Breaking News

Breaking News

ಮುಂಜಾನೆ ಮಂಜಿನ ಪರಿಣಾಮ ವ್ಯಾನ್‌ಗೆ ಕಾರು ಢಿಕ್ಕಿ; ಚಾಲಕನಿಗೆ ಗಾಯ

ಹಿರಿಯಡ್ಕದಿಂದ ಉಡುಪಿ ಕಡೆಗೆ ಬರುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪರ್ಕಳದ ಕೆನರಾ ಬ್ಯಾಂಕ್‌ ಸಮೀಪ ತಿರುವಿನಲ್ಲಿತೆಲಂಗಾಣ ಮೂಲದ ಅಯ್ಯಪ್ಪ ಮಾಲೆಧಾರಿಗಳು ಪ್ರಯಾಣಿಸುತ್ತಿದ್ದ ವ್ಯಾನ್‌ಗೆ ಢಿಕ್ಕಿ ಹೊಡೆದ ಘಟನೆ ರವಿವಾರ ಮುಂಜಾನೆ ಸಂಭವಿಸಿದೆ.ವ್ಯಾನ್ ಉಡುಪಿಯಿಂದ ಧರ್ಮಸ್ಥಳದ ಕಡೆಗೆ ಸಂಚರಿಸುತ್ತಿತ್ತು. ಪರ್ಕಳ ಪರಿಸರದಲ್ಲಿ ಬೆಳಗ್ಗಿನ ಜಾವ ಮಂಜು ಕವಿದ ವಾತಾವರಣವಿದ್ದು, ತಿರುವು ಗೋಚರಿಸದ ಕಾರಣ ಕಾರು ಬಲಬದಿಗೆ ಸಾಗಿ ಎದುರಿನಿಂದ ಬರುತ್ತಿದ್ದ ವ್ಯಾನ್‌ ಢಿಕ್ಕಿ ಹೊಡೆದಿದೆ. ಕಾರು ಸಂಪೂರ್ಣ ಜಖಂಗೊಂಡಿದೆ. ಕಾರು …

Read More »

ಮದ್ಯ ನೀಡದ್ದಕ್ಕೆ ಕಾರ್‌ಗೆ ಬೆಂಕಿಯಿಟ್ಟ ಪುಂಡರು

ಕೆ.ಆರ್.ಪೇಟೆ: ತಾಲೂಕಿನ ಅಗಸರಹಳ್ಳಿ ಬಳಿಯಿರುವ ಈಗಲ್ ಬಾರ್ ಆಯಂಡ್ ರೆಸ್ಟೋರೆಂಟ್‌ಗೆ ಪುಂಡರು ಬೆಂಕಿ ಹಚ್ಚಿದ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಒಟ್ಟು ಮೂವರು ಪುಂಡರ ಅಟ್ಟಹಾಸ ಬಾರ್‌ನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಮುರುಕನಹಳ್ಳಿ ಗ್ರಾಮದ ರಕ್ಷಿತ್, ಸಚಿನ್ ಮತ್ತು ಸುನಿಲ್ ಎಂದು ಗುರುತಿಸಲಾಗಿದೆ.ಶನಿವಾರ ರಾತ್ರಿ ರೆಸ್ಟೋರೆಂಟ್‌ಗೆ ಬಂದ ಪುಂಡರು ಮದ್ಯವನ್ನು ಉಚಿತವಾಗಿ ನೀಡುವಂತೆ ಕೇಳಿದ್ದಾರೆ. ಈ ಸಂದರ್ಭ ಕ್ಯಾಷಿಯರ್ ನಲ್ಲಿದ್ದ ರಕ್ಷಿತ್ ಈ ವಿಚಾರವನ್ನು ಮಾಲೀಕ ಮರಡಹಳ್ಳಿ ಪರಮೇಶ …

Read More »

ಹುಬ್ಬಳ್ಳಿಯಲ್ಲಿ ಪುಡಿರೌಡಿಗಳ ಅಟ್ಟಹಾಸ: ತಲ್ವಾರ್ ಹಿಡಿದು ಹೊಡೆದಾಡಿಕೊಂಡ ಪುಂಡರು: ಓರ್ವನ ಸ್ಥಿತಿ ಗಂಭೀರ

