BigTv News
December 23, 2025
Breaking News
ಉಸಿರಾಟ ಸಮಸ್ಯೆ ಎಂದು ಆಸ್ಪತ್ರೆಗೆ ಬಂದ ರೋಗಿಯ ಮೇಲೆ ವೈದ್ಯರೊಬ್ಬರು ಅಮಾನವೀಯವಾಗಿ ಹಲ್ಲೆ ನಡೆಸಿರುವ ಘಟನೆ ಹಿಮಾಚಲ ಪ್ರದೇಶದಲ್ಲಿ ನಡೆದಿದೆ. ಹಿಮಾಚಲ ಪ್ರದೇಶದ ಶಿಮ್ಲಾದ ಇಂದಿರಾ ಗಾಂಧಿ ವೈದ್ಯಕೀಯ ಕಾಲೇಜಿನಲ್ಲಿ ಭಾನುವಾರ ವೈದ್ಯರೊಬ್ಬರು ರೋಗಿಯ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ.ಶಿಮ್ಲಾ ಜಿಲ್ಲೆಯ ಕುಪ್ವಿ ಉಪವಿಭಾಗಕ್ಕೆ ಉಸಿರಾಟದ ತೊಂದರೆ ಎಂದು ಬಂದಿದ್ದ ತನ್ನ ಬಗ್ಗೆ ವೈದ್ಯರು ಕೆಟ್ಟದಾಗಿ ವರ್ತಿಸಿದ್ದಾರೆ, ಅವಮಾನ ಮಾಡಿದ್ದಾರೆ ಎಂದು ರೋಗಿ ಆರೋಪಿಸಿದ್ದಾರೆ. ಗೌರವದಿಂದ ಮಾತನಾಡಲು ಕೇಳಿದಾಗ …
Read More »
BigTv News
December 23, 2025
Breaking News
ಮಳವಳ್ಳಿ ತಾಲೂಕು, ಹಲಗೂರು ಸಮೀಪದ ಮುತ್ತತ್ತಿ ಕಾವೇರಿ ನದಿಯಲ್ಲಿ ಈಜಾಡುತ್ತಿದ್ದಾಗ ನೀರಿನ ಸೆಳೆತಕ್ಕೆ ಸಿಲುಕಿ ಯುವಕ ಮೃತಪಟ್ಟ ಘಟನೆ ನಡೆದಿದೆ.ಮದ್ದೂರು ತಾಲ್ಲೂಕಿನ ಸೋಮನಹಳ್ಳಿ ಗ್ರಾಮದ ನಿವಾಸಿ ಪ್ರಹ್ಲಾದ್ (21) ಮೃತಪಟ್ಟ ಯುವಕ. ಪ್ರಹ್ಲಾದ್ ತನ್ನ ಸ್ನೇಹಿತರೊಂದಿಗೆ ಮುತ್ತತ್ತಿ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಪ್ರವಾಸ ಬಂದಿದ್ದನು.ಕಾವೇರಿ ನದಿಯಲ್ಲಿ ಈಜಲು ಹೋದಾಗ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾನೆ. ನುರಿತ ಈಜುಗಾರರ ಸಹಾಯದಿಂದ ಯುವಕನ ಮೃತದೇಹವನ್ನು ಹೊರತೆಗೆಯಲಾಯಿತು. ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ …
Read More »
BigTv News
December 23, 2025
Breaking News
ಕುಂದಾಪುರ: ವಿದೇಶಕ್ಕೆ ಹೋಗಲು ಹಣದ ಸಮಸ್ಯೆಯಿದೆ ಎಂದು ಹೇಳಿಕೊಂಡು ಶಾಗೀಲ್ ಎಂಬಾತ 2023ರಲ್ಲಿ 7 ಪವನ್ ಚಿನ್ನವನ್ನು ಮತ್ತು 2024ರಲ್ಲಿ ರೆಹನ ಎಂಬಾತ 15 ಪವನ್ ಚಿನ್ನ ಪಡೆದಿದ್ದು, ಈಗ ಮರಳಿ ಕೇಳಿದಾಗ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಕೋಟೇಶ್ವರದ ನಿವಾಸಿ ಮೈಮುನ್ನಿಸಾ (62) ಕುಂದಾಪುರ ಪೊಲೀಸರಿಗೆ ದೂರು ನೀಡಿದ್ದಾರೆ.ಇನ್ನೋರ್ವ ಆರೋಪಿ ಮೊಹಮ್ಮದ್ ಸಲೀಂ ಸಹ ಜೀವ ಬೆದರಿಕೆ ಹಾಕಿರುವುದಾಗಿ ತಿಳಿಸಿದ್ದಾರೆ.
