BigTv News
December 15, 2025
Breaking News
ಬೆಂಗಳೂರು: ಕೆ.ಆರ್.ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಹಳೆ ಮದ್ರಾಸ್ ರಸ್ತೆ ಬಳಿ ಗೂಡ್ಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಮೃತಪಟ್ಟ ಘಟನೆ ಭಾನುವಾರ ಸಂಭವಿಸಿದೆ.ಗಾಯತ್ರಿ ಲೇಔಟ್‌ನ 2ನೇ ಮುಖ್ಯರಸ್ತೆಯ ನಿವಾಸಿ, ಖಾಸಗಿ ಸಂಸ್ಥೆಯ ಉದ್ಯೋಗಿ ಕಿರಣ್ (38) ಮೃತ ವ್ಯಕ್ತಿ.ಕಿರಣ್ ಅವರು ಬೈಕ್‌ನಲ್ಲಿ ಶನಿವಾರ ರಾತ್ರಿ 12.30ರ ವೇಳೆಗೆ ಮನೆಗೆ ತೆರಳುತ್ತಿದ್ದಾಗ, ಹೊಸಕೋಟೆಯಿಂದ ಕೆ.ಆರ್. ಪುರ ಕಡೆಗೆ ತೆರಳುತ್ತಿದ್ದ ಗೂಡ್ಸ್ ವಾಹನ, ಹಿಂದಿನಿಂದ ಬೈಕ್‌ಗೆ ಡಿಕ್ಕಿ …
Read More »
BigTv News
December 15, 2025
Breaking News
ಹಾಸನ: ಬಸ್ ಹತ್ತುವಾಗ ಬಾಲಕಿಯೊಬ್ಬಳು ಆಯ ತಪ್ಪಿ ಕೆಳಗೆ ಬಿದ್ದಿದ್ದು, ಗೊತ್ತಾಗದೇ ಚಾಲಕ ಬಸ್ ಚಲಿಸಿದ ಪರಿಣಾಮ ಬಸ್ ಚಕ್ರದಡಿ ಸಿಲುಕಿ ಬಾಲಕಿ ಸಾವನ್ನಪ್ಪಿರುವ ಘಟನೆ ಹಾಸನದಲ್ಲಿ ನಡೆದಿದೆ.ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಹೊಳಲ್ಕೆರೆ ಗೇಟ್ ಬಳಿ ಬಾಲಕಿ ತನ್ನ ತಾಯಿ ಜೊತೆ ಬಸ್ ಹತ್ತುವಾಗ ಈ ದುರಂತ ಸಂಭವಿಸಿದೆ.4 ವರ್ಷದ ಭಾರ್ಗವಿ ಮೃತ ಬಾಲಕಿ. ಬಾಲಕಿ ಬಾರ್ಗವಿ ತನ್ನ ತಾಯಿ ಯಮುನಾ ಜೊತೆ ದೊಡ್ಡಮೇಟಿಕುರ್ಕೆಯಲ್ಲಿರುವ ಆಸ್ಪತ್ರೆಗೆ ತೆರಳುತ್ತಿದ್ದಳು. ಈ …
Read More »
BigTv News
December 15, 2025
Breaking News
ಉಡುಪಿ: ಕಾರು ಢಿಕ್ಕಿ ಹೊಡೆದು ದ್ವಿಚಕ್ರ ವಾಹನ ಸವಾರರು ಗಾಯಗೊಂಡ ಘಟನೆ ಕರಾವಳಿ ಬೈಪಾಸ್ ಸಂತೆಕಟ್ಟೆ ರಸ್ತೆಯಲ್ಲಿ ಸಂಭವಿಸಿದೆ. ಸ್ಕೂಟರ್ ಸವಾರರಾದ ಗೀತಾ (49) ಮತ್ತು ರಕ್ಷಾ (24) ಗಾಯಗೊಂಡವರು. ಚಂದಪ್ಪ ಅವರು ತಮ್ಮ ಕಾರನ್ನು ಕರಾವಳಿ ಬೈಪಾಸ್ ಕಡೆಯಿಂದ ಸಂತೆಕಟ್ಟೆಯತ್ತ ವೇಗವಾಗಿ ಚಲಾಯಿಸಿಕೊಂಡು ಬಂದು ಯಾವುದೇ ಸೂಚನೆ ನೀಡದೆ ಕೊಡಂಕೂರು ಅಡ್ಡರಸ್ತೆಗೆ ತಿರುಗಿಸಿದ ಪರಿಣಾಮ ಕರಾವಳಿ ಬೈಪಾಸ್ ಕಡೆಯಿಂದ ಸಂತೆಕಟ್ಟೆಯತ್ತ ಸಾಗುತ್ತಿದ್ದ ಸ್ಕೂಟರಿಗೆ ಢಿಕ್ಕಿ ಹೊಡೆಯಿತು ಎಂದು ಸಂಚಾರ ಠಾಣೆಯಲ್ಲಿ …
Read More »
BigTv News
December 15, 2025
Breaking News
