Breaking News

Breaking News

ಮೊದಲ ಬಾರಿಗೆ ಡಾಲರ್ ಗೆ 90 ರೂ. ಕುಸಿತ ಕಂಡ ರೂಪಾಯಿ

ಭಾರತ-ಯುಎಸ್ ವ್ಯಾಪಾರ ಒಪ್ಪಂದದ ಸ್ಪಷ್ಟತೆಯ ಬಗ್ಗೆ ಚಿಂತೆಗಳು ಕರೆನ್ಸಿಯನ್ನು ಒತ್ತಡದಲ್ಲಿರಿಸಿದ್ದರಿಂದ ಡಿಸೆಂಬರ್ 3, ಬುಧವಾರದಂದು ಭಾರತೀಯ ರೂಪಾಯಿ ಪ್ರತಿ ಯುಎಸ್ ಡಾಲರ್ಗೆ ಪ್ರಮುಖ 90 ಅನ್ನು ದಾಟಿ ಹೊಸ ದಾಖಲೆಯ ಕೆಳಮಟ್ಟಕ್ಕೆ ಕುಸಿದಿದೆ.ರೂಪಾಯಿ ಮೌಲ್ಯವು ಯುಎಸ್ ಡಾಲರ್ಗೆ 90.13 ರ ಕನಿಷ್ಠ ಮಟ್ಟಕ್ಕೆ ಕುಸಿದಿದೆ, ಇದು ಹಿಂದಿನ ಸಾರ್ವಕಾಲಿಕ ಕನಿಷ್ಠ 89.9475 ಅನ್ನು ಮಂಗಳವಾರ ತಲುಪಿದೆ

Read More »

ದಿಲ್ಲಿ ಸ್ಫೋಟ: ಉಗ್ರ ರಶೀದ್‌ ಅಲಿ ಎನ್‌ಐಎ ಕಸ್ಟಡಿ 7 ದಿನ ವಿಸ್ತರಣೆ

ದಿಲ್ಲಿ ಸ್ಫೋಟ: ಉಗ್ರ ರಶೀದ್‌ ಅಲಿ ಎನ್‌ಐಎ ಕಸ್ಟಡಿ 7 ದಿನ ವಿಸ್ತರಣೆಮಂಗಳವಾರಕ್ಕೆ ಈ ಅವಧಿ ಮುಕ್ತಾಯಗೊಂಡಿತ್ತು.ಹೆಚ್ಚಿನ ವಿಚಾರಣೆಗೆ ಮತ್ತೆ ವಶಕ್ಕೆ ನೀಡುವಂತೆ ಅಧಿಕಾರಿಗಳು ಮಾಡಿದ ಮನವಿಯನ್ನು ಪರಿಗಣಿಸಿದ ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶ ಅಂಜು ಬಜಾಜ್‌ ಚಂದ್ನಾ, ಮತ್ತೆ 1 ವಾರ ಅವಧಿ ವಿಸ್ತರಿಸಿದರು. ಕೆಂಪುಕೋಟೆ ಸಮೀಪ ಸ್ಫೋಟಗೊಂಡ ಕಾರು ರಶೀದ್‌ ಅಲಿಯ ಹೆಸರಿನಲ್ಲಿತ್ತು.

Read More »

