BigTv News
December 21, 2025
Breaking News
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಅನಧಿಕೃತ ನಿರ್ಮಿಸಿದ್ದ ಕಟ್ಟಡಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಮುಂದುವರಿಸಿದ್ದು, ಶನಿವಾರ ನಡೆದ ಕಾರ್ಯಾಚರಣೆಯಲ್ಲಿ ಒ.ಎಂ.ಬಿ.ಆರ್. ಬಡಾವಣೆಯಲ್ಲಿ ಸುಮಾರು 50 ಕೋಟಿ ರೂ. ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡಿದೆ.ಬಾಣಸವಾಡಿ ಗ್ರಾಮದ ಸರ್ವೆ ನಂ. 227/2 ಮತ್ತು 227/4ರಲ್ಲಿ 1 ಎಕರೆ 24 ಗುಂಟೆ ಪ್ರದೇಶದಲ್ಲಿ ಅನಧಿಕೃವಾಗಿ ನಿರ್ಮಿಸಿದ್ದ ಕಟ್ಟಡಗಳು, ಶೆಡ್‌ಗಳನ್ನು ತೆರವುಗೊಳಿಸಿ 50 ಕೋಟಿ ರೂ. ಬೆಲೆ ಬಾಳುವ ಪ್ರದೇಶವನ್ನು ಪ್ರಾಧಿಕಾರವು ವಶಪಡಿಸಿಕೊಂಡಿತು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಾರ್ಯನಿರತ ಪಡೆಯ …
Read More »
BigTv News
December 21, 2025
Breaking News
ಉಡುಪಿ: ಎಚ್‌ಡಿಎಫ್‌ಸಿ ಬ್ಯಾಂಕ್‌ನ ಕ್ರೆಡಿಟ್ ಕಾರ್ಡ್ ವಿಭಾಗದ ಚಾನೆಲ್ ಪಾರ್ಟ್‌ನರ್ ಎಂದು ಹಿರಿಯ ನಾಗರಿಕ ಸಂತೋಷ್ ಸಿ. ಕಾಮತ್ (60) ಅವರನ್ನು ನಂಬಿಸಿ ಆನ್‌ಲೈನ್‌ನಲ್ಲಿ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕರೆ ಮಾಡಿದ ವ್ಯಕ್ತಿ ಬ್ಯಾಂಕಿನ ರೆಗಾಲಿಯಾ ಗೋಲ್ಡ್ ಕ್ರೆಡಿಟ್ ಕಾರ್ಡ್ ಪಡೆಯಲು ನೀವು ವಾಟ್ಸ್‌ಆಯಪ್ ಕರೆಯಲ್ಲಿ ಪಾನ್ ಕಾರ್ಡ್ ತೋರಿಸಬೇಕೆಂದು ಹೇಳಿ ಪುಸಲಾಯಿಸಿದ್ದ. ಕಾಮತ್ ಅವರು ಹಾಗೇ ಮಾಡಿದ್ದರು. 4 ದಿನಗಳಲ್ಲಿ ನೋಂದಾಯಿತ …
Read More »
BigTv News
December 21, 2025
Breaking News
ರಾಮನಗರ | ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಅಪರಾಧಿಗೆ 12 ವರ್ಷ ಜೈಲು ಶಿಕ್ಷೆಶಿಕ್ಷೆಗೆ ಗುರಿಯಾದವರು ಮುನಿಯರಪ್ಪ ಅಲಿಯಾಸ್ ವರದರಾಜು.2015ರಲ್ಲಿ ಅವರ ವಿರುದ್ಧ ಕಗ್ಗಲೀಪುರ ಪೊಲೀಸರು ಪ್ರಕರಣ ದಾಖಲಾಗಿತ್ತು. ನ್ಯಾಯಾಲಯ ಅಪರಾಧಿಗೆ ₹15 ಸಾವಿರ ದಂಡ ವಿಧಿಸಿದೆ. ಈ ದಂಡದ ಮೊತ್ತದಲ್ಲಿ ₹10 ಬಾಲಕಿಗೆ ನೀಡುವಂತೆ ಆದೇಶಿಸಿದೆ. ನ್ಯಾಯಾಧೀಶೆ ಕೆ.ಎನ್.ಸರಸ್ವತಿ ಈ ತೀರ್ಪು ನೀಡಿದರು. ಪ್ರಾಸಿಕ್ಯೂಷನ್ ಪರವಾಗಿ ಪುಷ್ಪಲತಾ ವಾದ ಮಂಡಿಸಿದ್ದರು.
