Breaking News

Breaking News

ಹುಬ್ಬಳ್ಳಿಯಲ್ಲಿ ಘೋರ ಕೃತ್ಯ: ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ, ಆರೋಪಿಗಳು ಅರೆಸ್ಟ್

ನಗರದಲ್ಲಿ ಅಸಹಾಯಕ ಮಹಿಳೆಯೊಬ್ಬಳ ಮೇಲೆ ಇಬ್ಬರು ನರಾಧಮರು ಸಾಮೂಹಿಕ ಅತ್ಯಾಚಾರ ಎಸಗಿ, ಆ ವಿಕೃತ ಕೃತ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವ ಅಮಾನವೀಯ ಘಟನೆ ಹಳೆ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಕಳೆದ 9ರಂದು ನಗರದ ಅಂಬೇಡ್ಕರ್ ಮೈದಾನದ ಸಮೀಪ ಆಟೋದಲ್ಲಿ ಮಹಿಳೆಯನ್ನು ಕರೆದೊಯ್ದ ಆರೋಪಿಗಳು, ಮದ್ಯಪಾನ ಮಾಡಿಸಿ ಏಕಾಂತ ಸ್ಥಳಕ್ಕೆ ಕರೆದೊಯ್ದು ಈ ಘೋರ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತಕ್ಷಣ …

Read More »

ಎರಡು ತಿಂಗಳ ಗರ್ಭಿಣಿ ಪತಿ ಮನೆಯಲ್ಲಿಯೇ ಶವವಾಗಿ ಪತ್ತೆ

ಎರಡು ತಿಂಗಳ ಗರ್ಭಿಣಿ ಪತಿ ಮನೆಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ ನಡೆದಿದೆ.ಸವಿತಾ ದೊಡ್ಡಮನಿ (35) ಮೃತ ಗರ್ಭಿಣಿ. ಪತಿ ಹಾಗೂ ಕುಟುಂಬದವರೇ ವರದಕ್ಷಿಣೆ ಕಿರುಕುಳ ನೀಡಿ ಕೊಲೆಗೈದಿದದರೆ ಎಂದು ಸವಿತಾ ಪೋಷಕರು ಆರೋಪಿಸಿದ್ದಾರೆ.ಸವಿತಾ ಹಾಗೂ ಗಿರೀಶ್ ಮದುವೆಯಾಗಿ 9 ತಿಂಗಳಾಗಿತ್ತು. ಸವಿತಾ 2 ತಿಂಗಳ ಗರ್ಭಿಣಿಯಾಗಿದ್ದಳು. ವರದಕ್ಷಿಣೆಗಾಗಿ ಸವಿತಾಳನ್ನು ಪತಿ ಹಾಗೂ ಮನೆಯವರು ಹಿಂಸಿಸುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಇದೀಗ ಇದ್ದಕ್ಕಿದ್ದಂತೆ ಸವಿತಾ ಪತಿ ಮನೆಯಲ್ಲಿ …

Read More »

ಬೆಳಗಾವಿಯಲ್ಲಿ ಮಕ್ಕಳ ವೈದ್ಯನ ಮನೆಯಲ್ಲಿ 134 ಗ್ರಾಂ ಗಾಂಜಾ ಪತ್ತೆ!

ಚಿಕ್ಕ ಮಕ್ಕಳ ಆರೋಗ್ಯ ಕಾಪಾಡಬೇಕಾದ ವೈದ್ಯನೇ ಗಾಂಜಾ ಘಮಲೇರಿಸಿಕೊಂಡಿರುವ ಘಟನೆ ಬೆಳಗಾವಿ ನಗರದಲ್ಲಿ ಬೆಳಕಿಗೆ ಬಂದಿದೆ. ಮಕ್ಕಳ ವೈದ್ಯರಾಗಿರುವ ಡಾ.ರಾಹುಲ್ ವಿಠಲ ಬಂಟಿ ಅವರ ಮನೆಯಲ್ಲಿ ಗಾಂಜಾ ದೊರೆತಿದೆಈ ಕುರಿತು ಖಚಿತ ಮಾಹಿತಿ ಮೇರೆಗೆ ಮಾಳಮಾರುತಿ ಠಾಣೆ ಪೊಲೀಸರು ಡಾ.ರಾಹುಲ್ ಬಂಟಿ ಅವರ ಶಿವಬಸವ ನಗರದ ಮನೆ ಮೇಲೆ ದಾಳಿ ಮಾಡಿದಾಗ 134 ಗ್ರಾಂ ಗಾಂಜಾ ಸಿಕ್ಕಿದೆ.ಅಷ್ಟೇ ಅಲ್ಲದೇ, ವೈದ್ಯ ಗಾಂಜಾ ಸೇವಿಸಿರುವ ವಿಚಾರವೂ ಪೊಲೀಸರ ತನಿಖೆಯಲ್ಲಿ ದೃಢಪಟ್ಟಿದೆ. ಗಾಂಜಾ …

