BigTv News
December 1, 2025
Breaking News
ಕಾಸರಗೋಡು: ಉದುಮ ಮಾಂಗಾಡ್‌ನಲ್ಲಿ ಅಲೆಮಾರಿಗಳು ಶನಿವಾರ ಹಗಲು ವೇಳೆಯಲ್ಲಿಯೇ ಯಾರೂ ಇಲ್ಲದ ಒಂದು ಮನೆಯ ಆವರಣದ ಒಳಗೆ ಪ್ರವೇಶಿಸಿ ಕಳ್ಳತನ ನಡೆಸಿದ್ದಾರೆ. ಮನೆ ಮಾಲಕ ದುಬೈಯಲ್ಲಿ ಕುಳಿತುಕೊಂಡು ಊರಿನಲ್ಲಿರುವ ತನ್ನ ಮನೆಯಲ್ಲಿ ನಡೆದ ಕಳ್ಳತನದ ಲೈವ್ ವೀಕ್ಷಿಸಿದ್ದಾರೆ!ಈ ಸಂದರ್ಭ ಮನೆಮಂದಿ ಎಲ್ಲರೂ ಹೊರಗೆ ತೆರಳಿದ್ದರು. ಮನೆ ನೋಡಿಕೊಳ್ಳುತ್ತಿದ್ದ ವ್ಯಕ್ತಿಯೂ ಇರಲಿಲ್ಲ. ಮನೆಗೆ ಹೊಸ ಹವಾನಿಯಂತ್ರಣ ವ್ಯವಸ್ಥೆ ಅಳವಡಿಸಿರುವ ಹಿನ್ನೆಲೆಯಲ್ಲಿ ಹಳೆಯ ಯಂತ್ರದ ಭಾಗಗಳನ್ನು ಅಂಗಳದಲ್ಲಿ ಇಡಲಾಗಿತ್ತು. ಮನೆಯಲ್ಲಿ ಜನರು ಇಲ್ಲದಿರುವುದನ್ನು …
Read More »
BigTv News
December 1, 2025
Breaking News
ದೆಹಲಿಯ ಶಾಹದರಾದಲ್ಲಿ ಸಿಐಎಸ್‌ಎಫ್ ಹೆಡ್ ಕಾನ್ಸ್ಟೇಬಲ್ ಗುಂಡಿಕ್ಕಿ ಯುವಕನನ್ನು ಕೊಂದಿದ್ದಾರೆ. ಮಾನಸ ಸರೋವರ ಪಾರ್ಕ್ ನ ಡಿಡಿಎ ಮಾರುಕಟ್ಟೆ ಸಮುದಾಯ ಕೇಂದ್ರದ ಬಳಿ ಶನಿವಾರ ಸಂಜೆ ನಡೆದ ಮದುವೆ ಸಮಾರಂಭದಲ್ಲಿ ಘಟನೆ ನಡೆದಿದೆ.ಡಿಸಿಪಿ ಪ್ರಶಾಂತ್ ಗೌತಮ್ ಈ ಬಗ್ಗೆ ಮಾಹಿತಿ ನೀಡಿದ್ದು, ನ್ಯೂ ಮಾಡರ್ನ್ ಶಾಹದರಾ ನಿವಾಸಿಯಾಗಿರುವ ಯುವಕನಿಗೆ ಮದುವೆ ಸಮಾರಂಭದಲ್ಲಿ ಗುಂಡೇಟು ಬಿದ್ದಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಿದಾ ಮೃತಪಟ್ಟಿದ್ದಾನೆ ಎಂದು ಹೇಳಿದ್ದಾರೆ. ಆರೋಪಿಯನ್ನು ಉತ್ತರ ಪ್ರದೇಶದ …
Read More »
BigTv News
December 1, 2025
Breaking News
ಪ್ರವಾಸಕ್ಕೆ ತೆರಳಿದ್ದ ಶಾಲಾ ಬಸ್ ಪಲ್ಟಿಯಾಗಿ ದುರಂತ ಸಂಭವಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಸುಳೆ ಮುರ್ಕಿ ಬಳಿ ನಡೆದಿದೆ. ಒಬ್ಬ ವಿದ್ಯಾರ್ಥಿ ದುರ್ಮರಣ ಹೊಂದಿದ್ದು, 26ಕ್ಕೂ ಹೆಚ್ಚು ಮಕ್ಕಳಿಗೆ ಗಾಯಗಳಾಗಿವೆ.ಮೃತ ಬಾಲಕನನ್ನು ಮೈಸೂರಿನ ಪವನ್ (ವಯಸ್ಸು 15) ಎಂದು ಗುರುತಿಸಲಾಗಿದೆ. ಗಾಯಗೊಂಡ ವಿದ್ಯಾರ್ಥಿಗಳನ್ನು ತಕ್ಷಣ ಹೊನ್ನಾವರ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಮೈಸೂರಿನ ತರಳಬಾಳು ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಗೋಕರ್ಣ ಪ್ರವಾಸಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ, …
Read More »
BigTv News
November 30, 2025
Breaking News
