Breaking News

Breaking News

ಭಾರತ-ದಕ್ಷಿಣ ಆಫ್ರಿಕಾ ಟಿ20 ಟಿಕೆಟ್‌ ಅಕ್ರಮ ಮಾರಾಟ: ನಾಲ್ವರ ಸೆರೆ

ಭುವನೇಶ್ವರ: ಒಡಿಶಾದ ಕಟಕ್‌ನ ಬಾರಬತಿ ಮೈದಾನದಲ್ಲಿ ಮಂಗಳವಾರ ನಡೆಯಲಿರುವ ಭಾರತ-ದಕ್ಷಿಣ ಆಫ್ರಿಕಾ ನಡುವಿನ ಟಿ20 ಕ್ರಿಕೆಟ್‌ ಪಂದ್ಯದ ಟಿಕೆಟ್‌ಗಳನ್ನು ಅಕ್ರಮವಾಗಿ (ಬ್ಲಾಕ್) ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಬಿಡಾನಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹೆಚ್ಚು ದರದಲ್ಲಿ ಮಾರಾಟವಾಗುತ್ತಿದ್ದ 12 ಟಿಕೆಟ್‌ಗಳನ್ನು, ದರ್ಗಾ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 9 ಟಿಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.ಘಟನೆಗೆ ಸಂಬಂಧಿಸಿದಂತೆ 2 ಪೊಲೀಸ್ ಠಾಣೆಗಳಲ್ಲಿ 4 ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು …

Read More »

ಬೋಳ ಗ್ರಾಮದಲ್ಲಿ ಕಳ್ಳರ ಕೈಚಳಕ: ಇನ್ವರ್ಟರ್ ಬ್ಯಾಟರಿ ಕಳವು

ಕಾರ್ಕಳ: ಬೋಳ ಗ್ರಾಮದ ಬೋಳಕೋಡಿ ಕುದುರೆಬೆಟ್ಟು ಎಂಬಲ್ಲಿನ ಮನೆಯೊಂದರಲ್ಲಿ ಕಳ್ಳತನ ನಡೆದಿದ್ದು, ಕಳ್ಳರು ಮನೆಯ ಹಿಂಬಾಗಿಲು ಒಡೆದು ಪ್ರವೇಶಿಸಿ ಇನ್ವರ್ಟರ್ ಬ್ಯಾಟರಿ ಮತ್ತು ಸ್ಟೀಲ್ ಟ್ಯಾಪ್ ಕಳವು ಮಾಡಿದ್ದಾರೆ. ಕಳವಾದ ಸೊತ್ತಿನ ಅಂದಾಜು 12,000 ರೂ. ಎಂದು ಅಂದಾಜಿಸಲಾಗಿದೆ.ಸೆಲಿನ್ ಡಿಸೋಜ ಈ ಮನೆಯಲ್ಲಿ ವಾಸವಾಗಿದ್ದು, ಅನಾರೋಗ್ಯದ ಕಾರಣ ನ.30ರಂದು ಮಂಗಳೂರಿನ ಪುತ್ರಿ ಮನೆಗೆ ತೆರಳಿದ್ದರು. ಡಿ.7ರಂದು ಮನೆಗೆ ಆಗಮಿಸಿ ಪರಿಶೀಲಿಸಿದಾಗ ಮನೆಯ ಹಿಂಬಾಗಿಲು ಒಡೆದಿರುವುದು ಕಂಡುಬಂದಿದೆ. ಅಡುಗೆ ಕೋಣೆಯಲ್ಲಿದ್ದ ನೀರಿನ …

Read More »

