Breaking News

Breaking News

ಭಾಲ್ಕಿ | ಅಪರಿಚಿತ ವಾಹನ ಡಿಕ್ಕಿ: ಶಿಕ್ಷಕ ಸಾವು

ಬೀದರ್‌ ಜಿಲ್ಲೆ ಭಾಲ್ಕಿ ತಾಲ್ಲೂಕಿನ ಹುಪಳಾ-ಅಹಮದಾಬಾದ್ ಗ್ರಾಮ ಸಮೀಪ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿದ್ದ ಶಿವಾನಂದ ತುಳಸಿರಾಮ ಮೇತ್ರೆ (38) ಸೋಮವಾರ ರಾತ್ರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಭಾಲ್ಕಿ: 29 ಮಕ್ಕಳು ಶಾಲೆಯಿಂದ ಹೊರಗೆ; ವರದಿಗೆ ಸೂಚನೆಮೃತ ಶಿವಾನಂದ ಅವರು ತಮ್ಮ ಹೊಲದಿಂದ ಬೀದರ್ ಉದಗೀರ್ ರಾಷ್ಟ್ರೀಯ ಹೆದ್ದಾರಿ ರಸ್ತೆ ಮಾರ್ಗವಾಗಿ ದ್ವಿಚಕ್ರ ವಾಹನದ ಮೇಲೆ ತಮ್ಮ ಗ್ರಾಮ ಹುಪಳಾ ಕಡೆಗೆ ಬರುತ್ತಿದ್ದಾಗ ಅಪರಿಚಿತ ವಾಹನ ಡಿಕ್ಕಿ …

Read More »

ಹಾಸನದಲ್ಲಿ ಘೋರ ದುರಂತ : ಸೈಕಲ್ ಆಟವಾಡುತ್ತಾ ನೀರಿನ ಸಂಪಿಗೆ ಬಿದ್ದು 4 ವರ್ಷದ ಬಾಲಕ ಸಾವು.!

ಹಾಸನದ ಅಣಚಿಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಮೃತ ಬಾಲಕನನ್ನ ಎಡನ್ ಸ್ವೀವ್ (4) ಎಂದು ಗುರುತಿಸಲಾಗಿದೆ. ಮನೆ ಮುಂದೆ ಸೈಕಲ್ ನಲ್ಲಿ ಆಟವಾಡುತ್ತಿದ್ದ ಬಾಲಕ ಆಕಸ್ಮಾತ್ ಆಗಿ ನೀರಿನ ಸಂಪಿಗೆ ಬಿದ್ದಿದ್ದಾನೆ.ನಂತರ ಪೋಷಕರು ಬಾಲಕನಿಗಾಗಿ ಎಲ್ಲಾ ಕಡೆ ಹುಡುಕಾಡಿದ್ದಾರೆ. ನಂತರ ಸಂಪ್ ನೋಡಿದಾಗ ಸಂಪ್ ಪಕ್ಕದಲ್ಲಿ ಸೈಕಲ್ ಬಿದ್ದಿದ್ದು, ಶವ ಸಂಪ್ ನಲ್ಲಿ ತೇಲುತ್ತಿದೆ. ಘಟನೆ ನಡೆದ ಸ್ಥಳಕ್ಕೆ ಹಾಸನ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. …

Read More »

ಆಯತಪ್ಪಿ ನದಿಗೆ ಬಿದ್ದು ಸಾವು

ಕುಂದಾಪುರ: ನೆಲ್ಲಿಕಟ್ಟೆ ಬಲಾಡಿ ಮೇಲ್‌ ಬೈಲು ಬಸವ (52) ಅವರು ಆಯತಪ್ಪಿ ನದಿಗೆ ಬಿದ್ದು ಮೃತಪಟ್ಟಿದ್ದಾರೆ.ಪತ್ನಿಯ ಮನೆ ಸಸಿಹಿತ್ಲು ಬಳ್ಕೂರಿನಿಂದ ಮುಳ್ಳುಗುಡ್ಡೆ ಸೌಪರ್ಣಿಕಾ ಹೆಂಚಿನ ಕಾರ್ಖಾನೆಗೆ ಕೆಲಸಕ್ಕೆಂದು ಹೋಗುತ್ತಿರುವಾಗ ಮಾರ್ಗ ಮಧ್ಯದಲ್ಲಿ ಅವರು ಬಹಿರ್ದೆಸೆಗೆಂದು ಬಳ್ಕೂರು ಗ್ರಾಮದ ವಾರಾಹಿ ನದಿ ಸೇತುವೆ ಬಳಿ ಮರಳು ಧಕ್ಕೆ ಹತ್ತಿರ ಹೋದವರು ಆಯತಪ್ಪಿ ನದಿಗೆ ಬಿದ್ದರು.ಕೂಗಿಕೊಂಡಾಗ ಅದೇ ದಾರಿಯಲ್ಲಿ ಹೋಗುತ್ತಿದ್ದ ಅಪರಿಚಿತರು ಅವರನ್ನು ದಡಕ್ಕೆ ತಂದು ಕುಂದಾಪುರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ …

Read More »

ಉಡುಪಿಯಲ್ಲಿ ಘೋರ ದುರಂತ : ತಾಯಿ ಕೈಯಿಂದ ಜಾರಿ ಬಾವಿಗೆ ಬಿದ್ದು ಒಂದೂವರೆ ವರ್ಷದ ಮಗು ಸಾವು.!

ತಾಯಿ ಕೈಯಿಂದ ಜಾರಿ ಬಾವಿಗೆ ಬಿದ್ದು ಮಗು ಸಾವನ್ನಪ್ಪಿದ ಘಟನೆ ಉಡುಪಿಯಲ್ಲಿ ನಡೆದಿದೆ.ಉಡುಪಿ ನಗರದ ಕಿನ್ನಿಮುಲ್ಕಿಯಲ್ಲಿ ಈ ಒಂದು ಘಟನೆ ನಡೆದಿದೆ.ಒಂದೂವರೆ ವರ್ಷದ ಮಗು ಕೀರ್ತನಾ ಮೃತಪಟ್ಟಿದೆ. ತಾಯಿ ನಯನಾ ಅವರು ತಮ್ಮ ಮಗುವನ್ನು ಎತ್ತಿಕೊಂಡು ಬಾವಿಯಲ್ಲಿ ನೀರು ಸೇದುವಾಗ ಅವಘಡ ನಡೆದಿದೆ.ಕೂಡಲೇ ತಾಯಿ ಹಗ್ಗದ ನೆರವಿನಲ್ಲಿ ಬಾವಿಗೆ ಇಳಿದು ಮಗುವನ್ನ ಮೇಲಕ್ಕೆತ್ತಿದ್ದಾರೆ. ಕೂಡಲೇ ಮಗುವನ್ನ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಆದರೆ ಅಷ್ಟರಲ್ಲೇ ಮಗು ಮೃತಪಟ್ಟಿದೆ. ಈ ಸಂಬಂಧ ಉಡುಪಿ ನಗರ …

Read More »

ಹುಬ್ಬಳ್ಳಿಯಲ್ಲಿ ಮತ್ತೆ ಕಳ್ಳರ ಹಾವಳಿ: ಮನೆ ಗೇಟ್‌ ಕಿಲಿ ಮುರಿದು ಕಳ್ಳತನ – ಸಿಸಿ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯ

ಹುಬ್ಬಳ್ಳಿ ನಗರದಲ್ಲಿ ಮತ್ತೆ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕಳ್ಳರ ಹಾವಳಿ ಜನರಲ್ಲಿ ಆತಂಕ ಮೂಡಿಸಿದೆ. ಇಂಡಸ್ಟ್ರಿಯಲ್ ಏರಿಯಾದ ಶ್ರೇಯಾ ನಗರ 6ನೇ ಕ್ರಾಸ್ ಬಳಿ ಇರುವ ಮನೆಯೊಂದರಲ್ಲಿ ಕಳ್ಳತನ ನಡೆದಿದ್ದು, ಮನೆ ಗೇಟ್ ಕಿಲಿ ಮುರಿದು ಕಳ್ಳನು ಒಳನುಗ್ಗಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಬೆಕ್ಕಿನಂತೆ ಮೌನವಾಗಿ ಬಂದ ಈ ಕಳ್ಳ, ಮನೆ ಸುತ್ತಲು ಓಡಾಡುತ್ತಾ ಒಳಗೆ ನುಗ್ಗಲು ಪ್ರಯತ್ನ ನಡೆಸಿದ್ದಾನೆ. ಬಳಿಕ ಕೈಗೆ ಸಿಕ್ಕ ವಸ್ತುಗಳನ್ನು ಕಳ್ಳತನ ಮಾಡಿಕೊಂಡು …

Read More »