Read More »
BigTv News
December 21, 2025
Breaking News
ಉಡುಪಿ: ಕಲ್ಯಾಣಪುರದ ಅಭಿಷೇಕ್ (30) ಅವರು ಡಿ. 19ರಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೂಲಿ ಕಾರ್ಮಿಕರಾಗಿದ್ದ ಅವರು ಕೊಡವೂರು ಸೊಸೈಟಿ ಕ್ರಾಸ್ ಬಳಿಯ ಮನೆಯಲ್ಲಿ ತಾಯಿ ಲಲಿತಾ ಅವರೊಂದಿಗೆ ನೆಲೆಸಿದ್ದರು. ಮದ್ಯ ಸೇವನೆಯ ಅಭ್ಯಾಸವೂ ಇತ್ತೆನ್ನಲಾಗಿದೆ.ಶುಕ್ರವಾರ ಮಧ್ಯಾಹ್ನ ಅಭಿಷೇಕ್ ಮನೆಯಲ್ಲಿರುವಾಗ ತಾಯಿ ಹಾಗೂ ಚಿಕ್ಕಮ್ಮ ಕಲ್ಯಾಣಪುರಕ್ಕೆ ಹೋಗಿದ್ದರು. ಮರಳಿ ಬಂದಾಗ ಬಾಗಿಲು ಮುಚ್ಚಿತ್ತು. ಕರೆದಾಗ ತೆರೆಯದ ಕಾರಣ ನೆರೆಮನೆಯವರ ನೆರವಿನೊಂದಿಗೆ ಬಲಾತ್ಕಾರದಿಂದ ಬಾಗಿಲನ್ನು ತೆರೆದು ನೋಡಿದಾಗ ಫ್ಯಾನ್‌ಗೆ ನೇಣು …
Read More »
BigTv News
December 21, 2025
Breaking News
ಪಿರಿಯಪಟ್ಟಣದಿಂದ ಕೇರಳದ ಕಸಾಯಿಖಾನೆಗೆ ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ಜಾಲವನ್ನು ವಿರಾಜಪೇಟೆ ನಗರ ಠಾಣೆ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಈ ಸಂಬಂಧ ಕೇರಳದ ತಳಿಪರಂಬಾ ಮೂಲದ ಪಿ.ಪಿ. ಸಾಧಿಕ್ (38) ಮತ್ತು ಅಬ್ದುಲ್ ಅಹಮ್ಮದ್ ತಂಜಳ್ (34) ಎಂಬುವವರನ್ನು ಬಂಧಿಸಲಾಗಿದೆ.ಬಂಧಿತ ಆರೋಪಿಗಳು ಪಿರಿಯಪಟ್ಟಣ ತಾಲೂಕಿನ ವಿವಿಧ ಗ್ರಾಮಗಳಲ್ಲಿ ರೈತರಿಂದ ದನ-ಕರುಗಳನ್ನು ಖರೀದಿಸಿ, ಕೇರಳಕ್ಕೆ ಸಾಗಿಸಲು ಸಂಚು ರೂಪಿಸಿದ್ದರು. ಪೊಲೀಸರ ಕಣ್ಣು ತಪ್ಪಿಸಲು ಲಾರಿಯಲ್ಲಿ ಹತ್ತಕ್ಕೂ ಹೆಚ್ಚು ಗೋವುಗಳನ್ನು ತುಂಬಿಸಿ, ಅವುಗಳ ಮೇಲೆ …
Read More »
BigTv News
December 21, 2025
Breaking News
ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯ ಕೇಪು ಗ್ರಾಮದಲ್ಲಿ ಕೋಳಿ ಅಂಕ ನಡೆಯುತ್ತಿದ್ದ ಸ್ಥಳಕ್ಕೆ ಪೊಲೀಸರು ಶನಿವಾರ ದಾಳಿ ನಡೆಸಿದ್ದು, 16 ಜನರನ್ನು ವಶಕ್ಕೆ ಪಡೆದಿದ್ದಾರೆ. ಕೋಳಿ ಅಂಕಕ್ಕೆ ಬಳಸಿದ್ದ 22 ಹುಂಜಗಳನ್ನು ಹಾಗೂ ಬಾಲುಗಳನ್ನು (ಚೂಪಾದ ಕತ್ತಿಗಳನ್ನು) ವಶಪಡಿಸಿಕೊಂಡಿದ್ದಾರೆಕೋಳಿ ಅಂಕದ ಸ್ಥಳದಲ್ಲಿ ಹಾಜರಿದ್ದ ಹಾಗೂ ಕಾನೂನು ಬಾಹಿರವಾದ ಕೋಳಿ ಅಂಕವನ್ನು ಮುಂದುವರಿಸುವಂತೆ ಜನರನ್ನು ಪ್ರಚೋದಿಸಿ ದುಷ್ಪ್ರೇರಣೆ ನೀಡಿದ ಆರೋಪದ ಮೇಲೆ ಪುತ್ತೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಅಶೋಕ್ ಕುಮಾರ್ ರೈ …
Read More »
BigTv News
December 20, 2025
Breaking News
ತಾಲ್ಲೂಕಿನ ಸಾಣಾಪುರ ಗ್ರಾಮದ ಹೊರವಲಯದಲ್ಲಿರುವ ಕೆರೆಯಲ್ಲಿ ಕೇರಳದಿಂದ ಬಂದಿದ್ದ ಪ್ರವಾಸಿಗ ಮುಳುಗಿ ಶುಕ್ರವಾರ ಮೃತಪಟ್ಟಿದ್ದಾನೆ.ಪ್ರವಾಸಕ್ಕಾಗಿ ಬಂದಿದ್ದ ಶೈರಿಲ್ ಜೋಶ್ (34) ಒಂದು ದಿನ ಬಸಾಪುರದಲ್ಲಿ ವಾಸವಾಗಿ, ಡಿ. 17ರಂದು ತಾಣಗಳ ಸುತ್ತಾಟಕ್ಕೆ ಹೊರಗಡೆ ಹೋಗಿದ್ದಾಗ ನಾಪತ್ತೆಯಾಗಿದ್ದರು.ಈ ಕುರಿತು ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎರಡು ದಿನಗಳ ನಿರಂತರ ಕಾರ್ಯಾಚರಣೆ ಬಳಿಕ ಶುಕ್ರವಾರ ಸಾಣಾಪುರ ಕೆರೆಯಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Read More »
BigTv News
December 20, 2025
Breaking News
ಬೊಲೆರೋ ಹಾಗೂ ಬಲ್ಕರ್ ವಾಹನಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.ಇಲ್ಲಿನ ಗೌರಿಬಿದನೂರು ತಾಲೂಕಿನ ಪೇತೇನಹಳ್ಳಿ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ಬೊಲೆರೋ ಹಾಗೂ ಬಲ್ಕರ್ ವಾಗನಗಳು ಮುಖಾಮುಖಿ ಡಿಕ್ಕಿಯಾಗಿವೆ.ಜಕ್ಕೇನಹಳ್ಲಿ ಮೂಲದ 25 ವರ್ಷದ ಅಶೋಕ್ ಹಾಗೂ ಬಲ್ಕರ್ ವಾಹನ ಸವಾರ ಆಂಧ್ರ ಮೂಲದ ನಾಗರಾಜಪ್ಪ ಮೃತ ದುರ್ದೈವಿಗಳು. ಮಂಚೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ …
Read More »
BigTv News
December 20, 2025
Breaking News
ಕಡಮಲಕುಂಟೆ ಬಳಿಯ ಪೆನುಗೊಂಡ- ಪಾವಗಡ ರಸ್ತೆಯಲ್ಲಿ ಶನಿವಾರ ಕಾರು- ಆಂಧ್ರಪ್ರದೇಶದ ಸರ್ಕಾರಿ ಬಸ್ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಕಾರು ಚಾಲಕ ಮೃತಪಟ್ಟಿದ್ದಾರೆ.ತಾಲ್ಲೂಕಿನ ಮೇಡಿಹಳ್ಳಿ ಗ್ರಾಮದ ರಾಜಶೇಖರರೆಡ್ಡಿ (38) ಮೃತರು. ಪಟ್ಟಣದಿಂದ ಆಂಧ್ರದ ಧರ್ಮವರಂಗೆ ಹೋಗುತ್ತಿದ್ದ ಇನ್ನೋವಾ ಕಾರು, ಪೆನುಗೊಂಡ ಕಡೆಯಿಂದ ಪಟ್ಟಣದ ಕಡೆಗೆ ಬರುತ್ತಿದ್ದ ಎಪಿಎಸ್‌ಆರ್‌ಟಿಸಿ ಬಸ್ ಮುಖಾಮುಖಿಯಾಗಿದೆ.ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಗಾಯಗಳಾಗಿವೆ. ಈ ರಸ್ತೆಯಲ್ಲಿ ತಿರುವುಗಳು ಹೆಚ್ಚಿವೆ. ಅನಂತಪುರಂ, ಪೆನುಗೊಂಡ, ಧರ್ಮವರಂ, ಬೆಂಗಳೂರಿಗೆ ಹೋಗುವವರು ಇದೇ ಮಾರ್ಗದಲ್ಲಿ ಸಂಚರಿಸುತ್ತಾರೆ. ರಸ್ತೆಯಲ್ಲಿ …
Read More »
BigTv News
December 20, 2025
Breaking News
ಬೆಂಗಳೂರು | ಮೋರಿಗೆ ಕಾರು ಬಿದ್ದು ಇಬ್ಬರ ಸಾವುಪಿಳ್ಳಪ್ಪ ಗಾರ್ಡನ್‍ನ ಶಾಹಿದ್(22) ಜೆ.ಸಿ.ನಗರದ ನಿವಾಸಿ ಸೈಯದ್ ಅಬ್ದುಲ್ ರೆಹಮಾನ್(24) ಮೃತಪಟ್ಟವರು, ಗಾಯಗೊಂಡಿರುವ ಸೈಯದ್ ಮುಜಾಹಿದ್ದಿನ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆತನ ಸ್ಥಿತಿ ಗಂಭೀರವಾಗಿದೆ. ಮೂವರು ಊಟಮುಗಿಸಿಕೊಂಡು ತಡರಾತ್ರಿ ಮನೆಗೆ ಅತಿ ವೇಗವಾಗಿ ಕಾರಿನಲ್ಲಿ ಹೋಗುತ್ತಿದ್ದಾಗ ಮೋರಿಗೆ ಬಿದ್ದು ಸ್ಥಳದಲ್ಲಿಯೇ ಇಬ್ಬರು ಮೃತಪಟ್ಟಿದ್ದಾರೆ. ಮತ್ತೋರ್ವ ಗಾಯಗೊಂಡಿದ್ದಾರೆ. ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಚಿಕ್ಕಜಾಲ ಸಂಚಾರ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿ …
Read More »