ಶಿರ್ವದಲ್ಲಿ ಬೈಕುಗಳು ಢಿಕ್ಕಿ: ನಾಲ್ವರಿಗೆ ಗಾಯ

ಇಲ್ಲಿನ ಮುಖ್ಯರಸ್ತೆಯ ಕುತ್ಯಾರು ಜಂಕ್ಷನ್‌ ಬಳಿ ಡಿ. 5ರ ಸಂಜೆ ಎರಡು ಬೈಕ್‌ಗಳು ಢಿಕ್ಕಿಯಾಗಿ ನಾಲ್ವರು ಗಾಯಗೊಂಡಿದ್ದಾರೆ.ಗಾಯಾಳುಗಳಾದ ಲೂಯಿಸ್‌ ಪಿಂಟೋ ಮತ್ತು ಲೇರೀಶಾ ಪಿಂಟೋ ಅವರನ್ನು ಉಡುಪಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲದ ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ದಾಖಲಿಸಲಾಗಿದೆ.ಮತ್ತೊಂದು ಬೈಕಿನ ಸವಾರರಾದ ವಿನೀಶ್‌ ದೇವಾಡಿಗ ಮತ್ತು ಧನುಷ್‌ ಅವರಿಗೆ ತರಚಿದ ಗಾಯಗಳಾಗಿವೆ. ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಕೋಳಿ ಅಂಕ; 8 ಮಂದಿ ವಶಕ್ಕೆ

ಮಣಿಪಾಲ: ಇಲ್ಲಿನ ಮಂಚಿಯ ಸಾರ್ವಜನಿಕ ಹಾಡಿಯಲ್ಲಿ ಹಣವನ್ನು ಪಣವಾಗಿಟ್ಟು ಕೋಳಿ ಅಂಕ ನಡೆಸುತ್ತಿದ್ದ 8 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜಯ ದೇವಾಡಿಗ, ದಯಾನಂದ ಪೂಜಾರಿ, ಪ್ರಜ್ವಲ್‌, ಅಚ್ಚಣ್ಣ ಮೂಲ್ಯ, ಸಚಿನ್‌, ಪ್ರದೀಪ್, ಅಮೀರ್‌ ಮತ್ತು ಫಾರೂಕ್‌ ಅಹಮ್ಮದ್‌ ಬಂಧಿತರು.ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಸ್ಥಳದಿಂದ ಅಂದಾಜು 6,500 ರೂ. ಮೌಲ್ಯದ 4 ಕೋಳಿಗಳು, 15 ವಾಹನಗಳು ಹಾಗೂ ಪಣವಾಗಿ ಇಟ್ಟ 22,100 ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ. …

Read More »

ಎಂಡಿಎಂಎ ಮಾರಾಟ ಆರೋಪ: ಮೂವರನ್ನು ಬಂಧಿಸಿದ ಉಳ್ಳಾಲ ಪೊಲೀಸರು

ಉಳ್ಳಾಲ: ಇಲ್ಲಿನ ಠಾಣಾ ವ್ಯಾಪ್ತಿಯ ತಲಪಾಡಿ ಗ್ರಾಮದ ತಚ್ಚಣಿ ಎಂಬಲ್ಲಿ ನಿಷೇದಿತ ಮಾಧಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಉಳ್ಳಾಲ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.ಅಬ್ದುಲ್ ರವೂಫ್ (30), ಶರೀಫ್ ಯಾನೆ ಅಮಿನ್ (34), ನಿಯಾಝ್ ( 23) ಬಂಧಿತರು.ಬಂಧಿತರಿಂದ 42 ಗ್ರಾಂ ತೂಕದ ಎಂಡಿಎಂಎ, ಟೊಯೋಟಾ ಕಾರು, ಮೂರು ಮೊಬೈಲ್, 2500 ನಗದು ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ಆರೋಪಿ ಪೈಕಿ ನಿಯಾಝ್ …

Read More »