Read More »
BigTv News
December 23, 2025
Breaking News
ಉತ್ತರ ಪ್ರದೇಶದ ಬರೇಲಿಯಲ್ಲಿ ಲೋಕೋ ಪೈಲಟ್ ಒಬ್ಬರು ಮಲ್ಕನ್ ರೈಲ್ವೆ ಕ್ರಾಸಿಂಗ್’ನಲ್ಲಿ ಸುಮಾರು 10 ನಿಮಿಷಗಳ ಕಾಲ ಸರಕು ರೈಲನ್ನ ನಿಲ್ಲಿಸಿದ್ದಾರೆ, ಇದರಿಂದಾಗಿ ಜನನಿಬಿಡ ಲೆವೆಲ್ ಕ್ರಾಸಿಂಗ್’ನಲ್ಲಿ ಸಂಚಾರ ಅಸ್ತವ್ಯಸ್ತವಾಗಿದೆ. ಈ ಅನಿರೀಕ್ಷಿತ ನಿಲುಗಡೆಯನ್ನ ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಈ ಘಟನೆ ಸಾರ್ವಜನಿಕರ ಗಮನಕ್ಕೆ ಬಂದಿದೆ.ಮಾಧ್ಯಮ ವರದಿಗಳ ಪ್ರಕಾರ, ರೈಲ್ವೆ ಅಧಿಕಾರಿಗಳು ಈ ನಿಲುಗಡೆಯ ಹಿಂದಿನ ಸಂದರ್ಭಗಳನ್ನ ತಿಳಿಯಲು ತನಿಖೆಯನ್ನು ಪ್ರಾರಂಭಿಸಿದ್ದಾರೆ. ವೈರಲ್ ಆಗಿರುವ …
Read More »
BigTv News
December 23, 2025
Breaking News
ಹೊಸ ರೇಷನ್ ಕಾರ್ಡ್ ನೀಡಲು ₹ 4 ಸಾವಿರ ಬೇಡಿಕೆ ಇಟ್ಟ ಆನ್ ಲೈನ್ ಸೆಂಟರ್ ಅವರ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವದಕ್ಕೆ ಸಂಬಂಧಿಸಿದಂತೆ ತಾಲ್ಲೂಕು ಆಹಾರ ನಿರೀಕ್ಷಕ ಎಂ.ವಿಜಯಕುಮಾರ್ ಅವರು ಸಿರುಗುಪ್ಪ ಪೊಲೀಸ್ ರಾಣೆಯಲ್ಲಿ ದೂರು ನೀಡಿರುತ್ತಾರೆ.ಸಿರುಗುಪ್ಪ ನಗರದ ಹಳೆ ಆಂಜನೇಯ ದೇವಸ್ಥಾನದ ಬಳಿ ಇರುವ ಆನ್‌ಲೈನ್ ಕೇಂದ್ರದ ನಿರ್ವಾಹಕ ರಾಘವೇಂದ್ರ, ಅವರು ಹೊಸ ಪಡಿತರ ಚೀಟಿಗಾಗಿ ₹ 4,000 ಬೇಡಿಕೆ ಇಡುತ್ತಿರುವ ವಿಡಿಯೊ ರಾಜಕೀಯ ಪಕ್ಷವೊಂದರ ಫೇಸ್‌ಬುಕ್ …
Read More »
BigTv News
December 23, 2025
Breaking News