ಹೊನ್ನುಡಿಕೆ ಬಳಿ ಬೊಲೆರೊ ಡಿಕ್ಕಿ: ಬೈಕ್‌ ಸವಾರ ಸಾವು

ತುಮಕೂರು: ತಾಲ್ಲೂಕಿನ ಹೊನ್ನುಡಿಕೆ ಬಳಿ ಸೋಮವಾರ ಬೈಕ್‌ಗೆ ಬೊಲೆರೊ ವಾಹನ ಡಿಕ್ಕಿಯಾಗಿ ಬೈಕ್‌ ಸವಾರ ಕಿರಣ್‌ (20) ಮೃತಪಟ್ಟಿದ್ದಾರೆ.ಕಿರಣ್ ಮಾಗಡಿ ತಾಲ್ಲೂಕು ಕುದೂರು ಬಳಿಯ ಶ್ರೀಗಿರಿಪುರದ ನಿವಾಸಿ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಸ್ವಗ್ರಾಮದಿಂದ ಹೊನ್ನುಡಿಕೆ ಮಾರ್ಗವಾಗಿ ನಗರದ ಕಡೆಗೆ ಬರುವಾಗ ನಗರದಿಂದ ತೆರಳುತ್ತಿದ್ದ ಬೊಲೆರೊ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.ಹೆಬ್ಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ರಾಜ್ಯದ ಜೈಲುಗಳಲ್ಲಿ ತೀವ್ರಗೊಂಡ ತಪಾಸಣೆ: ಮೊಬೈಲ್, ಗಾಂಜಾ ಪತ್ತೆ

ಬೆಂಗಳೂರು: ರಾಜ್ಯದ ಹಲವು ಜೈಲುಗಳಲ್ಲಿ ತಪಾಸಣೆ ಕಾರ್ಯ ಮುಂದುವರೆದಿದೆ. ಅಧಿಕಾರಿಗಳು ಜೈಲುಗಳಲ್ಲಿ ತೀವ್ರ ತಪಾಸಣೆ ಕೈಗೊಂಡಿದ್ದು, ಜೈಲಿನ ಅಧಿಕಾರಿಗಳ ತಪಾಸಣೆಯ ವೇಳೆ ಮೊಬೈಲ್ ಗಳು, ಯು.ಎಸ್.ಬಿ. ಕೇಬಲ್, ಚಾರ್ಜರ್, ಸಿಮ್ ಕಾರ್ಡ್ ಪತ್ತೆಯಾಗಿವೆ.ರಾಜ್ಯದ ಹಲವು ಜೈಲುಗಳಲ್ಲಿ ಅಧಿಕಾರಿಗಳು ಕಟ್ಟು ನಿಟ್ಟಿನ ತಪಾಸಣೆ ನಡೆಸಿದ್ದಾರೆ.ಬೆಂಗಳೂರಿನಲ್ಲಿ ಆರು ಮೊಬೈಲ್, ಮೈಸೂರಿನಲ್ಲಿ ಗಾಂಜಾ ಪ್ಯಾಕೆಟ್, ಕಾರವಾರ ಜೈಲಿನಲ್ಲಿ 7 ಮೊಬೈಲ್ ಪತ್ತೆಯಾಗಿವೆ. ಕಾರವಾರ ಜೈಲಿನಲ್ಲಿ ನಾಲ್ವರು ಸಜಾಬಂಧಿಗಳ ಗಲಾಟೆ ಬೆಳಕಿಗೆ ಬಂದಿದ್ದು, ಅವರನ್ನು ಬೇರೆ …

Read More »

