Breaking News

Breaking News

ಇಲಿ ಪಾಷಾಣ ಸೇವಿಸಿದ ವಿದ್ಯಾರ್ಥಿನಿ ಮೃತ್ಯು!

ಸುಳ್ಯ: ಮೂರು ದಿನಗಳ ಹಿಂದೆ ಇಲಿಪಾಷಾಣ ಸೇವಿಸಿ ಅಸ್ವಸ್ಥಗೊಂಡಿದ್ದ ವಿದ್ಯಾರ್ಥಿನಿಯೊಬ್ಬಳು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಘಟನೆ ಸುಳ್ಯ ಗುತ್ತಿಗಾರಿನ ಚಿಕ್ಕುಳಿಯಲ್ಲಿ ನಡೆದಿದೆ.ಗುತ್ತಿಗಾರಿನ ಚಿಕ್ಕುಳಿ ನಿವಾಸಿ ಶೇಷಪ್ಪ ಗೌಡರ ಪುತ್ರಿ, ಕಾಲೇಜು ವಿದ್ಯಾರ್ಥಿನಿ ಪೂಜಾ ಮೂರು ದಿನಗಳ ಹಿಂದೆ ಇಲಿ ಪಾಷಾಣ ಸೇವಿಸಿದ್ದಳು ಎಂಬ ಮಾಹಿತಿ ತಿಳಿದು ಬಂದಿದೆ.ಅಸ್ವಸ್ಥಗೊಂಡ ಬಳಿಕ ವಿಷಯ ಗೊತ್ತಾಗಿ ಆಕೆಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

Read More »

*ಪುಟ್ಟ ಬಾಲಕಿಗೆ ಲೈಂಗಿಕ ಕಿರುಕುಳ: ಶರಣಾಗಲು ಬರುತ್ತಿದ್ದ ಆರೋಪಿಯನ್ನು ಹಿಡಿದು ಹಿಗ್ಗಮುಗ್ಗಾ ಥಳಿಸಿದ ಗ್ರಾಮಸ್ಥರು*

9 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪಿಯನ್ನು ಗ್ರಾಮಸ್ಥರು ಹಿಡಿದು ಮನಬಂದಂತೆ ಥಳಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನಲ್ಲಿ ಕಾಮುಕನನ್ನು ಅಡ್ಡಗಟ್ಟಿದ ಗ್ರಾಮಸ್ಥರು ತಲೆಗೊಬ್ಬರಂತೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.ಬಳಿಕ ಪೊಲೀಸರಿಗೆ ಆರೋಪಿಯನ್ನು ಒಪ್ಪಿಸಿದ್ದಾರೆ. ಲೋಕೇಶ್ ಬಂಧಿತ ಆರೋಪಿ. ಡಿಸೆಂಬರ್ 3ರಂದು 9 ವರ್ಷದ ಬಾಲಕಿಗೆ ಕಾಮುಕ ಲೈಂಗಿಕ ಕಿರುಕುಳ ನೀಡಿದ್ದ. ಪೋಷಕರು ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಇಂದು ಆರೋಪಿ ತಾನೇ ಪೊಲೀಸ್ ಠಾಣೆಗೆ ಬಂದು …

Read More »

ದಿಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಯನ್ನು ಇರಿದು ಕೊಲೆ

ದಕ್ಷಿಣ ದಿಲ್ಲಿಯ ಸಂಗಮ್ ವಿಹಾರ್‌ನಲ್ಲಿ ದಿಲ್ಲಿ ವಿಶ್ವವಿದ್ಯಾಲಯದ ಕಾನೂನು ವಿದ್ಯಾರ್ಥಿಯನ್ನು ಇರಿದು ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಇರ್ಷಾದ್ ಮತ್ತು ಆರೋಪಿ ಮುಬಾರಕ್ ನಡುವೆ ಜಗಳ ನಡೆದು ಮಾರಣಾಂತಿಕ ಹಲ್ಲೆ ನಡೆದಿದೆ. ಮನೆ ಸಮೀಪ ಸ್ವಚ್ಛತೆಗೆ ಸಂಬಂಧಿಸಿ ಎರಡೂ ಕಡೆಯವರ ನಡುವೆ ವಿವಾದ ಘಟನೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