Read More »

ಬೆಂಗಳೂರಲ್ಲಿ ಮತ್ತೊಂದು ಅಗ್ನಿ ಅವಘಡ : ಮನೆಗಳು, 11ಕ್ಕೂ ಹೆಚ್ಚು ಬೈಕ್, ಗೂಡ್ಸ್ ವಾಹನಗಳು ಸುಟ್ಟು ಭಸ್ಮ

ಬೆಂಗಳೂರಿನ ನಂದಿನಿ ಲೇಔಟ್ ನಲ್ಲಿ ಭೀಕರವಾದ ಅಗ್ನಿ ಅವಘಡ ಸಂಭವಿಸಿದೆ.ಕೂಲಿ ಕಾಲೋನಿಯಲ್ಲಿ ಈ ಒಂದು ಅಗ್ನಿ ಅವಘಡ ಸಂಭವಿಸಿದ್ದು ಕಳೆದ ರಾತ್ರಿ ಈ ಒಂದು ಅಗ್ನಿ ದುರಂತ ಸಂಭವಿಸಿದೆ.ರಾತ್ರಿ 2 ಗಂಟೆ ಸುಮಾರಿಗೆ ಘಟನೆಯಲ್ಲಿ 11 ಮನೆಗಳಿಗೆ ಹಾನಿಗಳಾಗಿದ್ದು 11ಕ್ಕೂ ಹೆಚ್ಚು ಬೈಕ್ ಗಳು ಹಾಗೂ ಗೂಡ್ಸ್ ಆಟೋಗಳು ಬೆಂಕಿಗೆ ಸುಟ್ಟು ಸಂಪೂರ್ಣವಾಗಿ ಕರಕಲಾಗಿವೆ.ಕಿಡಿಗೇಡಿಗಳು ಈ ಒಂದು ಕೃತಿ ಹರಿದಿದ್ದಾರೆ ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ …

Read More »

ಹಿಟ್ ಅಂಡ್ ರನ್ ಗೆ ಬೈಕ್ ಸವಾರ ಬಲಿ

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ತೊಣಚಿನಕುಪ್ಪೆ ಸಮೀಪ ಹಿಟ್ ಅಂಡ್ ರನ್ ಗೆ ಬೈಕ್ ಸವಾರ ಬಲಿಯಾಗಿದ್ದಾನೆ.ಅಪರಿಚಿತ ವಾಹನ ಡಿಕ್ಕಿಯಾಗಿ ಮಧುಸೂದನ್(21) ಸಾವನ್ನಪ್ಪಿದ್ದಾರೆ. ಮಾಗಡಿ ತಾಲೂಕಿನ ಬೈರಸಾಗರ ಗ್ರಾಮದ ನಿವಾಸಿಯಾಗಿರುವ ಮಧುಸೂದನ್ ಬೈಕ್ ನಲ್ಲಿ ಮನೆಗೆ ತೆರಳುವಾಗ ಅಪಘಾತ ಸಂಭವಿಸಿದೆ.ನೆಲಮಂಗಲ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Read More »

