Breaking News

Breaking News

ಗೋವಾ ನೈಟ್‌ಕ್ಲಬ್‌ನಲ್ಲಿ ಬೆಂಕಿ: ಬೆಂಗಳೂರಿನ ಥಣಿಸಂದ್ರ ನಿವಾಸಿ ಸಾವು

ಗೋವಾ ನೈಟ್‌ಕ್ಲಬ್‌ನಲ್ಲಿ ಬೆಂಕಿ: ಬೆಂಗಳೂರಿನ ಥಣಿಸಂದ್ರ ನಿವಾಸಿ ಸಾವುಸ್ನೇಹಿತರೊಂದಿಗೆ ಗೋವಾಕ್ಕೆ ತೆರಳಿದ್ದ ಇಶಾಖ್‌, ರಾತ್ರಿ ಕ್ಲಬ್‌ಗೆ ಹೋಗಿದ್ದರು.ಈ ವೇಳೆ ಸಂಭವಿಸಿದ ಅಗ್ನಿ ಅವಘಡದಲ್ಲಿ ಸಿಲುಕಿ ಸಾವಿಗೀಡಾಗಿದ್ದು, ಉಳಿದ ನಾಲ್ವರು ಪಾರಾಗಿದ್ದಾರೆ. ಇಶಾಕ್‌ ಶವವನ್ನು ಅವರ ತಂದೆ ಎಂ.ಡಿ.ಹುಸೇನ್‌ ಗುರುತಿಸಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಹಸ್ತಾಂತರಿಸಲಾಗುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Read More »

ಮೂರು ಹೆಣ್ಣು ಮಕ್ಕಳ ತಂದೆ – ಗಂಡು ಕೂಸಿಗಾಗಿ ಹೆಂಡತಿ ತಲೆ ಬೋಳಿಸಿದ!

ಪತಿ, ಮೂರು ಹೆಣ್ಣು ಮಕ್ಕಳು ಹೆತ್ತ ಕಾರಣ ಗಂಡು ಮಗುವಿಗಾಗಿ ಮಾಟಗಾತಿಯ ಮಾತಿನಂತೆ ಮಹಿಳೆಯ ಕೂದಲು ಬಲವಂತವಾಗಿ ಕತ್ತರಿಸಿದ್ದಾರೆ.ಘಟನೆಯ ಬಳಿಕ ರಕ್ತಸ್ರಾವದಿಂದ ಬಳಲಿದ ಸಂತ್ರಸ್ತೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ದೂರು ದಾಖಲಿಸಿದ್ದಾರೆ.ದೆವ್ವ ಬಿಡಿಸಬೇಕಾದರೆ ಆಕೆಯ ನೆತ್ತಿಯ ಭಾಗದಲ್ಲಿ ರಕ್ತ ಕಾಣುವಂತೆ ಕೂದಲು ಕತ್ತರಿಸಬೇಕೆಂದು ದುಂಡೇಶ್​ಗೆ ಹೇಳಿದ್ದಳು ಎನ್ನಲಾಗಿದ್ದು. ಇದನ್ನು ನಂಬಿದ್ದ ದುಂಡೇಶ್ ಕೂದಲು ಕಟ್ ಮಾಡಿದ್ದ, ನೊಂದ ಸಂತ್ರಸ್ತ ಮಹಿಳೆ ಸದ್ಯ ದೂರು ದಾಖಲಿಸಿದ್ದಾರೆ.

Read More »

ಮಂಡ್ಯದಲ್ಲಿ ಭೀಕರ ಅಪಘಾತ: ಚಿಕ್ಕಮಗಳೂರು ಮೂಲದ ಮೂವರು ಸ್ಥಳದಲ್ಲೇ ಸಾವು

ಡಿವೈಡರ್ ಗೆ ಡಿಕ್ಕಿ ಹೊಡೆದ ಕಾರು ಪಲ್ಟಿಯಾಗಿ ಬಿದ್ದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿರುವ ದಾರುಣ ಘಟನೆ ಮಂಡ್ಯದಲ್ಲಿ ನಡೆದಿದೆಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ನಾಗತಿಹಳ್ಳಿ ಬಳಿ ಈ ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದ ಚನ್ನೇಗೌಡ (60), ಸರೋಜಮ್ಮ (55) ಹಾಗೂ ಜಯಮ್ಮ (71) ಮೃತ ದುರ್ದೈವಿಗಳುಮೃತ ಮೂವರೂ ಚಿಕ್ಕಮಗಳೂರು ಮೂಲದವರಾಗಿದ್ದಾರೆ. ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ. ಮೃತದೇಹಗಳನ್ನು ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Read More »

ಪ್ರೀ ವೆಡ್ಡಿಂಗ್ ಶೂಟ್’ ಮುಗಿಸಿ ಬರುವಾಗ ಕೊಪ್ಪಳದಲ್ಲಿ ಅಪಘಾತ , ಮದುವೆ ಆಗಬೇಕಿದ್ದ ‘ಜೋಡಿ’ ದುರ್ಮರಣ.!

ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮುಗಿಸಿ ಬರುವಾಗ ಸಂಭವಿಸಿದ ಭೀಕರ ಅಪಘಾತದಲ್ಲಿ ಭಾವಿ ದಂಪತಿ ಮೃತಪಟ್ಟಿದ್ದಾರೆ.ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಚಿಕ್ಕಬಣಕಲ್ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದೆ,ಆದರೆ ಬೈಕ್ ಮತ್ತು ಲಾರಿಯ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸಂಭವಿಸಿದ ಅಪಘಾತದಲ್ಲಿ ಇಬ್ಬರೂ ಮೃತಪಟ್ಟಿದ್ದಾರೆ.ಮೃತರನ್ನ ಕೊಪ್ಪಳ ತಾಲೂಕಿನ ಇರಕಲ್ಲಗಢ ಗ್ರಾಮದ ಕರಿಯಪ್ಪ ಮಡಿವಾಳ(26), ಕಾರಟಗಿ ತಾಲೂಕಿನ ಮುಸ್ಟೂರು ಗ್ರಾಮದ ಕವಿತಾ(19) ಎಂದು ಗುರುತಿಸಲಾಗಿದೆ. ಡಿಸೆಂಬರ್ 21ರಂದು ಇವರಿಬ್ಬರ ಮದುವೆ ನಿಶ್ಚಯವಾಗಿತ್ತು.ಗಂಗಾವತಿ ಗ್ರಾಮೀಣ …

Read More »

ಮೋದಿ ಅವರೇ ನನ್ನ ಗಂಡ ವಿಕ್ರಂನನ್ನು ಪಾಕಿಸ್ತಾನಕ್ಕೆ ಕಳುಹಿಸಿ: ಪಾಕ್ ಮಹಿಳೆಯ ಮನವಿ

ಪಾಕಿಸ್ತಾನದ ಮಹಿಳೆಯೊಬ್ಬರು ಪ್ರಧಾನಿ ನರೇಂದ್ರ ಮೋದಿ ಬಳಿಯಲ್ಲಿ ನನ್ನ ಪತಿಯನ್ನು ವಾಪಸ್ ಕರಾಚಿಗೆ ಕಳುಹಿಸಿ ಎಂದು ವಿಶೇಷ ಮನವಿಯೊಂದನ್ನು ಮಾಡಿಕೊಂಡಿದ್ದಾರೆ. ಕರಾಚಿಯ ನಿವಾಸಿಯಾಗಿರುವ ನಿಕಿತಾ ನಾಗದೇವ್ ಎಂಬವರು ತನ್ನ ಪತಿ ವಿಕ್ರಮ್ ನಾಗದೇವ್ ಈ ಮನವಿ ಮಾಡಿಕೊಂಡಿದ್ದಾರೆ.ತನ್ನನ್ನು ಕರಾಚಿಯಲ್ಲಿ ಬಿಟ್ಟು ದೆಹಲಿಯಲ್ಲಿರುವ ವಿಕ್ರಮ್ ಸದ್ಯ ಎರಡನೇ ಮದುವೆಯಾಗಲು ತಯಾರಿ ಮಾಡಿಕೊಳ್ಳುತ್ತಿದ್ದಾನೆ ಎಂದು ಆರೋಪಿಸಿರುವ ನಿಕಿತಾ ವಿಡಿಯೋ ಮೂಲಕ ಈ ಮನವಿ ಮಾಡಿಕೊಂಡಿದ್ದಾರೆ.

Read More »

ಧಾರವಾಡ :ಆನ್‌ಲೈನ್ ಗೇಮ್‌ಗೆ ಮತ್ತೊಬ್ಬ ಯುವಕ ದುರ್ಮರಣ!!