Read More »

ಹಿರಿಯೂರು | ಡಿವೈಡರ್ ಗೆ ಬೈಕ್ ಡಿಕ್ಕಿ, ಇಬ್ಬರು ಸಾವು

ಹಿರಿಯೂರು ತಾಲ್ಲೂಕಿನ ಬಾಲೇನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 150 ಎ ರಲ್ಲಿ ಈ ಘಟನೆ ನಡೆದಿದೆ.ಮೃತರನ್ನು ಚಳ್ಳಕೆರೆ ತಾಲ್ಲೂಕಿನ ದೊಡ್ಡೇರಿ ಗ್ರಾಮದ ಮಹಮದ್ ಖಲೀಲ್ (25) ಎಂದು ಗುರುತಿಸಲಾಗಿದೆ. ಈತ ಸ್ಥಳದಲ್ಲೆ ಮೃತ ಪಟ್ಟಿದ್ದು, ತಾಯಿ ನೂರ್ ಜಾನ್ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡ 2 ವರ್ಷದ ಮಗು ಜಿಲ್ಲಾಸ್ಪತ್ರೆಗೆ ಚಿಕಿತ್ಸೆ ಗೆ ದಾಖಲಿಸಲಾಗಿದೆ.ಸ್ಥಳಕ್ಕೆ ಹಿರಿಯೂರು ಗ್ರಾಮಾಂತರ ಠಾಣೆ PSI ಮಹೇಶ್ ಗೌಡ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. …

Read More »

ಉಡುಪಿ : ಲಾರಿ – ಕಾರು ಢಿಕ್ಕಿ: ನಾಲ್ವರಿಗೆ ಗಾಯ

ಲಾರಿ ಹಾಗೂ ಕಾರಿನ ನಡುವೆ ಢಿಕ್ಕಿ ಸಂಭವಿಸಿ ನಾಲ್ವರು ಗಾಯಗೊಂಡ ಘಟನೆ ಸಂಭವಿಸಿದೆ.ಕಲ್ಯಾಣಪುರದ ವರುಣ್ ಕುಮಾರ್ ಅವರು ಕಾರಿನಲ್ಲಿ ಅತ್ತೆ ಜಯಂತಿ ಬಲ್ಲಾಳ್ (72) ಮಕ್ಕಳಾದ ತೇಜಸ್ (12) ದೀಕ್ಷಾ (7) ಅವರನ್ನು ಸಹ ಪ್ರಯಾಣಿಕರನ್ನಾಗಿ ಕುಳ್ಳಿರಿಸಿಕೊಂಡು ಮಣಿಪಾಲ ಕಡೆಗೆ ತಿರುಗಿಸಲು ನಿಂತಿದ್ದು, ಈ ವೇಳೆ ಕಾರಿನ ಬಲಭಾಗಕ್ಕೆ ಲಾರಿ ಢಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದಎಲ್ಲರಿಗೂ ಗಾಯವಾಗಿದೆ. ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಕನಕಪುರ: ಎಚ್‌ಐವಿ ನಿಯಂತ್ರಣಕ್ಕೆ ಸಲಹೆ

ನ್ಯಾಯಾಲಯ ಆವರಣದಲ್ಲಿ ಗುರುವಾರ ನಡೆದ ಎಚ್‌ಐವಿ ಜಾಗೃತಿ ಜಾಥೆಗೆ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎಚ್.ಎನ್.ಕುಮಾರ್ ಚಾಲನೆ ನೀಡಿದರು.ವಿದ್ಯಾರ್ಥಿಗಳು ಬೀದಿಗಳಲ್ಲಿ ಬಿತ್ತಿ ಪತ್ರ ಹಂಚಿ ಜಾಗೃತಿ ಮೂಡಿಸಿದರು.ಕನಕಪುರ: ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನ್ಯಾಯಾಲಯದ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಏಡ್ಸ್ ಜಾಗೃತಿ ಜಾಥಕ್ಕೆ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಚ್.ಎನ್.ಕುಮಾರ್ ಚಾಲನೆ …

