Breaking News

Breaking News

ಮೋಹರಂ ಮುಗಿದ್ರೂ ಗಲಾಟೆ ಮುಗಿದಿಲ್ಲ: ಅಂತಿಮವಾಗಿ ಮೌಲ್ವಿ ಕೊಲೆಯಲ್ಲಿ ಅಂತ್ಯ

ಮೊಹರಂ ಹಬ್ಬದಲ್ಲ ಪೀರ್ (ದೇವರು) ಹಿಡಿಯುವ ಸಂಬಂಧ ಶುರುವಾದ ಗಲಾಟೆ ಮೌಲ್ವಿ ಕೊಲೆಯಲ್ಲಿ ಅಂತ್ಯವಾಗಿದೆ. ಕಲಬುರಗಿ ಜಿಲ್ಲೆಯ ಕಮಲಾಪುರ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ಹನಿಫ್‌ಸಾಬ್ ಕೊಲೆಯಾದ ವ್ಯಕ್ತಿ.ಪೀರ್ ಹಿಡಿಯುವ ಸಂಬಂಧ ಕೆಲ ವರ್ಷಗಳಿಂದ ಎರಡು ಕುಟುಂಬದವರ ನಡುವೆ ಗಲಾಟೆ ಶುರುವಾಗಿದ್ದು, ಇದೇ ದ್ವೇಷದಲ್ಲಿ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡಿಕೊಂಡು ಕೊನೆಗೆ ರಿಜ್ವಾನ್ ಎನ್ನುವಾತ ಹನೀಫ್‌ಸಾಬ್ ಎನ್ನುವರನ್ನ ಚಾಕುವಿನಿಂದ ಹಿರಿದು ಹತ್ಯೆ ಮಾಡಿದ್ದಾನೆ. ಬಳಿಕ ರಿಜ್ವಾನ್ ತಾನೇ ನೇರವಾಗಿ ಹೋಗಿ …

Read More »

ಗಂಡ-ಹೆಂಡತಿ ನಡುವೆ ಮಾರಾಮಾರಿ | ಬಿಡಿಸಲು ಬಂದ ವ್ಯಕ್ತಿ ಸಾವು!

ಚಿಕ್ಕಬಳ್ಳಾಪುರ : ಗಂಡ ಹೆಂಡತಿ ಜಗಳ ಬಿಡಿಸಲು ಹೋಗಿದ್ದ ವ್ಯಕ್ತಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಗುರಂಪಲ್ಲಿ ಗ್ರಾಮದಲ್ಲಿ ನಡೆದಿದೆ.ಬೋರ್ ವೆಲ್ ನಾರಾಯಣಸ್ವಾಮಿ 67 ಸಾವನ್ನಪ್ಪಿರುವ ವ್ಯಕ್ತಿ. ಅಕ್ಕಪಕ್ಕದ ಮನೆಯವರಾದ ಮಧು ಮತ್ತು ಶೈಲ ದಂಪತಿಯ ಜಗಳ ಬಿಡಿಸಲೆಂದು ಮುಂದಾದ ನಾರಾಯಣಸ್ವಾಮಿ ನೂಕಾಟ ತಳ್ಳಾಟದ ನಡುವೆ ಆಯತಪ್ಪಿ ಮನೆಯ ಗೇಟ್‌ಗೆ ಬಂದು ಬಿದ್ದಿದ್ದು, ತಲೆಯ ಹಿಂಬದಿಗೆ ಗಾಢವಾದ ಪೆಟ್ಟು ಬಿದ್ದು ಕೊನೆಯುಸಿರೆಳೆದಿದ್ದಾರೆ.ಸದ್ಯ ಮರಣೋತ್ತರ ಪರೀಕ್ಷೆಗಾಗಿ ಮೃತದೇಹ ಜಿಲ್ಲಾಸ್ಪತ್ರೆಗೆ ರವಾನೆ …

Read More »

ಯಾಕೆ ಸುಮ್ಮನೆ ಟೆನ್ಷನ್ – ಅನಾಥ ಶವವನ್ನು ಪಕ್ಕದ ಏರಿಯಾಗೆ ಎಸೆದ ಪೊಲೀಸ್!