ಹುಬ್ಬಳ್ಳಿಯಲ್ಲಿ ಪುಡಿರೌಡಿಗಳ ಅಟ್ಟಹಾಸ: ತಲ್ವಾರ್ ಹಿಡಿದು ಹೊಡೆದಾಡಿಕೊಂಡ ಪುಂಡರು: ಓರ್ವನ ಸ್ಥಿತಿ ಗಂಭೀರಹುಬ್ಬಳ್ಳಿತ ಕಮರಿಪೇಟೆ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.ಎರಡು ಪುಡಿರೌಡಿಗಳ ಗುಂಪು ತಲ್ವಾರ್ ಹಿಡಿದು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಹೊಡೆದಾಟದಲ್ಲಿ ಓರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ಗಾಯಾಳುವನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಯುವಕನ ಸ್ಥಿತಿ ಗಂಭೀರವಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More »

ಬಳ್ಳಾರಿಯಲ್ಲಿ ಬ್ಯಾನರ್ ಗಲಾಟೆ ಕೇಸ್ : ಶಾಸಕ ಜನಾರ್ದನ ರೆಡ್ಡಿ ಮನೆಯ ಬಳಿ ಮತ್ತೊಂದು ಬುಲೆಟ್ ಪತ್ತೆ!

ಬಳ್ಳಾರಿಯಲ್ಲಿ ಬ್ಯಾನರ್, ಗಲಾಟೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಶಾಸಕ ಜನಾರ್ದನ ರೆಡ್ಡಿ ಮನೆಗೆ ಹುಬ್ಬಳ್ಳಿಯಿಂದ ಬಾಂಬ್ ನಿಷ್ಕ್ರಿಯ ದಳ ಹಾಗೂ ಎಫ್‌ಎಸ್‌ಎಲ್ ತಂಡ ಭೇಟಿ ನೀಡಿದ್ದು, ಇದೀಗ ಶಾಸಕ ಜನಾರ್ಧನ ರೆಡ್ಡಿ ಮನೆಯ ಮುಂದೆ ಮತ್ತೊಂದು ಬುಲೆಟ್ ಪತ್ತೆಯಾಗಿದೆ.ಹೌದು ಶಾಸಕ ಜನಾರ್ಧನರೆಡ್ಡಿ ಮನೆ ಮುಂಭಾಗದಲ್ಲಿ ಮತ್ತೊಂದು ಬುಲೆಟ್ ಪತ್ತೆಯಾಗಿದೆ. ಬುಲೆಟ್ ಪತ್ತೆಯನ್ನು ಬಾಂಬ್ ನಿಷ್ಕ್ರಿಯ ದಳ ಇದೀಗ ಪತ್ತೆ ಮಾಡಿದೆ. ಬುಲೆಟ್ ಪತ್ತೆ ಹಚ್ಚುವ ಮಷೀನ್ ನಿಂದ ಮತ್ತೊಂದು ಬುಲೆಟ್ …

Read More »

*ಜೀಪು-ಕಾರು ಭೀಕರ ಅಪಘಾತ: ಹೊತ್ತಿ ಉರಿದ ಕಾರು*

ಜೀಪ್ ಹಾಗೂ ಕಾರಿನ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಕಾರು ಬೆಂಕಿಗಾಹುತಿಯಾಗಿರುವ ಘಟನೆ ನಡೆದಿದೆ.ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ರಾಷ್ಟ್ರ‍ೀಯ ಹೆದ್ದಾರಿ ಯಡವನಹಳ್ಳಿಯಲ್ಲಿ ನಡೆದಿದೆ. ಸರ್ಕಾರಿ ಜೀಪ್ ಹಾಗೂ ಕಿಯಾ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿ ಬೆಂಕಿ ಹೊತ್ತಿಕೊಂಡಿದೆ.ಕ್ಷಣಾರ್ಧದಲ್ಲಿ ಕಾರಿನಲ್ಲಿದ್ದವರು ಕಾರಿನಿಂದ ಇಳಿದು ಬಚಾವ್ ಆಗಿದ್ದಾರೆ. ನೋಡನೋಡುತ್ತಿದ್ದಂತೆ ಕಾರು ಸುಟ್ಟು ಕರಕಲಾಗಿದೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