ಕಾರಿನ ಡ್ಯಾಶ್‌ ಬೋರ್ಡ್‌ನಲ್ಲಿದ್ದ ಚಿನ್ನಾಭರಣ ಕಳವು

ಚನ್ನರಾಯಪಟ್ಟಣ ತಾಲ್ಲೂಕಿನ ಎಂ.ಕೆ. ಹೊಸೂರು ಗ್ರಾಮದಲ್ಲಿ ಕಾರಿನ ಡ್ಯಾಶ್‌ ಬೋರ್ಡ್‌ನಲ್ಲಿದ್ದ ₹4.70 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ.ಗ್ರಾಮದ ಮೂರ್ತಿ ಅವರು ಬೆಂಗಳೂರಿನಲ್ಲಿ ವಕೀಲ ವೃತ್ತಿ ಮಾಡಿಕೊಂಡಿದ್ದು, ಡಿ.12ರಂದು ಸಂಬಂಧಿಕರ ಮದುವೆಗೆಂದು ಕುಟುಂಬ ಸಮೇತ ಎಂ.ಕೆ. ಹೊಸೂರು ಗ್ರಾಮಕ್ಕೆ ಬಂದಿದ್ದರು.ಡಿ.13ರಂದು ರಾತ್ರಿ 8 ಗಂಟೆಗೆ ಗ್ರಾಮದ ಬೋರೆಗೌಡರವರ ಮನೆಗೆ ಊಟಕ್ಕೆ ಹೋಗಿದ್ದರು. ಒಂದು ಟೈಟನ್ ವಾಚ್‌ ಹಾಗೂ ಚಿನ್ನಾಭರಣಗಳನ್ನು ಬಾಕ್ಸ್‌ನಲ್ಲಿ ಹಾಕಿ, ಕಾರಿನ ಡ್ಯಾಶ್‌ಬೋರ್ಡನಲ್ಲಿ ಇಟ್ಟಿದ್ದರು. ಕಾರನ್ನು ಲಾಕ್ ಮಾಡದೇ …

Read More »

ಸಹಪಾಠಿಯಿಂದ ವಿದ್ಯಾರ್ಥಿಯ ಹತ್ಯೆ

ಖಾಸಗಿ ಕೋಚಿಂಗ್ ಸೆಂಟರ್‌ ನ ತರಗತಿ ಕೋಣೆಯಲ್ಲಿ 16ರ ಹರೆಯದ ಬಾಲಕನನ್ನು ಆತನ ಸಹಪಾಠಿಯೇ ಚೂರಿಯಿಂದ ಇರಿದು ಹತ್ಯೆಗೈದಿರುವ ಘಟನೆ ಸೋಮವಾರ ಬೆಳಿಗ್ಗೆ ಪುಣೆ ಜಿಲ್ಲೆಯ ರಾಜಗುರುನಗರದಲ್ಲಿ ನಡೆದಿದೆ. ಇಬ್ಬರೂ 10ನೇ ತರಗತಿಯಲ್ಲಿ ಓದುತ್ತಿದ್ದು ಅವರ ನಡುವಿನ ಹಿಂದಿನ ವಿವಾದ ಕೊಲೆಗೆ ಕಾರಣವಾಗಿದೆ ಎಂದು ಪೋಲಿಸರುಚೂರಿ ಇರಿತದಿಂದ ತೀವ್ರವಾಗಿ ಗಾಯಗೊಂಡಿದ್ದ ಬಾಲಕನನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಗಿತ್ತು,ಆದರೆ ಚಿಕಿತ್ಸೆ ಫಲಕಾರಿಯಾಗದೇ ಆತ ಕೊನೆಯುಸಿರೆಳೆದಿದ್ದಾನೆ. ಆರೋಪಿ ಬಾಲಕನನ್ನು ಬಂಧಿಸಲಾಗಿದೆ ಎಂದು ಪೋಲಿಸರು ತಿಳಿಸಿದರು.

Read More »

ವೇಶ್ಯಾವಾಟಿಕೆಗೆ ದಾಳಿ; ಇಬ್ಬರು ಮಹಿಳೆಯರ ರಕ್ಷಣೆ; ಇಬ್ಬರ ಬಂಧನ

ಪಡುಬಿದ್ರಿ: ವೇಶ್ಯಾವಾಟಿಕೆ ಆರೋಪದಲ್ಲಿ ಇಲ್ಲಿನ ವಸತಿಗೃಹವೊಂದಕ್ಕೆ ಡಿ. 14ರಂದು ದಾಳಿ ನಡೆಸಿದ ಕಾಪು ಸಿಪಿಐ ಅಜ್ಮತ್ ಅಲಿ, ಪಡುಬಿದ್ರಿ ಪಿಎಸ್‌ಐ ಶಕ್ತಿವೇಲು ಹಾಗೂ ಸಿಬಂದಿ ಇಬ್ಬರು ಸಂತ್ರಸ್ತ ಮಹಿಳೆಯರನ್ನು ರಕ್ಷಿಸಿದ್ದಾರೆ. ಆರೋಪಿಗಳಿಬ್ಬರನ್ನು ಬಂಧಿಸಿ ಉಡುಪಿಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ. ಸ್ಥಳದಿಂದ 4 ಮೊಬೈಲ್ ಫೋನ್‌ಗಳು, 3,600 ರೂ. ನಗದು ಮತ್ತು ಹಲವು ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ.

Read More »