ಉತ್ತರ ಪ್ರದೇಶ : ಇಲ್ಲಿನ ಮೀರತ್‌ನಲ್ಲಿ ರಾತ್ರಿ ಪಾಳಿಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಇಬ್ಬರು ಪೊಲೀಸ್ ಸಿಬ್ಬಂದಿ ತಮ್ಮ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪತ್ತೆಯಾದ ಅಪರಿಚಿತ ಶವವನ್ನು ಮತ್ತೊಂದು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕೊಂಡೊಯ್ದು ಹಾಕಿ ಸಿಕ್ಕಿಬಿದ್ದಿದ್ದಾರೆ.ಡಿ.5 ರಂದು ಈ ಘಟನೆ ನಡೆದಿದ್ದು, ಇಬ್ಬರು ಸಿಬ್ಬಂದಿ ಹೀಗೆ ಅಪರಿಚಿತ ಶವವನ್ನು ತಮ್ಮ ವ್ಯಾಪ್ತಿಗೆ ಒಳಪಡುವ ಗಡಿಯಿಂದ ಹೊರಗೆ ಹಾಕುತ್ತಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿದೆ. ಹೀಗಾಗಿ ಪೊಲೀಸ್ ಇಲಾಖೆ ಸಿಬ್ಬಂದಿಯ ವಿರುದ್ಧ ಕ್ರಮ …

Read More »

ರಾಜ್ಯದಲ್ಲಿ ಮತ್ತೊಂದು ‘ಪೈಶಾಚಿಕ ಕೃತ್ಯ’ : ಇಬ್ಬರು ಹೆಣ್ಣು ಮಕ್ಕಳ ಮೇಲೆ ಪಾಪಿ ತಂದೆಯಿಂದಲೇ ಅತ್ಯಾಚಾರ.!

ಚಿತ್ರದುರ್ಗ : ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದ್ದು, ಇಬ್ಬರು ಹೆಣ್ಣು ಮಕ್ಕಳ ಮೇಲೆಯೇ ಪಾಪಿ ತಂದೆ ಅತ್ಯಾಚಾರ ಎಸಗಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.ಮದ್ಯದ ಅಮಲಿನಲ್ಲಿ ತನ್ನ ಹೆಣ್ಣು ಮಕ್ಕಳ ಮೇಲೆ ಎರಗಿ ನೀಚ ತಂದೆ ವಿಕೃತಿ ಮೆರೆದಿದ್ದಾನೆ.ಗಣಿ ಕೆಲಸ ಮಾಡಿಕೊಂಡಿದ್ದ ಮಂಜುನಾಥ್ ಎಂಬಾತ ತನ್ನ 13 ಹಾಗೂ 10 ವರ್ಷದ ಅಪ್ರಾಪ್ತ ಪುತ್ರಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಕುಡಿತಕ್ಕೆ ದಾಸನಾಗಿದ್ದ ಮಂಜುನಾಥ್ ತನ್ನ ಮೇಲೂ ಅತ್ಯಾಚಾರ ಎಸಗಲು …

Read More »

ಗೋವಾ ನೈಟ್ ಕ್ಲಬ್‌ನಲ್ಲಿ ಅಗ್ನಿ ಅವಘಡ: ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶ

25 ಜನರ ಪ್ರಾಣಹಾನಿಗೆ ಕಾರಣವಾದ ಪಣಜಿ ನೈಟ್ ಕ್ಲಬ್ ಅಗ್ನಿ ದುರಂತದ ಕುರಿತು ಮ್ಯಾಜಿಸ್ಟ್ರೇಟ್ ತನಿಖೆಗೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಆದೇಶಿಸಿದ್ದಾರೆ.ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ನೈಟ್ ಕ್ಲಬ್ ಮಾಲಕ ಹಾಗೂ ಪ್ರಧಾನ ವ್ಯವಸ್ಥಾಪಕನ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದ್ದು, ಅವರಿಬ್ಬರನ್ನು ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.ಬಿರ್ಚ್ ಬೈ ರೋಮಿಯೊ ಲೇನ್‌ನಲ್ಲಿರುವ ನೈಟ್ ಕ್ಲಬ್‌ನಲ್ಲಿ ಶನಿವಾರ ತಡರಾತ್ರಿ ಅಗ್ನಿ ಅವಘಡ ಸಂಭವಿಸಿತ್ತು. ಈ ನೈಟ್‌ ಕ್ಲಬ್‌ ರಾಜ್ಯ ರಾಜಧಾನಿ ಪಣಜಿಯಿಂದ ಸುಮಾರು 25 …