ಚಿತ್ರದುರ್ಗ: ಲಾರಿಗೆ ಕಾರು ಡಿಕ್ಕಿ; ಡಿವೈಎಸ್‌ಪಿ ತಾಯಿ ಸೇರಿ ಇಬ್ಬರು ದುರ್ಮರಣ

ಇಲ್ಲಿನ ಹೊರವಲಯದ ತಮಟಕಲ್ಲು ಬ್ರಿಡ್ಜ್ ಬಳಿ ಲಾರಿಗೆ ಇನ್ನೋವಾ ಕಾರು ಡಿಕ್ಕಿಯಾಗಿ ಮಹಾರಾಷ್ಟ್ರದ ಕೊಲ್ಲಾಪುರ ಮೂಲದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು ಡಿವೈಎಸ್‌ಪಿ ವೈಷ್ಣವಿ ಅವರ ತಾಯಿ ಕಮಲ ಹರಿಬಾಬು (69) ಹಾಗೂ ಕಾರು ಚಾಲಕ ರಾಕೇಶ್ (40) ಎಂದು ಗುರುತಿಸಲಾಗಿದೆ.ಮಹಾರಾಷ್ಟ್ರದಿಂದ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ಈ ಭೀಕರ ಅಪಘಾತ ಸಂಭವಿಸಿದೆ. ಗಾಯಗೊಂಡ ಡಿವೈಎಸ್‌ಪಿ ವೈಷ್ಣವಿ ಅವರು ಬಸವೇಶ್ವರ ಆಸ್ಪತ್ರೆಗೆ ದಾಖಲಾಗಿದ್ದು, ಉಳಿದ ಮೂವರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನಾ …

Read More »

ಬಟ್ಟೆ ವಿಚಾರಕ್ಕೆ ಬುದ್ಧಿ ಹೇಳಿದ ಹೋಮ್‌ಗಾರ್ಡ್‌ಗೆ ಜುಟ್ಟು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ ಯುವತಿ

ಬೆಂಗಳೂರು : ಬಟ್ಟೆ ವಿಚಾರಕ್ಕೆ ಯುವತಿಗೆ ಬುದ್ಧಿ ಹೇಳಿದ ಹೋಮ್‌ಗಾರ್ಡ್‌ಗೆ ಜುಟ್ಟು ಹಿಡಿದು ನಡುರಸ್ತೆಯಲ್ಲೇ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಕೆಆರ್ ಪುರಂ ರೈಲ್ವೆ ಸ್ಟೇಷನ್ ಬಳಿ ನಡೆದಿದೆ.ಲಕ್ಷ್ಮಿ ನರಸಮ್ಮ ಹಲ್ಲೆಗೊಳಗಾದ ಮಹಿಳೆ. ಮೋಹಿನಿ ಹಲ್ಲೆಗೈದ ಯುವತಿ.ಮೋಹಿನಿಯು ಶಾರ್ಟ್ ಬಟ್ಟೆ ಹಾಕಿ ಬೀದಿಗೆ ಬಂದು ಸುತ್ತಾಡ್ತಿದ್ದಳು. ಅಲ್ಲದೇ ಅಲ್ಲಿದ್ದ ಯುವಕರು ಈಕೆಗೆ ಚುಡಾಯಿಸುತ್ತಿದ್ದರು. ಇದನ್ನು ಕಂಡ ಹೋಂ ಗಾರ್ಡ್‌ ಬುದ್ದಿವಾದ ಹೇಳಿದ್ದಕ್ಕೆ ಮೈಯೆಲ್ಲಾ ಕೆಂಪಗಾಗಿಸಿಕೊಂಡ ಯುವತಿ ಡ್ಯೂಟಿಯಲ್ಲಿದ್ದ ಮಹಿಳೆಗೆ ಥಳಿಸಿದ್ದಾಳೆ. ಸದ್ಯ …

Read More »

ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣ : ಹುಬ್ಬಳ್ಳಿಗೆ ಸಿಐಡಿ ತಂಡ…

ಹುಬ್ಬಳ್ಳಿ ಬಿಜೆಪಿ ಕಾರ್ಯಕರ್ತೆ ಸುಜಾತಾ ಹಂಡಿ ವಿವಸ್ತ್ರ ಹಾಗೂ ಹಲ್ಲೆ ಪ್ರಕರಣ ಸೇರಿದಂತೆ ಒಟ್ಟು ಆರು ಪ್ರಕರಣಗಳನ್ನು ಸರ್ಕಾರ ಸಿಐಡಿಗೆ ವಹಿಸಿದ ಹಿನ್ನಲೆಯಲ್ಲಿ ಸಿಐಡಿ ಅಧಿಕಾರಿಗಳ ತಂಡ ನಗರಕ್ಕೆ ಆಗಮಿಸಿದೆ.ಐಪಿಎಸ್‌‍ ಅಧಿಕಾರಿ ಶಲ್ಲೋ, ಡಿವೈಎಸ್‌‍ಪಿ ಸಂತೋಷ್‌ ಹಾಗೂ ಇನ್ನಿತರ ಅಧಿಕಾರಿಗಳ ನೇತೃತ್ವದ ಸಿಐಡಿ ತಂಡಕ್ಕೆ ಪ್ರಕರಣಗಳ ಕಡತಗಳನ್ನು ಹಸ್ತಾಂತರ ಮಾಡಲಾಗಿದೆ. ಜ. 2 ರಿಂದ ಇಲ್ಲಿಯವರೆಗೂ ಇದೇ ಘಟನೆಗೆ ಸಂಬಂಧಿಸಿದಂತೆ 6 ಎಫ್‌ಐಆರ್‌ ದಾಖಲಾಗಿದ್ದು, ಎಫ್‌ಐಆರ್‌ಗಳ ಕಡತಗಳನ್ನು ಸಂಗ್ರಹಿಸಿರುವ ಸಿಐಡಿ …