ಆನ್‌ಲೈನ್ ಗೇಮ್‌ನಲ್ಲಿ ಹಣ ಕಳೆದುಕೊಂಡ ಯುವಕನೊಬ್ಬ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಮಂಗಳಗಟ್ಟಿ ಗ್ರಾಮದಲ್ಲಿ ನಡೆದಿದೆ. ಈತ ಫೈನಾನ್ಸ್‌ಗೆ ಕಟ್ಟಬೇಕಿದ್ದ 53 ಸಾವಿರ ಹಣವನ್ನು ಆನ್‌ಲೈನ್ ಗೇಮ್‌ಗೆ ಬಳಸಿಕೊಂಡು ನಷ್ಟ ಅನುಭವಿಸಿದ್ದ. ಈ ಹಿಂದೆ ಕೂಡ ಈತ ಮಾಡಿದ್ದ ಸಾಲವನ್ನು ತಾಯಿ ಮಂಜವ್ವ ತೀರಿಸಿದ್ದರು. ಇದೀಗ ಮತ್ತೆ ಬಳಸಿದ ಫೈನಾನ್ಸ್ ಹಣವನ್ನು ಮಾಲೀಕರಿಗೆ ಕಟ್ಟಲಾಗದೆ ಮನನೊಂದು ಮಂಗಳಗಟ್ಟಿ ಗ್ರಾಮದ ಶೇಖನಗೌಡ ಪಾಟೀಲ ಅವರ ತೋಟದಲ್ಲಿ ಬೇವಿನ …

Read More »

ಭದ್ರತಾ ಪಡೆಗಳಿಂದ ಮಹತ್ವದ ಕಾರ್ಯಾಚರಣೆ: ಭಲಾರಾ ಅರಣ್ಯದಲ್ಲಿ ಉಗ್ರರ ಅಡಗು ತಾಣ ಪತ್ತೆ

ಭಲಾರಾ ಅರಣ್ಯ ಪ್ರದೇಶದಲ್ಲಿ ಜಮ್ಮು-ಕಾಶ್ಮೀರ ಪೊಲೀಸರ ವಿಶೇಷ ಕಾರ್ಯಾಚರಣೆ ತಂಡ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಉಗ್ರರ ಅಡಗು ತಾಣ ಪತ್ತೆಯಾಗಿದ್ದು, ಶಸ್ತ್ರಾಸ್ತ್ರ ಹಾಗೂ ಸಜೀವ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.ಕಾಡಿನ ಒಳಭಾಗದಲ್ಲಿ ಮರೆಮಾಚಲಾಗಿದ್ದ ಅಡಗು ತಾಣ ಪತ್ತೆಯಾಗಿದ್ದು, ಅಲ್ಲಿ ಒಂದು ಎಸ್‌ಎಲ್‌ಆರ್ ರೈಫಲ್, ಎರಡು ಮ್ಯಾಗಜೀನ್‌ಗಳು ಹಾಗೂ 22 ಸುತ್ತಿನ ಸಜೀವ ಗುಂಡುಗಳು ದೊರೆತಿವೆ. ಭದ್ರತಾ ಪಡೆಗಳು ಶಸ್ತ್ರಾಸ್ತ್ರಗಳನ್ನು ತಕ್ಷಣವೇ ವಶಕ್ಕೆ ಪಡೆದು ಪ್ರದೇಶವನ್ನು ತಮ್ಮ ನಿಗ್ರಾಣಿಯಲ್ಲಿರಿಸಿವೆ.

Read More »

ಅಮರಿಕದಿಂದ ಭಾರತಕ್ಕೆ ಬಂದು ಕೊಲೆ ಮಾಡಿ ಪರಾರಿಯಾಗುವಾಗ ಸಿಕ್ಕಿಬಿದ್ದ ಎನ್​ಆರ್​ಐ

ಅಮೆರಿಕದಿಂದ ಭಾರತಕ್ಕೆ ಬಂದು ಸೋದರಳಿಯನನ್ನು ಕೊಲೆ ಮಾಡಿ, ಪಾಸ್​ಪೋರ್ಟ್​, ನಗದು ತೆಗೆದುಕೊಂಡು ಪರಾರಿಯಾಗಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಪಂಜಾಬ್ ಪೊಲೀಸರು ಬಂಧಿಸಿದ್ದಾರೆ. ಪಂಜಾಬ್‌ನ ಮೋಗಾ ಜಿಲ್ಲೆಯಲ್ಲಿ ಕೇವಲ ಒಂದು ತಿಂಗಳ ಹಿಂದೆ ಕ್ಯಾಲಿಫೋರ್ನಿಯಾದಿಂದ ಹಿಂದಿರುಗಿದ್ದ ಅನಿವಾಸಿ ಭಾರತೀಯನೊಬ್ಬ ತನ್ನ ಸೋದರಳಿಯನನ್ನು ಗುಂಡಿಕ್ಕಿ ಕೊಂದಿದ್ದಾನೆ ಎಂದು ಆರೋಪಿಸಲಾಗಿದೆ, ಕೃಷಿ ಭೂಮಿಯ ಮೇಲಿನ ಕೌಟುಂಬಿಕ ಕಲಹ ಹಿಂಸಾಚಾರದಲ್ಲಿ ಅಂತ್ಯ ಕಂಡಿತ್ತು.ಡಿಎಸ್ಪಿ ನಿಹಾಲ್ ಸಿಂಗ್ ವಾಲಾ ಅನ್ವರ್ ಅಲಿ ಮತ್ತು ಎಎಸ್ಐ ಜಸ್ವಂತ್ ಸಿಂಗ್ ನೇತೃತ್ವದ …