ಹೆಬ್ರಿ: ಮದ್ಯಪಾನ ಎಂದು ಭಾವಿಸಿ ವಿಷ ಪದಾರ್ಥ ಸೇವಿಸಿ ವ್ಯಕ್ತಿ ಮೃತ್ಯು

ಮದ್ಯಪಾನ ಎಂದು ಭಾವಿಸಿ ವಿಷ ಪದಾರ್ಥ ಸೇವಿಸಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಮುದ್ರಾಡಿ ಗ್ರಾಮದ ಬಲ್ಲಾಡಿ ಈಶ್ವರನಗರದಲ್ಲಿ ನಡೆದಿದೆ.ಮೃತರನ್ನು ಸ್ಥಳೀಯ ನಿವಾಸಿ ತಮ್ಮು ಪೂಜಾರಿ(78) ಎಂದು ಗುರುತಿಸಲಾಗಿದೆ. ಇವರು ನ.20ರಂದು ಮನೆಯಲ್ಲಿದ್ದ ವಾಹನದ ಬ್ರೇಕ್ ಪ್ಯೂಡ್ ಆಯಿಲ್‌ ಅನ್ನು ಮಧ್ಯಪಾನವೆಂದು ಭಾವಿಸಿ ಸೇವಿಸಿದ್ದರು ಎನ್ನಲಾಗಿದೆ.ಇದು ವಿಷಯುಕ್ತವಾಗಿರುವುದರಿಂದ ತೀವ್ರವಾಗಿ ಅಸ್ವಸ್ಥಗೊಂಡ ಅವರು, ಮಂಗಳೂರಿನ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಡಿ.2ರಂದು ಬೆಳಗ್ಗೆ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟರೆಂದು ತಿಳಿದುಬಂದಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ …

Read More »

ಸ್ಕೂಟರ್ ಢಿಕ್ಕಿ ಹೊಡೆದು ಸೈಕಲ್ ಸವಾರನಿಗೆ ಗಾಯ

ಉಡುಪಿ: ಕುಕ್ಕಿಕಟ್ಟೆ-ಬೀಡಿನಗುಡ್ಡೆ ರಸ್ತೆಯಲ್ಲಿ ಸ್ಕೂಟರ್ ಢಿಕ್ಕಿ ಹೊಡೆದು ಸೈಕಲ್ ಸವಾರ ಗಾಯಗೊಂಡ ಘಟನೆ ನಡೆದಿದೆ.ಚಂದನ ಎಂಬವರು ಸ್ಕೂಟರನ್ನು ಕುಕ್ಕಿಕಟ್ಟೆಯಿಂದ ಬೀಡಿನಗುಡ್ಡೆ ಕಡೆಗೆ ವೇಗವಾಗಿ ಚಲಾಯಿಸಿಕೊಂಡು ಹೋದ ಪರಿಣಾಮ ಬೀಡಿನಗುಡ್ಡೆ ಕಡೆಗೆ ಹೋಗುತ್ತಿದ್ದ ಶಿವಾನಂದ ಅವರ ಸೈಕಲ್‌ಗೆ ಹಿಂದಿನಿಂದ ಢಿಕ್ಕಿ ಹೊಡೆದಿದೆ.ಶಿವಾನಂದ ಅವರು ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ರಾಯಚೂರು : ಲಾರಿ ಹರಿದು ತಂದೆ, ಮಗ ಸ್ಥಳದಲ್ಲೇ ಸಾವು

ರಸ್ತೆ ಬದಿಯಲ್ಲಿ ನಿಂತು ಮೊಬೈಲ್‍ನಲ್ಲಿ ಮಾತನಾಡುತ್ತಿದ್ದ ತಂದೆ – ಮಗನ ಮೇಲೆ ಲಾರಿ ಹರಿದ ಕಾರಣ ಅವರು ಸ್ಥಳದಲ್ಲೇ ಮೃತಪಟ್ಟ ಘಟನೆ ಯರಮರಸ್ ಬೈಪಾಸ್‍ನಲ್ಲಿ ನಡೆದಿದೆ. ಮೃತರು ತಂದೆ ನಾಗಪ್ಪ (64) ಇವರ ಪುತ್ರ ರಮೇಶ್ (45) ಎಂದು ಪೊಲೀಸರು ತಿಳಿಸಿದ್ದಾರೆ.ದ್ವಿಚಕ್ರ ವಾಹನವನ್ನು ರಸ್ತೆ ಪಕ್ಕಕ್ಕೆ ನಿಲ್ಲಿಸಿಕೊಂಡು ಮೊಬೈಲ್‍ನಲ್ಲಿ ಮಾತನಾಡುತ್ತಿದ್ದ ತಂದೆ – ಮಗನ ಮೇಲೆ ಅತಿ ವೇಗವಾಗಿ ಮತ್ತು ಅಜಾಗರೂಕತೆಯ ಚಾಲನೆಯ ಕಾರಣ ಇವರ ಮೇಲೆ ಲಾರಿಯು ಹರಿದಿದೆ. …

Read More »