Read More »

ಡಿಸಿಸಿ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷನ ಮೇಲೆ ಹಲ್ಲೆ ಆರೋಪ : ಶಾಸಕ ಲಕ್ಷಣ ಸವದಿ, ಪುತ್ರನ ವಿರುದ್ಧ ‘FIR’

ಬೆಳಗಾವಿಯ ಕೇಂದ್ರ ಸಹಕಾರಿ ಬ್ಯಾಂಕ್ (DCC) ನೌಕರರ ಸಂಘದ ಅಧ್ಯಕ್ಷನ ಮೇಲೆ ಹಲ್ಲೆ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಇದೀಗ ಅಥಣಿ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಹಾಗೂ ಪುತ್ರ ಚಿದಾನಂದ ಸವದಿ ಸೇರಿದಂತೆ 8 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. BNS ಕಾಯ್ದೆ 189(2), 191(2), 115(2), 351(2), 352 (2), 190 ಕಲಂ‌ ಅಡಿ ಪ್ರಕರಣ ದಾಖಲಿಸಲಾಗಿದೆ.ಹಲ್ಲೆಗೊಳಗಾದ ನಿಂಗರಾಜ ಕರೆಣ್ಣವರ ಬೆಳಗಾವಿಯ ಆಸ್ಪತ್ರೆಗೆ ದಾಖಲಾಗಿದ್ದು, ಆಸ್ಪತ್ರೆಯಿಂದಲೇ ಅಥಣಿ ಪೊಲೀಸರಿಗೆ …

Read More »

ರಕ್ತಚಂದನ ಸಾಗಣೆ ಮಾಡುತ್ತಿದ್ದ ಮೂವರ ಬಂಧನ

ಕೊಳ್ಳೇಗಾಲ:ತಾಲೂಕಿನ ಬೆಂಗಳೂರು ಹೆದ್ದಾರಿ ಮಾರ್ಗದ ಸತ್ತೇಗಾಲದಿಂದ ಶ್ರೀ ವೀರಭದ್ರಸ್ವಾಮಿ ದೇವಾಲಯಕ್ಕೆ ತೆರಳುವ ಜಂಕ್ಷನ್ ಬಳಿ ಶನಿವಾರ ಕಾರಿನಲ್ಲಿ ರಕ್ತಚಂದನ ಮರಗಳನ್ನು ಸಾಗಣೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಸಿಐಡಿ ಅರಣ್ಯ ಸಂಚಾರ ದಳ ಪೊಲೀಸರು ಬಂಧಿಸಿದ್ದಾರೆ.ಬೆಂಗಳೂರಿನ ನಿವಾಸಿಗಳಾದ ಜಯಚಂದ್ರ, ಸುಮಂತ್, ಕಾರು ಚಾಲಕ ಹರೀಶ್ ಬಂಧಿತರು. 85 ಕೆ.ಜಿ.ತೂಕದಷ್ಟು ರಕ್ತ ಚಂದನ ಮರಗಳನ್ನು ವಶಕ್ಕೆ ಪಡೆದಿದ್ದಾರೆ. ರಕ್ತಚಂದನ ಮರದ ತುಂಡುಗಳನ್ನು ಬೆಂಗಳೂರಿನಿಂದ ಕೇರಳಕ್ಕೆ ಸಾಗಣೆ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಸಿಐಡಿ …

Read More »