Read More »

ಮಹಿಳೆ ಬಲಿ ಪಡೆದಿದ್ದ ಎರಡು ರಾಟ್ ವೀಲರ್ ನಾಯಿಗಳು ಸಾವು

ದಾವಣಗೆರೆ ಜಿಲ್ಲೆಯ ಹೊರವಲದ ಹೊನ್ನೂರು ಅಡಿಕೆರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆಯೊಬ್ಬರನ್ನು ಅಟ್ಟಿಸಿಕೊಂಡು ಬಂದ ನಾಯಿಗಳು ಮಹಿಳೆಯನ್ನು ಕಚ್ಚಿ ಸಾಯಿಸಿದ್ದವು. ರಾಟ ವೀಲರ್ ದಾಳಿಗೆ 35 ವರ್ಷದ ಮಹಿಳೆ ಅನಿತಾ ಮೃತಪಟ್ಟಿದ್ದವು. ಘಟನೆ ಬಳಿಕ ರೊಚ್ಚಿಗೆದ್ದ ಗ್ರಾಮಸ್ಥರು ಎರಡೂ ನಾಯಿಗಳನ್ನು ಸೆರೆಹಿಡಿದಿದ್ದರು. ನಾಯಿಗಳನ್ನು ಸೆರೆಹಿಡಿಯುವ ವೇಳೆ ಗಾಯಗೊಂಡು ಎರಡೂ ನಾಯಿಗಳು ಸಾವನ್ನಪ್ಪಿವೆ. ರಾಟ್ ವೀಲರ್ ನಾಯಿಗಳ ಮಾಲೀಕ ಯಾರು ಎಂಬ ಬಗ್ಗೆ ಪತ್ತೆ ಮಾಡುವಂತೆ ಸ್ಥಳೀಯರು, ಗ್ರಾಮಸ್ಥರು ಪೊಲೀಸರನ್ನು ಒತ್ತಾಯಿಸಿದ್ದಾರೆ. ನಾಯಿ ದಾಳಿಯಿಂದಾಗಿ …

Read More »

ತಂಬಾಕು ಕೊಡದ್ದಕ್ಕೆ ರೊಚ್ಚಿಗೆದ್ದ ಕೈದಿಗಳು, ಕಾರಾಗೃಹ ಸಿಬ್ಬಂದಿ ಮೇಲೆ ಹಲ್ಲೆ

ಕಾರವಾರ: ಜೈಲರ್ ಸೇರಿ ಕಾರಾಗೃಹದ ಮೂವರು ಸಿಬ್ಬಂದಿಯ ಮೇಲೆ ಕೈದಿಗಳು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಕಾರವಾರ ಜಿಲ್ಲಾ ಕಾರಾಗೃಹದಲ್ಲಿ ನಡೆದಿದೆ. ಜೈಲಿನಲ್ಲಿ ಮಾದಕ ವಸ್ತುಗಳನ್ನು ಬಿಡದೆ, ಕಠಿಣ ನಿಯಮಗಳನ್ನು ಕಡ್ಡಾಯ ಪಾಲನೆ ಮಾಡಿದ್ದಕ್ಕೆ ಈ ರೀತಿ ಹಲ್ಲೆ ನಡೆಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.ಈ ಘಟನೆ ಬೆನ್ನಲ್ಲೇ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಮೊಹ್ಮದ್ ಅಬ್ದುಲ್ ಫಯಾನ್, ಕೌಶಿಕ ನಿಹಾಲ್ ಹಲ್ಲೆ ನಡೆಸಿದ ಆರೋಪಿಗಳಾಗಿದ್ದು ಮಂಗಳೂರು …

Read More »