ಮದುವೆ ಸಮಾರಂಭದ ವೇಳೆ ಕುಸಿದ ಮನೆಯ ಮೇಲ್ಛಾವಣಿ

ಚಂಬಾ, ಡಿಸೆಂಬರ್ 09: ಮದುವೆ ಸಮಾರಂಭ ನಡೆಯುತ್ತಿತ್ತು, ನೂರಾರು ಮಂದಿ ಅಲ್ಲಿ ಸೇರಿದ್ದರು. ಒಂದೆಡೆ 50ಕ್ಕೂ ಅಧಿಕ ಮಂದಿ ನೃತ್ಯ ಮಾಡುತ್ತಿದ್ದರೆ, ಒಂದಷ್ಟು ಮಂದಿ ಕುಳಿತು ನೋಡುತ್ತಿದ್ದರು. ಹಿಮಾಚಲ ಪ್ರದೇಶದ ಚಂಬಾದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಜನರು ಕುಳಿತಿದ್ದ ಮೇಲ್ಛಾವಣಿ ಇದ್ದಕ್ಕಿದ್ದಂತೆ ಕುಸಿತುಬಿದ್ದಿತ್ತು.ಘಟನೆಯಲ್ಲಿ ಸುಮಾರು 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ. ಈಗ ಈ ಘಟನೆಯ ಡ್ರೋನ್ ದೃಶ್ಯಾವಳಿ ಹೊರಬಿದ್ದಿದೆ.

Read More »

ಮಹಿಳೆ ನಾಪತ್ತೆ; ದೂರು ದಾಖಲು

ಬೈಂದೂರು: ಬಿಜೂರು ಗ್ರಾಮದ ಕಂಚಿಕಾನು ನಿವಾಸಿ ಕೆ. ಲೀಲಾವತಿ ಭಟ್‌ (71) ನಾಪತ್ತೆಯಾಗಿದ್ದಾರೆ.ಮನೆಯಲ್ಲಿ ಏಕಾಂಗಿಯಾಗಿ ವಾಸವಾಗಿದ್ದ ಅವರು ಸುಮಾರು ಒಂದು ತಿಂಗಳಿನಿಂದ ಸಂಬಂಧಿಕರೊಂದಿಗೆ ದೂರವಾಣಿ ಸಂಪರ್ಕದಲ್ಲೂ ಇರಲಿಲ್ಲ. ಸಂಬಂಧಿಕರು ಕರೆ ಮಾಡಿದಾಗಲೆಲ್ಲ ಲೀಲಾವತಿ ಅವರ ಮೊಬೈಲ್‌ ಸ್ವಿಚ್‌ ಆಫ್‌ ಆಗಿದೆ ಎಂದೇ ಸಂದೇಶ ಬರುತ್ತಿತ್ತು.ಪ್ರಸ್ತುತ ಅವರು ಕಾಣೆಯಾಗಿರುವ ಬಗ್ಗೆ ಬೈಂದೂರು ಆರಕ್ಷಕ ಠಾಣೆಗೆ ದೂರು ನೀಡಲಾಗಿದೆ. ಅವರ ಪತ್ತೆಯಾದಲ್ಲಿ ಠಾಣೆಯನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.

Read More »

ಬೈಕಂಪಾಡಿ ರಿಕ್ಷಾ ನಿಲ್ದಾಣದ ಬಳಿ 2 ವರ್ಷದ ಮಗು ಪತ್ತೆ

ಮಂಗಳೂರು: ನಗರದ ಬೈಕಂಪಾಡಿ ರಿಕ್ಷಾ ನಿಲ್ದಾಣದ ಬಳಿ ಅಂದಾಜು 2 ವರ್ಷದ ಗಂಡು ಮಗು ಪತ್ತೆಯಾಗಿದೆ. ಮಕ್ಕಳ ಕಲ್ಯಾಣ ಸಮಿತಿಯ ಆದೇಶದಂತೆ ನಗರದ ಬೋಂದೆಲ್ ಕೃಷ್ಣ ನಗರ ಸರ್ಕಾರಿ ವಿಶೇಷ ದತ್ತು ಸಂಸ್ಥೆಯಲ್ಲಿ ದಾಖಲಿಸಲಾಗಿದೆ.ಈ ಮಗುವಿನ ವಾರಸುದಾರರು ಇದ್ದಲ್ಲಿ 60 ದಿನದೊಳಗೆ ಸೂಕ್ತ ದಾಖಲೆಗಳೊಂದಿಗೆ ಪಡೀಲ್ ಪ್ರಜಾಸೌಧ ಕಟ್ಟಡದಲ್ಲಿರುವ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ (ದೂ.ಸಂ: 0824-2440004) ಕಚೇರಿಯನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Read More »