ಕಳೆದ ಕೆಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಉಮೇಶ್ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.ದುರದೃಷ್ಟವಶಾತ್, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ. ಇತ್ತೀಚೆಗೆ ಮನೆಯಲ್ಲಿ ಕಾಲು ಜಾರಿ ಬಿದ್ದಿದ್ದ ಕಾರಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆ ಸಂದರ್ಭದಲ್ಲಿ ನಡೆಸಿದ ವೈದ್ಯಕೀಯ ಪರೀಕ್ಷೆಗಳಲ್ಲಿ ಅವರಿಗೆ 4ನೇ ಹಂತದ ಲಿವರ್ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಹೆಚ್ಚಿನ ಪರೀಕ್ಷೆಗಳ ನಂತರ, ವೈದ್ಯರು ಅವರಿಗೆ ಕಿಮೊಥೆರಪಿ ಮತ್ತು ಇಮ್ಯೂನೋಥೆರಪಿ ಚಿಕಿತ್ಸೆ ನೀಡುವ ಮೂಲಕ …
Read More »
BigTv News
November 30, 2025
Breaking News
ಶೇಷಾದ್ರಿಪುರಂನಲ್ಲಿ ಚಾಕುವಿನಿಂದ ಇರಿದು ಮಹಿಳೆಯೊಬ್ಬರನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಶನಿವಾರ ಸಂಜೆ ನಡೆದಿದೆ. ಶೇಷಾದ್ರಿಪುರಂನ 1ನೇ ಮುಖ್ಯರಸ್ತೆಯಲ್ಲಿ ಈ ಕೃತ್ಯ ನಡೆದಿದ್ದು, ಮೃತರನ್ನು ಬಿಜಾಪುರ ಮೂಲದ ಶರಣಮ್ಮ (23) ಎಂದು ಗುರುತಿಸಲಾಗಿದೆ.ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆಗಾರನನ್ನು ಪತ್ತೆಹಚ್ಚಲು ಪೊಲೀಸರು ತೀವ್ರ ಕಾರ್ಯಾಚರಣೆ ಆರಂಭಿಸಿದ್ದಾರೆ.
Read More »
BigTv News
November 30, 2025
Breaking News
ಸುಳ್ಯ ಕಡೆಯಿಂದ ಪುತ್ತೂರಿನತ್ತ ಬರುತ್ತಿದ್ದ ಕಾರು ಚಾಲಕ ಬಸ್ನ ಓವರ್ಟೇಕ್ಮಾಡಲು ಯತ್ನಿಸಿದ್ದಾನೆ. ಈ ವೇಳೆ ನಿಯಂತ್ರಣ ತಪ್ಪಿ ಕಾರು ಪುತ್ತೂರಿನಿಂದ ತಿಂಗಳಾಡಿ ಕಡೆಗೆ ತೆರಳುತ್ತಿದ್ದ ಆಟೋಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಆಟೋ ಚಾಲಕ ಹನೀಫ್ ಬನ್ನೂರು ಅವರ ಮಗಳು ಶಜ್ವಾ ಫಾತಿಮಾ ಮೃತಪಟ್ಟಿದ್ದಾಳೆ. ಘಟನೆಯಲ್ಲಿ ಹನೀಫ್, ಪತ್ನಿ, ಇಬ್ಬರು ಮಕ್ಕಳು ಮತ್ತು ಅತ್ತೆಗೆ ಗಾಯ ಆಗಿದ್ದು, ಈ ಪೈಕಿ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ರವಾನೆ ಮಾಡಲಾಗಿತ್ತು. ಈ ಸಂಬಂಧ …
Read More »
BigTv News
November 30, 2025
Breaking News
ಇತ್ತೀಚಿನ ದಿನಗಳಲ್ಲಿ ಅಪಘಾತಗಳ ಪ್ರಕರಣಗಳು ಹೆಚ್ಚಾಗುತ್ತಲಿವೆ. ಇದೀಗ ಎರಡು ಕಾರುಗಳ ನಡುವೆ ಭೀಕರ ಅಪಘಾತ ಸಂಭವಿಸಿದ ಘಟನೆ ಆಂಧ್ರದ ಎಮ್ಮಿಗನೂರು ತಾಲೂಕಿನ ಕೋಟೆಕಲ್ ಗ್ರಾಮದಲ್ಲಿ ನಡೆದಿದೆ. ಈ ಅಪಘಾತದಲ್ಲಿ ಕರ್ನಾಟಕ ಮೂಲದ 5 ಜನ ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.ಎರಡು ಕಾರುಗಳ ನಡುವೆ ಡಿಕ್ಕಿಯಾಗಿ ಒಂದೇ ಕಾರಿನಲ್ಲಿದ್ದ ಇಬ್ಬರು ಮಕ್ಕಳು ಸೇರಿ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು ಕೋಲಾರದ ಚಿಕ್ಕಹೊಸಳ್ಳಿ ಗ್ರಾಮದ ನಿವಾಸಿಗಳು ಎಂದು ಗುರುತಿಸಲಾಗಿದೆ.