Read More »

ನಾಡಬಾಂಬ್ ಸ್ಫೋಟಗೊಂಡು ಹಸು ಸಾವು: ಮೂವರು ಆರೋಪಿಗಳು ಅರೆಸ್ಟ್

ರಾಮನಗರ: ಕಾಡುಹಂದಿ ಬೇಟೆಗಾಗಿ ಇಟ್ಟಿದ್ದ ನಾಡಬಾಂಬ್ ಸ್ಫೋತಗೊಂಡು ಹಸುವಿನ ಬಾಯಿ ಛಿದ್ರಗೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿರುವ ಘಟನೆ ರಾಮನಗರದಲ್ಲಿ ನಡೆದಿದೆ.ಕೃಷ್ಣಮೂರ್ತಿ, ಶಿವಕುಮಾರ್, ಶಿವನಪ್ಪ ಬಂಧಿತ ಆರೋಪಿಗಳು.ಈ ಮೂವರು ಕಾಡುಹಂದಿ ಬೇಟೆಗಾಗಿ ನಾಡಬಾಂಬ್ ಇಟ್ಟಿದ್ದರು.ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಆಲನಾಥ ಗ್ರಾಮದ ಬಳಿ ಜನವರಿ ೩ರಂದು ರೈತ ಶಿವನಗೌಡ ಎಂಬುವವರು ತಮ್ಮ ಹಸುವನ್ನು ಮೇಯಿಸಲು ಬಿಟ್ಟಿದ್ದಾಗ ನಾಡಬಾಂಬ್ ಸ್ಫೊಟಗೊಂಡು ಹಸುವಿನ ಬಾಯಿ ಛಿದ್ರಗೊಂಡಿತ್ತು. ಕಿಡಿಗೇಡಿಗಳ ಕೃತ್ಯಕ್ಕೆ ಹಸು ಎರಡು …

Read More »

ಕೌಟುಂಬಿಕ ಕಲಹ : 10 ತಿಂಗಳ ಮಗುವಿಗೆ ವಿಷವುಣಿಸಿ ಆತ್ಮಹತ್ಯೆಗೆ ಶರಣಾದ ತಾಯಿ

ಕೌಟುಂಬಿಕ ಕಲಹದಿಂದ ಬೇಸತ್ತು 27 ವರ್ಷದ ಮಹಿಳೆಯೊಬ್ಬಳು ತನ್ನ 10 ತಿಂಗಳ ಮಗನಿಗೆ ವಿಷವುಣಿಸಿ ತಾನೂ ಆತ್ಮಹತ್ಯೆಗೆ ಶರಣಾದ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ತಾಯಿ ಮತ್ತು ಮಗು ಸತ್ತಿರುವುದನ್ನು ನೋಡಿ ಮಗುವಿನ ಅಜ್ಜಿ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದಾರೆ.ಆತ್ಮಹತ್ಯೆಗೆ ಶರಣಾದ ಮಹಿಳೆಯನ್ನು ಸುಷ್ಮಾ (27) ಎಂದು ಗುರುತಿಸಲಾಗಿದೆ. ಸುಷ್ಮಾ ನಾಲ್ಕು ವರ್ಷಗಳ ಹಿಂದೆ ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದ ಯಶವಂತ್ ರೆಡ್ಡಿ ಎಂಬುವರನ್ನು ವಿವಾಹವಾಗಿದ್ದರು. ಇತ್ತೀಚಿನ ದಿನಗಳಲ್ಲಿ ದಂಪತಿ ಆಗಾಗ ಜಗಳವಾಡುತ್ತಿದ್ದರು ಎಂದು …

Read More »