Read More »

ಮಣಿಯಂಪಾರೆ ಯುವಕ ಮಸ್ಕತ್ ನಲ್ಲಿ ಸಾವು

ಮಸ್ಕತ್ ನಲ್ಲಿ ಶುಕ್ರವಾರ (ಡಿ.5) ಈಜಲೆಂದು ತೆರಳಿದ ಸಂದರ್ಭ ಸಂಭವಿಸಿದ ಘಟನೆಯಲ್ಲಿ ಕಾಸರಗೋಡು ಜಿಲ್ಲೆಯ ಶೇಣಿ ಮಣಿಯಂಪಾರೆ ಕಂಗಿನಮೂಲೆ ನಿವಾಸಿ ಆಶಿಖ್ (21) ಮೃತಪಟ್ಟಿದ್ದಾರೆ.ಮಸ್ಕತ್ ನ ಸುಂದರ ನಿಸರ್ಗ ತಾಣ ವಾಡಿಶಾಬ್ ನಲ್ಲಿ ಈ ಘಟನೆ ಸಂಭವಿಸಿದೆ.ಆಶಿಖ್ ಅವರು ರಜಾ ದಿನವಾದ್ದರಿಂದ ಸ್ನಾನ ಮತ್ತು ನೀರಾಟಕ್ಕೆ ಗೆಳೆಯರ ಜತೆಗೆ ಇಲ್ಲಿಗೆ ಬಂದಿದ್ದರು. ಮೇಲ್ಗಡೆಯಿಂದ ಹರಿವ ನೀರಿಗೆ ಹಾರುವಾಗ ತಲೆ ಬಂಡೆಗೆ ಬಡಿದು ಮೃತಪಟ್ಟರೆಂದು ಮಾಹಿತಿ ಲಭಿಸಿದೆ. ಮೃತದೇಹವನ್ನು ಊರಿಗೆ ತಲುಪಿಸಲು …

Read More »

ಲಾರಿ – ಕಾರು ಢಿಕ್ಕಿ: ನಾಲ್ವರಿಗೆ ಗಾಯ

ಉಡುಪಿ: ಲಾರಿ ಹಾಗೂ ಕಾರಿನ ನಡುವೆ ಢಿಕ್ಕಿ ಸಂಭವಿಸಿ ನಾಲ್ವರು ಗಾಯಗೊಂಡ ಘಟನೆ ಸಂಭವಿಸಿದೆ.ಡಿ.4ರಂದು ಸಂಜೆ 6 ಗಂಟೆಗೆ ಸಂತೆಕಟ್ಟೆ ಅಂಡರ್ ಪಾಸ್ ದಾಟಿ ಡೈವರ್ಶನ್ ಬಳಿ ಉಡುಪಿ-ಕುಂದಾಪುರ ರಾಹೆ 66ರಲ್ಲಿ ಆರೋಪಿ ಉಮೇಶ್ ಎಂಬಾತ ಲಾರಿಯನ್ನು ಸಂತೆಕಟ್ಟೆ ಕಡೆಯಿಂದ ಬ್ರಹ್ಮಾವರ ಕಡೆಗೆ ಅತೀ ವೇಗದಿಂದ ಚಲಾಯಿಸಿಕೊಂಡು ಬಂದಿದ್ದಾನೆ.ಈ ವೇಳೆ ಕಲ್ಯಾಣಪುರದ ವರುಣ್ ಕುಮಾರ್ ಅವರು ಕಾರಿನಲ್ಲಿ ಅತ್ತೆ ಜಯಂತಿ ಬಲ್ಲಾಳ್ (72) ಮಕ್ಕಳಾದ ತೇಜಸ್ (12) ದೀಕ್ಷಾ (7) …