ಕೇರಳದ ಕಣ್ಣೂರು ಜಿಲ್ಲೆಯ ಪಯ್ಯನ್ನೂರಿ ಬಳಿ ಸೋಮವಾರ ರಾತ್ರಿ ಇಬ್ಬರು ಚಿಕ್ಕ ಮಕ್ಕಳು ಸೇರಿದಂತೆ ನಾಲ್ವರ ಕುಟುಂಬದ ಮೃತದೇಹ ಪತ್ತೆಯಾಗಿದ್ದು, ಇದು ಕೊಲೆ ಅಥವಾ ಆತ್ಮಹತ್ಯೆ ಪ್ರಕರಣ ಎಂದು ಶಂಕಿಸಲಾಗಿದೆ ಎಂದು ಪಯ್ಯನ್ನೂರು ಪೊಲೀಸ್ ಇನ್ಸ್‌ಪೆಕ್ಟರ್ ರಾಜೀಶ್ ತೇರುವತ್ ಪೀಡಿಕಾಯಿಲ್ ಹೇಳಿದ್ದಾರೆ.ಮೃತರನ್ನು 40 ವರ್ಷದ ಕಲಾಧರನ್, ಅವರ ವೃದ್ಧ ತಾಯಿ ಉಷಾ ಮತ್ತು ಏಳು ಮತ್ತು ಎರಡು ವರ್ಷದ ಅವರ ಇಬ್ಬರು ಹೆಣ್ಣುಮಕ್ಕಳು ಎಂದು ಗುರುತಿಸಲಾಗಿದೆ. ಮೃತರು ರಾಮಂಥಳಿ ಪಂಚಾಯತ್‌ನ …
Read More »
BigTv News
December 23, 2025
Breaking News
ಉಡುಪಿ: ನೇಪಾಲ ಮೂಲದ 76 ಬಡಗುಬೆಟ್ಟು ಗ್ರಾಮದ ನಿವಾಸಿಯ ಪುತ್ರನೊಬ್ಬ ನೇಣು ಬಿಗದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ನೇಪಾಳದ ಪದಮ್ ಬಹದೂರ್ ಅವರು ಸುಮಾರು 10 ವರ್ಷಗಳ ಹಿಂದೆ ಉಡುಪಿಗೆ ಬಂದು ನೆಲೆಸಿದ್ದು ಪ್ರಸ್ತುತ ಚಂದು ಮೈದಾನದ ಬಳಿ ಬಾಡಿಗೆ ಮನೆಯಲ್ಲಿ ವಾಸಮಾಡಿದ್ದು ಅವರು ಡಿ.21ರ ರಾತ್ರಿ 8 ಗಂಟೆಗೆ ಸೆಕ್ಯೂರಿಟಿ ಗಾರ್ಡ್ ಕೆಲಸಕ್ಕೆ ಹೋಗಿದ್ದರು. ಇದೇ ವೇಳೆ ಮಗ ಸಂಜಯ್ ಮನೆಯ ಹಿಂಬದಿಯ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪದಮ್ …
Read More »
BigTv News
December 23, 2025
Breaking News
ಹೊಟೇಲ್ ಯಾಕೆ ಬಂದ್ ಮಾಡಿಲ್ಲ ಎಂದು ಪ್ರಶ್ನಿಸಿ ಕಾರ್ಮಿಕನೊಬ್ಬನಿಗೆ ಪಿಎಸ್ಸೈಯೊಬ್ಬರು ಥಳಿಸಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿರುವುದಾಗಿ ವರದಿಯಾಗಿದೆ.ಶಿವಮೊಗ್ಗದ ಖಾಸಗಿ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಹೊಟೇಲ್‌ನಲ್ಲಿ ಈ ಘಟನೆ ನಡೆದಿದ್ದು, ಷಾವಾಸ್(24) ಎಂಬ ಕಾರ್ಮಿಕನ ಮೇಲೆ ದೊಡ್ಡಪೇಟೆಯ ಪಿಎಸ್ಸೈ ನಾರಾಯಣ ಮಧುಗಿರಿ ಥಳಿಸಿರುವ ವೀಡಿಯೊ ವೈರಲ್ ಆಗಿದೆ.ಪಿಎಸ್ಸೈ ಹಲ್ಲೆ ಮಾಡುವ ದೃಶ್ಯ ಸ್ಥಳೀಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಹಲ್ಲೆಗೊಳಗಾಗಿದ್ದ ಕಾರ್ಮಿಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Read More »
