. ಅಲ್ಲಿದ್ದ ಸಹ ಪ್ರಯಾಣಿಕರು ಮಹಿಳೆ ಯರ ಜೊತೆ ಸರಿಯಾಗಿ ವರ್ತನೆ ಮಾಡಿ ಎಂದು ಹೇಳಿದ್ದಾರೆ. ಆದರೆ ಕಂಡಕ್ಟರ್
ಮಹಿಳೆಯ ಮೈ ಮೇಲೆ ಹೋಗಿ ಅನುಚಿತ ವರ್ತನೆ ತೋರಿದ್ದಾನೆ. ಇದರಿಂದ ಆಕ್ರೋಶಗೊಂಡ ಪ್ರಯಾಣಿಕರು ಕಂಡಕ್ಟರ್ ನನ್ನು ತರಾಟೆಗೆ ತಗೆದುಕೊಂಡರು.
ಈ ಮಹಿಳೆ ಪ್ರತಿ ಬಾರಿಯೂ ಇದೇ ರೀತಿ ಮಾಡುತ್ತಾಳೆ ಎಂದು ಕಂಡಕ್ಡರ್ ಆರೋಪಿಸಿದ್ದಾನೆ. ಆಗ ಮಧ್ಯ ಪ್ರವೇಶ ಮಾಡಿದ ಸಹ ಪ್ರಯಾಣಿಕರು ಪರಸ್ಥಿತಿ ತಿಳಿಗೊಳಿಸಿದರು. ಬಸ್ ನಲ್ಲಿನ ಈ ಘಟನೆಯನ್ನು ಪ್ರಯಾಣಿಕನೋರ್ವ ವಿಡಿಯೋ ಮಾಡಿ ವೈರಲ್ ಮಾಡಿದ್ದಾನೆ.
bigtvnews | Hubli Dharwad News | Kannada News | Karnataka News Hubli News | News In Hubli | Local news