ಮಡಂತ್ಯಾರು: ಕೆಎಸ್ಸಾರ್ಟಿಸಿ ಬಸ್ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ಪುಂಜಾಲಕಟ್ಟೆ ಠಾಣೆ ವ್ಯಾಪ್ತಿಯ ಮಡಂತ್ಯಾರು ಸಮೀಪ ಡಿ. 14ರಂದು ಸಂಭವಿಸಿದೆ.ಮೆಸ್ಕಾಂ ವೇಣೂರು ಶಾಖೆಯಲ್ಲಿ ಉದ್ಯೋಗಿ ನೋಯೆಲ್ ಜೋಸೆಫ್ ಪಿಂಟೋ (38) ಮೃತಪಟ್ಟವರು.ತಮ್ಮ ಮನೆಯ ಕೆಲಸದವರಿಗೆ ತಿಂಡಿ ತರಲೆಂದು ಮಡಂತ್ಯಾರಿಗೆ ಬರುತ್ತಿದ್ದ ವೇಳೆ ಬಸ್ಸೊಂದು ಆಟೋ ರಿಕ್ಷಾವನ್ನು ಹಿಂದಿಕ್ಕುವ ಭರದಲ್ಲಿ ಬೈಕ್‌ಗೆ ಢಿಕ್ಕಿ ಹೊಡೆಯಿತು. ನೋಯೆಲ್ ಅವರ ಎದೆಗೆ ಬಲವಾದ ಗಾಯವಾಗಿ ಮೃತಪಟ್ಟರು. …
Read More »
BigTv News
December 15, 2025
Breaking News
ಸಾಗರ: ಸಿಗಂದೂರು ನೂತನ ಸೇತುವೆ ಮೇಲಿನಿಂದ ಹಾರಿ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಭಾನುವಾರ ನಡೆದಿದೆ.ಲೆಕ್ಕಪರಿಶೋಧಕರ ಕಚೇರಿಯ ಸಿಬ್ಬಂದಿ ಎನ್ನಲಾದ ಮೈಸೂರಿನ ಆಂಜನೇಯ (47) ಕೌಟುಂಬಿಕ ಸಮಸ್ಯೆಗಳಿಂದ ಬೇಸತ್ತು ಈ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ.ಸೇತುವೆಯ ಮೇಲೆ ನಿಂತಿದ್ದು, ಆತ್ಮಹತ್ಯೆಗೆ ಯತ್ನಿಸಿದ ವೇಳೆ ಎಂಜಿನಿಯರ್ ರಂಜೇಶ್ ರಕ್ಷಿಸಿದ್ದಾರೆ. ನಿದ್ರೆ ಮಾತ್ರೆಗಳನ್ನು ಸೇವಿಸಿರುವ ಶಂಕೆ ಹಿನ್ನೆಲೆಯಲ್ಲಿ ಸಾಗರದ ಉಪವಿಭಾಗೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ಶಿವಮೊಗ್ಗಕ್ಕೆ ಸ್ಥಳಾಂತರಿಸಲಾಗಿದೆ. ತನಿಖೆ ಮುಂದುವರಿದಿದೆ.
Read More »
BigTv News
December 15, 2025
Breaking News
ಗದಗ: ನಿಂತಿದ್ದ ಲಾರಿಗೆ ಹಿಂದಿನಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಬಿಂಕದಕಟ್ಟಿ ಗ್ರಾಮದ ಬಳಿ ಸಂಭವಿಸಿದೆ.ಮೃತನನ್ನು ಬಳ್ಳಾರಿ ಮೂಲದ ಜಿತೇಂದ್ರ ರೆಡ್ಡಿ (25) ಎಂದು ಗುರುತಿಸಲಾಗಿದೆ. ಜಿತೇಂದ್ರ ರೆಡ್ಡಿ ಬಳ್ಳಾರಿಯಿಂದ ದಾಂಡೇಲಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.ಕಾರಿನಲ್ಲಿ ಮೂವರು ಪ್ರಯಾಣಿಸುತ್ತಿದ್ದು, ಅದರಲ್ಲಿ ಚಾಲಕ ಮೃತಪಟ್ಟರೆ ಉಳಿದ ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ತಕ್ಷಣ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನೆ …
Read More »
BigTv News
December 15, 2025
Breaking News
ನಗರದ ಹೊರವಲಯದ ರಂಗರಾಯನದೊಡ್ಡಿ ಕೆರೆ ರಸ್ತೆಯಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿರುವ ಐಜೂರು ಠಾಣೆ ಪೊಲೀಸರು, ಆರೋಪಿಗಳಿಂದ 2.5 ಗ್ರಾಂ ತೂಕದ ಎಂಡಿಎಂಎ ಮಾದಕವಸ್ತು ಹಾಗೂ ₹2 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ. ನಗರದ ತೌಸಿಫ್ ಮಹಮ್ಮದ್(26) ಮತ್ತು ನವಾಜ್ ಪಾಷಾ(25) ಬಂಧಿತರು.ಆರೋಪಿಗಳು ಕೆರೆ ರಸ್ತೆಯಲ್ಲಿ ಮಾದಕವಸ್ತು ಮಾರಾಟ ಮಾಡುತ್ತಿರುವ ಕುರಿತು ಸಿಕ್ಕ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ, ಮಾಲು ಸಮೇತ ವಶಕ್ಕೆ ಪಡೆಯಲಾಯಿತು ಎಂದು ಪೊಲೀಸರು …