BigTv News
December 23, 2025
Breaking News
ಕರಾಟೆ ತರಬೇತುದಾರನಿಗೆ ಗೌರವಧನ ಮಂಜೂರು ಮಾಡಲು ₹5 ಸಾವಿರ ಲಂಚ ಕೇಳಿದ್ದ ಮುಶಿಗೇರಿ ಗ್ರಾಮದ ಸರ್ಕಾರಿ ಕರ್ನಾಟಕ ಪಬ್ಲಿಕ್ ಶಾಲೆಯ ಮುಖ್ಯಶಿಕ್ಷಕ ಕಳಕಪ್ಪ ರಾಜೂರ ಸೋಮವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ಕರಾಟೆ ತರಬೇತುದಾರ ಆನಂದ ವಿರುಪಾಕ್ಷಪ್ಪ ವಾಲ್ಮೀಕಿ 8 ಮತ್ತು 9ನೇ ತರಗತಿ ವಿದ್ಯಾರ್ಥಿನಿಯರಿಗೆ ಕರಾಟೆ ತರಬೇತಿ ನೀಡಿದ್ದರು.ಗೌರವಧನ ₹9 ಸಾವಿರ ಮಂಜೂರು ಮಾಡಲು ಕೋರಿದ್ದರು. ಅದಕ್ಕಾಗಿ ಲಂಚ ಕೇಳಿದ್ದ ಕಳಕಪ್ಪ, ಸೋಮವಾರ ₹4 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ. ಗದಗ …
Read More »
Shaikh BigTv
December 22, 2025
Breaking News, Crime, ಕರ್ನಾಟಕ, ಬೆಂಗಳೂರು
ಪೊಲೀಸರನ್ನು ಕಂಡರೆ ರೌಡಿಗಳು ಹೆದರುವುದು ಸಾಮಾನ್ಯ. ಆದರೆ ಪೊಲೀಸರೇ ಸಮಾಜಘಾತುಕ ಶಕ್ತಿಗಳೊಡನೆ ಕೈಜೋಡಿಸಿದರೆ ಬೇಲಿಯೇ ಎದ್ದು ಹೊಲ ಮೇಯ್ದಂತಲ್ಲವೇ? ಇಂಥದ್ದೇ ಒಂದು ಘಟನೆ ಬೆಂಗಳೂರಿನಲ್ಲಿ ನಡೆದಿದೆ . ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯ ಪಿಎಸ್‌ಐ ನಾಗರಾಜ್ ತಮ್ಮ ವರ್ತನೆಯಿಂದ ಈಗ ಆರೋಪಿ ಸ್ಥಾನದಲ್ಲಿ ನಿಂತಿದ್ದಾರೆ…ಸಮಾಜ ಘಾತುಕ ಮತ್ತು ರೌಡಿ ಚಟುವಟಿಕೆ ನಡೆಸುವ , ಕ್ರಿಮಿನಲ್ ಹಿನ್ನಲೆಯುಳ್ಳವರನ್ನು ರೌಡಿಶೀಟರ್ ದಾಸ ಮತ್ತು ಅವನ ಸಂಗಡಿಗರನ್ನು ಮನೆಗೆ ಕರೆಸಿ ಬರ್ತ್‌ಡೇ ಆಚರಿಸಿ ಪಿಎಸ್‌ಐ …
Read More »