ಕಾಣೆಯಾಗಿದ್ದ ಯುವಕ ಶವವಾಗಿ ಪತ್ತೆ

ಪುತ್ತೂರು: 3 ದಿನಗಳ ಹಿಂದೆ ನಾಪತ್ತೆಯಾಗಿದ್ದ ಬದ್ರುದ್ದೀನ್ ಡಿ.ಕೆ. (27) ಅವರ ಮೃತದೇಹ ಸೇಡಿಯಾಪು ಸಮೀಪದ ಹನುಮಾಜೆಯ ಗುಡ್ಡದಲ್ಲಿ ಪತ್ತೆಯಾಗಿದೆಬದ್ರುದ್ದೀನ್ ಸುಮಾರು 8 ವರ್ಷಗಳಿಂದ ಅಬ್ದುಲ್ ರಹಿಮಾನ್ ಅವರ ಮಾಲಕತ್ವದ ಝಿಂದಗೀ ಚಿಕನ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದರು.ನ. 29 ರಂದು ಎಂದಿನಂತೆ ಬೆಳಗ್ಗೆ 8.45ಕ್ಕೆ ಕೆಲಸಕ್ಕೆ ಹಾಜರಾಗಿದ್ದು ಬಳಿಕ ಮಾಲಕರಿಗೆ ತಿಳಿಸಿ ಅಂಗಡಿಯಿಂದ ತೆರಳಿದವರು ಕಾಣೆಯಾಗಿರುವುದಾಗಿ ದೂರು ನೀಡಲಾಗಿತ್ತು. ಈ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆತ್ಮಹತ್ಯೆ ಮಾಡಿಕೊಂಡಿರುವ …

Read More »

ಕುಡಿದ ಮತ್ತಿನಲ್ಲಿ ಕಾರನ್ನು ಹಿಮ್ಮುಖವಾಗಿ ಚಲಾಯಿಸಿ ಪಾದಚಾರಿಗೆ ಗುದ್ದಿದ ವ್ಯಕ್ತಿ..

ಕುಡಿದ ಮತ್ತಿನಲ್ಲಿದ್ದ ಯುವಕನೊಬ್ಬ ಕಾರನ್ನು ಹಿಮ್ಮುಖವಾಗಿ ಚಲಾಯಿಸಿದ ಪರಿಣಾಮ ಕಾರು ಪಾದಚಾರಿಗೆ ಗುದ್ದಿ ಗಂಭೀರ ಗಾಯಗೊಂಡಿರುವ ಘಟನೆ ಗೋವಾದ ಪಣಜಿಯಲ್ಲಿ ನಡೆದಿದೆ. ಗಾಯಗೊಂಡ ವ್ಯಕ್ತಿಯನ್ನು ಮುಕುಲ್ ಜೋಶಿ ಎಂದು ಗುರುತಿಸಲಾಗಿದೆ.ಘಟನೆಯ ಸಮಯದಲ್ಲಿ, ಕಾರು ಚಲಾಯಿಸುತ್ತಿದ್ದ 18 ವರ್ಷದ ಶಾಹಿದ್ ಮೊಹರಂ ಅನ್ಸಾರಿ ಕುಡಿದಿದ್ದ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಗೋವಾದ ತಲೈಗಾಂವ್ ಪ್ರದೇಶದ ನಿವಾಸಿ. ಡಿಸೆಂಬರ್ 2 ರಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಈ ಘಟನೆ …

Read More »

ಶಾಲಾ ವಿದ್ಯಾರ್ಥಿಗೆ ಶಿಕ್ಷಕರಿಂದ ಹಲ್ಲೆ: ಸುಬ್ರಹ್ಮಣ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು

ಚೇತನ್‌ ಅವರು ಬಾಲಕನನ್ನು ಗದರಿಸಿ, ಕೋಲಿನಿಂದ ಹೊಡೆಯುತ್ತಿರುವ ವಿಡಿಯೋ ಮೊಬೈಲ್‌ ಮೂಲಕ ಹರಡಿಕೊಂಡಿದ್ದು, ಇದು ಬಾಲಕನ ತಾಯಿಯ ಗಮನಕ್ಕೆ ಬಂದಿದೆ.ಈ ಸಂಬಂಧ ಬಾಲಕನ ತಾಯಿ ನೀಡಿದ ದೂರಿನ ಮೇರೆಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ 60/2025, ಕಲಂ 118(1) BNS-2023 ರಂತೆ ಪ್ರಕರಣ ದಾಖಲಿಸಿಕೊಂಡಿದ್ದು, ಪೊಲೀಸ್‌ ಕ್ರಮವಾಗತೆಯೆಂದು ತಿಳಿಸಲಾಗಿದೆ. ಪ್ರಕರಣ ತನಿಖೆಯಲ್ಲಿದೆ.