ಆನೇಕಲ್: ₹10 ಮೌಲ್ಯದ ಚಿನ್ನಾಭರಣ, 3 ಲಕ್ಷ ನಗದು ದೋಚಿದ ಕಳ್ಳರು

ಆನೇಕಲ್: ತಾಲೂಕಿನ ಚಂದಾಪುರದಲ್ಲಿ ಊರಿಗೆ ಹೋದ ಕುಟುಂಬದ ಮನೆ ಹಾಗೂ ಕ್ಲಿನಿಕ್‌ನ ಬೀಗ ಒಡೆದು ಕಳ್ಳರು ₹10 ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿದ್ದಾರೆ.ಎಎನ್‌ಆರ್ ಕಲ್ಯಾಣ ಮಂಟಪದ ಬಳಿಯ ಧನುಷ್ ಎಂಬುವವರ ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಯ ಬೀಗ ಒಡೆದು ಒಳ ನುಗ್ಗಿದ ಕಳ್ಳರು ₹50,000 ನಗದು ಮತ್ತು 80 ಗ್ರಾಂ ಚಿನ್ನ, ಒಂದು ಡೈಮಂಡ್ ಉಂಗುರ ಮತ್ತು ಬೆಳ್ಳಿ ಆಭರಣಗಳು ಸೇರಿದಂತೆ ₹10 ಲಕ್ಷಕ್ಕೂ ಹೆಚ್ಚು ಮೌಲ್ಯದ …

Read More »

ಕನಕಪುರ: ರೆಸಾರ್ಟ್ ಕೊಠಡಿಯ ಕಿಟಕಿ ಗಾಜು ಒಡೆದು ಗ್ರಾಹಕರ ಲ್ಯಾಪ್ ಟಾಪ್ ಕಳ್ಳತನ

ನಗರದ ಹೊರವಲಯದ ರೆಸಾರ್ಟ್‌ನಲ್ಲಿ ಶುಕ್ರವಾರ ರಾತ್ರಿ ರೂಮಿನ ಕಿಟಕಿಯ ಗಾಜು ಒಡೆದ ಕಳ್ಳರು ಗ್ರಾಹಕರ ಲ್ಯಾಪ್‌ಟಾಪ್‌ ಕಳ್ಳತನ ಮಾಡಲಾಗಿದೆ. ಬೆಂಗಳೂರಿನ ಖಾಸಗಿ ಕಂಪನಿಯ ಉದ್ಯೋಗಿ ಅನನ್ಯ ಎಂಬುವರ ಲ್ಯಾಪ್‌ಟಾಪ್‌ ಕಳ್ಳತನವಾಗಿದೆ. ಅದರ ಮೌಲ್ಯ ₹50 ಸಾವಿರ ಎಂದು ಅಂದಾಜಿಸಲಾಗಿದೆ.ಬೆಂಗಳೂರಿನ ಬಾಸ್ ಆಟೋಮೆಟಿಕ್ ಎಲೆಕ್ಟ್ರಾನಿಕ್ ಕಂಪನಿಯ 15 ಉದ್ಯೋಗಿಗಳು ಶುಕ್ರವಾರ ರಾತ್ರಿ ಕನಕಪುರದ ಹೊರ ವಲಯದ ರೆಸಾರ್ಟ್‌ಗೆ ಬಂದು ತಂಗಿದ್ದರು. ರಾತ್ರಿ ಕಿಟಕಿಯ ಗಾಜು ಒಡೆದು ಲ್ಯಾಪ್‌ಟಾಪ್‌ ಕಳ್ಳತನ ಮಾಡಲಾಗಿದೆ.ಲ್ಯಾಪ್‌ ಟಾಪ್ …

Read More »