ಉತ್ತರ ಗೋವಾದ ನೈಟ್​​ಕ್ಲಬ್​​ನಲ್ಲಿ ಭೀಕರ ಅಗ್ನಿ ದುರಂತ: 23 ಮಂದಿ ಸಾವು

ಉತ್ತರ ಗೋವಾದ ಅರ್‌ಪೋರಾದಲ್ಲಿರುವ ನೈಟ್​​ ಕ್ಲಬ್‌ನಲ್ಲಿ ನಡೆದ ಭೀಕರ ಅಗ್ನಿ ದುರಂತದಲ್ಲಿ 23 ಜನ ದುರ್ಮರಣ ಹೊಂದಿದ್ದಾರೆ. ಮಧ್ಯರಾತ್ರಿ ಅಡುಗೆ ಮನೆಯಲ್ಲಿ ಗ್ಯಾಸ್​ ಸಿಲಿಂಡರ್ ಸ್ಫೋಟಿಸಿದ ಪರಿಣಾಮ ನೈಟ್​​ ಕ್ಲಬ್ ಹೊತ್ತಿ ಉರಿದಿದೆ.ಘಟನೆಯಲ್ಲಿ ಮೃತಪಟ್ಟವರಲ್ಲಿ ಹೆಚ್ಚಿನವರು ಕ್ಲಬ್‌ನ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದವರಾಗಿದ್ದು, ಆ ಪೈಕಿ ಮೂವರು ಮಹಿಳೆಯರು ಸೇರಿದ್ದಾರೆ ಎನ್ನಲಾಗಿದೆ. ಮೃತರಲ್ಲಿ ಮೂರರಿಂದ ನಾಲ್ಕು ಮಂದಿ ಪ್ರವಾಸಿಗರು ಕೂಡ ಇರುವ ಮಾಹಿತಿ ಸಿಕ್ಕಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ನೈಟ್‌ಕ್ಲಬ್​​ನಲ್ಲಿ …

Read More »

ಮತಾಂತರವಾಗದಿದ್ರೆ 32 ಪೀಸ್, ಖಾಸಗಿ ಫೋಟೋಗಳಿಂದ ಬ್ಲಾಕ್ ಮೇಲ್’: ಹಿಂದೂ ಯುವತಿಗೆ ಉಸ್ಮಾನ್ ಬೆದರಿಕೆ!

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಲವ್ ಜಿಹಾದ್ ಪ್ರಕರಣ ವರದಿಯಾಗಿದ್ದು ತಾನು ಪ್ರೀತಿಸಿದ್ದ ಹಿಂದೂ ಯುವತಿ ‘ಮುಸ್ಲಿಂ ಮತಕ್ಕೆ ಮತಾಂತರವಾಗದಿದ್ರೆ ಆಕೆಯನ್ನು ಕೊಂದು 32 ತಂಡು ಮಾಡುತ್ತೇನೆ’ ಎಂದು ಮುಸ್ಲಿಂ ಯುವಕನೋರ್ವ ಬೆದರಿಕೆ ಹಾಕಿದ್ದಾನೆ ಎಂಬ ಆರೋಪ ಕೇಳಿಬಂದಿದೆ.ಬೆಂಗಳೂರಿನ ಸುದ್ದಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯ ನಿವಾಸಿ ಉಸ್ಮಾನ್ ಎಂಬಾತನ ಮೇಲೆ ಸಂತ್ರಸ್ಥ ಯುವತಿ ಲವ್ ಜಿಹಾದ್ ನ ಗಂಭೀರ ಆರೋಪ ಹೊರಿಸಿದ್ದಾರೆ. ಈ ಸಂಬಂಧ …

Read More »

ಸುಳ್ಳು ಜಾತಿ ಪ್ರಮಾಣ ಪತ್ರ: ಶಾಸಕ ಕೊತ್ತೂರು ಮಂಜುನಾಥ್‌ ಮೇಲ್ಮನವಿ ವಜಾ!

ಪರಿಶಿಷ್ಟ ಜಾತಿಗೆ ಮೀಸಲಾದ ಮುಳಬಾಗಿಲು ಕ್ಷೇತ್ರಕ್ಕೆ 2013ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಿ ಆಯ್ಕೆಯಾಗಿದ್ದಾರೆ’ ಎಂದು ಆರೋಪಿಸಿ ದಾಖಲಾಗಿದ್ದ ಎಫ್‌ಐಆರ್‌ ‍ಪ್ರಶ್ನಿಸಿ ಅಂದಿನ ಶಾಸಕ ಜಿ.ಮಂಜುನಾಥ್‌ (ಕೊತ್ತೂರು ಮಂಜುನಾಥ್‌) ಸಲ್ಲಿಸಿದ್ದ ವಿಶೇಷ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ.

Read More »