ಲಾಭದ ಆಮಿಷವೊಡ್ಡಿ 30 ಲ.ರೂ. ವಂಚನೆ

ಉಡುಪಿ: ಸ್ಟಾಕ್ ಮಾರ್ಕೆಟ್ ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಗಳಿಸಬಹುದು ಎಂದು ನಿವೃತ್ತ ಬ್ಯಾಂಕ್ ಉದ್ಯೋಗಿಗೆ ಲಕ್ಷಾಂತರ ರೂ.ವಂಚಿಸಿದ ಘಟನೆ ನಡೆದಿದೆ.ಎಂಐಟಿ ನಿವೃತ್ತ ಉದ್ಯೋಗಿ ಉಮಾನಂದ ಕೆ.ವಿ. ಹಣ ಕಳೆದುಕೊಂಡವರು. ವಾಟ್ಸಾಪ್ ನಲ್ಲಿ ವಂಚಕನೊಬ್ಬ ಇವರನ್ನು ಸಂಪರ್ಕಿಸಿ ಆಮಿಷವೊಡ್ಡಿದ್ದಾನೆ.ವಂಚಕರ ಮಾತು ನಂಬಿದ ಅವರು ನ. 6 ರಿಂದ ಡಿ. 31 ರ ವರೆಗೆ ಸ್ಟಾಕ್ ಮಾರ್ಕೇಟ್ ಕಂಪೆನಿಯಲ್ಲಿ ಆರೋಪಿಗಳು ಸೂಚಿಸಿದ ವಿವಿಧ ಖಾತೆಗಳಿಗೆ ಒಟ್ಟು 30,32,000 ರೂ. …

Read More »

ಕಾಶ್ಮೀರ: ಉಗ್ರರ ಅಡಗುತಾಣ ನಾಶ

ಜಮ್ಮು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿದ್ದ ಉಗ್ರರ ಅಡಗುತಾಣವೊಂದನ್ನು ಭದ್ರತಾ ಪಡೆ ಅಧಿಕಾರಿಗಳು ನಾಶಗೊಳಿಸಿದ್ದಾರೆ.ಅಡಗುತಾಣದಲ್ಲಿದ್ದ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದರು.ಜಿಲ್ಲೆಯ ಶೀರಿ ಪ್ರದೇಶದಲ್ಲಿರುವ ಅರಣ್ಯದಲ್ಲಿ ಶನಿವಾರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಅಡಗುತಾಣ ಪತ್ತೆಯಾಯಿತು. ಎರಡು ಹ್ಯಾಂಡ್‌ ಗ್ರೆನೇಡ್‌ಗಳು, ಎಕೆ-47 ರೈಫಲ್‌ನ 24 ಗುಂಡುಗಳು, ವೈರ್‌ಲೆಸ್ ಆಯಂಟೆನಾ ಹಾಗೂ ಒಂದು ಕೊಡಲಿ ಸೇರಿದಂತೆ ಹಲವು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

Read More »

ಯಲ್ಲಾಪುರ ರಂಜಿತಾ ಹತ್ಯೆ ಕೇಸ್: ಮೃತ ಮಹಿಳೆ ಕುಟುಂಬಕ್ಕೆ ಪರಿಹಾರ ಘೋಷಿಸಿದ ಬಿ.ವೈ ವಿಜಯೇಂದ್ರ

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಮಹಿಳೆಯ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹತ್ಯೆಯಾದ ರಂಜಿತಾ ಮನೆಗೆ ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಭೇಟಿ ನೀಡಿದರು.ನಿನ್ನೆ ಚಾಕುವಿನಿಂದ ಇರಿದು ರಂಜಿತ (30) ರಫೀಕ್ ಭೀಕರವಾಗಿ ಕೊಲೆ ಮಾಡಿದ್ದ.ಇಂದು ಬೆಳಗ್ಗೆ ಕೊಲೆ ಆರೋಪಿ ರಫೀಕ್ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದ ಸದ್ಯ ರಂಜಿತಾ ಮನೆಗೆ ಭೇಟಿ ನೀಡಿದ ಬಿವೈ ವಿಜಯೇಂದ್ರ ರಂಜಿತಾ ಕುಟುಂಬಕ್ಕೆ ಬಿಜೆಪಿಯಿಂದ 5 ಲಕ್ಷ ಪರಿಹಾರ ಘೋಷಣೆ …

Read More »