Read More »
BigTv News
November 30, 2025
Breaking News
ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ಶ್ರೀಶಶಿಧರಸ್ವಾಮಿ ವಿದ್ಯಾನಿಕೇತನ ಪದವಿ ಪೂರ್ವ ಕಾಲೇಜಿನಲ್ಲಿ ಆಂಗ್ಲ ಮಾಧ್ಯಮದ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಅಕ್ಕಮಹಾದೇವಿ ರವರು 4 ದಿನದ ಹಿಂದೆ ಪತಿ ಜತೆ ಕಾರಿನಲ್ಲಿ ಸಿಂಧನೂರು ತಾಲೂಕಿನ ತುರವಿಹಾಳ ಬಳಿ ತೆರಳುತ್ತಿದ್ದಾಗ ಅಪಘಾತ ಸಂಭವಿಸಿ ಇಬ್ಬರೂ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.ಅಪಘಾತಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಸಂದರ್ಭ ಸಾವಿರಾರು ವಿದ್ಯಾರ್ಥಿಗಳು ತಮ್ಮ ಗುರುಗಳು ಬೇಗ ಗುಣಮುಖರಾಗಿ ಬರಲಿ ಎಂದು ಪ್ರಾರ್ಥನೆ ಕೂಡ ಮಾಡುತ್ತಿದ್ದರು ಆದರೆ ಮಕ್ಕಳ ಪ್ರಾರ್ಥನೆ ಫಲಿಸಲಿಲ್ಲ.
Read More »
BigTv News
November 30, 2025
Breaking News
ನಗರದ ಕೆಟಿಜೆ ನಗರದ ನಿವಾಸಿ ಮತ್ತು ನಿವೃತ್ತ ಡಿವೈಎಸ್‌ಪಿ ಹೆಚ್.ವೈ. ತುರಾಯಿ (70) ಅವರು ತಮ್ಮ ವೈಯಕ್ತಿಕ ರೈಫಲ್‌ನಿಂದ ಗುಂಡು ಹಾರಿಸಿಕೊಂಡು ಆತ್ಮ೧ಹತ್ಯೆ ಮಾಡಿಕೊಂಡಿದ್ದಾರೆ. 2014 ರಲ್ಲಿ ಪೊಲೀಸ್ ಸೇವೆಯಿಂದ ನಿವೃತ್ತಿ ಹೊಂದಿದ್ದ ತುರಾಯಿ ಅವರು, ತಮ್ಮದೇ ಮನೆಯಲ್ಲಿ ಈ ದುರಂತಕ್ಕೆ ಶರಣಾಗಿದ್ದಾರೆ.ಪೊಲೀಸ್ ಇಲಾಖೆಯಲ್ಲಿ ಉನ್ನತ ಹುದ್ದೆಯಲ್ಲಿದ್ದ ನಿವೃತ್ತ ಅಧಿಕಾರಿಯೊಬ್ಬರು ರೈಫಲ್ ಬಳಸಿ ಆತ್ಮ೧ಹತ್ಯೆ ಮಾಡಿಕೊಂಡಿರುವುದು ಪೊಲೀಸ್ ವಲಯದಲ್ಲಿ ತೀವ್ರ ಆಘಾತ ಮತ್ತು ಚರ್ಚೆಗೆ ಕಾರಣವಾಗಿದೆ.
Read More »
BigTv News
November 29, 2025
Breaking News
ಬೆಂಗಳೂರು – ಪೊಲೀಸ್ ವಶದಲ್ಲಿದ್ದ ಯುವಕ, ರಿಹ್ಯಾಬ್ ಸೆಂಟರ್‌ಗೆ ಸೇರಿದ 10 ದಿನಗಳಲ್ಲೇ ಸಾವಿಗೀಡಾದ ಘಟನೆ ನಗರದಲ್ಲಿ ದೊಡ್ಡ ಸಂಚಲನ ಎಬ್ಬಿಸಿದೆ. ವಿವೇಕನಗರದ ಸೊಣ್ಣೆನಹಳ್ಳಿಯ ದರ್ಶನ್, 23 ವರ್ಷದ ಯುವಕ. ರಿಹ್ಯಾಬಿಲಿಟೇಷನ್ ಸೆಂಟರ್‌ನಲ್ಲಿ ಈತನಿಗೆ ಸಾವು ಸಂಭವಿಸಿದೆ. ಕುಟುಂಬದವರ ಸ್ಪಷ್ಟವಾಗಿ “ದರ್ಶನ್ ಅಸಹಜವಾಗಿ ಸತ್ತಿಲ್ಲ… ಹಲ್ಲೆ, ಕಿರುಕುಳ… ಕೊನೆಗೆ ಕೊಲೆ..! ಎಂದು ಆರೋಪಿಸಿದ್ದಾರೆ.. ನವೆಂಬರ್ 12 ರಂದು ದರ್ಶನ್ ಅವರನ್ನು ಪೊಲೀಸರು ಅಕ್ರಮವಾಗಿ ಬಂಧಿಸಿದರೆಂಬ ದೂರು ನೀಡಿದ್ದಾರೆ. 3 ದಿನಗಳ …
Read More »