Read More »
BigTv News
December 15, 2025
Breaking News
ನಗರದ ವೀರಸಾಗರದಲ್ಲಿ ಶನಿವಾರ ಸಂಜೆ ಅಕ್ರಮ ಸಂಬಂಧದ ಶಂಕೆಯಿಂದ ಹೆಂಡತಿ ಮೇಲೆ ಗಂಡ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.5 ವರ್ಷಗಳ ಹಿಂದೆ ಇವರ ಮದುವೆ ನೆರವೇರಿತ್ತು. ಪತ್ನಿ ಬೇರೆಯವರ ಜತೆಗೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಪಾಷ ಅನುಮಾನ ವ್ಯಕ್ತಪಡಿಸುತ್ತಿದ್ದರು. ಇದೇ ವಿಚಾರವಾಗಿ ಇಬ್ಬರ ಮಧ್ಯೆ ಆಗಾಗ ಗಲಾಟೆಯಾಗುತ್ತಿತ್ತು. ಶನಿವಾರ ನಡೆದ ಜಗಳ ವಿಕೋಪಕ್ಕೆ ತಿರುಗಿದೆ. ಪಾಷ ಮನೆಯಲ್ಲಿದ್ದ ಕಬ್ಬಿಣದ ಆಯುಧದಿಂದ ಮುಸ್ಕಾನ್ ತಲೆ, ಮುಖಕ್ಕೆ ಹೊಡೆದಿದ್ದಾರೆ. ನಂತರ ಮನೆಗೆ ಬೀಗ …
Read More »
BigTv News
December 15, 2025
Breaking News
ಮಡಿಕೇರಿ : ಪ್ರವಾಸಿ ಬಸ್ಸೊಂದು ನಡು ರಸ್ತೆಯಲ್ಲೇ ಹೊತ್ತಿ ಉರಿದ ಘಟನೆ ವಿರಾಜಪೇಟೆಯ ಮಾಕುಟ್ಟ ಬಳಿಯ ಮಗಡಿಪಾರೆ ಆಂಜನೇಯ ದೇವಾಲಯದ ಬಳಿ ನಡೆದಿದೆ. ಪ್ರವಾಸಿಗರನ್ನು ಮೈಸೂರಿನಲ್ಲಿ ಇಳಿಸಿ ವಾಪಸ್ ತೆರಳುವಾಗ ಈ ಅವಘಡ ಸಂಭವಿಸಿದೆ. ಬಸ್ನದಲ್ಲಿ ಚಾಲಕ ಮತ್ತು ನಿರ್ವಾಹಕ ಇಬ್ಬರೇ ಇದ್ದರು.ಅಕಸ್ಮಾತ್ ಪ್ರವಾಸಿಗರಿದ್ದಿದ್ದರೆ ಭಾರೀ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಕೇರಳ ನೋಂದಣಿಯ ಖಾಸಗಿ ಬಸ್ ಎಂದು ತಿಳಿದುಬಂದಿದೆ.ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ತೆರಳಿ ಬೆಂಕಿ ನಂದಿಸಿದ್ದಾರೆ. ವಿರಾಜಪೇಟೆ …
Read More »
BigTv News
December 15, 2025
Breaking News
ತಂದೆ ಹಾಕಿದ ಕೇಸು ವಾಪಾಸ್ಸು ಪಡೆಯುವಂತೆ ಬಾಲಕನಿಗೆ ಹಲ್ಲೆ ನಡೆಸಿರುವ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ತಲ್ಲೂರು ಗ್ರಾಮ ಪವನ್(13) ಎಂಬವರು ಡಿ.5ರಂದು ಸಂಜೆ ಶಾಲೆ ಬಿಟ್ಟು ಮನೆಗೆ ಬರುತ್ತಿದ್ದು, ಈ ವೇಳೆ ಮೈದಾನದ ಹತ್ತಿರ ತಮ್ಮಯ್ಯ ಎಂಬವರು ಬಾಲಕನನ್ನು ಅಡ್ಡಗಟ್ಟಿ, ತಲೆಗೆ ಮತ್ತು ಕೆನ್ನೆಗೆ ಕೈಯಿಂದ ಹೊಡೆದು ನಿನ್ನ ಅಪ್ಪನಿಗೆ ಹೋಗಿ ಹೇಳು ಮೊದಲಿನ ಕೇಸು ವಾಪಾಸ್ಸು ತೆಗೆಯಬೇಕು ಇಲ್ಲದಿದ್ದರೆ ನಿನ್ನ ಅಪ್ಪನನ್ನು ಕೊಲೆ ಮಾಡುತ್ತೇನೆಂದು ಹೆದರಿಸಿದ್ದಾನೆ ಎಂದು …
Read More »