Read More »

ಇಂಡಿಗೋ ಬಿಕ್ಕಟ್ಟು, ಪ್ರಯಾಣಿಕರಿಗೆ 610 ಕೋಟಿ ರೂ.ಮೊತ್ತದ ಟಿಕೆಟ್ ಹಣ ಮರುಪಾವತಿಸಿದ ವಿಮಾನಯಾನ ಸಂಸ್ಥೆ

ಇಂಡಿಗೋ ವಿಮಾನಯಾನ ಸಂಸ್ಥೆ ಪ್ರಯಾಣಿಕರಿಗೆ 610 ಕೋಟಿ ರೂ. ಮೌಲ್ಯದ ಟಿಕೆಟ್ ಹಣವನ್ನು ಮರುಪಾವತಿ ಮಾಡಿದೆ. ತಾಂತ್ರಿಕ ದೋಷಗಳು ಹಾಗೂ ಸಿಬ್ಬಂದಿ ಕೊರತೆಯಿಂದಾಗಿ ಕಳೆದ ಹಲವು ದಿನಗಳಿಂದ ಹಲವು ಏರ್ ಇಂಡಿಯಾ ವಿಮಾನಗಳು ರದ್ದುಗೊಂಡಿದ್ದವು ಇದರಿಂದಾಗಿ ಸಾವಿರಾರು ಪ್ರಯಾಣಿಕರು ತೊಂದರೆ ಅನುಭವಿಸಿದ್ದರು.ಇಂಡಿಗೋದ ವಾಯುಯಾನ ಜಾಲವು ಶೀಘ್ರವಾಗಿ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ ಮತ್ತು ಕಾರ್ಯಾಚರಣೆಗಳು ಸಂಪೂರ್ಣವಾಗಿ ಸ್ಥಿರವಾಗುವವರೆಗೆ ಎಲ್ಲಾ ಪರಿಹಾರ ಕ್ರಮಗಳು ಮುಂದುವರೆಯುತ್ತವೆ ಎಂದು ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Read More »

ಸಹ ಕೈದಿಗಳಿಗೆ ದರ್ಶನ್ ದೈಹಿಕ ಕಿರುಕುಳ; ಸೆಲ್​ನಲ್ಲೇ ನಡೆಯಿತು ದೊಡ್ಡ ಜಗಳ.

ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ. ಆರಂಭದಲ್ಲಿ ಜಾಮೀನು ಪಡೆದು ಹಾಯಾಗಿ ಹೊರಗೆ ಸುತ್ತಾಡಿಕೊಂಡಿದ್ದ ಅವರು ಸುಪ್ರೀಂಕೋರ್ಟ್ ಬೇಲ್ ರದ್ದು ಮಾಡುತ್ತಿದ್ದಂತೆ ಮರಳಿ ಜೈಲು ಸೇರಿದ್ದಾರೆ. ಈಗ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ನಿಯಮಗಳು ಕಠಿಣವಾಗಿದ್ದು, ದರ್ಶನ್ ತತ್ತರಿಸಿ ಹೋಗಿದ್ದಾರಂತೆ.ದರ್ಶನ್ ಜೊತೆ ಒಂದೇ ಸೆಲ್​ನಲ್ಲಿ ಅನುಕುಮಾರ್, ಜಗ್ಗ, ನಾಗರಾಜು, ಪ್ರದೋಶ್, ಲಕ್ಷ್ಮಣ್ ಇದ್ದಾರೆ. ಇವರೆಲ್ಲರೂ ರೇಣುಕಾಸ್ವಾಮಿ ಕೊಲೆ ಕೇಸ್​ನ್ಲಿ ಜೈಲು ಸೇರಿದವರೇ. ನಾಗರಾಜು ಅವರನ್ನು ಹೊರತುಪಡಿಸಿ ಉಳಿದ ಆರೋಪಿಗಳಿಗೆ …

Read More »