Read More »

ಕರ್ತವ್ಯ ಲೋಪದ ಆರೋಪ: ನಾಲ್ವರು ಪೊಲೀಸರ ಅಮಾನತು

ಬೆಂಗಳೂರು: ಕರ್ತವ್ಯ ಲೋಪದ ಆರೋಪದ ಮೇರೆಗೆ ನಾಲ್ವರು ಪೊಲೀಸರನ್ನು ಉತ್ತರ ವಿಭಾಗದ ಡಿಸಿಪಿ ನೇಮಗೌಡ ಅವರು ಅಮಾನತು ಮಾಡಿ ಆದೇಶಿಸಿದ್ದಾರೆ. ನಂದಿನಿಲೇಔಟ್‌ ಠಾಣೆಯ ಎಎಸ್‌ಐ ಶ್ರೀನಿವಾಸ ಮೂರ್ತಿ, ಸುಬ್ರಹ್ಮಣ್ಯ ನಗರ ಠಾಣೆ ಎಎಸ್‌ಐ ಜಯರಾಮೇಗೌಡ ಹಾಗೂ ಕಾನ್‌ಸ್ಟೆಬಲ್‌ ಧರ್ಮ ಹಾಗೂ ಸಂಜಯನಗರ ಠಾಣೆಯ ಕಾನ್‌ ಸ್ಟೆಬಲ್‌ ನಜೀರ್‌ಅಮಾನತುಗೊಂಡ ಸಿಬ್ಬಂದಿ.ದೂರು ನೀಡಲು ಬಂದ ಸಂತ್ರಸ್ತನಿಂದ ದೂರು ಪಡೆದುಕೊಳ್ಳದೇ ನಿರ್ಲಕ್ಷ್ಯ ತೋರಿದ ಆರೋಪದಡಿ ನಂದಿನಿ ಲೇಔಟ್‌ ಠಾಣೆ ಎಎಸ್‌ಐ ಶ್ರೀನಿವಾಸಮೂರ್ತಿ ಅಮಾನತುಗೊಂಡಿದ್ದಾರೆ ಎನ್ನಲಾಗಿದೆ. …

Read More »

ಕಲಬುರಗಿಯಲ್ಲಿ ಬೈಕ್‌-ಬಸ್‌ ಮಧ್ಯೆ ಭೀಕರ ಅಪಘಾತ | ಯುವತಿ ಸ್ಥಳದಲ್ಲೇ ಸಾವು

ಬೈಕ್‌ನಲ್ಲಿ ಹೋಗುತ್ತಿದ್ದಾಗ ಭೀಕರ ಅಪಘಾತ ಸಂಭವಿಸಿ 20 ವರ್ಷದ ಯುವತಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ರಾಸಣಗಿ ಕ್ರಾಸ್ ಬಳಿ ನಡೆದಿದೆ. ಭೂಮಿಕಾ ಹಂಗರಗಾ ಮೃತ ಯುವತಿಯಾಗಿದ್ದು, ಬೈಕ್ ಸವಾರ ಅಮೋಘಸಿದ್ದ ಗಂಭೀರವಾಗಿ ಗಾಯಗೊಂಡಿದ್ದಾರೆ.ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಿಂಬದಿಯಿಂದ ಅತಿ ವೇಗವಾಗಿ ಬಂದ NEKRTC (ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ) ಬಸ್, ಬೈಕ್‌ಗೆ ಅಪ್ಪಳಿಸಿದೆ. ಡಿಕ್ಕಿಯ ರಭಸಕ್ಕೆ ಯುವತಿ ಭೂಮಿಕಾ ಅವರು ಸ್ಥಳದಲ್ಲೇ …

Read More »