Read More »

15 ವರ್ಷದ ವಿದ್ಯಾರ್ಥಿ ಜೊತೆ ನಿರಂತರ ರಿಲೇಷನ್‌ಶಿಪ್: ಶಿಕ್ಷಕಿ ಅರೆಸ್ಟ್

ಸೋಶಿಯಲ್ ಮೀಡಿಯಾಗಳಾದ ಸ್ನ್ಯಾಪ್‌ಚಾಟ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಅಶ್ಲೀಲ ಸಂದೇಶಗಳನ್ನು ಕಳುಹಿಸುವ ಮೂಲಕ ಆರೋಪಿ ಶಿಕ್ಷಕಿಯೂ, ಬಾಲಕನಿಗೆ ಲೈಂಗಿಕ ಸಂಬಂಧಕ್ಕಾಗಿ ಪ್ರೇರೆಪಿಸಿದ್ದಾಳೆ. ಶಾಲೆಗೆ ಹೋಗುವ ಮೊದಲು ನಾವು ಭೇಟಿಯಾಗಬಹುದು. ನಾನು ನನ್ನ ಆಟಿಕೆ ತರುತ್ತೇನೆ ಎಂದು ಆಕೆ ಹುಡುಗನಿಗೆ ಸಂದೇಶ ಕಳುಹಿಸಿದ್ದಳು ಆತನ ಸಂಪರ್ಕಿಸಲು ಮನಸ್ಸು ಸಾಕಷ್ಟು ಸೆಳೆಯುತ್ತಿತ್ತು ಎಂದು ಆಕೆ ಹೇಳಿದ್ದಾಳೆ. ಸೋಶಿಯಲ್ ಮೀಡಿಯಾ ಅಪ್ಲಿಕೇಶನ್‌ನಿಂದ ಪರಸ್ಪರರನ್ನು ಡಿಲೀಟ್ ಮಾಡಲು ಸೂಚಿಸುವ ವಿದ್ಯಾರ್ಥಿಯ ಸಂದೇಶಕ್ಕೆ ಪ್ರತಿಕ್ರಿಯಿಸುತ್ತಾ, ಇದು ನನ್ನ ತಪ್ಪು. …

Read More »

ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ: ಮೂರು ಮನೆಗಳು ಸುಟ್ಟು ಕರಕಲು

ಬೆಳಗಾವಿ:- ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹೊಳಿಹೊಸುರ ಗ್ರಾಮದಲ್ಲಿ ಶಾರ್ಟ್ ಸರ್ಕ್ಯೂಟ್ ಕಾರಣವಾಗಿ ಬೆಂಕಿ ಹೊತ್ತಿದ್ದು, ಮೂರು ಮನೆಗಳು ಸಂಪೂರ್ಣ ಸುಟ್ಟು ಭಸ್ಮವಾಗಿವೆ.ಈ ಬೆಂಕಿಯಿಂದ ಬಾಳೇಶ್ ಹಜೇರಿ, ಲಕ್ಷ್ಮಣ ಡವಳೆ, ಕಿರಣ ಹಜೇರಿ ಅವರ ಮನೆಗಳಿಗೆ ಹಾನಿ ಸಂಭವಿಸಿದೆ.ಮನೆಗಳಲ್ಲಿ ಇದ್ದ ದಿನಬಳಕೆ ವಸ್ತುಗಳು, ಚಿನ್ನಾಭರಣ ಮತ್ತು ನಗದು ಸಹ ಬೆಂಕಿಗೆ ಆರ್ಭಟವಾಗಿದೆ. ಸ್ಥಳಕ್ಕೆ ದೌಡಾಯಿಸಿ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಈ ಘಟನೆ ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ್ದು, ಪ್ರಾಥಮಿಕ …

Read More »