Breaking News

ಕೆಲಸದ ಅವಧಿ ಕುರಿತು ನೀಡಿದ್ದ ಹೇಳಿಕೆಯಿಂದ ಭಾರೀ ವಿರೋಧವನ್ನು ಎದುರಿಸಿದ್ದರು….

ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಮತ್ತು ಪತ್ನಿ ಸುಧಾ ಮೂರ್ತಿ ಸದಾ ಸುದ್ದಿಯಲ್ಲಿರುವ ದಂಪತಿಯಾಗಿದ್ದಾರೆ. ಕೇವಲ ಉದ್ಯಮ ವಿಚಾರವಾಗಿ ಮಾತ್ರವಲ್ಲ ಸಮಾಜ ಸೇವೆ, ದೇಣಿಗೆ ಹೀಗೆ ಹತ್ತಾರು ಕೆಲಸಗಳಿಂದಲೂ ಎಲ್ಲರ ಗಮನ ಸೆಳೆಯುತ್ತಾರೆ. ಆದರೆ ಇತ್ತೀಚಿಗೆ ಅವರು ಕೆಲಸದ ಅವಧಿ ಕುರಿತು ನೀಡಿದ್ದ ಹೇಳಿಕೆಯಿಂದ ಭಾರೀ ವಿರೋಧವನ್ನು ಎದುರಿಸಿದ್ದರು. ಸುಧಾ ಮೂರ್ತಿ ಅವರನ್ನು ಡ್ರಾಪ್ ಮಾಡಲು ಟಿಕೆಟ್ ಇಲ್ಲದೆ 11 ಗಂಟೆಗಳ ಕಾಲ ರೈಲಿನಲ್ಲಿ ಪ್ರಯಾಣಿಸಿದ್ದ ದಿನವನ್ನು ಇತ್ತೀಚೆಗೆ ನೆನಪಿಸಿಕೊಂಡಿದ್ದಾರೆ. ಬಿಲಿಯನೇರ್ CNBC-TV18 ನೊಂದಿಗೆ ಮಾತನಾಡುತ್ತಿದ್ದರು. “ಅದು ಬೇರೆ ವಯಸ್ಸು. ಆದರೆ ನಾನು ದೀರ್ಘಕಾಲದಿಂದ ಜೊತೆಗಿರುವ ದಾಂಪತ್ಯದ ಬಗ್ಗೆ ಮಾತನಾಡುತ್ತಿದ್ದೇನೆ. ಆರಂಭದ ದಿನಗಳಲ್ಲಿ ನಾನು ಟಿಕೆಟ್ ಪಡೆಯದೆ ರೈಲಿನಲ್ಲಿ ಓಡಾಡಿದ್ದೆ ಎಂದಿದ್ದಾರೆ. ಅಮೇರಿಕಾ ಮೂಲದ ಭಾರತೀಯ ಮೂಲದ ಲೇಖಕಿ ಚಿತ್ರಾ ಬ್ಯಾನರ್ಜಿ ದಿವಾಕರುಣಿ ಅವರು ಬರೆದಿರುವ ಅವರ ಜೀವನಚರಿತ್ರೆ ಬಿಡುಗಡೆಯ ಸಮಯದಲ್ಲಿ ಅವರು ಹಲವು ವಿಚಾರಗಳ ಮುಂದಿಟ್ಟಿದ್ದರು. ಸುಧಾ ಮೂರ್ತಿಯನ್ನು ಬಿಡಲು 11 ಗಂಟೆಗಳ ಕಾಲ ರೈಲಿನಲ್ಲಿ ಪ್ರಯಾಣಿಸಿದ್ದೆ ಅದೂ ಕೂಡ ಟಿಕೆಟ್ ಇಲ್ಲದೆಯೇ ಎಂದಿದ್ದಾರೆ.

Share News

About BigTv News

Check Also

ರೌಡಿಶೀಟರ್ ಹ್ಯಾರಿಸ್ ಪಠಾಣ್ ಗೂಂಡಾ ಕಾಯ್ದೆ ಅಡಿ ಬಂಧನ…

ಹ್ಯಾರಿಸ್ ಪಠಾಣ್ ಹಲವು ವರ್ಷಗಳಿಂದ: ಕ್ರಿಕೆಟ್ ಬೆಟ್ಟಿಂಗ್ ಬಡ್ಡಿ ವ್ಯವಹಾರ ಅಪಹರಣ ಕೊಲೆ ಪ್ರಕರಣಗಳು.. ಒಟ್ಟು 11 ಪ್ರಕರಣಗಳು ವಿವಿಧ …

Leave a Reply

Your email address will not be published. Required fields are marked *